GT vs MI Highlights, IPL 2025: 2ನೇ ಪಂದ್ಯದಲ್ಲೂ ಸೋತ ಮುಂಬೈ; ಗೆಲುವಿನ ಖಾತೆ ತೆರೆದ ಗುಜರಾತ್
Gujarat Titans vs Mumbai Indians Highlights in Kannada: ಸಾಯಿ ಸುದರ್ಶನ್ ಅವರ ಅದ್ಭುತ ಬ್ಯಾಟಿಂಗ್ ಮತ್ತು ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ಕಾರಣದಿಂದಾಗಿ ಗುಜರಾತ್ ಟೈಟಾನ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು 36 ರನ್‌ಗಳಿಂದ ಸೋಲಿಸುವ ಮೂಲಕ ಗೆಲುವಿನ ಖಾತೆಯನ್ನು ತೆರೆಯಿತು.

ಐಪಿಎಲ್ 18ನೇ ಸೀಸನ್‌ನ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 36 ರನ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್ ಈ ಲೀಗ್ನಲ್ಲಿ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಗುಜರಾತ್ ಪರ ಅಗ್ರ 3 ಬ್ಯಾಟ್ಸ್‌ಮನ್‌ಗಳು ಅತಿ ಹೆಚ್ಚು ರನ್‌ಗಳ ಕೊಡುಗೆ ನೀಡಿದರು. ಆದರೆ ಅದಾದ ನಂತರ ಬ್ಯಾಟ್ಸ್‌ಮನ್‌ಗಳು ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ, ಅವಕಾಶ ಸಿಕ್ಕಿದ್ದರೂ ಗುಜರಾತ್ 200 ರನ್ ತಲುಪಲು ಸಾಧ್ಯವಾಗಲಿಲ್ಲ. ಈ ಗುರಿ ಬೆನ್ನಟ್ಟಿದ ಮುಂಬೈಗೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ಮುಂಬೈ ಪರ ಸೂರ್ಯಕುಮಾರ್ 48 ರನ್ ಬಾರಿಸಿ ಏಕಾಂಗಿ ಹೋರಾಟ ನೀಡಿದನ್ನು ಬಿಟ್ಟರೆ ಉಳಿದವರಿಂದ ಅಂತಹ ಪ್ರದರ್ಶನ ಕಂಡುಬರಲಿಲ್ಲ. ಹೀಗಾಗಿ ಮುಂಬೈ ಲೀಗ್ನಲ್ಲಿ ಸತತ 2ನೇ ಪಂದ್ಯದಲ್ಲೂ ಸೋಲಿಗೆ ಶರಣಾಗಬೇಕಾಯಿತು
LIVE NEWS & UPDATES
-
ಗುಜರಾತ್ಗೆ 36 ರನ್ ಜಯ
ಗುಜರಾತ್ ತಂಡ ಐದು ಬಾರಿಯ ಮುಂಬೈ ಇಂಡಿಯನ್ಸ್ ತಂಡವನ್ನು 36 ರನ್‌ಗಳಿಂದ ಮಣಿಸಿದೆ. ಈ ಮೂಲಕ ಗುಜರಾತ್ ತನ್ನ ಗೆಲುವಿನ ಖಾತೆ ತೆರೆದರೆ, ಇತ್ತ ಮುಂಬೈ ಸತತ 2ನೇ ಪಂದ್ಯದಲ್ಲೂ ಸೋತಿದೆ.
-
ಮುಂಬೈಗೆ ಆರನೇ ಹೊಡೆತ
ಸೂರ್ಯಕುಮಾರ್ ಯಾದವ್ ನಂತರ ಈಗ ಹಾರ್ದಿಕ್ ಪಾಂಡ್ಯ ಕೂಡ ಔಟ್ ಆಗಿದ್ದಾರೆ. ಇದರೊಂದಿಗೆ ಮುಂಬೈ ತಂಡ ಆರನೇ ಹಿನ್ನಡೆ ಅನುಭವಿಸಿದೆ. ಪಾಂಡ್ಯ 17 ಎಸೆತಗಳಲ್ಲಿ 11 ರನ್ ಗಳಿಸಿದರು.
-
-
ಸೂರ್ಯಕುಮಾರ್ ಯಾದವ್ ಔಟ್
ಸೂರ್ಯಕುಮಾರ್ ಯಾದವ್ 28 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಮುಂಬೈ ತಂಡ ತನ್ನ 5ನೇ ವಿಕೆಟ್ ಕಳೆದುಕೊಂಡಿದೆ.
