ಬೃಹತ್ ಮೊತ್ತ ಬೆನ್ನತ್ತಿ ಗೆದ್ದು ಇತಿಹಾಸ ನಿರ್ಮಿಸಿದ ಇಶಾನ್ ಕಿಶನ್ ಪಡೆ
Punjab vs Jharkhand: ಈ ಗುರಿಯನ್ನು ಬೆನ್ನತ್ತಿದ ಜಾರ್ಖಂಡ್ ಪರ ಇಶಾನ್ ಕಿಶನ್ 23 ಎಸೆತಗಳಲ್ಲಿ 47 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರ 42 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 86 ರನ್ ಚಚ್ಚಿದರು. ಇನ್ನು ಕುಶಾಗ್ರಗೆ ಉತ್ತಮ ಸಾಥ್ ನೀಡಿದ ಅಂಕುಲ್ ರಾಯ್ 17 ಎಸೆತಗಳಲ್ಲಿ 37 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಪಂಕಜ್ ಕುಮಾರ್ ಕೇವಲ 18 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದರು.
ಪುಣೆಯ ಡಿವೈ ಪಾಟೀಲ್ ಅಕಾಡೆಮಿ ಮೈದಾನದಲ್ಲಿ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಇಶಾನ್ ಕಿಶನ್ ಮುಂದಾಳತ್ವದ ಜಾರ್ಖಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಸಲೀಲ್ ಅರೋರ ಶತಕ ಸಿಡಿಸಿದ್ದರು.
ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಲೀಲ್ ಕೇವಲ 40 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 125 ರನ್ ಬಾರಿಸಿದರು. ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಪಂಜಾಬ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 235 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಜಾರ್ಖಂಡ್ ಪರ ಇಶಾನ್ ಕಿಶನ್ 23 ಎಸೆತಗಳಲ್ಲಿ 47 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕುಮಾರ್ ಕುಶಾಗ್ರ 42 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 86 ರನ್ ಚಚ್ಚಿದರು. ಇನ್ನು ಕುಶಾಗ್ರಗೆ ಉತ್ತಮ ಸಾಥ್ ನೀಡಿದ ಅಂಕುಲ್ ರಾಯ್ 17 ಎಸೆತಗಳಲ್ಲಿ 37 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಪಂಕಜ್ ಕುಮಾರ್ ಕೇವಲ 18 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿದರು.
ಈ ಮೂಲಕ ಜಾರ್ಖಂಡ್ ತಂಡವು 18.1 ಓವರ್ಗಳಲ್ಲಿ 237 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಇದು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಗರಿಷ್ಠ ಮೊತ್ತದ ಚೇಸಿಂಗ್ ಎಂಬುದು ವಿಶೇಷ. ಅಂದರೆ ದೇಶೀಯ ಟಿ20 ಟೂರ್ನಿ ಇತಿಹಾಸದಲ್ಲಿ ಯಾವುದೇ ತಂಡ 235 ಕ್ಕಿಂತ ಹೆಚ್ಚಿನ ಮೊತ್ತವನ್ನು ಚೇಸ್ ಮಾಡಿ ಗೆದ್ದಿಲ್ಲ.
ಇದಕ್ಕೂ ಮುನ್ನ 2024 ರಲ್ಲಿ ಆಂಧ್ರ ಪ್ರದೇಶ್ ತಂಡ ನೀಡಿದ 230 ರನ್ಗಳನ್ನು ಮುಂಬೈ ಬೆನ್ನತ್ತಿ ಗೆದ್ದಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಜಾರ್ಖಂಡ್ ತಂಡವು 236 ರನ್ಗಳನ್ನು ಚೇಸ್ ಮಾಡಿ ಗೆದ್ದು ದೇಶೀಯ ಟಿ20 ಟೂರ್ನಿಯಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

