AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SA vs NZ Highlights: ಮಿಲ್ಲರ್ ಶತಕ ವ್ಯರ್ಥ; ಸೆಮಿ ಫೈನಲ್​ನಲ್ಲಿ ಸೋತ ದಕ್ಷಿಣ ಆಫ್ರಿಕಾ

SA vs NZ Champions Trophy 2025 Highlights in Kannada: 2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ನಲ್ಲಿ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 5೦ ರನ್‌ಗಳಿಂದ ಸೋಲಿಸಿ ಪಂದ್ಯಾವಳಿಯಿಂದ ಹೊರದಬ್ಬಿದೆ. ಇದರೊಂದಿಗೆ, ಫೈನಲ್‌ಗೆ ಪ್ರವೇಶಿಸಿದ ಎರಡನೇ ತಂಡವಾಗಿದೆ. ಅಂದರೆ ಮಾರ್ಚ್ 9 ರಂದು ದುಬೈನಲ್ಲಿ ನಡೆಯಲಿರುವ ಪ್ರಶಸ್ತಿ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಚಾಂಪಿಯನ್ ಆಗಲು ಹೋರಾಟ ನಡೆಯಲಿದೆ.

SA vs NZ Highlights: ಮಿಲ್ಲರ್ ಶತಕ ವ್ಯರ್ಥ; ಸೆಮಿ ಫೈನಲ್​ನಲ್ಲಿ ಸೋತ ದಕ್ಷಿಣ ಆಫ್ರಿಕಾ
ಚಾಂಪಿಯನ್ಸ್ ಟ್ರೋಫಿ
ಪೃಥ್ವಿಶಂಕರ
|

Updated on:Mar 05, 2025 | 10:28 PM

Share

2025 ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗೆ ನ್ಯೂಜಿಲೆಂಡ್ ತನ್ನ ಟಿಕೆಟ್ ಬುಕ್ ಮಾಡಿದೆ. ಮಿಚೆಲ್ ಸ್ಯಾಂಟ್ನರ್ ನೇತೃತ್ವದ ಕಿವೀಸ್ ತಂಡವು ಈಗ ಲಾಹೋರ್‌ನಿಂದ ದುಬೈಗೆ ವಿಮಾನ ಹತ್ತಲಿದೆ. ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾವನ್ನು 50 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿತು. ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಶತಕಗಳನ್ನು ಗಳಿಸಿದರೆ, ಗ್ಲೆನ್ ಫಿಲಿಪ್ಸ್ ಅಂತಿಮ ಓವರ್‌ಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. 363 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 9 ವಿಕೆಟ್‌ಗಳ ನಷ್ಟಕ್ಕೆ 312 ರನ್‌ಗಳಿಸಲಷ್ಟೇ ಶಕ್ತವಾಯಿತು. ಡೇವಿಡ್ ಮಿಲ್ಲರ್ ಅವರ ಶತಕ ಕೂಡ ಪ್ರೋಟಿಯಸ್ ತಂಡಕ್ಕೆ ಗೆಲುವು ತಂದುಕೊಡಲಿಲ್ಲ.

LIVE NEWS & UPDATES

The liveblog has ended.
  • 05 Mar 2025 10:26 PM (IST)

    SA vs NZ Live Score: ಗೆದ್ದ ಕಿವೀಸ್

    2025 ರ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್‌ನಲ್ಲಿ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು 5೦ ರನ್‌ಗಳಿಂದ ಸೋಲಿಸಿ ಪಂದ್ಯಾವಳಿಯಿಂದ ಹೊರದಬ್ಬಿದೆ. ಇದರೊಂದಿಗೆ, ಫೈನಲ್‌ಗೆ ಪ್ರವೇಶಿಸಿದ ಎರಡನೇ ತಂಡವಾಗಿದೆ. ಅಂದರೆ ಮಾರ್ಚ್ 9 ರಂದು ದುಬೈನಲ್ಲಿ ನಡೆಯಲಿರುವ ಪ್ರಶಸ್ತಿ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವೆ ಚಾಂಪಿಯನ್ ಆಗಲು ಹೋರಾಟ ನಡೆಯಲಿದೆ.

  • 05 Mar 2025 10:22 PM (IST)

    SA vs NZ Live Score: ಶತಕದಂಚಿನಲ್ಲಿ ಮಿಲ್ಲರ್

    ದಕ್ಷಿಣ ಆಫ್ರಿಕಾ 300 ರನ್‌ಗಳ ಗಡಿ ದಾಟಿತು. ಮಿಲ್ಲರ್ 66 ಎಸೆತಗಳಲ್ಲಿ 99 ರನ್ ಗಳಿಸಿದ್ದಾರೆ.

