ಆಸ್ಟ್ರೇಲಿಯಾದ ಮಟ್ರಿಕಾನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮಹಿಳೆಯರ (India Women vs Australia Women) ವಿರುದ್ಧದ ಏಕೈಕ ಹಗಲು-ರಾತ್ರಿ (Day-Night Test) ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಮೃತಿ ಮಂಧಾನ (Smriti Mandhana) ಆಕರ್ಷಕ ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಮಂಧಾನ ಅವರ ಚೊಚ್ಚಲ ಸೆಂಚುರಿಯಾಗಿದೆ. ಈ ಮೂಲಕ ಪಿಂಕ್ ಬಾಲ್ ಟೆಸ್ಟ್ನಲ್ಲಿ (Pink Ball Test) ಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟರ್ ಮತ್ತು ಮೊದಲ ಭಾರತೀಯ ಮಹಿಳಾ ಬ್ಯಾಟರ್ ಎಂಬ ಸಾಧನೆಯನ್ನು ಮಾಡಿದ್ದಾರೆ. ಇದಕ್ಕೂ ಮುನ್ನ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತರ ಪರ ಮೊದಲ ಶತಕ ಬಂದಿದ್ದು ವಿರಾಟ್ ಕೊಹ್ಲಿ (Virat Kohli) ಬ್ಯಾಟ್ನಿಂದ. ಇಷ್ಟೇ ಅಲ್ಲದೆ ಕಾಂಗರೂಗಳ ನಾಡಿನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ದಾಖಲೆಯನ್ನು ಸ್ಮೃತಿ ಮಂಧಾನ ಮಾಡಿದ್ದಾರೆ.
ಗುರುವಾರ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಮೊದಲ ವಿಕೆಟ್ಗೆ 93 ರನ್ಗಳ ಜೊತೆಯಾಟ ಆಡಿದರು. ಚೆನ್ನಾಗಿಯೇ ಆಡುತ್ತಿದ್ದ ಶೆಫಾಲಿ 64 ಎಸೆತಗಳಲ್ಲಿ 31 ರನ್ ಗಳಿಸಿ ಔಟ್ ಆದರು.
? for @mandhana_smriti! ? ?
Maiden Test ton for the #TeamIndia left-hander. ? ?
What a fantastic knock this has been! ? ? #AUSvIND
Follow the match ? https://t.co/seh1NVa8gu pic.twitter.com/2SSnLRg789
— BCCI Women (@BCCIWomen) October 1, 2021
ಆದರೆ, ಮೊದಲ ದಿನದಾಟ ಮಳೆಯಿಂದಾಗಿ ಸಂಪೂರ್ಣ ಆಡಲು ಸಾಧ್ಯವಾಗಲಿಲ್ಲ. ಎರಡನೇ ಸೆಷನ್ ಹೆಚ್ಚಿನ ಭಾಗವು ಮಳೆಯಿಂದಾಗಿ ರದ್ದಾಯಿತು. ಈ ಮೂಲಕ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಒಂದು ವಿಕೆಟ್ಗೆ 132 ರನ್ ಗಳಿಸಿತು. ಮಂಧಾನ80 ರನ್ ಗಳಿಸಿ ಮತ್ತು ಪೂನಮ್ ರಾವುತ್ 16 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಅದರಂತೆ ಇಂದು ಎರಡನೇ ದಿನದಾಟ ಆರಂಭಿಸಿದ ಭಾರತೀಯ ವನಿತೆಯರು ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಅದರಲ್ಲೂ ಮಂಧಾನ ಆಸೀಸ್ ಬೌಲರ್ಗಳ ಬೆಂಡೆತ್ತಿ ಬೌಂಡರಿಗಳ ಮಳೆ ಸುರಿಸುತ್ತಿದ್ದಾರೆ. ಸದ್ಯದ ಸ್ಕೋರ್ ಪ್ರಕಾರ ಮಂಧಾನ 208 ಎಸೆತಗಳಲ್ಲಿ 22 ಬೌಂಡರಿ, 1 ಸಿಕ್ಸರ್ನೊಂದಿಗೆ 126 ರನ್ ಬಾರಿಸಿ ಬ್ಯಾಟಿಂಗ್ ಮಾಡುತ್ತಿದ್ದರೆ ಇವರಿಗೆ ಪೂನಮ್ 27 ರನ್ ಗಳಿಸಿ ಉತ್ತಮ ಸಾಥ್ ನೀಡುತ್ತಿದ್ದಾರೆ.
ಏಕದಿನ ಸರಣಿಯ ಬಳಿಕ ಭಾರತೀಯ ವನಿತೆಯರು ಕೇವಲ 2 ಬಾರಿಯಷ್ಟೇ ನೆಟ್ಸ್‌ನಲ್ಲಿ ಪಿಂಕ್ ಬಾಲ್ನಿಂದ ಅಭ್ಯಾಸ ನಡೆಸಿದೆ. ಚೆಂಡು ಹೇಗೆ ವರ್ತಿಸಲಿದೆ ಎನ್ನುವ ಬಗ್ಗೆ ತಂಡಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆಸ್ಪ್ರೇಲಿಯಾ ತಂಡ ಈಗಾಗಲೇ ಹಗಲು-ರಾತ್ರಿ ಟೆಸ್ಟ್ ಆಡಿದೆಯಾದರೂ ಅದು 2017ರಲ್ಲಿ. ಹೀಗಾಗಿ ಆಸೀಸ್‌ಗೂ ಇದು ಹೊಸ ಅನುಭವವಾಗಿದೆ.
ಬರೋಬ್ಬರಿ ಏಳು ವರ್ಷಗಳ ಬಳಿಕ ಮಿಥಾಲಿ ರಾಜ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಕಳೆದ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. 4 ದಿನಗಳ ಟೆಸ್ಟ್ ಪಂದ್ಯ ಸಾಕಷ್ಟು ರೋಚಕ ಹೋರಾಟಕ್ಕೆ ಕಾರಣವಾಗಿತ್ತು. ಆ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಸವಾಲನ್ನು ಭಾರತ ಅತ್ಯುತ್ತಮವಾಗಿ ಎದುರಿಸುತ್ತಿದೆ.
Team India New Coach: ಕುಂಬ್ಳೆ ಅಲ್ಲ: ಟೀಮ್ ಇಂಡಿಯಾ ಮುಂದಿನ ಕೋಚ್ ಇವರಂತೆ: ಹಿಂಟ್ ಕೊಟ್ಟ ಎಂಎಸ್ಕೆ ಪ್ರಸಾದ್
Chirs Gayle: ಪಂಜಾಬ್ ಕಿಂಗ್ಸ್ಗೆ ಬಿಗ್ ಶಾಕ್: ತಂಡದಿಂದ ದಿಢೀರ್ ಹೊರ ನಡೆದ ಕ್ರಿಸ್ ಗೇಲ್, ಯಾಕೆ ಗೊತ್ತಾ?
(Smriti Mandhana maiden Test century create a new record in pink ball against Australia Womens)