ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದಲ್ಲಿ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಚ್ 26 ರಂದು ನಡೆಯಲಿರುವ ಐಪಿಎಲ್ 2022ರ (IPL 2022) ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಬಾರಿ ಬಹುದೊಡ್ಡ ಜವಾಬ್ದಾರಿ ಹೊತ್ತ ಶ್ರೇಯಸ್ ಅಯ್ಯರ್ಗೆ ಆರಂಭದಲ್ಲೇ ತಲೆನೋವು ಶುರುವಾಗಿದೆ. ತಂಡದ ಸ್ಟಾರ್ ಆಟಗಾರರಾದ ಪ್ಯಾಟ್ ಕಮಿನ್ಸ್, ಆ್ಯರೋನ್ ಫಿಂಚ್ ಸೇರಿದಂತೆ ಇನ್ನೂ ಕೆಲ ಆಟಗಾರರು ಆರಂಭದ ಕೆಲವು ಪಂದ್ಯಗಳಿಗೆ ಗೈರಾಗಲಿದ್ದಾರೆ. ಫಿಂಚ್ ಮತ್ತು ಕಮಿನ್ಸ್ (Pat Cummins) ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲಿರುವ ಕಾರಣ ಸಿಎಸ್ಕೆ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹಾಲಿ ಚಾಂಪಿಯನ್ ಬಲಿಷ್ಠ ಧೋನಿ ಪಡೆಯನ್ನು ಸೋಲಿಸುವುದು ಸುಲಭದ ಮಾತಲ್ಲ. ಇದಕ್ಕಾಗಿ ತಂಡದಲ್ಲಿ ಅನುಭವಿ ಆಟಗಾರರ ಅವಶ್ಯಕತೆಯಿದೆ. ಹೀಗಿರುವಾಗ ಪ್ರಮುಖ ಆಟಗಾರರ ಗೈರಿನ ನಡುವೆ ಚೆನ್ನೈ ವಿರುದ್ಧದ ಕದನಕ್ಕೆ ಪ್ಲೇಯಿಂಗ್ ಇಲೆವೆನ್ ಹೇಗೆ ಕಟ್ಟಬೇಕು ಎಂಬುದು ಅಯ್ಯರ್ಗೆ ಟೆನ್ಶನ್ ಶುರುವಾಗಿದೆ.
ಮೆಗಾ ಹರಾಜಿಗೂ ಮುನ್ನ ಕೆಕೆಆರ್ ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಹರಾಜಿನಲ್ಲಿ ಶಿವಂ ಮಾವಿ ಮತ್ತು ನಿತೀಶ್ ರಾಣರನ್ನು ಮತ್ತೆ ಸೇರಿಸಿಕೊಂಡಿತು. ಕಳೆದ ವರ್ಷ ಕೋಲ್ಕತ್ತಾದ ಭಾಗವಾಗಿದ್ದ ಶುಭ್ಮನ್ ಗಿಲ್ ಗುಜರಾತ್ ಟೈಟಾನ್ಸ್ ಪಾಲಾದರೆ, ರಾಹುಲ್ ತ್ರಿಪಾಠಿ ಸನ್ರೈಸರ್ಸ್ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ಹೀಗಾಗಿ ಇನ್ನಿಂಗ್ಸ್ ಆರಂಭಿಸುವವರು ಯಾರು ಎಂಬುದೇ ಇನ್ನೂ ಖಚಿತವಾಗಿಲ್ಲ.
ವೆಂಕಟೇಶ್ ಅಯ್ಯರ್ ಆರಂಭಿಕನಾಗಿ ಕಣಕ್ಕಿಳಿಯುತ್ತಾರ ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬರುತ್ತಾರ ಎಂಬುದು ಫೈನಲ್ ಆಗಿಲ್ಲ. ಫಾರ್ಮ್ನಲ್ಲಿ ಇಲ್ಲದ, ಟೀಮ್ ಇಂಡಿಯಾದಿಂದಲೂ ಹೊರಬಿದ್ದಿರುವ ಅಜಿಂಕ್ಯಾ ರಹಾನೆ ಅವರು ಆ್ಯರೋನ್ ಫಿಂಚ್ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಆಡಬೇಕಿದೆ. ನಿತೀಶ್ ರಾಣ ಮತ್ತು ಶ್ರೇಯಸ್ ಅಯ್ಯರ್ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಮುಂದಿನ ಸ್ಥಾನದಲ್ಲಿ ಆಡಲಿದ್ದಾರೆ. ಇತರೆ ಆಯ್ಕೆ ಇಲ್ಲದ ಕಾರಣ ಇವರೇ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ನಿರ್ವಹಿಸಲಿದ್ದಾರೆ.
