SA vs SL ICC World Cup 2023: ಶ್ರೀಲಂಕಾ ವಿರುದ್ಧ ಸೌತ್ ಆಫ್ರಿಕಾಗೆ ಭರ್ಜರಿ ಜಯ
South Africa vs Sri Lanka, ICC world Cup 2023: ಈ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 44.5 ಓವರ್ಗಳಲ್ಲಿ 326 ರನ್ಗಳಿಗೆ ಆಲೌಟ್ ಆಗುವ ಮೂಲಕ 102 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ವಿಶ್ವಕಪ್ 2023 ರಲ್ಲಿ ಸೌತ್ ಆಫ್ರಿಕಾ ತಂಡವು ಶುಭಾರಂಭ ಮಾಡಿದೆ.
ಏಕದಿನ ವಿಶ್ವಕಪ್ನ 4ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ (100), ರಾಸ್ಸಿ ವಂಡರ್ ಡಸ್ಸೆನ್ (108) ಹಾಗೂ ಐಡೆನ್ ಮಾರ್ಕ್ರಾಮ್ (106) ಭರ್ಜರಿ ಶತಕ ಸಿಡಿಸಿ ಮಿಂಚಿದರು. ಈ ಶತಕಗಳ ನೆರವಿನಿಂದ ಸೌತ್ ಆಫ್ರಿಕಾ ತಂಡವು ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 428 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 44.5 ಓವರ್ಗಳಲ್ಲಿ 326 ರನ್ಗಳಿಗೆ ಆಲೌಟ್ ಆಗುವ ಮೂಲಕ 102 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ವಿಶ್ವಕಪ್ 2023 ರಲ್ಲಿ ಸೌತ್ ಆಫ್ರಿಕಾ ತಂಡವು ಶುಭಾರಂಭ ಮಾಡಿದೆ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ.
ಶ್ರೀಲಂಕಾ (ಪ್ಲೇಯಿಂಗ್ XI): ಕುಸಾಲ್ ಪೆರೆರಾ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಥೀಶ ಪತಿರಾಣ, ದಿಲ್ಶನ್ ಮಧುಶಂಕ, ಕಸುನ್ ರಜಿತ.
LIVE Cricket Score & Updates
-
SA vs SL ICC World Cup 2023 Live Score: ಸೌತ್ ಆಫ್ರಿಕಾಗೆ ಭರ್ಜರಿ ಜಯ
ಸೌತ್ ಆಫ್ರಿಕಾ– 428/5 (50)
ಶ್ರೀಲಂಕಾ– 326 (44.5)
ಸೌತ್ ಆಫ್ರಿಕಾ ತಂಡಕ್ಕೆ 102 ರನ್ಗಳ ಭರ್ಜರಿ ಜಯ.
-
SA vs SL ICC World Cup 2023 Live Score: ತ್ರಿಶತಕ ಪೂರೈಸಿದ ಶ್ರೀಲಂಕಾ
ಮಾರ್ಕೊ ಯಾನ್ಸನ್ ಎಸೆದ 41ನೇ ಓವರ್ನಲ್ಲಿ 3 ಫೋರ್ ಬಾರಿಸಿದ ಕಸುನ್ ರಜಿತ.
ಈ ಫೋರ್ಗಳೊಂದಿಗೆ ತ್ರಿಶತಕ ಪೂರೈಸಿದ ಶ್ರೀಲಂಕಾ.
ಕ್ರೀಸ್ನಲ್ಲಿ ಪತಿರಾಣ ಹಾಗೂ ಕಸುನ್ ರಜಿತ ಬ್ಯಾಟಿಂಗ್.
SL 303/8 (41)
-
SA vs SL ICC World Cup 2023 Live Score: ಶ್ರೀಲಂಕಾದ 8ನೇ ವಿಕೆಟ್ ಪತನ
ಕೇಶವ್ ಮಹಾರಾಜ್ ಎಸೆತದಲ್ಲಿ ದಸುನ್ ಶಾನಕ ಕ್ಲೀನ್ ಬೌಲ್ಡ್.
62 ಎಸೆತಗಳಲ್ಲಿ 68 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ.
ಕ್ರೀಸ್ನಲ್ಲಿ ಕಸುನ್ ರಜಿತ ಹಾಗೂ ಮತೀಶ ಪತಿರಾಣ ಬ್ಯಾಟಿಂಗ್.
SL 291/8 (39.4)
SA vs SL ICC World Cup 2023 Live Score: ಶಾನಕ ಸಿಡಿಲಬ್ಬರ
ಜೆರಾಲ್ಡ್ ಎಸೆದ 37ನೇ ಓವರ್ನಲ್ಲಿ 23 ರನ್ ಚಚ್ಚಿದ ದಸುನ್ ಶಾನಕ.
ಮೊದಲ ಎಸೆತದಲ್ಲಿ ಸಿಕ್ಸ್, ಉಳಿದ 4 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ. ಕೊನೆಯ ಎಸೆತದಲ್ಲಿ 1 ರನ್.
ಭರ್ಜರಿ ಬ್ಯಾಟಿಂಗ್ನೊಂದಿಗೆ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶಾನಕ.
