AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಪ್ರಸಾರಕರ ಹಣದಾಸೆಗೆ ಟೀಂ ಇಂಡಿಯಾ ಬಲಿಯಾಯ್ತು; ಮಾಜಿ ಕಿವೀಸ್ ಆಟಗಾರ

T20 World Cup: ಇದು ದೀಪಾವಳಿ ಸೀಸನ್. ಆದ್ದರಿಂದ ಪ್ರಸಾರಕರು ಟೀಮ್ ಇಂಡಿಯಾದ ಪಂದ್ಯಗಳನ್ನು ರಜಾದಿನಗಳಲ್ಲಿ ಇರಿಸಲು ಬಯಸಿದ್ದರು. ಪ್ರಸಾರಕರು ವೇಳಾಪಟ್ಟಿಯನ್ನು ನಿರ್ಧರಿಸುವಲ್ಲಿ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ.

T20 World Cup: ಪ್ರಸಾರಕರ ಹಣದಾಸೆಗೆ ಟೀಂ ಇಂಡಿಯಾ ಬಲಿಯಾಯ್ತು; ಮಾಜಿ ಕಿವೀಸ್ ಆಟಗಾರ
ಟೀಂ ಇಂಡಿಯಾ
TV9 Web
| Edited By: |

Updated on: Nov 11, 2021 | 5:31 PM

Share

ICC T20 ವಿಶ್ವಕಪ್ 2021 ಪ್ರಾರಂಭವಾದಾಗ, ಭಾರತೀಯ ಕ್ರಿಕೆಟ್ ತಂಡವನ್ನು ಗೆಲುವಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಆದರೆ, ಟೀಂ ಇಂಡಿಯಾದ ಎರಡು ಪಂದ್ಯಗಳ ನಂತರವೇ ಈ ತಂಡ ಸೆಮಿಫೈನಲ್‌ಗೆ ಹೋಗಲು ಸಾಧ್ಯವಿಲ್ಲ ಎಂಬುದು ಬಹುತೇಕ ನಿರ್ಧಾರವಾಗಿತ್ತು. ಸೋಮವಾರ ನಮೀಬಿಯಾ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ ಭಾರತ, ಪಂದ್ಯವನ್ನು ಗೆದ್ದು ಪಂದ್ಯಾವಳಿಯನ್ನು ಕೊನೆಗೊಳಿಸಿತು. ಆದರೆ ನಂತರ ತಂಡದ ಕಳಪೆ ಪ್ರದರ್ಶನದ ವಿಶ್ಲೇಷಣೆ ಪ್ರಾರಂಭವಾಯಿತು. ಇಂತಹ ಪರಿಸ್ಥಿತಿಯಲ್ಲಿ, ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮತ್ತು ಪ್ರಸ್ತುತ ಕಾಮೆಂಟೇಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೈಮನ್ ಡೌಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಸಾರಕರು ಭಾರತದ ಪಂದ್ಯಗಳ ಕಳಪೆ ವೇಳಾಪಟ್ಟಿಯನ್ನು ಮಾಡಿದ್ದಾರೆ ಎಂದು ಸೈಮನ್ ಹೇಳಿದ್ದಾರೆ.