ಸುನೀಲ್ ನರೈನ್ ಮತ್ತು ಆಂಡ್ರೆ ರಸೆಲ್ ಮೂಲಕ ಕೆಕೆಆರ್ ಬ್ಯಾಟಿಂಗ್ ಆಯ್ಕೆ ಮುಕ್ತಾಯಗೊಳ್ಳಲಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ಟಿಮ್ ಸೌಥೀ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಉಮೇಶ್ ಯಾದವ್, ಶಿವಂ ಮಾವಿ ಮತ್ತು ವರುಣ್ ಚಕ್ರವರ್ತಿ ಇವರಿಗೆ ಸಾಥ್ ನೀಡಬೇಕಿದೆ. ಹೀಗೆ ಪ್ರಮುಖ ಅನುಭವಿ ಆಟಗಾರರ ಗೈರಿನ ನಡುವೆ ಕೆಕೆಆರ್ ತಂಡ ಐಪಿಎಲ್ 2022ರ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲು ತಯಾರಾಗಿದೆ.
ಕೆಕೆಆರ್ ಸಂಭಾವ್ಯ ಪ್ಲೇಯಿಂಗ್ XI: ವೆಂಕಟೇಶ್ ಅಯ್ಯರ್, ಅಜಿಂಕ್ಯಾ ರಹಾನೆ, ಶ್ರೇಯಸ್ ಅಯ್ಯರ್, ನಿತೀಶ್ ರಾಣ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನೀಲ್ ನರೈನ್, ಟಿಮ್ ಸೌಥೀ, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್.
ಈ ಸಲ್ ಕಮ್ ನಮ್ದೆ ಎಂದ ಉಮೇಶ್ ಯಾದವ್:
ಐಪಿಎಲ್ 2022 ಹರಾಜಿನಲ್ಲಿ 2 ಕೋಟಿಗೆ ಕೆಕೆಆರ್ ಪಾಲಾದ ಮಾಜಿ ಆರ್ಸಿಬಿ ಆಟಗಾರ ಉಮೇಶ್ ಯಾದವ್ ಕೊಲ್ಕತ್ತಾ ನೈಟ್ ರೈಸರ್ಸ್ ತಂಡ ಈ ಬಾರಿ ಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕೆಕೆಆರ್ ತಂಡಕ್ಕೆ ಮತ್ತೆ ವಾಪಸ್ ಆಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಈ ಬಾರಿ ಕಪ್ ಗೆಲ್ಲೋದೆ ನಮ್ಮ ಗುರಿ. 2014 ರಲ್ಲಿ ನಾನು ಕೆಕೆಆರ್ ಪರ ಮಾಡಿದಾಗ ಟ್ರೋಫಿ ಗೆದ್ದಿದ್ದೇವು. ಕೆಕೆಆರ್ ನನ್ನ ಪಾಲಿಗೆ ಅದೃಷ್ಟದ ತಂಡ. ನನ್ನ ಫಿಟ್ನೆಸ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ನಾನು ಚೆನ್ನಾಗಿದ್ದೇನೆ. ಹಾಗಾಗಿ ಈ ಸೀಸನ್‌ಗಾಗಿ ಎದುರು ನೋಡುತ್ತಿದ್ದೇವೆ”, ಎಂದು ಉಮೇಶ್ ಹೇಳಿದ್ದಾರೆ.
RCB: ಶಾಕಿಂಗ್: ಆರ್ಸಿಬಿ ತಂಡ ಸೇರಿದ ಒಂದೇ ಒಂದು ಪಂದ್ಯವನ್ನಾಡದ 18 ವರ್ಷದ ಆಟಗಾರ
Virat Kohli: ಎದುರಾಳಿಗರಲ್ಲಿ ಭಯ ಶುರು: ಹೊಸದಾಗಿ ಆರ್ಸಿಬಿ ತಂಡ ಸೇರಿಕೊಂಡಿದ್ದು ಯಾರು ನೋಡಿ