SL 269/7 (37)
SA vs SL ICC World Cup 2023 Live Score: ಮತ್ತೊಂದು ವಿಕೆಟ್ ಪತನ
ಜೆರಾಲ್ಡ್ ಕೋಟ್ಝಿ ಎಸೆತದಲ್ಲಿ ವಿಕೆಟ್ ಕೀಪರ್ಗೆ ಸುಲಭ ಕ್ಯಾಚ್ ನೀಡಿದ ದುನಿತ್ ವೆಲ್ಲಲಾಗೆ (0).
ಶ್ರೀಲಂಕಾ ತಂಡದ 7ನೇ ವಿಕೆಟ್ ಪತನ.
ಗೆಲುವಿನತ್ತ ಮುನ್ನುಗ್ಗುತ್ತಿರುವ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ದಸುನ್ ಶಾನಕ ಹಾಗೂ ಕಸುನ್ ರಜಿತ ಬ್ಯಾಟಿಂಗ್.
SL 233/7 (32.2)
SA vs SL ICC World Cup 2023 Live Score: ಶ್ರೀಲಂಕಾದ 6ನೇ ವಿಕೆಟ್ ಪತನ
ಲುಂಗಿ ಎನ್ಗಿಡಿ ಎಸೆದ 32ನೇ ಓವರ್ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಚರಿತ್ ಅಸಲಂಕಾ.
ಆಫ್ ಸೈಡ್ ಬೌಂಡರಿ ಲೈನ್ನಿಂದ ಓಡಿ ಬಂದು ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ರೀಝ ಹೆಂಡ್ರಿಕ್ಸ್.
ಚರಿತ್ ಅಸಲಂಕಾ (79) ಔಟ್…ಶ್ರೀಲಂಕಾ ತಂಡದ 6ನೇ ವಿಕೆಟ್ ಪತನ
SL 232/6 (32)
SA vs SL ICC World Cup 2023 Live Score: 30 ಓವರ್ಗಳು ಮುಕ್ತಾಯ
ಮಾರ್ಕೊ ಯಾನ್ಸನ್ ಎಸೆದ 30ನೇ ಓವರ್ನ ಮೊದಲ ಎಸೆತದಲ್ಲೇ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಅಸಲಂಕಾ.
5ನೇ ಎಸೆತದಲ್ಲಿ ಪುಲ್ ಶಾಟ್ ಮೂಲಕ ಮತ್ತೊಂದು ಸಿಕ್ಸ್ ಬಾರಿಸಿದ ದಸುನ್ ಶಾನಕ.
30 ಓವರ್ಗಳ ಮುಕ್ತಾಯದ ವೇಳೆಗೆ 214 ರನ್ ಕಲೆಹಾಕಿದ ಶ್ರೀಲಂಕಾ.
ಶ್ರೀಲಂಕಾ ತಂಡಕ್ಕೆ ಇನ್ನು 120 ಎಸೆತಗಳಲ್ಲಿ 215 ರನ್ಗಳ ಅವಶ್ಯಕತೆ.
SL 214/5 (30)
SA vs SL ICC World Cup 2023 Live Score: ಅಸಲಂಕಾ ಉತ್ತಮ ಬ್ಯಾಟಿಂಗ್
ಮಾರ್ಕೊ ಯಾನ್ಸೆನ್ ಎಸೆದ 28ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಅಸಲಂಕಾ.
ಐದನೇ ಎಸೆತದಲ್ಲಿ ಫೈನ್ ಲೆಗ್ನತ್ತ ಮತ್ತೊಂದು ಫೋರ್.
52 ಎಸೆತಗಳಲ್ಲಿ 60 ರನ್ ಬಾರಿಸಿರುವ ಚರಿತ್ ಅಸಲಂಕಾ.
SL 196/5 (28)
SA vs SL ICC World Cup 2023 Live Score: 25 ಓವರ್ಗಳು ಮುಕ್ತಾಯ
25 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿದ ಶ್ರೀಲಂಕಾ.
ಶ್ರೀಲಂಕಾ ತಂಡಕ್ಕೆ ಇನ್ನು 150 ಎಸೆತಗಳಲ್ಲಿ 253 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ (43) ಹಾಗೂ ದಸುನ್ ಶಾನಕ (7) ಬ್ಯಾಟಿಂಗ್.
SL 176/5 (25)
SA vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಅಸಲಂಕಾ
ಲುಂಗಿ ಎನ್ಗಿಡಿ ಎಸೆತದಲ್ಲಿ ಬ್ಯಾಕ್ವರ್ಡ್ ಡೀಪ್ ಸ್ಕ್ವೇರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಚರಿತ್ ಅಸಲಂಕಾ.
ಕ್ರೀಸ್ನಲ್ಲಿ ದಸುನ್ ಶಾನಕ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.
SL 174/5 (24)
SA vs SL ICC World Cup 2023 Live Score: ಶ್ರೀಲಂಕಾದ 5ನೇ ವಿಕೆಟ್ ಪತನ
ಕೇಶವ್ ಮಹಾರಾಜ್ ಎಸೆತದಲ್ಲಿ ಸ್ಕ್ವೇರ್ನತ್ತ ಬಾರಿಸಿದ ಧನಂಜಯ ಡಿಸಿಲ್ವಾ.
ಸ್ಕ್ವೇರ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಟೆಂಬಾ ಬವುಮಾ ಅತ್ಯುತ್ತಮ ಕ್ಯಾಚ್…ಧನಂಜಯ ಡಿಸಿಲ್ವಾ (11) ಔಟ್.
