ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 302 ರನ್‌ಗಳ ದಾಖಲೆಯ ಜಯ ಸಾಧಿಸಿ ಸೆಮಿ ಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 357 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ (88) ಹಾಗೂ ಶುಭ್ಮನ್ ಗಿಲ್ (92) ನಿರ್ಗಮನದ ಬಳಿಕ ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್ (Shreyas Iyer) ಅಂತಿಮ ಹಂತದ ವರೆಗೂ ಬ್ಯಾಟ್ ಬೀಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾದರು. ಪಂದ್ಯ ಮುಗಿದ ಬಳಿಕ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಉತ್ತರಿಸುವಾಗ ಅಯ್ಯರ್ ಕೋಪಗೊಂಡ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಭುಜದ ಗಾಯದಿಂದ ಹಿಂತಿರುಗಿದ ಬಳಿಕ ಶ್ರೇಯಸ್ ಅಯ್ಯರ್ ಅವರಿಗೆ ಶಾರ್ಟ್ ಬಾಲ್ ಎದುರಿಸಲು ಆಗುವುದಿಲ್ಲ ಎಂಬ ಬಗ್ಗೆ ಮಾತುಗಳಿದ್ದವು. ಈ ಬಾರಿಯ ಟೂರ್ನಿಯಲ್ಲಿ ಬಹುಪಾಲು ಎದುರಾಳಿಗಳು ಬೌನ್ಸರ್‌ಗಳನ್ನು ಎಸೆಯುವ ಮೂಲಕವೇ ಅಯ್ಯರ್ ಅವರನ್ನು ಔಟ್ ಮಾಡಿದ್ದರು. ಶ್ರೇಯಸ್ ಹೋದಲ್ಲೆಲ್ಲ ಶಾರ್ಟ್ ಬಾಲ್ ಬಗ್ಗೆಯೇ ಮಾತು ಕೇಳಿಬಂದಿದ್ದವು. ಮುಂಬೈನಲ್ಲಿ ಲಂಕನ್ನರ ವಿರುದ್ಧ 82 ರನ್ ಗಳಿಸಿದರೂ, ಇಲ್ಲಿ ಅಯ್ಯರ್ಗೆ ಇದೇ ಪ್ರಶ್ನೆ ಎದರಾಯಿತು. ಪತ್ರಕರ್ತರು, ”ನಿಮಗೆ ಶಾರ್ಟ್ ಬಾಲ್‌ನಲ್ಲಿ ಆಡಲು ತೊಂದರೆ ಆಗುತ್ತಿದೆಯೇ?,” ಎಂದು ಕೇಳಿದ್ದಾರೆ.
ICC World Cup 2023 Points Table: ಪಾಯಿಂಟ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತ..!
ಪತ್ರಕರ್ತರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಅಯ್ಯರ್, “ಏನು ಶಾರ್ಟ್ ಬಾಲ್ ಪ್ರಾಬ್ಲಂ?, ನನಗೆ ಯಾವುದೇ ತೊಂದರೆ ಇಲ್ಲ. ನನಗೆ ಶಾರ್ಟ್ ಆಡಲು ತೊಂದರೆ ಇದೆ ಎಂದು ನೀವೇ ಹೊರಗೆ ಮಾತು ಹರಿಬಿಟ್ಟಿದ್ದೀರಿ. ನಾನು ಸಾಕಷ್ಟು ಪುಲ್ ಶಾಟ್‌ಗಳನ್ನು ಆಡಿದ್ದೇನೆ ಮತ್ತು ಬೌಂಡರಿಗಳನ್ನು ಸಹ ಹೊಡೆದಿದ್ದೇನೆ. ಕೆಲವೊಮ್ಮೆ ನಿರೀಕ್ಷಿಸಿದಂತೆ ನಡೆಯುವುದಿಲ್ಲ ಅಷ್ಟೇ. ಆದರೆ ನನ್ನಲ್ಲಿ ಶಾರ್ಟ್ ಬಾಲ್ ಸವಾಲನ್ನು ಎದುರಿಸುವ ವಿಶ್ವಾಸವಿದೆ,” ಎಂದು ಕೋಪದಲ್ಲಿ ಹೇಳಿದ್ದಾರೆ.
Shreyas giving clarification on his purported weakness against short balls..
#ShreyasIyer pic.twitter.com/5FQP5hhACk— Shawstopper (@shawstopper_100) November 2, 2023
ಈ ಬಾರಿಯ ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅಯ್ಯರ್ ಕಡೆಯಿಂದ ನಿರೀಕ್ಷೆಗೆ ತಕ್ಕಂತ ಆಟ ಬಂದಿರಲಿಲ್ಲ. ಇದರಿಂದ ಟೀಕೆಗಳಿಗೆ ಒಳಗಾಗಿದ್ದರು. ಆದರೆ, ಲಂಕಾ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಶ್ರೇಯಸ್ ಕೇವಲ 56 ಎಸೆತಗಳಲ್ಲಿ 3 ಫೋರ್, 6 ಸಿಕ್ಸರ್ನೊಂದಿಗೆ 82 ರನ್ ಚಚ್ಚಿದರು. ಭಾರತ 357 ರನ್ ಗಳಿಸುವಲ್ಲಿ ಅಯ್ಯರ್ ಪ್ರಮುಖ ಪಾತ್ರವಹಿಸಿದರು.
ಶ್ರೀಲಂಕಾವನ್ನು 302 ರನ್‌ಗಳಿಂದ ಸೋಲಿಸಿದ ಟೀಮ್ ಇಂಡಿಯಾ ವಿಶ್ವಕಪ್ನಲ್ಲಿ ಆಡಿದ ಎಲ್ಲ ಏಳು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಗೆಲುವಿಗಾಗಿ 358 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಂಕಾ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೇವಲ 55 ರನ್‌ಗಳಿಗೆ ಔಟ್ ಆಯಿತು. ಶಮಿ ಐದು ವಿಕೆಟ್‌ಗಳನ್ನು ಪಡೆದರು ಮತ್ತು ಸಿರಾಜ್ ಮೂರು ವಿಕೆಟ್‌ಗಳನ್ನು ಕಿತ್ತರು. ಈ ಗೆಲುವಿನೊಂದಿಗೆ ಭಾರತ ಸೆಮಿಸ್‌ಗೆ ಲಗ್ಗೆ ಇಟ್ಟಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