Harbhajan Singh: ಧೋನಿ, ಅಜರ್, ದ್ರಾವಿಡ್, ಗಂಗೂಲಿ: ನೆಚ್ಚಿನ ನಾಯಕ ಯಾರೆಂದು ಬಹಿರಂಗಪಡಿಸಿದ ಹರ್ಭಜನ್ ಸಿಂಗ್
ತಮ್ಮ ವೃತ್ತಿ ಜೀವನದಲ್ಲಿ ಹಲವು ನಾಯಕರ ಅಡಿಯಲ್ಲಿ ಆಡಿರುವ ಹರ್ಭಜನ್ ಸಿಂಗ್ ತಮ್ಮ ನೆಚ್ಚಿನ ನಾಯಕ ಯಾರೆಂಬುದನ್ನು ಕೂಡ ತಿಳಿಸಿದ್ದಾರೆ.
ಟೀಮ್ ಇಂಡಿಯಾ (Team India) ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಇತ್ತೀಚೆಗೆ ಎಲ್ಲಾ ಮಾದರಿ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಭಜ್ಜಿ ತಮ್ಮ ಕ್ರಿಕೆಟ್ ವೃತ್ತಿಜೀವನ, ವಿವಾದ ಮತ್ತು ನಾಯಕತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರಲ್ಲೂ ನನಗೆ ಬಿಸಿಸಿಐನಲ್ಲಿ ಹಿಡಿತವಿಲ್ಲದ ಕಾರಣ ನಾಯಕನಾಗಲು ಸಾಧ್ಯವಾಗಿಲ್ಲ ಎಂದು ನೇರವಾಗಿ ಭಾರತೀಯ ಕ್ರಿಕೆಟ್ ಬೋರ್ಡ್ನ ಪಕ್ಷಪಾತ ಧೋರಣೆಯನ್ನು ಹರ್ಭಜನ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲದೆ ತಮ್ಮ ವೃತ್ತಿ ಜೀವನದಲ್ಲಿ ಹಲವು ನಾಯಕರ ಅಡಿಯಲ್ಲಿ ಆಡಿರುವ ಹರ್ಭಜನ್ ಸಿಂಗ್ ತಮ್ಮ ನೆಚ್ಚಿನ ನಾಯಕ ಯಾರೆಂಬುದನ್ನು ಕೂಡ ತಿಳಿಸಿದ್ದಾರೆ. ಏಕೆಂದರೆ ಭಜ್ಜಿ ತಮ್ಮ ಕ್ರಿಕೆಟ್ ಕೆರಿಯರ್ನಲ್ಲಿ ಮೊಹಮ್ಮದ್ ಅಜರುದ್ದೀನ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ್ದರು. ಹೀಗೆ ನಾಲ್ವರು ನಾಯಕರುಗಳ ಅಡಿಯಲ್ಲಿ ಆಡಿರುವ ಹರ್ಭಜನ್ ಸಿಂಗ್ ಅವರ ನೆಚ್ಚಿನ ನಾಯಕ ಸೌರವ್ ಗಂಗೂಲಿ ಎಂದು ತಿಳಿಸಿದ್ದಾರೆ.
ಸೌರವ್ ಗಂಗೂಲಿ ನಾನು ನೋಡಿದ ಅತ್ಯುತ್ತಮ ನಾಯಕ. ನಾನು ತಂಡದಿಂದ ಹೊರಗುಳಿಯುತ್ತಿದ್ದಾಗ ಅವರು ನನ್ನನ್ನು ಆಯ್ಕೆ ಮಾಡಿದರು. 2001ರ ಆಸ್ಟ್ರೇಲಿಯಾ ಸರಣಿಯಲ್ಲಿ ನನಗೆ ಅವಕಾಶ ನೀಡಿದರು. ನಾನು ಆ ಸರಣಿಯಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದೆ ಮತ್ತು ಟೆಸ್ಟ್ ಹ್ಯಾಟ್ರಿಕ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡಿದ್ದೇನೆ. ಆ ನಂತರ ಮಹೇಂದ್ರ ಸಿಂಗ್ ಧೋನಿ ನಾಯಕರಾದರು, ನಂತರ ಅವರು ತಂಡವನ್ನು ಚೆನ್ನಾಗಿ ನಿಭಾಯಿಸಿದರು.
2011ರವರೆಗೂ ಧೋನಿ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು. ಭಾರತವೂ ವಿಶ್ವ ಚಾಂಪಿಯನ್ ಆಯಿತು. ಆದರೆ, ನನಗೆ ಗಂಗೂಲಿ ನಾಯಕತ್ವವೇ ಹೆಚ್ಚು ಇಷ್ಟ. ಏಕೆಂದರೆ ಬೌಲರ್ ಆಗಿ ಅವರು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಆದ್ದರಿಂದಲೇ ನಾನು ಉತ್ತಮ ಬೌಲರ್ ಆಗಲು ಸಾಧ್ಯವಾಯಿತು ಎಂದು ಹರ್ಭಜನ್ ಸಿಂಗ್ ತಿಳಿಸಿದರು. ಈ ಮೂಲಕ ಸೌರವ್ ಗಂಗೂಲಿ ನಾನು ಕಂಡಂತಹ ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಎಂದು ಹರ್ಭಜನ್ ತಿಳಿಸಿದ್ದಾರೆ.
ಇದನ್ನೂ ಓದಿ: India vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ
ಇದನ್ನೂ ಓದಿ: Ravindra Jadeja: ಸ್ಟಾರ್ ಆಲ್ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!
ಇದನ್ನೂ ಓದಿ: Rohit Sharma: ಫಿಟ್ನೆಸ್ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(Sourav Ganguly is the best captain I have played: Harbhajan Singh)