SL 150/5 (20.1)
SA vs SL ICC World Cup 2023 Live Score: 20 ಓವರ್ ಮುಕ್ತಾಯ
ಜೆರಾಲ್ಡ್ ಕೋಟ್ಝಿ ಎಸೆದ 20ನೇ ಓವರ್ನ 4ನೇ ಎಸೆತದಲ್ಲಿ ಫೋರ್ ಬಾರಿಸಿದ ಅಸಲಂಕಾ.
5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್.
20 ಓವರ್ಗಳ ಮುಕ್ತಾಯದ ವೇಳೆಗೆ 150 ರನ್ ಪೂರೈಸಿದ ಶ್ರೀಲಂಕಾ.
ಇನ್ನು 30 ಓವರ್ಗಳಲ್ಲಿ 279 ರನ್ಗಳ ಅವಶ್ಯಕತೆ.
SL 150/4 (20)
SA vs SL ICC World Cup 2023 Live Score: ಆಕರ್ಷಕ ಬೌಂಡರಿ
ಕೇಶವ್ ಮಹಾರಾಜ್ ಎಸೆದ 19ನೇ ಓವರ್ನ 2ನೇ ಎಸೆತದಲ್ಲಿ ಡೀಪ್ ಕವರ್ನತ್ತ ಆಕರ್ಷಕ ಬಾರಿಸಿದ ಅಸಲಂಕಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
SL 139/4 (19)
SA vs SL ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳಲ್ಲಿ 120 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
ಶ್ರೀಲಂಕಾ ತಂಡಕ್ಕೆ 210 ಎಸೆತಗಳಲ್ಲಿ 309 ರನ್ಗಳ ಅವಶ್ಯಕತೆ.
SL 120/4 (15)
ಪಾತುಮ್ ನಿಸ್ಸಂಕಾ, ಕುಸಾಲ್ ಪೆರೇರಾ, ಸದೀರ ಸಮರವಿಕ್ರಮ, ಕುಸಾಲ್ ಮೆಂಡಿಸ್ ಔಟ್.
SA vs SL ICC World Cup 2023 Live Score: ಮತ್ತೊಂದು ವಿಕೆಟ್ ಪತನ
ಜೆರಾಲ್ಡ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಸದೀರ ಸಮರವಿಕ್ರಮ.
ಬೌಂಡರಿ ಲೈನ್ನಿಂದ ಓಡಿ ಬಂದು ಅತ್ಯುತ್ತಮ ಕ್ಯಾಚ್ ಹಿಡಿದ ಮಾರ್ಕೊ ಯಾನ್ಸೆನ್.
19 ಎಸೆತಗಳಲ್ಲಿ 23 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸದೀರ ಸಮರವಿಕ್ರಮ.
SL 114/4 (14)
SA vs SL ICC World Cup 2023 Live Score: ಶ್ರೀಲಂಕಾ 3ನೇ ವಿಕೆಟ್ ಪತನ
ಕಗಿಸೊ ರಬಾಡ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಕುಸಾಲ್ ಮೆಂಡಿಸ್.
ಕೇವಲ 42 ಎಸೆತಗಳಲ್ಲಿ 8 ಸಿಕ್ಸ್ನೊಂದಿಗೆ 76 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮೆಂಡಿಸ್.
SL 109/3 (13)
SA vs SL ICC World Cup 2023 Live Score: 10 ಓವರ್ ಮುಕ್ತಾಯ
ಕೇಶವ್ ಮಹಾರಾಜ್ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಬಾರಿಸಿದ ಸದೀರ.
10 ಓವರ್ಗಳ ಮುಕ್ತಾಯದ ವೇಳೆಗೆ 94 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಸದೀರ ಸಮರವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 94/2 (10)
SA vs SL ICC World Cup 2023 Live Score: ಮೆಂಡಿಸ್ ಸಿಡಿಲಬ್ಬರ
ಕಗಿಸೊ ರಬಾಡ ಓವರ್ನಲ್ಲಿ 2 ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.
34 ಎಸೆತಗಳಲ್ಲಿ 72 ರನ್ ಚಚ್ಚಿದ ಮೆಂಡಿಸ್.
ಕ್ರೀಸ್ನಲ್ಲಿ ಸದೀರ ಸಮರ ವಿಕ್ರಮ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 87/2 (9)
SA vs SL ICC World Cup 2023 Live Score: ಶ್ರೀಲಂಕಾ 2ನೇ ವಿಕೆಟ್ ಪತನ
ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಕುಸಾಲ್ ಪೆರೇರಾ ಕ್ಲೀನ್ ಬೌಲ್ಡ್.
15 ಎಸೆತಗಳಲ್ಲಿ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಪೆರೇರಾ.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಸದೀರ ಸಮರವಿಕ್ರಮ ಬ್ಯಾಟಿಂಗ್.
SL 67/2 (7.5)
SA vs SL ICC World Cup 2023 Live Score: ಮೆಂಡಿಸ್ ಧಮಾಕಾ
ಮಾರ್ಕೊ ಯಾನ್ಸೆನ್ ಎಸೆದ 6ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಮೆಂಡಿಸ್.
ಈ ಸಿಕ್ಸ್ನೊಂದಿಗೆ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕುಸಾಲ್ ಮೆಂಡಿಸ್.
ಶ್ರೀಲಂಕಾ ತಂಡದ ಭರ್ಜರಿ ಬ್ಯಾಟಿಂಗ್.