  • 05 Mar 2025 09:44 PM (IST)

    SA vs NZ Live Score: 8ನೇ ವಿಕೆಟ್ ಪತನ

    ದಕ್ಷಿಣ ಆಫ್ರಿಕಾದ 8ನೇ ವಿಕೆಟ್ ಪತನಗೊಂಡಿದೆ. ಕೇಶವ್ ಮಹಾರಾಜ್ 1 ರನ್ ಗಳಿಸಿ ಔಟಾದರು.

  • 05 Mar 2025 09:11 PM (IST)

    SA vs NZ Live Score: ಐದನೇ ವಿಕೆಟ್

    ದಕ್ಷಿಣ ಆಫ್ರಿಕಾ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ. ಐಡೆನ್ ಮಾರ್ಕ್ರಾಮ್ 31 ರನ್ ಗಳಿಸಿ ಔಟಾದರು.

  • 05 Mar 2025 09:11 PM (IST)

    SA vs NZ Live Score: 32 ಓವರ್‌ ಪೂರ್ಣ

    32 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿದೆ.

  • 05 Mar 2025 09:10 PM (IST)

    SA vs NZ Live Score: ಕ್ಲಾಸೆನ್ ಔಟ್

    ದಕ್ಷಿಣ ಆಫ್ರಿಕಾ ತಂಡವು ಭಾರೀ ಹಿನ್ನಡೆ ಅನುಭವಿಸಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಔಟ್ ಆಗಿದ್ದಾರೆ.

  • 05 Mar 2025 08:45 PM (IST)

    SA vs NZ Live Score: 3ನೇ ವಿಕೆಟ್ ಪತನ

    ದಕ್ಷಿಣ ಆಫ್ರಿಕಾ 161 ರನ್‌ಗಳಿಗೆ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ. ಡುಸೇನ್ ಅರ್ಧಶತಕ ಸಿಡಿಸಿ ಔಟಾದರು.

  • 05 Mar 2025 08:37 PM (IST)

    SA vs NZ Live Score: 26 ಓವರ್‌ಗಳ ಆಟ ಮುಗಿದಿದೆ

    26 ಓವರ್‌ಗಳ ಆಟ ಮುಗಿದಿದೆ. ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದ್ದು, ಗೆಲುವಿನಿಂದ 206 ರನ್ ದೂರದಲ್ಲಿದೆ.

  • 05 Mar 2025 08:36 PM (IST)

    SA vs NZ Live Score: ಬವುಮಾ ಔಟ್

    ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಕ್ಕೆ ಎರಡನೇ ಹೊಡೆತ ನೀಡಿದೆ. ಟೆಂಬಾ ಬವುಮಾ 56 ರನ್ ಗಳಿಸಿ ಔಟಾದರು.

  • 05 Mar 2025 07:47 PM (IST)

    SA vs NZ Live Score: ಮೊದಲ ಪವರ್ ಪ್ಲೇ ಮುಗಿದಿದೆ

    ಮೊದಲ ಪವರ್ ಪ್ಲೇ ಮುಗಿದಿದೆ. 10 ಓವರ್‌ಗಳ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ.

  • 05 Mar 2025 07:47 PM (IST)

    SA vs NZ Live Score: ರಿಕಲ್ಟನ್ ಔಟ್

    ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಕ್ಕೆ ಮೊದಲ ಹೊಡೆತ ನೀಡಿದೆ. ರಯಾನ್ ರಿಕಲ್ಟನ್ 12 ಎಸೆತಗಳಲ್ಲಿ 17 ರನ್ ಗಳಿಸಿ ಔಟ್ ಆಗಿದ್ದಾರೆ.

  • 05 Mar 2025 07:05 PM (IST)

    SA vs NZ Live Score: ಆಫ್ರಿಕಾ ತಂಡದ ಇನ್ನಿಂಗ್ಸ್ ಆರಂಭ

    ದಕ್ಷಿಣ ಆಫ್ರಿಕಾ ತಂಡದ ಇನ್ನಿಂಗ್ಸ್ ಆರಂಭವಾಗಿದೆ. ರಯಾನ್ ರಿಕಲ್ಟನ್ ಮತ್ತು ಟೆಂಬಾ ಬವುಮಾ ಕ್ರೀಸ್‌ನಲ್ಲಿದ್ದಾರೆ. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಆರಂಭ ಮಾಡಿದ್ದಾರೆ.

  • 05 Mar 2025 06:29 PM (IST)

    SA vs NZ Live Score: 363 ರನ್‌ಗಳ ಗುರಿ

    ಕೇನ್ ವಿಲಿಯಮ್ಸನ್ ಮತ್ತು ರಚಿನ್ ರವೀಂದ್ರ ಅವರ ಶತಕಗಳ ಸಹಾಯದಿಂದ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 363 ರನ್‌ಗಳ ಗುರಿಯನ್ನು ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 362 ರನ್ ಗಳಿಸಿತು. ಇದು ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದೆ.

