Gautam Gambhir: LSG vs SRH ಪಂದ್ಯದ ಮಧ್ಯೆ ಗೌತಮ್ ಗಂಭೀರ್ ಮೈಚಳಿ ಬಿಡಿಸಿದ ಹೈದರಾಬಾದ್ ಫ್ಯಾನ್ಸ್

SRH vs LSG, IPL 2023: ​ಎಸ್​ಆರ್​ಹೆಚ್ ಹಾಗೂ ಎಲ್​ಎಸ್​ಜಿ ನಡುವಣ ಪಂದ್ಯದಲ್ಲಿ ಹೈದರಾಬಾದ್ ಅಭಿಮಾನಿಗಳು ಗೌತಮ್ ಗಂಭೀರ್ ಅವರಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸಿದರು.

Gautam Gambhir: LSG vs SRH ಪಂದ್ಯದ ಮಧ್ಯೆ ಗೌತಮ್ ಗಂಭೀರ್ ಮೈಚಳಿ ಬಿಡಿಸಿದ ಹೈದರಾಬಾದ್ ಫ್ಯಾನ್ಸ್
Virat Kohli Gautam Gambhir and SRH Fans

Updated on: May 14, 2023 | 11:16 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಮಹತ್ವದ ಘಟ್ಟದತ್ತ ಸಾಗುತ್ತಿದೆ. ಪ್ರತಿಯೊಂದು ಪಂದ್ಯ ಕೂಡ ಪ್ರತಿ ತಂಡಕ್ಕೆ ಪ್ರಮುಖವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದ್ದರೆ ಪ್ಲೇ ಆಫ್​ಗೇರಲು ಒಂಬತ್ತು ತಂಡಗಳು ಸೆಣೆಸಾಟ ನಡೆಸುತ್ತಿದೆ. ಶನಿವಾರ ಲಖನೌ ಸೂಪರ್ ಜೇಂಟ್ಸ್ ತಂಡ ಸನ್​ರೈಸರ್ಸ್ ಹೈದರಾಬಾದ್ (SRH vs LSG) ವಿರುದ್ಧ ಗೆಲ್ಲುವ ಮೂಲಕ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಹೈದರಾಬಾದ್​ನ ರಾಜಿವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಎಲ್​ಎಸ್​ಜಿ 7 ವಿಕೆಟ್​ಗಳ ರೋಚಕ ಜಯ ಸಾಧಿಸಿತು. ಇದರ ನಡುವೆ ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಎಸ್​ಆರ್​ಹೆಚ್ ಅಭಿಮಾನಿಗಳು ಗೌತಮ್ ಗಂಭೀರ್ (Gautam Gambhir) ಅವರಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸಿದರು.

ಮೇ. 1 ರಂದು ಐಪಿಎಲ್ 2023 ರಲ್ಲಿ ಲಖನೌ ಸೂಪರ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಪಂದ್ಯ ಮುಗಿದ ಬಳಿಕ ನಡೆದ ಘಟನೆ ಇಡೀ ಕ್ರಿಕೆಟ್ ಜಗತ್ತಿಗೆ ತಿಳಿದಿದೆ. ಇಲ್ಲಿ ಆರ್​ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಲಖನೌ ತಂಡದ ಮೆಂಟರ್ ಗೌತಮ್ ಗಂಭೀರ್ ನಡುವೆ ಜಗಳ ನಡೆದಿತ್ತು. ಇದು ದೊಡ್ಡ ಮೊಟ್ಟದಲ್ಲಿ ಸದ್ದು ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಂತು ಈಗಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಹೈದರಾಬಾದ್ ಅಭಿಮಾನಿಗಳು ಗಂಭೀರ್ ಅವರ ಕಾಲೆಳೆದಿದ್ದಾರೆ.