SL 54/1 (6)
SA vs SL ICC World Cup 2023 Live Score: ಬ್ಯಾಂಗ್ ಬ್ಯಾಂಗ್- ಸಿಕ್ಸ್
ಲುಂಗಿ ಎನ್ಗಿಡಿ ಓವರ್ನಲ್ಲಿ ಮೂರು ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.
2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್, 5ನೇ ಮತ್ತು 6ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ಮೆಂಡಿಸ್.
ಕ್ರೀಸ್ನಲ್ಲಿ ಮೆಂಡಿಸ್-ಪೆರೇರಾ ಬ್ಯಾಟಿಂಗ್
SL 37/1 (5)
SA vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಮೆಂಡಿಸ್
ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕುಸಾಲ್ ಮೆಂಡಿಸ್.
ಈ ಸಿಕ್ಸ್ನೊಂದಿಗೆ ಶ್ರೀಲಂಕಾ ತಂಡದ ಸ್ಕೋರ್ 19 ಕ್ಕೇರಿಕೆ.
ಕ್ರೀಸ್ನಲ್ಲಿ ಮೆಂಡಿಸ್ ಹಾಗೂ ಪೆರೇರಾ ಬ್ಯಾಟಿಂಗ್.
SL 19/1 (4)
SA vs SL ICC World Cup 2023 Live Score: ಶ್ರೀಲಂಕಾ ಮೊದಲ ವಿಕೆಟ್ ಪತನ
ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಪಾತುಮ್ ನಿಸ್ಸಂಕಾ (0).
2ನೇ ಓವರ್ನ ಮೊದಲ ಎಸೆದತದಲ್ಲೇ ಸೌತ್ ಆಫ್ರಿಕಾ ತಂಡಕ್ಕೆ ಮೊದಲ ಯಶಸ್ಸು,
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ – ಕುಸಾಲ್ ಪೆರೇರಾ ಬ್ಯಾಟಿಂಗ್.
SL 1/1 (1.1)
SA vs SL ICC World Cup 2023 Live Score: ಶ್ರೀಲಂಕಾ ಇನಿಂಗ್ಸ್ ಆರಂಭ
ಲುಂಗಿ ಎನ್ಗಿಡಿ ಎಸೆದ ಮೊದಲ ಓವರ್ನಲ್ಲಿ ಕೇವಲ 1 ರನ್ ಕಲೆಹಾಕಿದ ಶ್ರೀಲಂಕಾ.
ಕ್ರೀಸ್ನಲ್ಲಿ ಕುಸಾಲ್ ಪೆರೇರಾ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಸೌತ್ ಆಫ್ರಿಕಾ- 428/5 (50)
ಶ್ರೀಲಂಕಾ- 1/0 (1)
SA vs SL ICC World Cup 2023 Live Score: ಸೌತ್ ಆಫ್ರಿಕಾ ಇನಿಂಗ್ಸ್ ಅಂತ್ಯ
ಏಕದಿನ ವಿಶ್ವಕಪ್ನಲ್ಲಿಯೇ ಅತ್ಯಧಿಕ ಮೊತ್ತ ಕಲೆಹಾಕಿದ ಸೌತ್ ಆಫ್ರಿಕಾ.
ಇದಕ್ಕೂ ಮುನ್ನ ಅಫ್ಘಾನಿಸ್ತಾನ್ ವಿರುದ್ಧ ಆಸ್ಟ್ರೇಲಿಯಾ 417 ರನ್ ಬಾರಿಸಿದ್ದು ಏಕದಿನ ವಿಶ್ವಕಪ್ನ ಗರಿಷ್ಠ ಸ್ಕೋರ್ ಆಗಿತ್ತು.
ಶ್ರೀಲಂಕಾ ತಂಡಕ್ಕೆ 429 ರನ್ಗಳ ಕಠಿಣ ಗುರಿ ನೀಡಿದ ಹರಿಣರು.
ಸೌತ್ ಆಫ್ರಿಕಾ- 428/5 (50)
ಸೌತ್ ಆಫ್ರಿಕಾ ಪರ ಶತಕ ಸಿಡಿಸಿದ ಕ್ವಿಂಟನ್ ಡಿಕಾಕ್ (100), ರಾಸ್ಸಿ ವಂಡರ್ ಡಸ್ಸೆನ್ (108) ಹಾಗೂ ಐಡೆನ್ ಮಾರ್ಕ್ರಾಮ್ (106)
SA vs SL ICC World Cup 2023 Live Score: ಸೌತ್ ಆಫ್ರಿಕಾ ತಂಡದ 5ನೇ ವಿಕೆಟ್ ಪತನ
ಮಧುಶಂಕ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದ ಐಡೆನ್ ಮಾರ್ಕ್ರಾಮ್.
54 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 106 ಬಾರಿಸಿ ಔಟಾದ ಮಾರ್ಕ್ರಾಮ್.
RSA 383/5 (47)
SA vs SL ICC World Cup 2023 Live Score: ಹೊಸ ವಿಶ್ವ ದಾಖಲೆ
ಶಾನಕ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಐಡೆನ್ ಮಾರ್ಕ್ರಾಮ್.
ಈ ಸಿಕ್ಸ್ನೊಂದಿಗೆ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ ಸೌತ್ ಆಫ್ರಿಕಾ.
ಇದರೊಂದಿಗೆ ಏಕದಿನ ವಿಶ್ವಕಪ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಮಾರ್ಕ್ರಾಮ್ ಪಾಲಾಗಿದೆ.
