Shreyas Iyer: ಮುಂಬೈ ಕೈಯಲ್ಲಿದ್ದ ಪಂದ್ಯವನ್ನು 3 ಎಸೆತಗಳಲ್ಲಿ ತಮ್ಮತ್ತ ತಿರುಗಿಸಿದ ಶ್ರೇಯಸ್ ಅಯ್ಯರ್: ವಿಡಿಯೋ ನೋಡಿ

PBKS vs MI, Qualifier 2 IPL 2025: ಮುಂಬೈ ಇಂಡಿಯನ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲುವಿಗೆ 8 ಓವರ್‌ಗಳಲ್ಲಿ 95 ರನ್‌ಗಳ ಅಗತ್ಯವಿತ್ತು. ಪಂಜಾಬ್ ತಂಡದ ಇನ್ನಿಂಗ್ಸ್‌ನ 13ನೇ ಓವರ್ ಅನ್ನು ಮುಂಬೈ ಇಂಡಿಯನ್ಸ್‌ನ ರೀಸ್ ಟಾಪ್ಲಿ ಎಸೆದರು. ಈ ಓವರ್ ಪಂದ್ಯದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು.

Shreyas Iyer: ಮುಂಬೈ ಕೈಯಲ್ಲಿದ್ದ ಪಂದ್ಯವನ್ನು 3 ಎಸೆತಗಳಲ್ಲಿ ತಮ್ಮತ್ತ ತಿರುಗಿಸಿದ ಶ್ರೇಯಸ್ ಅಯ್ಯರ್: ವಿಡಿಯೋ ನೋಡಿ
Shreyas Iyer Six

Updated on: Jun 02, 2025 | 11:17 AM

ಬೆಂಗಳೂರು (ಜೂ. 02): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League) ಎರಡನೇ ಕ್ವಾಲಿಫೈಯರ್ ಪಂದ್ಯವು ಒಂದು ಥ್ರಿಲ್ಲರ್ ಸಿನಿಮಾಕ್ಕಿಂತ ಕಡಿಮೆ ಇರಲಿಲ್ಲ. ಮಳೆಯಿಂದಾಗಿ ರಾತ್ರಿ 9:45 ಕ್ಕೆ ಆರಂಭವಾದ ಪಂದ್ಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮುಕ್ತಾಯವಾಯಿತು. ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಈ ಪಂದ್ಯ ರಣ ರೋಚಕವಾಗಿತ್ತು. ಇದರಲ್ಲಿ ಪಂಜಾಬ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯವು ಹೈ ಸ್ಕೋರಿಂಗ್ ಆಗಿತ್ತು. ಎರಡೂ ಇನ್ನಿಂಗ್ಸ್‌ಗಳಲ್ಲಿ ಸೇರಿ 400 ಕ್ಕೂ ಹೆಚ್ಚು ರನ್‌ಗಳು ದಾಖಲಾದವು. 204 ರನ್‌ಗಳ ಗುರಿಯನ್ನು ಪಂಜಾಬ್ 19 ಓವರ್‌ಗಳಲ್ಲಿ ಬೆನ್ನಟ್ಟಿತು. ಅಷ್ಟಕ್ಕೂ, ಪಂಜಾಬ್ ಕಿಂಗ್ಸ್ ಪರವಾಗಿ ಪಂದ್ಯ ಎಲ್ಲಿ ವಾಲಿತು?, ಪಂದ್ಯದ ಮಹತ್ವದ ತಿರುವು ಪಡೆದಿದ್ದು ಎಲ್ಲಿ? ಎಂಬುದನ್ನು ನಾವು ಹೇಳುತ್ತೇವೆ ನೋಡಿ.

ಪಂದ್ಯ ತಿರುವುದು ಪಡೆದುಕೊಂಡಿದ್ದು ಎಲ್ಲಿ?

ಪಂಜಾಬ್ ಕಿಂಗ್ಸ್ ಗೆಲುವಿಗೆ 8 ಓವರ್‌ಗಳಲ್ಲಿ 95 ರನ್‌ಗಳ ಅಗತ್ಯವಿತ್ತು. ಪಂಜಾಬ್ ತಂಡದ ಇನ್ನಿಂಗ್ಸ್‌ನ 13ನೇ ಓವರ್ ಅನ್ನು ಮುಂಬೈ ಇಂಡಿಯನ್ಸ್‌ನ ರೀಸ್ ಟಾಪ್ಲಿ ಎಸೆದರು. ಈ ಓವರ್ ಪಂದ್ಯದಲ್ಲಿ ಮಹತ್ವದ ತಿರುವು ಪಡೆದುಕೊಂಡಿತು. ಆ ಓವರ್‌ನ ಎರಡನೇ, ಮೂರನೇ ಮತ್ತು ನಾಲ್ಕನೇ ಎಸೆತಗಳಲ್ಲಿ ಶ್ರೇಯಸ್ ಅಯ್ಯರ್ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಇಲ್ಲಿ ಶ್ರೇಯಸ್ ಅವರು ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 19 ರನ್‌ಗಳು ಬಂದವು ಮತ್ತು ಇಲ್ಲಿಂದ ಪಂದ್ಯವು ನಿಧಾನವಾಗಿ ಪಂಜಾಬ್ ಕಡೆಗೆ ವಾಲಲು ಪ್ರಾರಂಭಿಸಿತು.