ಇದನ್ನೂ ಓದಿ
Jaipur ಇಂದು ಗೆಲ್ಲಲೇ ಬೇಕಾದ ಆರ್​ಸಿಬಿ ಪಂದ್ಯಕ್ಕೆ ಇದೆಯೇ ಮಳೆಯ ಕಾಟ?: ಹವಾಮಾನ ವರದಿ ಇಲ್ಲಿದೆ
RR vs RCB Pitch Report: ಆರ್​ಸಿಬಿ ಸೋತರೆ ಪ್ಲೇ ಆಫ್ ಕನಸು ಭಗ್ನ: ಸವಾಯಿ ಮಾನ್​ಸಿಂಗ್ ಪಿಚ್ ಯಾರಿಗೆ ಹೆಚ್ಚು ಸಹಕಾರಿ?
RR vs RCB, IPL 2023: ಐಪಿಎಲ್​ನಲ್ಲಿಂದು ಎರಡು ಪಂದ್ಯ: ರಾಜಸ್ಥಾನ್- ಆರ್​ಸಿಬಿ ಮಧ್ಯೆ ಹೈವೋಲ್ಟೇಜ್ ಕದನ
IPL 2023: RR ವಿರುದ್ಧ ಗೆದ್ದರೂ RCB ಟಾಪ್-4 ಹಂತಕ್ಕೇರುವುದಿಲ್ಲ

IPL 2023: ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಹರ್ಭಜನ್ ಸಿಂಗ್

ಶನಿವಾರ ಎಸ್​ಆರ್​ಹೆಚ್ ಮತ್ತು ಲಖನೌ ಪಂದ್ಯ ಶುರುವಾಗಿ ಮೊದಲ ಇನ್ನಿಂಗ್ಸ್ ಮುಕ್ತಾಯವಾದ ಬಳಿಕ ಗಂಭೀರ್ ಅವರು ಗ್ರೌಂಡ್​ನಿಂದ ತಮ್ಮ ಡಗೌಟ್​ನತ್ತ ಬಂದರು. ಈ ಸಂದರ್ಭ ಹೈದರಾಬಾದ್ ಫ್ಯಾನ್ಸ್ ಜೋರಾಗಿ ವಿರಾಟ್ ಕೊಹ್ಲಿ, ವಿರಾಟ್ ಕೊಹ್ಲಿ ಎಂದು ಕೂಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಗಂಭೀರ್ ಈರೀತಿಯ ಅವಮಾನ ಅನುಭವಿಸುತ್ತಿರುವುದು ಇದೇ ಮೊದಲಲ್ಲ. ಕೊಹ್ಲಿ-ಗಂಭೀರ್ ಜಗಳದ ಬಳಿಕ ನಡೆದ ಸಿಎಸ್​ಕೆ ಮತ್ತು ಎಲ್​ಎಸ್​ಜಿ ನಡುವಣ ಪಂದ್ಯದಲ್ಲೂ ಗಂಭೀರ್ ಅವರನ್ನು ಕಂಡು ಸಿಎಸ್​ಕೆ ಫ್ಯಾನ್ಸ್ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದರು.

 

ಎಸ್​ಆರ್​ಹೆಚ್ ಹಾಗೂ ಎಲ್​ಎಸ್​ಜಿ ನಡುವಣ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿತು. ತಂಡದ ಪರ ಹೆನ್ರಿಚ್ ಕ್ಲಾಸೆನ್ 29 ಎಸೆತಗಳಲ್ಲಿ 47 ರನ್ ಬಾರಿಸಿದರೆ, ಅಬ್ದುಲ್ ಸಮದ್ 37 ಹಾಗೂ ಅನ್​ಮೊಲ್​ಪ್ರೀತ್ ಸಿಂಗ್ 36 ರನ್​ಗಳ ಕೊಡುಗೆ ನೀಡಿದರು. ಟಾರ್ಗೆಟ್ ಬೆನ್ನಟ್ಟಿದ ಲಖನೌ 19.2 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಸಿಡಿಸಿ ಗೆಲುವು ಕಂಡಿತು. ಪ್ರೇರಕ್ ಮಂಕಡ್ 45 ಎಸೆತಗಳಲ್ಲಿ ಅಜೇಯ 64 ರನ್ ಸಿಡಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮ ಹಂತದಲ್ಲಿ ನಿಕೋಲಸ್ ಪೂರನ್ ಕೇವಲ 13 ಎಸೆತಗಳಲ್ಲಿ ಅಜೇಯ 44 ರನ್ ಚಚ್ಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Sun, 14 May 23