RSA 375/4 (45.5)
SA vs SL ICC World Cup 2023 Live Score: 45 ಓವರ್ಗಳು ಮುಕ್ತಾಯ
ಪತಿರಾಣ ಎಸೆದ 45ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಐಡೆನ್ ಮಾರ್ಕ್ರಾಮ್.
ಕೇವಲ 46 ಎಸೆತಗಳಲ್ಲಿ 90 ರನ್ ಸಿಡಿಸಿದ ಮಾರ್ಕ್ರಾಮ್.
ಕೊನೆಯ ಐದು ಓವರ್ಗಳು ಬಾಕಿ…ಕ್ರೀಸ್ನಲ್ಲಿ ಮಿಲ್ಲರ್-ಮಾರ್ಕ್ರಾಮ್ ಬ್ಯಾಟಿಂಗ್
RSA 362/4 (45)
SA vs SL ICC World Cup 2023 Live Score: ಮಾರ್ಕ್ರಾಮ್ ಸಿಕ್ಸ್ ಮಾರ್ಕ್
ಕಸುನ್ ರಜಿತ ಎಸೆದ 44ನೇ ಓವರ್ನ 5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಐಡೆನ್ ಮಾರ್ಕ್ರಾಮ್.
ಈ ಸಿಕ್ಸ್ನೊಂದಿಗೆ 350 ರನ್ಗಳ ಗಡಿದಾಟಿದ ಸೌತ್ ಆಫ್ರಿಕಾ ಸ್ಕೋರ್.
ಕ್ರೀಸ್ನಲ್ಲಿ ಮಿಲ್ಲರ್ ಮತ್ತು ಮಾರ್ಕ್ರಾಮ್ ಬ್ಯಾಟಿಂಗ್.
RSA 352/4 (44)
SA vs SL ICC World Cup 2023 Live Score: ಸೌತ್ ಆಫ್ರಿಕಾ 4ನೇ ವಿಕೆಟ್ ಪತನ
ಕಸುನ್ ರಜಿತ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಲಾಂಗ್ ಆಫ್ನಲ್ಲಿ ಕ್ಯಾಚ್ ಆದ ಹೆನ್ರಿಕ್ ಕಾಸ್ಲೆನ್.
20 ಎಸೆತಗಳಲ್ಲಿ 32 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹೆನ್ರಿಕ್ ಕ್ಲಾಸೆನ್.
ಕ್ರೀಸ್ನಲ್ಲಿ ಮಾರ್ಕ್ರಾಮ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್.
RSA 342/4 (43.1)
SA vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಮತೀಶ ಪತಿರಾಣ ಎಸೆದ 43ನೇ ಓವರ್ನಲ್ಲಿ 46 ರನ್ ಕಲೆಹಾಕಿದ ಮಾರ್ಕ್ರಾಮ್-ಕ್ಲಾಸೆನ್.
ಮೂರು ಫೋರ್ ಹಾಗೂ 1 ಭರ್ಜರಿ ಸಿಕ್ಸ್ ಸಿಡಿಸಿ ಅಬ್ಬರಿಸಿದ ಐಡೆನ್ ಮಾರ್ಕ್ರಾಮ್.
ಸೌತ್ ಆಫ್ರಿಕಾ ತಂಡದ ಭರ್ಜರಿ ಬ್ಯಾಟಿಂಗ್ ಮುಂದುವರಿಕೆ.
RSA 342/3 (43)
SA vs SL ICC World Cup 2023 Live Score: ತ್ರಿಶತಕ ಪೂರೈಸಿದ ಸೌತ್ ಆಫ್ರಿಕಾ
ಕಸುನ್ ರಜಿತ ಎಸೆದ 41ನೇ ಓವರ್ನ 4ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಸಿಕ್ಸ್ ಸಿಡಿಸಿದ ಹೆನ್ರಿಕ್ ಕ್ಲಾಸೆನ್.
ಈ ಸಿಕ್ಸ್ನೊಂದಿಗೆ 300 ರನ್ಗಳ ಗಡಿದಾಟಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ಕ್ಲಾಸೆನ್ ಬ್ಯಾಟಿಂಗ್.
RSA 303/3 (41)
SA vs SL ICC World Cup 2023 Live Score: 40 ಓವರ್ಗಳು ಮುಕ್ತಾಯ
ದುನಿತ್ ವೆಲ್ಲಲಾಗೆ ಎಸೆದ 40ನೇ ಓವರ್ನ 4ನೇ ಮತ್ತು 5ನೇ ಎಸೆತಗಳಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಹೆನ್ರಿಕ್ ಕ್ಲಾಸೆನ್.
40 ಓವರ್ಗಳ ಮುಕ್ತಾಯದ ವೇಳೆಗೆ 290 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ಹೆನ್ರಿಕ್ ಕ್ಲಾಸೆನ್ (18) ಹಾಗೂ ಐಡೆನ್ ಮಾರ್ಕ್ರಾಮ್ (44) ಬ್ಯಾಟಿಂಗ್.
RSA 291/3 (40)
SA vs SL ICC World Cup 2023 Live Score: ಸೌತ್ ಆಫ್ರಿಕಾ ತಂಡದ 3ನೇ ವಿಕೆಟ್ ಪತನ
ದುನಿತ್ ವೆಲ್ಲಲಾಗೆ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ರಾಸ್ಸಿ ವಂಡರ್ ಡಸ್ಸೆನ್.
