IPL 2022: SRH ಆಟಗಾರರ ‘ಅರೆಬಿಕ್ ಕುತ್ತು’ ಸಖತ್ ಸ್ಟೆಪ್ಸ್

| Updated By: ಝಾಹಿರ್ ಯೂಸುಫ್

Updated on: Apr 14, 2022 | 5:18 PM

IPL 2022: ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಎಸ್​ಆರ್​ಹೆಚ್​ ಕೆಕೆಆರ್ ವಿರುದ್ದ ಆಡಲಿದೆ. ಆದರೆ ಈ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅನುಮಾನ ಎನ್ನಲಾಗಿದೆ.

IPL 2022: SRH ಆಟಗಾರರ ಅರೆಬಿಕ್ ಕುತ್ತು ಸಖತ್ ಸ್ಟೆಪ್ಸ್
Sunrisers Hyderabad
Follow us on

ಐಪಿಎಲ್​ನಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡವು ಇದೀಗ ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ದಾಖಲಿಸಿ ಗೆಲುವಿನ ಲಯಕ್ಕೆ ಮರಳಿದೆ. ಇತ್ತ ಸತತ ಗೆಲುವು ಸಿಗುತ್ತಿದ್ದಂತೆ ಎಸ್​ಆರ್​​​ಹೆಚ್ ಆಟಗಾರರು ಕೂಡ ನಿರಾಳರಾಗಿದ್ದಾರೆ. ಇದರ ಸಣ್ಣ ಝಲಕ್​ ಅನ್ನು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಎಸ್​ಆರ್​​ಹೆಚ್ ಆಟಗಾರರು ಅರೆಬಿಕ್ ಕುತ್ತು ಹಾಡಿಗೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಇತ್ತೀಚೆಗೆ ತೆರೆಕಂಡಿರುವ ಬೀಸ್ಟ್ ಚಿತ್ರದ ಈ ಹಾಡಿಗೆ ಯುವ ಕ್ರಿಕೆಟಿಗರಾದ ವಾಷಿಂಗ್ಟನ್ ಸುಂದರ್ , ಪ್ರಿಯಾಂ ಗರ್ಗ್ , ಅಭಿಷೇಕ್ ಶರ್ಮಾ ಮತ್ತು ಸೌರಭ್ ದುಬೆ ನೃತ್ಯ ಮಾಡಿದ್ದಾರೆ. ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ದದ ಗೆಲುವಿನೊಂದಿಗೆ ಜಯದ ಖಾತೆ ತೆರೆದಿರುವ ಎಸ್​ಕೇನ್ ವಿಲಿಯಮ್ಸನ್ ಪಡೆ ಆ ಬಳಿಕ ಗುಜರಾತ್ ಟೈಟನ್ಸ್‌ ಅವರಿಗೆ ಸೋಲುಣಿಸಿತ್ತು.

ಇದೀಗ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಎಸ್​ಆರ್​ಹೆಚ್​ ಕೆಕೆಆರ್ ವಿರುದ್ದ ಆಡಲಿದೆ. ಆದರೆ ಈ ಪಂದ್ಯಕ್ಕೆ ವಾಷಿಂಗ್ಟನ್ ಸುಂದರ್ ಅನುಮಾನ ಎನ್ನಲಾಗಿದೆ. ಏಕೆಂದರೆ ಗುಜರಾತ್ ವಿರುದ್ಧದ ಪಂದ್ಯದ ಸಮಯದಲ್ಲಿ ಬೆರಳಿಗೆ ಗಾಯ ಮಾಡಿಕೊಂಡಿದ್ದ ಸುಂದರ್ ತಮ್ಮ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಸುಂದರ್​ಗೆ ಒಂದು ವಾರ ವಿಶ್ರಾಂತಿಯ ಅಗತ್ಯವಿದೆ ಎಂದು ಎಸ್​ಆರ್​ಹೆಚ್​ ಕೋಚ್ ಟಾಮ್ ಮೂಡಿ ತಿಳಿಸಿದ್ದರು. ಹೀಗಾಗಿ ಶುಕ್ರವಾರ ವಾಷಿಂಗ್ಟನ್ ಸುಂದರ್ ಆಡುವುದು ಅನುಮಾನ. ವಾಷಿಂಗ್ಟನ್ ಅನುಪಸ್ಥಿತಿಯಲ್ಲಿ ಜಗದೀಶ್ ಸುಚಿತ್ ಅಥವಾ ಶ್ರೇಯಸ್ ಗೋಪಾಲ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಸನ್ ರೈಸರ್ಸ್ ಹೈದರಾಬಾದ್ (SRH):
ಕೇನ್ ವಿಲಿಯಮ್ಸನ್ (ನಾಯಕ), ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ಪ್ರಿಯಮ್ ಗರ್ಗ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಜೆ ಸುಚಿತ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಉಮ್ರಾನ್ ಮಲಿಕ್, ಸೌರಭ್ ದುಬೆ, ಸೀನ್ ಅಬಾಟ್, ಆರ್ ಸಮರ್ಥ್, ಜೆ ಸುಚಿತ್, ರೊಮಾರಿಯೋ ಶೆಫರ್ಡ್, ವಿಷ್ಣು ವಿನೋದ್, ಗ್ಲೆನ್ ಫಿಲಿಪ್ಸ್, ಫಜಲ್ಹಕ್ ಫಾರೂಕಿ.

 

ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್

ಇದನ್ನೂ ಓದಿ: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಯಾರು ಗೊತ್ತಾ?