ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಭಾರತ ಕ್ರಿಕೆಟ್ ತಂಡ (India vs South Africa) ಇದೀಗ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೇಪ್ ಟೌನ್ನ ನ್ಯೂಲಾಂಡ್ಸ್ನಲ್ಲಿ ಜನವರಿ 3 ರಿಂದ ಎರಡನೇ ಟೆಸ್ಟ್ ಶುರುವಾಗಲಿದೆ. ಆದರೆ, ಈ ಪಂದ್ಯ ಆರಂಭಕ್ಕು ಮುನ್ನವೇ ಟೀಮ್ ಇಂಡಿಯಾಕ್ಕೆ ಆತಂಕ ಶುರುವಾಗಿದೆ. ದಕ್ಷಿಣ ಆಫ್ರಿಕಾದ ಇಬ್ಬರು ಆಟಗಾರರನ್ನು ಎದುರಿಸುವುದು ರೋಹಿತ್ ಪಡೆಗೆ ದೊಡ್ಡ ಸವಾಲಾಗಿದೆ. ಕೇಪ್ ಟೌನ್ ಟೆಸ್ಟ್‌ನಲ್ಲಿ ಭಾರತಕ್ಕೆ ಅಪಾಯಕಾರಿಯಾಗಬಲ್ಲ ಈ ಇಬ್ಬರು ಆಟಗಾರರೆಂದರೆ ಕಗಿಸೊ ರಬಾಡ ಮತ್ತು ಮಾರ್ಕೊ ಜಾನ್ಸನ್. ಈ ಇಬ್ಬರು ಆಟಗಾರರ ದಾಖಲೆ ಇಲ್ಲಿ ಉತ್ತಮವಾಗಿದೆ.
ಕೇಪ್ ಟೌನ್‌ನಲ್ಲಿ ಭಾರತದ ವಿರುದ್ಧ ರಬಾಡ ಮತ್ತು ಜಾನ್ಸನ್ ಮಾರಕ ಪ್ರದರ್ಶನ ತೋರಿದ್ದಾರೆ. ಅಷ್ಟೇ ಅಲ್ಲ ಭಾರತ ತಂಡದಲ್ಲಿ ಈ ಇಬ್ಬರು ಆಟಗಾರರ ಪ್ರಾಬಲ್ಯ ಪ್ರಸಕ್ತ ಸರಣಿಯ ಮೊದಲ ಟೆಸ್ಟ್ನಲ್ಲೂ ಕಂಡು ಬಂದಿತ್ತು. ಭಾರತ ವಿರುದ್ಧದ ಸೆಂಚುರಿಯನ್ ಟೆಸ್ಟ್‌ನಲ್ಲಿ ರಬಾಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 7 ವಿಕೆಟ್ ಪಡೆದರು. ಮಾರ್ಕೊ ಜಾನ್ಸನ್ 4 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ, ಬ್ಯಾಟ್‌ನಲ್ಲೂ ಜಾನ್ಸನ್ ಉತ್ತಮ ಕೊಡುಗೆ ನೀಡಿದ್ದರು.
ಏಷ್ಯಾಕಪ್, ವಿಶ್ವಕಪ್ನಿಂದ ಔಟ್: ಇದೀಗ ನಾಯಕನಾಗಿ ಎಂಟ್ರಿ..!
ಕಗಿಸೊ ರಬಾಡ ಅವರು ಈ ಹಿಂದೆ ಕೇಪ್ ಟೌನ್‌ನಲ್ಲಿ ಭಾರತದ ವಿರುದ್ಧ 2 ಟೆಸ್ಟ್‌ಗಳನ್ನು ಆಡಿದ್ದಾರೆ, ಇದರಲ್ಲಿ ಅವರು 16.75 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ರಬಾಡ ಅವರು 2018 ರಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಟೆಸ್ಟ್ ಆಡಿದರು, ಇದರಲ್ಲಿ ಅವರು 5 ವಿಕೆಟ್‌ಗಳನ್ನು ಪಡೆದರು. 2022 ರಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇವರು 7 ವಿಕೆಟ್ ಪಡೆದರು. ಈ ಬಾರಿ ರಬಾಡ ನ್ಯೂಲಾಂಡ್ಸ್ನಲ್ಲಿ ಮೂರನೇ ಬಾರಿ ಟೀಮ್ ಇಂಡಿಯಾಕ್ಕೆ ಮಾರಕವಾಗಬಹುದು. ಅಲ್ಲದೆ, ಪ್ರಸಕ್ತ ಸರಣಿಯ ಮೊದಲ ಟೆಸ್ಟ್‌ನಲ್ಲಿ ಅವರು ಬೌಲಿಂಗ್ ಮಾಡಿದ ರೀತಿಯನ್ನು ನೋಡಿದ ನಂತರ, ಕೇಪ್‌ಟೌನ್‌ನಲ್ಲಿ ಅಪಾಯಕಾರಿ ಆಗುವುದು ಖಚಿತ.
ರಬಾಡ ಹೊರತಾಗಿ, ನ್ಯೂಲಾಂಡ್ಸ್ನಲ್ಲಿ ಭಾರತಕ್ಕೆ ಮಾರ್ಕೊ ಜಾನ್ಸನ್ ಭಯ ಕೂಡ ಇದೆ. ಇಲ್ಲಿ ಭಾರತ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ ಅವರ ಸ್ಫೋಟಕ ಪ್ರದರ್ಶನವೇ ಇದಕ್ಕೆ ದೊಡ್ಡ ಕಾರಣ. 2022 ರಲ್ಲಿ ಕೇಪ್ ಟೌನ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ರಬಾಡ 7 ವಿಕೆಟ್ ಪಡೆದಿದ್ದರೆ, ಜಾನ್ಸನ್ ಕೇವಲ 13 ಸರಾಸರಿಯಲ್ಲಿ 7 ವಿಕೆಟ್‌ಗಳನ್ನು ಪಡೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