AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟಗಾರರ ಕೊರತೆ… ಕಣಕ್ಕಿಳಿದ ಸೌತ್ ಆಫ್ರಿಕಾ ಫೀಲ್ಡಿಂಗ್ ಕೋಚ್

New Zealand vs South Africa: ಲಾಹೋರ್​ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 50 ಓವರ್​ಗಳಲ್ಲಿ 304 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 48.4 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಆಟಗಾರರ ಕೊರತೆ... ಕಣಕ್ಕಿಳಿದ ಸೌತ್ ಆಫ್ರಿಕಾ ಫೀಲ್ಡಿಂಗ್ ಕೋಚ್
Wandile Gwavu
ಝಾಹಿರ್ ಯೂಸುಫ್
|

Updated on: Feb 11, 2025 | 1:54 PM

Share

ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಫೀಲ್ಡಿಂಗ್ ಕೋಚ್ ಕಣಕ್ಕಿಳಿದ ಘಟನೆ ನಡೆದಿದೆ. ನ್ಯೂಝಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಆಟಗಾರರ ಕೊರತೆಯ ಕಾರಣ ಫೀಲ್ಡಿಂಗ್ ಕೋಚ್ ವಂಡಿಲೆ ಗ್ವಾವು ಮೈದಾನಕ್ಕಿಳಿದಿದ್ದಾರೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮ್ಯಾಥ್ಯೂ ಬ್ರೀಟ್ಝ್​​ಕೆ (150) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್​ಗಳಲ್ಲಿ 304 ರನ್ ಕಲೆಹಾಕಿತು.

ಆ ಬಳಿಕ ಸೌತ್ ಆಫ್ರಿಕಾ ತಂಡವು 11 ಆಟಗಾರರೊಂದಿಗೆ ಮೈದಾನಕ್ಕಿಳಿದಿದ್ದರು. ಆದರೆ 37ನೇ ಓವರ್​ ವೇಳೆ ಆಟಗಾರನೊಬ್ಬ ಗಾಯಗೊಂಡು ಮೈದಾನ ತೊರೆದಿದ್ದಾರೆ. ಅತ್ತ ಬದಲಿ ಆಟಗಾರನನ್ನು ಫೀಲ್ಡಿಂಗ್​ಗೆ ಇಳಿಸಲು ಸೌತ್ ಆಫ್ರಿಕಾ ಬಳಿ ಆಯ್ಕೆ ಇರಲಿಲ್ಲ. ಹೀಗಾಗಿ ಫೀಲ್ಡಿಂಗ್ ಕೋಚ್ ವಂಡಿಲೆ ಗ್ವಾವು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಸೌತ್ ಆಫ್ರಿಕಾ ಫೀಲ್ಡಿಂಗ್ ಕೋಚ್ ವಿಡಿಯೋ:

ಆಟಗಾರರ ಕೊರತೆ ಏಕೆ?

ಸೌತ್ ಆಫ್ರಿಕಾ ಟಿ20 ಲೀಗ್​​ ನಡೆಯುತ್ತಿದ್ದ ಕಾರಣ, ಹರಿಣರ ಪಡೆ 12 ಆಟಗಾರರೊಂದಿಗೆ ಪಾಕಿಸ್ತಾನಕ್ಕೆ ಸರಣಿ ಆಡಲು ಆಗಮಿಸಿದೆ. ಇತ್ತ ಬಂದ 12 ಆಟಗಾರರಲ್ಲಿ ಇಬ್ಬರು ಗಾಯಗೊಳ್ಳುತ್ತಿದ್ದಂತೆ ಸಮಸ್ಯೆ ಎದುರಾಗಿದೆ. ಹೀಗಾಗಿ ಫೀಲ್ಡಿಂಗ್ ಕೋಚ್ ಮೈದಾನಕ್ಕಿಳಿದಿದ್ದಾರೆ.

ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!

ಫೀಲ್ಡಿಂಗ್ ಮಾಡಿದ್ದ ಬ್ಯಾಟಿಂಗ್ ಕೋಚ್:

ಸೌತ್ ಆಫ್ರಿಕಾ ಪರ ಕೋಚ್ ಫೀಲ್ಡಿಂಗ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಐರ್ಲೆಂಡ್ ವಿರುದ್ಧದ ಸರಣಿ ವೇಳೆ ಆಟಗಾರರ ಕೊರತೆಯಿಂದಾಗಿ ಬ್ಯಾಟಿಂಗ್ ಕೋಚ್ ಜೆಪಿ ಡುಮಿನಿ ಮೈದಾನಕ್ಕಿಳಿದಿದ್ದರು. ಇದೀಗ ಫೀಲ್ಡಿಂಗ್ ಕೋಚ್ ವಂಡಿಲೆ ಗ್ವಾವು ಕೂಡ ಕಣಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ.