IPL 2025: ಸಿವಿಎಲ್ ಆಸ್ಪತ್ರೆಗೆ ಭಾರಿ ಮೊತ್ತದ ದೇಣಿಗೆ ನೀಡಿದ ಶುಭ್​ಮನ್ ಗಿಲ್

|

Updated on: Mar 29, 2025 | 8:07 PM

Shubman Gill: ಐಪಿಎಲ್ 2025ರಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಮುನ್ನ, ಶುಭ್ಮನ್ ಗಿಲ್ ಮೊಹಾಲಿ ಸಿವಿಲ್ ಆಸ್ಪತ್ರೆಗೆ 35 ಲಕ್ಷ ರೂಪಾಯಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದಾನ ಮಾಡಿದ್ದಾರೆ. ಇದು ವೆಂಟಿಲೇಟರ್‌ಗಳು, ಐಸಿಯು ಹಾಸಿಗೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒಳಗೊಂಡಿದೆ. ಗಿಲ್ ಅವರ ಈ ಉದಾರ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2025: ಸಿವಿಎಲ್ ಆಸ್ಪತ್ರೆಗೆ ಭಾರಿ ಮೊತ್ತದ ದೇಣಿಗೆ ನೀಡಿದ ಶುಭ್​ಮನ್ ಗಿಲ್
Shubman Gill
Follow us on

ಐಪಿಎಲ್ 2025 (IPL 2025) ರ 9ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ (GT vs MI) ತಂಡಗಳು ಮುಖಾಮುಖಿಯಾಗಿವೆ. ಈ ಎರಡು ತಂಡಗಳು ಮೊದಲ ಪಂದ್ಯವನ್ನು ಸೋತಿರುವ ಕಾರಣ ಮೊದಲ ಗೆಲುವಿನ ಹುಡುಕಾಟದಲ್ಲಿವೆ. ಈ ನಡುವೆ ಗುಜರಾತ್ ತಂಡದ ನಾಯಕ ಶುಭ್​ಮನ್ ಗಿಲ್ (Shubman Gill) ತನ್ನ ತವರು ನೆಲದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವುದಕ್ಕೂ ಮುನ್ನ ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಸುದ್ದಿಯಾಗಿದ್ದಾರೆ. ವಾಸ್ತವವಾಗಿ ಗಿಲ್, ಮೊಹಾಲಿಯ ಸಿವಿಲ್ ಆಸ್ಪತ್ರೆಗೆ ಸುಮಾರು 35 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದಾನ ಮಾಡಿದ್ದಾರೆ. ಗಿಲ್ ಅವರ ಈ ಸಮಾಜ ಸೇವೆಯನ್ನು ಸ್ಮರಿಸಿರುವ ಆಸ್ಪತ್ರೆ ಆಡಳಿತ ಮಂಡಳಿ, ಗಿಲ್‌ಗೆ ಕೃತಜ್ಞತೆ ಸಲ್ಲಿಸಿದ್ದು, ಇದು ರೋಗಿಗಳ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.

