Virat Kohli: ಕೊಹ್ಲಿಯಿಂದ ನಾಯಕತ್ವ ಕಸಿದುಕೊಂಡಿದ್ದು ಒಳ್ಳೆಯದೇ ಆಯ್ತು! ಆಸೀಸ್ ಲೆಜೆಂಡ್ ಶಾಕಿಂಗ್ ಹೇಳಿಕೆ
Virat Kohli: ಸದ್ಯಕ್ಕೆ ಏಕದಿನ ಮತ್ತು ಟಿ20 ನಾಯಕತ್ವವನ್ನು ರೋಹಿತ್‌ಗೆ ಬಿಟ್ಟುಕೊಡುವ ಮೂಲಕ ಕೊಹ್ಲಿ ಮೇಲಿದ್ದ ಒತ್ತಡವೂ ಕಡಿಮೆಯಾಗಿದೆ. ವಿರಾಟ್ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದಲೂ ತೆಗೆದುಹಾಕಿರುವುದು ಒಳ್ಳೆಯದು ಎಂದು ಬ್ರಾಡ್ ಹಾಗ್ ಹೇಳಿದ್ದಾರೆ.

ಬಿಸಿಸಿಐ ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾಗೆ ಏಕದಿನ ತಂಡದ ನಾಯಕತ್ವವನ್ನು ನೀಡಿರುವುದು ಪ್ರತಿದಿನ ಹೊಸ ವಿವಾದಕ್ಕೆ ಕಾರಣವಾಗುತ್ತಿದೆ. ಸೌರವ್ ಗಂಗೂಲಿ ಈ ಬಗ್ಗೆ ಸ್ಪಷ್ಟನೆ ಸಹ ನೀಡುತ್ತಿದ್ದಾರೆ. ಆದರೆ ಕೊಹ್ಲಿಯ ಕೋಚ್ ರಾಜ್‌ಕುಮಾರ್ ಶರ್ಮಾ ಬಿಸಿಸಿಐನ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ. ಕೊಹ್ಲಿಯನ್ನು ತೆಗೆದು ಹಾಕಿದ ರೀತಿ ಸರಿಯಿಲ್ಲ ಎಂದು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ.
ಟಿ20 ವಿಶ್ವಕಪ್ಗೂ ಮುನ್ನವೇ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದರು. ಆದರೆ, ಅವರು ಏಕದಿನ ನಾಯಕತ್ವ ತೊರೆಯುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಸ್ವಲ್ಪ ದಿನಗಳ ನಂತರ ಇದಾದ ಬಳಿಕ ಬಿಸಿಸಿಐ ಏಕದಿನ ತಂಡದ ನಾಯಕತ್ವವನ್ನು ರೋಹಿತ್‌ಗೆ ಹಸ್ತಾಂತರಿಸಿತ್ತು. ಬಿಸಿಸಿಐನ ಈ ನಿರ್ಧಾರದಿಂದ ಕೊಹ್ಲಿ ಅಭಿಮಾನಿಗಳು ಬೇಸರಗೊಂಡಿದ್ದರೆ, ಬಿಸಿಸಿಐನ ಈ ನಿರ್ಧಾರ ಕೊಹ್ಲಿಗೆ ವರದಾನವಾಗಲಿದೆ ಎಂದು ಆಸ್ಟ್ರೇಲಿಯಾದ ದಿಗ್ಗಜ ಬೌಲರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.
ನಾಯಕತ್ವ ತ್ಯಜಿಸಿರುವುದು ಕೊಹ್ಲಿಗೆ ವರದಾನ ಬ್ರಾಡ್ ಹಾಗ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ಇದು ಉತ್ತಮ ಕ್ರಮ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಅದನ್ನು ಸ್ವೀಕರಿಸಬೇಕು ಮತ್ತು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಬೇಕು. ಸದ್ಯಕ್ಕೆ ಏಕದಿನ ಮತ್ತು ಟಿ20 ನಾಯಕತ್ವವನ್ನು ರೋಹಿತ್‌ಗೆ ಬಿಟ್ಟುಕೊಡುವ ಮೂಲಕ ಕೊಹ್ಲಿ ಮೇಲಿದ್ದ ಒತ್ತಡವೂ ಕಡಿಮೆಯಾಗಿದೆ. ವಿರಾಟ್ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದಲೂ ತೆಗೆದುಹಾಕಿರುವುದು ಒಳ್ಳೆಯದು ಎಂದು ಬ್ರಾಡ್ ಹಾಗ್ ಹೇಳಿದ್ದಾರೆ. ಇದಕ್ಕೆ ಕಾರಣವನ್ನು ವಿವರಿಸಿದ ಅವರು. ಈ ನಿರ್ಧಾರದಿಂದ ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿಲ್ಲದ ಕೊಹ್ಲಿ ಪ್ರದರ್ಶನವು ಸುಧಾರಿಸುತ್ತದೆ. ಏಕೆಂದರೆ ಅವರು ಮೂರು ಮಾದರಿಗಳಲ್ಲಿ ನಾಯಕತ್ವದ ಕಾರಣ ಒತ್ತಡದಲ್ಲಿದ್ದರು. ಆದರೆ ಈಗ ಅವರ ಆ ಒತ್ತಡವಿರುವುದಿಲ್ಲ ಎಂದಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಟ್ಟಾಗಿ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸಬಹುದು ಎಂದಿದ್ದಾರೆ.
ಕೊಹ್ಲಿ ನಾಯಕತ್ವದಲ್ಲಿ ಭಾರತದ ದಾಖಲೆ ಕೊಹ್ಲಿ ನಾಯಕತ್ವದಲ್ಲಿ ಭಾರತ 95 ಏಕದಿನ ಪಂದ್ಯಗಳಲ್ಲಿ 65 ಪಂದ್ಯಗಳನ್ನು ಗೆದ್ದಿದೆ, ಜೊತೆಗೆ 27 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಭಾರತ ತಂಡ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯೊಂದಿಗೆ ರೋಹಿತ್ ಶರ್ಮಾ ಏಕದಿನ ನಾಯಕನಾಗಿ ಅಭಿಯಾನ ಆರಂಭಿಸಲಿದ್ದಾರೆ. ಗುರುವಾರ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿಷಯದ ಬಗ್ಗೆ ಮೌನ ಮುರಿದು, ಬಿಳಿ ಚೆಂಡಿನ ಎರಡು ವಿಭಿನ್ನ ಸ್ವರೂಪಗಳಿಗೆ ಇಬ್ಬರು ನಾಯಕರು ಇರಲು ಸಾಧ್ಯವಿಲ್ಲ ಎಂದು ಹೇಳಿ, ಈ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದರು.
ಇದನ್ನೂ ಓದಿ:ಪಾರದರ್ಶಕತೆ ಇಲ್ಲ! ಗಂಗೂಲಿ ಹೇಳಿಕೆಯಿಂದ ಕೆರಳಿದ ವಿರಾಟ್ ಕೊಹ್ಲಿ ಬಾಲ್ಯದ ಕೋಚ್ ಹೇಳಿದ್ದೇನು ಗೊತ್ತಾ?