  • 05 Mar 2025 06:02 PM (IST)

    SA vs NZ Live Score: ಮಿಚೆಲ್ ಔಟ್

    ನ್ಯೂಜಿಲೆಂಡ್ ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ. 37 ಎಸೆತಗಳಲ್ಲಿ 49 ರನ್ ಗಳ ವೇಗದ ಇನ್ನಿಂಗ್ಸ್ ಆಡಿದ ಡ್ಯಾರಿಲ್ ಮಿಚೆಲ್ ಔಟಾದರು.

  • 05 Mar 2025 06:01 PM (IST)

    SA vs NZ Live Score: ಸತತ ನಾಲ್ಕು ಬೌಂಡರಿ

    46ನೇ ಓವರ್ ನಲ್ಲಿ ಮಾರ್ಕೊ ಯಾನ್ಸೆನ್ ವಿರುದ್ಧ ಗ್ಲೆನ್ ಫಿಲಿಪ್ಸ್ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಇದರೊಂದಿಗೆ ಅವರು 17 ಎಸೆತಗಳಲ್ಲಿ 26 ರನ್ ಗಳಿಸಿದ್ದಾರೆ.

  • 05 Mar 2025 05:55 PM (IST)

    SA vs NZ Live Score: 42 ಓವರ್‌ಗಳ ಆಟ ಮುಗಿದಿದೆ

    42 ಓವರ್‌ಗಳ ಆಟ ಮುಗಿದಿದೆ. ಕಿವೀಸ್ ತಂಡ 4 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿದೆ.

  • 05 Mar 2025 05:39 PM (IST)

    SA vs NZ Live Score: ವಿಲಿಯಮ್ಸನ್ ಔಟ್

    ಶತಕ ಬಾರಿಸಿದ ಕೂಡಲೇ ವಿಲಿಯಮ್ಸನ್ ಔಟಾದರು. ನ್ಯೂಜಿಲೆಂಡ್ ಮೂರನೇ ಹಿನ್ನಡೆ ಅನುಭವಿಸಿದೆ. ವಿಲಿಯಮ್ಸನ್ 94 ಎಸೆತಗಳಲ್ಲಿ 102 ರನ್ ಗಳಿಸಿದರು.

  • 05 Mar 2025 05:38 PM (IST)

    SA vs NZ Live Score: ಕೇನ್ ಶತಕ

    ಕೇನ್ ವಿಲಿಯಮ್ಸನ್ ಲಾಹೋರ್‌ನಲ್ಲಿ ಶತಕ ಗಳಿಸಿದ್ದಾರೆ. ಇದಕ್ಕಾಗಿ ಅವರು 91 ಎಸೆತಗಳನ್ನು ಎದುರಿಸಿದರು. ಇದು ಅವರ ಏಕದಿನ ವೃತ್ತಿಜೀವನದ 12 ನೇ ಶತಕವಾಗಿದೆ.

  • 05 Mar 2025 05:05 PM (IST)

    SA vs NZ Live Score: ರವೀಂದ್ರ ಔಟ್

    ನ್ಯೂಜಿಲೆಂಡ್ ತನ್ನ ಎರಡನೇ ವಿಕೆಟ್ ಕಳೆದುಕೊಂಡಿದೆ. ರಚಿನ್ ರವೀಂದ್ರ 101 ಎಸೆತಗಳಲ್ಲಿ 108 ರನ್ ಗಳಿಸಿ ಔಟಾದರು.

  • 05 Mar 2025 04:53 PM (IST)

    SA vs NZ Live Score: ಶತಕ ಬಾರಿಸಿದ ರಚಿನ್

    ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ರಚಿನ್ ರವೀಂದ್ರ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಗಳಿಸಿದ್ದಾರೆ. ಇದು ರಚಿನ್ ಅವರ ಏಕದಿನ ಕ್ರಿಕೆಟ್‌ನಲ್ಲಿ ಐದನೇ ಶತಕವಾಗಿದೆ. ಅವರು 93 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ರಚಿನ್ ಅವರ ಎರಡನೇ ಶತಕ ಇದು. ಇದಕ್ಕೂ ಮೊದಲು ಅವರು ಬಾಂಗ್ಲಾದೇಶ ವಿರುದ್ಧದ ಗುಂಪು ಹಂತದ ಪಂದ್ಯದಲ್ಲೂ ಶತಕ ಗಳಿಸಿದ್ದರು. ರಚಿನ್ ಮತ್ತು ವಿಲಿಯಮ್ಸನ್ ನಡುವೆ ಅದ್ಭುತ ಪಾಲುದಾರಿಕೆ ಇದೆ, ಇದು ನ್ಯೂಜಿಲೆಂಡ್‌ನ ಸ್ಕೋರ್ ಅನ್ನು 32 ಓವರ್‌ಗಳ ನಂತರ ಒಂದು ವಿಕೆಟ್‌ಗೆ 201 ರನ್‌ಗಳಿಗೆ ತಲುಪಿಸಿದೆ.