ವೈದ್ಯಕೀಯ ಉಪಕರಣಗಳ ದಾನ

ಶುಭ್​ಮನ್ ಗಿಲ್ ಆಸ್ಪತ್ರೆಗೆ ವೆಂಟಿಲೇಟರ್‌ಗಳು, ಸಿರಿಂಜ್ ಪಂಪ್‌ಗಳು, ಆಪರೇಷನ್ ಥಿಯೇಟರ್ ಟೇಬಲ್‌ಗಳು, ಐಸಿಯು ಹಾಸಿಗೆಗಳು, ಎಕ್ಸ್-ರೇ ಯಂತ್ರಗಳು ಮತ್ತು ಸೀಲಿಂಗ್ ಲೈಟ್‌ಗಳಂತಹ 35 ಲಕ್ಷ ರೂ. ಮೌಲ್ಯದ ಅಗತ್ಯ ಉಪಕರಣಗಳನ್ನು ಒದಗಿಸಿಕೊಟ್ಟಿದ್ದಾರೆ. ಇವುಗಳಲ್ಲಿ ಗಂಭೀರವಾಗಿ ಅಸ್ವಸ್ಥರಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಅನೇಕ ವಸ್ತುಗಳು ಸೇರಿವೆ. ಮಾಧ್ಯಮ ವರದಿಗಳ ಪ್ರಕಾರ, ಗಿಲ್ ತಮ್ಮ ಆಪ್ತ ಸಂಬಂಧಿಯೊಬ್ಬರು, ಸ್ವತಃ ವೈದ್ಯಕೀಯ ವೃತ್ತಿಪರರ ಮೂಲಕ ಈ ದೇಣಿಗೆ ನೀಡಿದ್ದಾರೆ. ಗಿಲ್ ಅವರ ಈ ನಡೆಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಗಿಲ್ ಅವರ ಈ ಉದಾತ್ತ ಕೆಲಸಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ
2ನೇ ಪಂದ್ಯದಲ್ಲೂ ಸೋತ ಮುಂಬೈ; ಗೆಲುವಿನ ಖಾತೆ ತೆರೆದ ಗುಜರಾತ್
ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ಗಿಲ್ ಭಾಜನ
0.78 ಸೆಕೆಂಡುಗಳಲ್ಲಿ ಗಿಲ್ ಆಟಕ್ಕೆ ಅಂತ್ಯ ಹಾಡಿದ ಫಿಲಿಫ್ಸ್; ವಿಡಿಯೋ ನೋಡಿ
ಶುಭ್​ಮನ್ ಗಿಲ್​ಗೆ ಅಂಪೈರ್ ಎಚ್ಚರಿಕೆ ನೀಡಿದ್ದು ಏಕೆ?

ಮೊಹಾಲಿಯೊಂದಿಗೆ ಗಿಲ್ ಸಂಪರ್ಕ

ವಾಸ್ತವವಾಗಿ ಶುಭ್​ಮನ್ ಗಿಲ್ ಪಂಜಾಬ್‌ನ ಫಜಿಲ್ಕಾ ಜಿಲ್ಲೆಯ ಜೈಮಲ್ ಸಿಂಗ್ ವಾಲಾ ಗ್ರಾಮದವರು. ಆದಾಗ್ಯೂ ಗಿಲ್​ಗೂ ಮೊಹಾಲಿಯೊಂದಿಗೆ ಅವಿನಾಭಾವ ಸಂಬಂಧವಿದೆ. ವಾಸ್ತವವಾಗಿ, ಗಿಲ್ ಅವರ ತಂದೆ ಕ್ರಿಕೆಟ್ ಕಲಿಸಲು ಹಳ್ಳಿಯಿಂದ ಮೊಹಾಲಿಗೆ ಸ್ಥಳಾಂತರಗೊಂಡಿದ್ದರು. ಇದಾದ ನಂತರ ಗಿಲ್ ಈ ನಗರದಲ್ಲಿ ಬೆಳೆದರು. ಅವರು ಇಲ್ಲಿಂದಲೇ ಅಧ್ಯಯನ ಮಾಡಿ ಕ್ರಿಕೆಟ್‌ನ ಎ, ಬಿ, ಸಿ, ಡಿ ಕಲಿತರು. ಇತ್ತೀಚೆಗೆ, ಅವರು ಮೊಹಾಲಿಯಲ್ಲಿ ತನಗಾಗಿ ಒಂದು ಐಷಾರಾಮಿ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ, ಚುನಾವಣಾ ಆಯೋಗವು ಶುಭ್‌ಮನ್ ಗಿಲ್ ಅವರನ್ನು ಪಂಜಾಬ್‌ನ ರಾಜ್ಯದ ಐಕಾನ್ ಆಗಿ ಮಾಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