South Africa vs India: ಭಾರತದ ಗೆಲುವಿಗೆ ಎದುರಾಯ್ತು ದೊಡ್ಡ ಕಂಟಕ: ಐದನೇ ದಿನದ ಸೆಂಚುರಿಯನ್ ವಾತಾವರಣ ಹೇಗಿದೆ?

IND vs SA 1st Test Centurion Weather Day 5: ಭಾರತ- ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್​ನ ಎರಡನೇ ದಿನ ಅಡ್ಡಿಯಾಗಿದ್ದ ಮಳೆ ಐದನೇ ದಿನ ಮರಳಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ಟೀಮ್ ಇಂಡಿಯಾ ಗೆಲುವಿಗೆ ಆಫ್ರಿಕಾರನ್ನರ 6 ವಿಕೆಟ್​ಗಳು ಬೇಕಿದ್ದರೆ ಇತ್ತ ಹರಿಣಗಳ ಗೆಲುವಿಗೆ 211 ರನ್​​ಗಳ ಅವಶ್ಯಕತೆಯಿದೆ.

South Africa vs India: ಭಾರತದ ಗೆಲುವಿಗೆ ಎದುರಾಯ್ತು ದೊಡ್ಡ ಕಂಟಕ: ಐದನೇ ದಿನದ ಸೆಂಚುರಿಯನ್ ವಾತಾವರಣ ಹೇಗಿದೆ?
IND vs SA Weather Forecast for Day 5
Follow us
TV9 Web
| Updated By: Vinay Bhat

Updated on:Dec 30, 2021 | 8:42 AM

ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತೇ ಕಾತುರದಲ್ಲಿದೆ. ಅಷ್ಟೊಂದು ರೋಚಕತೆ ಸೃಷ್ಟಿಸಿದೆ ಐದನೇ ದಿನದಾಟ. ಬ್ಯಾಟರ್​ಗಳಿಗೆ ವಿಶೇಷ ನೆರವು ನೀಡದ ಸೆಂಚುರಿಯನ್‌ (Centurion) ಟ್ರ್ಯಾಕ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ 305 ರನ್‌ ಗುರಿ ನೀಡಿರುವ ಭಾರತ ಬಾಕ್ಸಿಂಗ್‌ ಡೇ ಟೆಸ್ಟ್‌ (Boxing Day Test) ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾದಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆ ಇತಿಹಾಸ ಸೃಷ್ಟಿಸಲಿದೆ. ಸದ್ಯಕ್ಕೆ ಟೀಮ್ ಇಂಡಿಯಾ (Team India) ಗೆಲುವಿಗೆ ಆಫ್ರಿಕಾರನ್ನರ 6 ವಿಕೆಟ್​ಗಳು ಬೇಕಿದ್ದರೆ ಇತ್ತ ಹರಿಣಗಳ ಗೆಲುವಿಗೆ 211 ರನ್​​ಗಳ ಅವಶ್ಯಕತೆಯಿದೆ. ಇವೆಲ್ಲದರ ನಡುವೆ ಅಂತಿಮ ಐದನೇ ದಿನದಾಟಕ್ಕೆ ಮಳೆರಾಯನ ಕಾಣ ಎದುರಾಗಲಿದೆಯೇ ಎಂಬ ಭಯ ಶುರುವಾಗಿದೆ. ಹಾಗಾದ್ರೆ ಇಂದು ಸೆಂಚುರಿಯನ್ ವಾತಾವರಣ ಹೇಗಿರಲಿದೆ ಎಂಬುದನ್ನು ನೋಡೋಣ.

ಭಾರತ- ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್​ನ ಎರಡನೇ ದಿನ ಅಡ್ಡಿಯಾಗಿದ್ದ ಮಳೆ ಐದನೇ ದಿನ ಮರಳಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ಮಳೆ ಬಂದರೆ ಸೌತ್ ಆಫ್ರಿಕಾ ಸೋಲಿನ ಸುಳಿಯಿಂದ ಪಾರಾಗಿ ಪಂದ್ಯ ಡ್ರಾ ಆಗಬಹುದು. ಮಳೆ ಬರದೇ ಹೋದರೆ ಟೀಮ್ ಇಂಡಿಯಾವೇ ಪಂದ್ಯ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ. ಸ್ಥಳೀಯ ಹವಾಮಾನ ಮುನ್ಸೂಚನೆ ಪ್ರಕಾರ, ಇಂದು 47 ಡಿಗ್ರಿ ಸೆ. ನಷ್ಟು ಕನಿಷ್ಠ ತಾಪಮಾನ ಇರಲಿದೆಯಂತೆ. ಗರಿಷ್ಠ ತಾಪಮಾನ 32 ಡಿಗ್ರಿ ಸೆ. ಇರಲಿದೆ. ಇದರ ಪ್ರಕಾರ 24-51% ವ್ಯಾಪ್ತಿಯಲ್ಲಿ ದಿನವಿಡೀ ಮಳೆಯಾಗುವ ನಿರೀಕ್ಷೆಯಿದೆ.