ಕ್ರಿಕ್‌ಬಜ್‌ನ ಶೋನಲ್ಲಿ ಮಾತನಾಡುವಾಗ ಸೈಮನ್, ಇದು ದೀಪಾವಳಿ ಸೀಸನ್. ಆದ್ದರಿಂದ ಪ್ರಸಾರಕರು ಟೀಮ್ ಇಂಡಿಯಾದ ಪಂದ್ಯಗಳನ್ನು ರಜಾದಿನಗಳಲ್ಲಿ ಇರಿಸಲು ಬಯಸಿದ್ದರು. ಜೊತೆಗೆ ಐಸಿಸಿಯ ಮಧ್ಯಸ್ಥಿಕೆಯೊಂದಿಗೆ ಅವರು ಅದನ್ನು ಮಾಡಿದರು ಎಂದು ಹೇಳಿದರು. ಪ್ರಸಾರಕರು ವೇಳಾಪಟ್ಟಿಯನ್ನು ನಿರ್ಧರಿಸುವಲ್ಲಿ ತಪ್ಪು ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ವೇಳಾಪಟ್ಟಿಯನ್ನು ನಿರ್ಧರಿಸುವುದು ಸಹ ಪ್ರಸಾರಕರ ಕೈಯಲ್ಲಿದೆ. ಇದು ಐಸಿಸಿ ಹಾಗೂ ಪ್ರಸಾರಕರನ್ನು ಒಳಗೊಂಡಿತ್ತು. ನನ್ನ ಪ್ರಕಾರ ಪಾಕಿಸ್ತಾನದ ಪಂದ್ಯವು ಸರಿಯಾದ ಸಮಯಕ್ಕೆ ಇತ್ತು, ಅದು ಯಾವಾಗಲೂ ಭಾರತಕ್ಕೆ ಮೊದಲ ಪಂದ್ಯವಾಗಿರಬೇಕು. ಆದರೆ ನ್ಯೂಜಿಲೆಂಡ್ ಜೊತೆಗಿನ ಪಂದ್ಯ ಕೊನೆಯದಾಗಬೇಕಿತ್ತು. ಇದರಿಂದ ಭಾರತದ ಪಂದ್ಯಾವಳಿಯ ಪಲಿತಾಂಶ ಬೇರೆದ್ದೇಯಾಗಿರುತ್ತಿತ್ತು ಎಂದರು.

ಭಾರತದ ವೇಳಾಪಟ್ಟಿ ಹೀಗಿತ್ತು ಭಾರತವು ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಿತು, ಅದರಲ್ಲಿ ಅದು ಸೋಲನುಭವಿಸಿತು. ಇದರ ಆರು ದಿನಗಳ ನಂತರ, ಟೀಮ್ ಇಂಡಿಯಾ ಅಕ್ಟೋಬರ್ 31 ರಂದು ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಆಡಿತ್ತು. ಇದಾದ ನಂತರ ಭಾರತವು ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಪಂದ್ಯಗಳನ್ನು ಆಡಿತು. ಮೊದಲೆರಡು ಪಂದ್ಯಗಳ ಸೋಲಿನೊಂದಿಗೆ 2007ರ ವಿಜೇತರಿಗೆ ಈ ಬಾರಿ ಸೆಮಿಫೈನಲ್ ತಲುಪಲು ಸಾಧ್ಯವಿಲ್ಲ ಎಂಬಂದು ಸಾಭೀತಾಯಿತು.

ದಿನೇಶ್ ಕಾರ್ತಿಕ್ ಅಭಿಪ್ರಾಯ ಹೀಗಿದೆ ಅದೇ ಸಮಯದಲ್ಲಿ, ಈ ಬಗ್ಗೆ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮೊದಲ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ಪರಿಸ್ಥಿತಿ ಬದಲಾಯಿತು. ಇದಾದ ಬಳಿಕ ಒಂದು ವಾರ ಆಡದೇ ನೇರವಾಗಿ ನ್ಯೂಜಿಲೆಂಡ್​ನ ಬಲಿಷ್ಠ ಬೌಲಿಂಗ್ ದಾಳಿಗೆ ಬೆದರಿದ ತಂಡ, ಟಾಸ್ ಸೋತು, ಪಂದ್ಯವನ್ನೂ ಸೋತು ಪಂದ್ಯಾವಳಿಯಿಂದ ಹೊರಬಿತ್ತು. ಭಾರತದ ಕೊನೆಯ ಮೂರು ಪಂದ್ಯಗಳು ಮೊದಲ ಮೂರು ಪಂದ್ಯಗಳಾಗಿದ್ದರೆ, ನಾವು ನ್ಯೂಜಿಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಬರುತ್ತಿದ್ದ ಆತ್ಮವಿಶ್ವಾಸವು ತುಂಬಾ ಭಿನ್ನವಾಗಿರುತ್ತಿತ್ತು ಎಂದಿದ್ದಾರೆ.

ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್