110 ಎಸೆತಗಳಲ್ಲಿ 108 ರನ್ ಬಾರಿಸಿ ನಿರ್ಗಮಿಸಿದ ರಾಸ್ಸಿ ವಂಡರ್ ಡಸ್ಸೆನ್.
ಶ್ರೀಲಂಕಾ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟ ದುನಿತ್.
RSA 264/3 (37.1)
SA vs SL ICC World Cup 2023 Live Score: ಸೌತ್ ಆಫ್ರಿಕಾ ಉತ್ತಮ ಬ್ಯಾಟಿಂಗ್
37 ಓವರ್ಗಳ ಮುಕ್ತಾಯದ ವೇಳೆಗೆ 264 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ (36) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (108) ಬ್ಯಾಟಿಂಗ್.
ಮೂರನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದ ಡಸ್ಸೆನ್-ಮಾರ್ಕ್ರಾಮ್
RSA 264/2 (37)
SA vs SL ICC World Cup 2023 Live Score: ಶತಕ ಪೂರೈಸಿದ ಡಸ್ಸೆನ್
103 ಎಸೆತಗಳಲ್ಲಿ ಶತಕ ಪೂರೈಸಿದ ರಾಸ್ಸಿ ವಂಡರ್ ಡಸ್ಸೆನ್.
35 ಓವರ್ಗಳ ಮುಕ್ತಾಯದ ವೇಳೆಗೆ 245 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಟೆಂಬಾ ಬವುಮಾ (8) ಹಾಗೂ ಕ್ವಿಂಟನ್ ಡಿಕಾಕ್ (100) ಔಟ್.
ಕ್ರೀಸ್ನಲ್ಲಿ ಡಸ್ಸೆನ್ ಹಾಗೂ ಮಾರ್ಕ್ರಾಮ್ ಬ್ಯಾಟಿಂಗ್.
RSA 245/2 (35)
SA vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ದಿಲ್ಶನ್ ಮಧುಶಂಕ ಎಸೆದ 34ನೇ ಓವರ್ನ 3ನೇ, 4ನೇ ಹಾಗೂ 5ನೇ ಎಸೆತಗಳಲ್ಲಿ ಸ್ಟ್ರೈಟ್ ಹಿಟ್ ಫೋರ್ಗಳನ್ನು ಬಾರಿಸಿದ ಐಡೆನ್ ಮಾರ್ಕ್ರಾಮ್.
ಕ್ರೀಸ್ನಲ್ಲಿ ರಾಸ್ಸಿ ವಂಡರ್ ಡಸ್ಸೆನ್ (98) ಹಾಗೂ ಮಾರ್ಕ್ರಾಮ್ (21) ಬ್ಯಾಟಿಂಗ್.
RSA 239/2 (34)
SA vs SL ICC World Cup 2023 Live Score: 32 ಓವರ್ಗಳು ಮುಕ್ತಾಯ
32 ಓವರ್ಗಳ ಮುಕ್ತಾಯದ ವೇಳೆಗೆ 219 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಕ್ರೀಸ್ನಲ್ಲಿ ಐಡೆನ್ ಮಾರ್ಕ್ರಾಮ್ ಹಾಗೂ ರಾಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.
RSA 219/2 (32)
SA vs SL ICC World Cup 2023 Live Score: ಶತಕ ಸಿಡಿಸಿದ ಡಿಕಾಕ್
ಪತಿರಾಣ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಕ್ವಿಂಟನ್ ಡಿಕಾಕ್.
ಈ ಫೋರ್ನೊಂದಿಗೆ ಶತಕ ಪೂರೈಸಿದ ಎಡಗೈ ದಾಂಡಿಗ.
83 ಎಸೆತಗಳಲ್ಲಿ 12 ಫೋರ್ ಹಾಗೂ 3 ಸಿಕ್ಸ್ನೊಂದಿಗೆ ಶತಕ ಪೂರೈಸಿದ ಡಿಕಾಕ್.
ಶತಕದ ಬೆನ್ನಲ್ಲೇ ಕ್ಯಾಚ್ ನೀಡಿದ ನಿರ್ಗಮಿಸಿದ ಕ್ವಿಂಟನ್ ಡಿಕಾಕ್ (100).
RSA 214/2 (30.4)
SA vs SL ICC World Cup 2023 Live Score: ದ್ವಿಶತಕ ಪೂರೈಸಿದ ಸೌತ್ ಆಫ್ರಿಕಾ
ದುನಿತ್ ವೆಲ್ಲಲಾಗೆ ಎಸೆದ 30ನೇ ಓವರ್ನ 2ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಡಸ್ಸೆನ್.
5ನೇ ಎಸೆತದಲ್ಲಿ ಡಸ್ಸೆನ್ ಬ್ಯಾಟ್ನಿಂದ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್.
30 ಓವರ್ಗಳ ಮುಕ್ತಾಯದ ವೇಳೆಗೆ 206 ರನ್ ಕಲೆಹಾಕಿದ ಸೌತ್ ಆಫ್ರಿಕಾ.