  • 05 Mar 2025 04:27 PM (IST)

    SA vs NZ Live Score: ರಚಿನ್-ವಿಲಿಯಮ್ಸನ್ ಜೊತೆಯಾಟ

    ದಕ್ಷಿಣ ಆಫ್ರಿಕಾ ವಿರುದ್ಧ ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಅದ್ಭುತ ಬ್ಯಾಟಿಂಗ್ ಮುಂದುವರಿಸಿದರು, ನ್ಯೂಜಿಲೆಂಡ್ 25 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿತು. ಇಲ್ಲಿಯವರೆಗೆ, ರಚಿನ್ ಮತ್ತು ವಿಲಿಯಮ್ಸನ್ ನಡುವೆ ಎರಡನೇ ವಿಕೆಟ್‌ಗೆ 90+ ರನ್‌ಗಳ ಪಾಲುದಾರಿಕೆ ಇದೆ.

  • 05 Mar 2025 04:02 PM (IST)

    SA vs NZ Live Score: ನ್ಯೂಜಿಲೆಂಡ್ ಶತಕ ಪೂರ್ಣ

    ನ್ಯೂಜಿಲೆಂಡ್ 100 ರನ್‌ಗಳ ಗಡಿ ದಾಟಿದೆ. 18 ಓವರ್‌ಗಳ ಅಂತ್ಯಕ್ಕೆ ಕಿವೀಸ್ ತಂಡ 1 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದೆ.

  • 05 Mar 2025 04:02 PM (IST)

    SA vs NZ Live Score: ರಚಿನ್ ರವೀಂದ್ರ ಅರ್ಧಶತಕ

    ರಚಿನ್ ರವೀಂದ್ರ 47 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.

  • 05 Mar 2025 03:46 PM (IST)

    SA vs NZ Live Score: 12 ಓವರ್‌ ಪೂರ್ಣ

    12 ಓವರ್‌ಗಳ ನಂತರ, ನ್ಯೂಜಿಲೆಂಡ್ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ.

  • 05 Mar 2025 03:17 PM (IST)

    SA vs NZ Live Score: ವಿಲ್ ಯಂಗ್ ಔಟ್

    ನ್ಯೂಜಿಲೆಂಡ್ 48 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ವಿಲ್ ಯಂಗ್ 21 ರನ್ ಗಳಿಸಿ ಔಟಾದರು.

  • 05 Mar 2025 03:05 PM (IST)

    SA vs NZ Live Score: 5 ಓವರ್‌ಗಳ ಅಂತ್ಯ

    ಮೊದಲ 5 ಓವರ್‌ಗಳ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 29 ರನ್ ಗಳಿಸಿದೆ. ವಿಲ್ ಯಂಗ್ ಮತ್ತು ರಾಚಿನ್ ರವೀಂದ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ.

  • 05 Mar 2025 02:45 PM (IST)

    SA vs NZ Live Score: ನ್ಯೂಜಿಲೆಂಡ್ ಇನ್ನಿಂಗ್ಸ್ ಆರಂಭ

    ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ ಆರಂಭವಾಗಿದೆ. ವಿಲ್ ಯಂಗ್ ಮತ್ತು ರಾಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಸಿದರು. ಮೊದಲ 2 ಓವರ್‌ಗಳಲ್ಲಿ ಕೇವಲ 6 ರನ್ ಬಂದಿವೆ.

  • 05 Mar 2025 02:15 PM (IST)

    SA vs NZ Live Score: ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11

    ರಯಾನ್ ರಿಕಲ್ಟನ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಾಗಿಸೊ ರಬಾಡ, ಲುಂಗಿ ಎನ್‌ಗಿಡಿ.

  • 05 Mar 2025 02:15 PM (IST)

    SA vs NZ Live Score: ನ್ಯೂಜಿಲೆಂಡ್ ಪ್ಲೇಯಿಂಗ್ 11

    ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ವಿಲಿಯಂ ಒ’ರೂರ್ಕ್.

  • 05 Mar 2025 02:03 PM (IST)

    SA vs NZ Live Score: ಟಾಸ್ ಗೆದ್ದ ನ್ಯೂಜಿಲೆಂಡ್

    ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - Mar 05,2025 2:03 PM

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