-
14 ಓವರ್‌ಗಳ ನಂತರ MI- 112/4
14 ಓವರ್‌ಗಳ ಅಂತ್ಯಕ್ಕೆ ಮುಂಬೈ 4 ವಿಕೆಟ್‌ಗಳ ನಷ್ಟಕ್ಕೆ 112 ರನ್ ಗಳಿಸಿದೆ. ಈಗ ಗೆಲ್ಲಲು 36 ಎಸೆತಗಳಲ್ಲಿ 85 ರನ್‌ಗಳು ಬೇಕಾಗಿವೆ.
-
ಮೂರನೇ ಹೊಡೆತ
ತಿಲಕ್ ವರ್ಮಾ 36 ಎಸೆತಗಳಲ್ಲಿ 39 ರನ್ ಗಳಿಸಿ ಪ್ರಸಿದ್ಧ್ ಕೃಷ್ಣನಿಗೆ ಬಲಿಯಾದರು. ಇದರೊಂದಿಗೆ ಮುಂಬೈ ತಂಡ ಮೂರನೇ ಹಿನ್ನಡೆ ಅನುಭವಿಸಿದೆ.
-
-
ಗೆಲುವಿಗೆ 100 ರನ್‌ಗಳ ಅವಶ್ಯಕತೆ
ಮುಂಬೈ ತಂಡ 11 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 97 ರನ್ ಗಳಿಸಿದ್ದು, ಈಗ ಗೆಲ್ಲಲು 54 ಎಸೆತಗಳಲ್ಲಿ 100 ರನ್‌ಗಳ ಅಗತ್ಯವಿದೆ.
-
ಎರಡನೇ ವಿಕೆಟ್
ಸಿರಾಜ್ ಮುಂಬೈ ತಂಡಕ್ಕೆ ಎರಡನೇ ಹೊಡೆತ ನೀಡಿದ್ದಾರೆ. ರೋಹಿತ್ ಶರ್ಮಾ ನಂತರ, ಅವರು ರಯಾನ್ ರಿಕಲ್ಟನ್ ಅವರನ್ನು ಬೇಟೆಯಾಡಿದ್ದಾರೆ.
-
ತಿಲಕ್ ಆಕ್ರಮಣಕಾರಿ ಆಟ
ಹೊಸ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಬಂದ ಕೂಡಲೇ ದಾಳಿ ನಡೆಸಿದರು. ಎರಡನೇ ಓವರ್‌ನಲ್ಲಿ, ತಿಲಕ್ ಕಗಿಸೊ ರಬಾಡ ವಿರುದ್ಧ ಸತತ 3 ಎಸೆತಗಳಲ್ಲಿ 4, 4 ಮತ್ತು 6 ರನ್ ಗಳಿಸಿದರು.
-
ರೋಹಿತ್ ಶರ್ಮಾ ಔಟ್
ಸತತ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ (8) ಮೊದಲ ಓವರ್‌ನಲ್ಲೇ ಔಟಾದರು. ಮುಂಬೈ ತಂಡದ ಸ್ಟಾರ್ ಓಪನರ್ನನ್ನು ಅದ್ಭುತ ಎಸೆತದ ಮೂಲಕ ಮೊಹಮ್ಮದ್ ಸಿರಾಜ್ ಕ್ಲೀನ್ ಬೌಲ್ಡ್ ಮಾಡಿದರು. ಆದಾಗ್ಯೂ, ಔಟ್ ಆಗುವ ಮೊದಲು, ರೋಹಿತ್ ಸಿರಾಜ್ ಬೌಲಿಂಗ್‌ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದ್ದರು
-
197 ರನ್‌ಗಳ ಗುರಿ
ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ. ಮುಂಬೈ ಇಂಡಿಯನ್ಸ್ ಗೆಲ್ಲಲು 197 ರನ್ ಗಳಿಸಬೇಕಾಗಿದೆ.
-
19 ಓವರ್‌ಗಳ ನಂತರ 186/6
19 ಓವರ್‌ಗಳ ಅಂತ್ಯಕ್ಕೆ ಗುಜರಾತ್ ಟೈಟಾನ್ಸ್ 6 ವಿಕೆಟ್‌ಗಳ ನಷ್ಟಕ್ಕೆ 186 ರನ್ ಗಳಿಸಿದೆ.