RSA 206/1 (30)
SA vs SL ICC World Cup 2023 Live Score: ಡಿಕಾಕ್ ಭರ್ಜರಿ ಸಿಕ್ಸ್
ಮತೀಶ ಪತಿರಾಣ ಎಸೆದ 29ನೇ ಓವರ್ನ ಮೂರನೇ ಎಸೆತದಲ್ಲಿ ಡೀಪ್ ಬ್ಯಾಕ್ವರ್ಡ್ ಸ್ಕ್ವೇರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕ್ವಿಂಟನ್ ಡಿಕಾಕ್.
ಈ ಸಿಕ್ಸ್ನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ 100 ಸಿಕ್ಸರ್ಗಳನ್ನು ಪೂರೈಸಿದ ಡಿಕಾಕ್.
ಸೌತ್ ಆಫ್ರಿಕಾ- 196/1 (29)
SA vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ದುನಿತ್ ವೆಲ್ಲಲಾಗೆ ಎಸೆದ 28ನೇ ಓವರ್ನ 4ನೇ ಮತ್ತು 5ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡಿಕಾಕ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ (85) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (85) ಬ್ಯಾಟಿಂಗ್.
2ನೇ ವಿಕೆಟ್ಗೆ 172 ರನ್ಗಳ ಜೊತೆಯಾಟ.
RSA 182/1 (28)
SA vs SL ICC World Cup 2023 Live Score: 25 ಓವರ್ಗಳು ಮುಕ್ತಾಯ
ಕಸುನ್ ರಜಿತ ಎಸೆದ 25ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಫೋರ್ ಬಾರಿಸಿದ ಡಿಕಾಕ್.
ಕೊನೆಯ ಎಸೆತದಲ್ಲಿ ಡಿಕಾಕ್ ಬ್ಯಾಟ್ನಿಂದ ಲೆಗ್ ಸೈಡ್ನತ್ತ ಮತ್ತೊಂದು ಫೋರ್.
25 ಓವರ್ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ಸ್ಕೋರ್ 1 ವಿಕೆಟ್ ನಷ್ಟಕ್ಕೆ 158 ರನ್ಗಳು.
ಕ್ರೀಸ್ನಲ್ಲಿ ಡಿಕಾಕ್ (75) ಹಾಗೂ ಡಸ್ಸೆನ್ (71) ಬ್ಯಾಟಿಂಗ್.
RSA 158/1 (25)
SA vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್
ಧನಂಜಯ ಡಿಸಿಲ್ವಾ ಎಸೆದ 23ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್.
133 ರನ್ಗಳ ಜೊತೆಯಾಟದೊಂದಿಗೆ ಬ್ಯಾಟಿಂಗ್ ಮುಂದುವರೆಸಿರುವ ಡಿಕಾಕ್ – ಡಸ್ಸೆನ್
ವಿಕೆಟ್ಗಾಗಿ ಲಂಕಾ ಬೌಲರ್ಗಳ ಪರದಾಟ.
RSA 139/1 (23)
SA vs SL ICC World Cup 2023 Live Score: 20 ಓವರ್ಗಳು ಮುಕ್ತಾಯ
ದುನಿತ್ ವೆಲ್ಲಲಾಗೆ ಎಸೆದ 20ನೇ ಓವರ್ನ 5ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಡಸ್ಸೆನ್
20 ಓವರ್ಗಳಲ್ಲಿ 118 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ (48) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (59) ಬ್ಯಾಟಿಂಗ್.
RSA 118/1 (20)
ಟೆಂಬಾ ಬವುಮಾ (8) ಔಟ್.
SA vs SL ICC World Cup 2023 Live Score: ಶತಕ ಪೂರೈಸಿದ ಸೌತ್ ಆಫ್ರಿಕಾ
ಪತಿರಾಣ ಎಸೆದ 18ನೇ ಓವರ್ನ ಮೂರನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಡಸ್ಸೆನ್.
ಈ ಫೋರ್ನೊಂದಿಗೆ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಸ್ಸಿ ವಂಡರ್ ಡಸ್ಸೆನ್.
ಹಾಗೆಯೇ ಈ ಭರ್ಜರಿ ಬೌಂಡರಿಯೊಂದಿಗೆ ನೂರರ ಗಡಿದಾಟಿದ ಸೌತ್ ಆಫ್ರಿಕಾ ತಂಡದ ಮೊತ್ತ.
ಕ್ರೀಸ್ನಲ್ಲಿ ಡಸ್ಸೆನ್ ಹಾಗೂ ಡಿಕಾಕ್ ಬ್ಯಾಟಿಂಗ್.
RSA 105/1 (18)
SA vs SL ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳಲ್ಲಿ 84 ರನ್ ಕಲೆಹಾಕಿದ ಸೌತ್ ಆಫ್ರಿಕಾ ತಂಡ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ (33) ಹಾಗೂ ರಾಸ್ಸಿ ವಂಡರ್ ಡಸ್ಸೆನ್ (42) ಬ್ಯಾಟಿಂಗ್.
15 ಓವರ್ಗಳಲ್ಲಿ ಟೆಂಬಾ ಬವುಮಾ (8) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಶ್ರೀಲಂಕಾ.
RSA 84/1 (15)
SA vs SL ICC World Cup 2023 Live Score: ಶ್ರೀಲಂಕಾ ಉತ್ತಮ ಬೌಲಿಂಗ್
7 ಓವರ್ಗಳಲ್ಲಿ ಕೇವಲ 34 ರನ್ ನೀಡಿ ಒಂದು ವಿಕೆಟ್ ಪಡೆದ ಶ್ರೀಲಂಕಾ ತಂಡ.