ಇನ್ನು ಸೆಂಚುರಿಯನ್‌ ಟೆಸ್ಟ್‌ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ಈ ವರೆಗಿನ ಯಶಸ್ವಿ ಚೇಸಿಂಗ್‌ ದಾಖಲೆಯೆಂದರೆ 251 ರನ್‌. 2000-01ರಲ್ಲಿ ಪ್ರವಾಸಿ ಇಂಗ್ಲೆಂಡ್‌ ಈ ಸಾಧನೆಗೈದಿತ್ತು. ತವರಿನ ಟೆಸ್ಟ್‌ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಈವರೆಗೆ ಒಮ್ಮೆಯಷ್ಟೇ 300 ಪ್ಲಸ್‌ ಮೊತ್ತವನ್ನು ಚೇಸ್‌ ಮಾಡಿ ಗೆದ್ದಿದೆ.

ಮೂರನೇ ದಿನಾಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿದ್ದ ಟೀಮ್ ಇಂಡಿಯಾದ ಆಟಗಾರರು 4ನೇ ದಿನ ಎಚ್ಚರಿಕೆಯಿಂದಲೇ ಬ್ಯಾಟ್ ನಡೆಸಿದರಾದರೂ ಅನಿರ್ದಿಷ್ಟವಾಗಿ ಚಿಮ್ಮುತ್ತಿದ್ದ ಬೌನ್ಸರ್​ಗಳಿಂದ ಕಂಗೆಟ್ಟರು.  4ನೇ ದಿನದಾಟದಲ್ಲೂ ಪಿಚ್‌ ಸಂಪೂರ್ಣವಾಗಿ ವೇಗಿಗಳಿಗೆ ನೆರವಾಯಿತು. ಬ್ಯಾಟ್ಸ್‌ಮನ್‌ಗಳ ಪರದಾಟ ಮುಂದುವರಿಯಿತು. ಭಾರತ ಬುಧವಾರ ಸುಮಾರು ಮೂರೂವರೆ ಗಂಟೆಗಳ ಕಾಲವಷ್ಟೇ ಬ್ಯಾಟಿಂಗ್‌ ನಡೆಸಿ 174ಕ್ಕೆ ಆಲೌಟ್‌ ಆಯಿತು. 158 ರನ್‌ ಅಂತರದಲ್ಲಿ ಉಳಿದೆಲ್ಲ ವಿಕೆಟ್‌ಗಳು ಉದುರಿದವು. ರಬಾಡ ಮತ್ತು ಜಾನ್ಸೆನ್‌ ತಲಾ 4, ಎನ್‌ಗಿಡಿ 2 ವಿಕೆಟ್‌ ಕೆಡವಿದರು. ಇದರೊಂದಿಗೆ ಪಂದ್ಯದ ಮೊದಲ 3 ಇನ್ನಿಂಗ್ಸ್‌ಗಳ ಎಲ್ಲ ವಿಕೆಟ್‌ಗಳನ್ನು ವೇಗಿಗಳೇ ಉದುರಿಸಿದಂತಾಯಿತು.

ಗೆಲ್ಲಲು 303 ರನ್ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಬ್ಯಾಟುಗಾರರು ಭಾರತದ ವೇಗದ ಬೌಲರ್​ಗಳ ಮಾರಕ ದಾಳಿಯ ರುಚಿ ಉಣ್ಣಬೇಕಾಯಿತು. ನಾಯಕ ಡೀನ್ ಎಲ್ಗಾರ್ ಅರ್ಧಶತಕ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಈಗ ಸೌತ್ ಆಫ್ರಿಕಾದ ಬ್ಯಾಟಿಂಗ್ ಲೈನಪ್​ನಲ್ಲಿ ಎಲ್ಗಾರ್ ಬಿಟ್ಟರೆ ಉಳಿದಿರುವುದು ಟೆಂಬಾ ಬವುಮಾ ಮತ್ತು ಕ್ವಿಂಟಾನ್ ಡೀಕಾಕ್ ಮಾತ್ರ. ಇನ್ನೂ 211 ರನ್ ಗಳಿಸಬೇಕಿದ್ದು, ಗೆಲುವಿನ ದಡ ಮುಟ್ಟುವುದು ದೂರದ ಮಾತಾಗಿದೆ.

South Africa vs India: ಸೆಂಚುರಿಯನ್​ನಲ್ಲಿ ಇತಿಹಾಸ ಸೃಷ್ಟಿಸುತ್ತಾ ಭಾರತ: ರೋಚಕತೆ ಪಡೆದುಕೊಂಡ ಐದನೇ ದಿನದಾಟ

(South Africa vs India Weather Forecast for Day 5 1st Test Will rain hit Team India chances for win)

Published On - 8:41 am, Thu, 30 December 21

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