-
3 ಎಸೆತಗಳಲ್ಲಿ 3 ವಿಕೆಟ್
ಗುಜರಾತ್ ತಂಡ ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. 18ನೇ ಓವರ್‌ನ ಕೊನೆಯ ಎಸೆತದಲ್ಲಿ ಸಾಯಿ ಸುದರ್ಶನ್ ಔಟಾದರು. ಇದಾದ ನಂತರ, 19 ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ತೆವಾಟಿಯಾ ಮತ್ತು ಶೆರ್ಫಾನ್ ರುದರ್ಫೋರ್ಡ್ ಎರಡನೇ ಎಸೆತದಲ್ಲಿ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಗುಜರಾತ್ ತಂಡ 6 ವಿಕೆಟ್ ಕಳೆದುಕೊಂಡಿದೆ.
-
ಮೂರನೇ ವಿಕೆಟ್
ಶಾರುಖ್ ಖಾನ್ 7 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಅವರನ್ನು ಬೇಟೆಯಾಡಿದರು. ಗುಜರಾತ್ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ.
-
15 ಓವರ್‌ಗಳ ನಂತರ GT- 140/2
15 ಓವರ್‌ಗಳ ಆಟ ಮುಗಿದಿದೆ. ಗುಜರಾತ್ ಟೈಟಾನ್ಸ್ 2 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದೆ.
-
100 ರನ್ ಪೂರ್ಣ
11 ಓವರ್‌ಗಳ ಆಟ ಮುಗಿದಿದೆ. ಗುಜರಾತ್ ತಂಡ 1 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿದೆ. ಜೋಸ್ ಬಟ್ಲರ್ 13 ಎಸೆತಗಳಲ್ಲಿ 21 ರನ್ ಮತ್ತು ಸಾಯಿ ಸುದರ್ಶನ್ 26 ಎಸೆತಗಳಲ್ಲಿ 39 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
ಗಿಲ್ ಔಟ್
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಅವರನ್ನು ಬೇಟೆಯಾಡಿದ್ದಾರೆ. ಇದರೊಂದಿಗೆ ಗುಜರಾತ್ ಮೊದಲ ಹಿನ್ನಡೆ ಅನುಭವಿಸಿದೆ. ಗಿಲ್ 27 ಎಸೆತಗಳಲ್ಲಿ 38 ರನ್ ಗಳಿಸಿದರು.
-
50 ರನ್ ಪೂರ್ಣ
ಸಾಯಿ ಸುದರ್ಶನ್ ಮತ್ತು ಶುಭ್‌ಮನ್ ಗಿಲ್ ಅದ್ಭುತ ಆರಂಭ ನೀಡಿದ್ದಾರೆ. ಮೊದಲ ಪವರ್‌ಪ್ಲೇ ಮುಗಿದಿದೆ. 6 ಓವರ್‌ಗಳ ಅಂತ್ಯಕ್ಕೆ ಗುಜರಾತ್ ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿದೆ.
-
ಸ್ಥಿರ ಆರಂಭ
ಗುಜರಾತ್ ಟೈಟನ್ಸ್ ತಂಡವು ಮೊದಲ 2 ಓವರ್‌ಗಳಲ್ಲಿ 14 ರನ್‌ಗಳನ್ನು ಗಳಿಸುವ ಮೂಲಕ ಸ್ಥಿರ ಆರಂಭವನ್ನು ನೀಡಿತು. ಬೌಲ್ಟ್ ಮತ್ತು ದೀಪಕ್ ಚಹಾರ್ ಅವರ ಓವರ್‌ಗಳಲ್ಲಿ ಗಿಲ್ ಮತ್ತು ಸುದರ್ಶನ್ ಬೌಂಡರಿಗಳನ್ನು ಕಲೆಹಾಕಿದರು.
-
ಮುಂಬೈ ತಂಡ
ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಟ್ರೆಂಟ್ ಬೌಲ್ಟ್, ಮುಜೀಬ್ ಉರ್ ರೆಹಮಾನ್, ಸತ್ಯನಾರಾಯಣ್ ರಾಜು.
-
ಗುಜರಾತ್ ಟೈಟನ್ಸ್
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ಶೆರ್ಫೇನ್ ರುದರ್ಫೋರ್ಡ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಆರ್ ಸಾಯಿ ಕಿಶೋರ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
-
ಟಾಸ್ ಗೆದ್ದ ಮುಂಬೈ
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - Mar 29,2025 7:02 PM