ಇದನ್ನೂ ಓದಿ
ಕೋಪಗೊಂಡ ಪಾಂಡ್ಯ: ಪೋಸ್ಟ್ ಮ್ಯಾಚ್​ನಲ್ಲಿ ಬುಮ್ರಾ ಬಗ್ಗೆ ಶಾಕಿಂಗ್ ಹೇಳಿಕೆ
ಮುಂಬೈ ವಿರುದ್ಧ ಗೆದ್ದ ಬಳಿಕ ಆರ್‌ಸಿಬಿ ಬಗ್ಗೆ ಮಾತನಾಡಿದ ಶ್ರೇಯಸ್ ಅಯ್ಯರ್
ಆರ್​ಸಿಬಿ- ಪಂಜಾಬ್ ನಡುವೆ ಐಪಿಎಲ್ ಫೈನಲ್
ಆರ್​ಸಿಬಿ ಅಲ್ಲ; ಐಪಿಎಲ್ ಟ್ರೋಫಿ ಗೆಲ್ಲುವ ತಂಡವನ್ನು ಹೆಸರಿಸಿದ ಧವನ್

 

ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್

ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ತಂಡಕ್ಕಾಗಿ ನಾಯಕನ ಇನ್ನಿಂಗ್ಸ್ ಆಡಿದರು. 204 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಅಯ್ಯರ್ 212.20 ರ ಬಿರುಗಾಳಿಯ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು ಮತ್ತು 41 ಎಸೆತಗಳಲ್ಲಿ 87 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳು ಸೇರಿದ್ದವು. ಅಯ್ಯರ್ ಗೆ ಸರಿಸಾಟಿ ಯಾರೂ ಇರಲಿಲ್ಲ. ಮುಂಬೈ ಬೌಲರ್‌ಗಳು ಅಯ್ಯರ್ ಅನ್ನು ಪೆವಿಲಿಯನ್​ಗೆ ಅಟ್ಟಲು ಎಷ್ಟೇ ಕಷ್ಟಪಟ್ಟರೂ ಅದು ಸಾಧ್ಯವಾಗಲಿಲ್ಲ.

PBKS vs MI: ಕೋಪಗೊಂಡ ಪಾಂಡ್ಯ: ಪೋಸ್ಟ್ ಮ್ಯಾಚ್​ನಲ್ಲಿ ಬುಮ್ರಾ ಬಗ್ಗೆ ಹಾರ್ದಿಕ್ ಶಾಕಿಂಗ್ ಹೇಳಿಕೆ

10 ವರ್ಷಗಳ ನಂತರ ಫೈನಲ್ ಗೇರಿದ ಪಂಜಾಬ್

ಐಪಿಎಲ್ 2025 ರ ಕ್ವಾಲಿಫೈಯರ್-2 ರಲ್ಲಿ ಪಂಜಾಬ್ ಕಿಂಗ್ಸ್ ಮುಂಬೈ ತಂಡವನ್ನು ಸೋಲಿಸಿ ಫೈನಲ್ ತಲುಪಿತು, ಅಲ್ಲಿ ಅವರು ಜೂನ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ. ಇದರಲ್ಲಿ ಗೆದ್ದ ತಂಡ ಕಪ್ ಎತ್ತಿ ಹಿಡಿಯಲಿದೆ. ಅಂದಹಾಗೆ ಪಂಜಾಬ್ ತಂಡ ಐಪಿಎಲ್ ಫೈನಲ್ ತಲುಪಿರುವುದು ಇದು ಎರಡನೇ ಬಾರಿಗೆ. 2014 ರ ಆರಂಭದಲ್ಲಿ, ಪಿಬಿಕೆಎಸ್ ಫೈನಲ್ ಆಡಿತ್ತು, ಅಲ್ಲಿ ಅವರು ಕೆಕೆಆರ್ ವಿರುದ್ಧ ಸೋತಿದ್ದರು. 2014 ರಲ್ಲಿ ಮಾತ್ರ ಪಂಜಾಬ್ ಕೊನೆಯ ಪ್ಲೇಆಫ್‌ಗೆ ಅರ್ಹತೆ ಪಡೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Mon, 2 June 25