ಇಬ್ಬರು ವೇಗಿಗಳೊಂದಿಗೆ ಮೊದಲ ಪವರ್ನಲ್ಲೇ ಬೌಲಿಂಗ್ ಮುಂದುವರೆಸಿದ ಲಂಕಾ ತಂಡದ ನಾಯಕ ದಸುನ್ ಶಾನಕ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ವಂಡರ್ ಡಸ್ಸೆನ್ ಬ್ಯಾಟಿಂಗ್.
RSA 34/1 (7)
SA vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
ಮೊದಲ 5 ಓವರ್ಗಳಲ್ಲಿ 29 ರನ್ ಕಲೆಹಾಕಿದ ಸೌತ್ ಆಫ್ರಿಕಾ.
ಆರಂಭಿಕ ಆಟಗಾರ ಟೆಂಬಾ ಬವುಮಾ (8) ವಿಕೆಟ್ ಪಡೆದ ಶ್ರೀಲಂಕಾ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ವಂಡರ್ ಡಸ್ಸೆನ್ ಬ್ಯಾಟಿಂಗ್.
RSA 29/1 (5)
SA vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಬೌಂಡರಿ
ಕಸುನ್ ರಜಿತ ಎಸೆದ 3ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಡೀಪ್ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಡಿಕಾಕ್.
ಸೌತ್ ಆಫ್ರಿಕಾ ತಂಡದ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ರಸ್ಸಿ ವಂಡರ್ ಡಸ್ಸೆನ್ ಬ್ಯಾಟಿಂಗ್.
RSA 27/1 (3)
SA vs SL ICC World Cup 2023 Live Score: ಸೌತ್ ಆಫ್ರಿಕಾ ಮೊದಲ ವಿಕೆಟ್ ಪತನ
ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಬವುಮಾ.
ನಾಲ್ಕನೇ ಎಸೆತದಲ್ಲಿ ಟೆಂಬಾ ಬವುಮಾರನ್ನು ಎಲ್ಬಿಡಬ್ಲ್ಯೂ ಮಾಡಿದ ಮಧುಶಂಕ.
ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು.
5 ಎಸೆತಗಳಲ್ಲಿ 8 ರನ್ಗಳಿಸಿ ವಿಕೆಟ್ ಒಪ್ಪಿಸಿದ ಟೆಂಬಾ ಬವುಮಾ.
ಕ್ರೀಸ್ನಲ್ಲಿ ಡಿಕಾಕ್ ಹಾಗೂ ಡಸ್ಸೆನ್ ಬ್ಯಾಟಿಂಗ್.
RSA 18/1 (2)
SA vs SL ICC World Cup 2023 Live Score: ಮೊದಲ ಓವರ್ನಲ್ಲೇ ಮೊದಲ ಬೌಂಡರಿ
ಕಸುನ್ ರಜಿತ ಎಸೆದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಟೆಂಬಾ ಬವುಮಾ.
ಮೊದಲ ಓವರ್ನಲ್ಲೇ ಮೊದಲ ಬೌಂಡರಿ ಬಾರಿಸಿದ ಸೌತ್ ಆಫ್ರಿಕಾ ಶುಭಾರಂಭ.
ಕ್ರೀಸ್ನಲ್ಲಿ ಕ್ವಿಂಟನ್ ಡಿಕಾಕ್ ಹಾಗೂ ಟೆಂಬಾ ಬವುಮಾ ಬ್ಯಾಟಿಂಗ್.
RSA 5/0 (1)
SA vs SL ICC World Cup 2023 Live Score: ಸೌತ್ ಆಫ್ರಿಕಾ ಇನಿಂಗ್ಸ್ ಆರಂಭ
ಸೌತ್ ಆಫ್ರಿಕಾ ಪರ ಆರಂಭಿಕರು: ಟೆಂಬಾ ಬವುಮಾ ಹಾಗೂ ಕ್ವಿಂಟನ್ ಡಿಕಾಕ್.
ಶ್ರೀಲಂಕಾ ಪರ ಮೊದಲ ಓವರ್: ಕಸುನ್ ರಜಿತ
ಸೌತ್ ಆಫ್ರಿಕಾ ಬ್ಯಾಟಿಂಗ್ ಲೈನಪ್- ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್.
SA vs SL ICC World Cup 2023 Live Score: ಶ್ರೀಲಂಕಾ ಪ್ಲೇಯಿಂಗ್ 11
ಶ್ರೀಲಂಕಾ (ಪ್ಲೇಯಿಂಗ್ XI): ಕುಸಾಲ್ ಪೆರೆರಾ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ದುನಿತ್ ವೆಲ್ಲಲಾಗೆ, ಮಥೀಶ ಪತಿರಾಣ, ದಿಲ್ಶನ್ ಮಧುಶಂಕ, ಕಸುನ್ ರಜಿತ.
SA vs SL ICC World Cup 2023 Live Score: ಸೌತ್ ಆಫ್ರಿಕಾ ಪ್ಲೇಯಿಂಗ್ 11
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಲುಂಗಿ ಎನ್ಗಿಡಿ, ಕಗಿಸೊ ರಬಾಡ.
SA vs SL ICC World Cup 2023 Live Score: ಟಾಸ್ ಗೆದ್ದ ಶ್ರೀಲಂಕಾ
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Oct 07,2023 1:33 PM