IPL 2023: ಪ್ಲೇಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಹರ್ಭಜನ್ ಸಿಂಗ್
IPL 2023 Kannada: ಪ್ರಸ್ತುತ ಸನ್ನಿವೇಶದಲ್ಲಿ ನಾಲ್ಕು ತಂಡಗಳನ್ನು ಹೆಸರಿಸುವುದು ಕಷ್ಟಕರ. ಇದಾಗ್ಯೂ ಈಗಿನ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರದಂತೆ ಈ ಕೆಳಗಿನ 4 ತಂಡಗಳು ಪ್ಲೇಆಫ್ಗೆ ಪ್ರವೇಶಿಸಲಿದೆ.
Updated on:May 13, 2023 | 11:23 PM

IPL 2023: ಐಪಿಎಲ್ ಸೀಸನ್ 16 ರ ಪ್ಲೇಆಫ್ ರೇಸ್ ರೋಚಕ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಬಹುತೇಕ ತಂಡಗಳ 12 ಪಂದ್ಯಗಳು ಮುಗಿದರೂ ಯಾವುದೇ ತಂಡ ಪ್ಲೇಆಫ್ ಹಂತಕ್ಕೆ ಪ್ರವೇಶಿಸಿಲ್ಲ. ಹೀಗಾಗಿ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ತಂಡ ಯಾವುದೆಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿದೆ. ಈ ಕುತೂಹಲವನ್ನು ತಣಿಸುವಂತಹ ಉತ್ತರ ನೀಡಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಹರ್ಭಜನ್ ಸಿಂಗ್.

ಈ ಬಗ್ಗೆ ಮಾತನಾಡಿರುವ ಹರ್ಭಜನ್ ಸಿಂಗ್, ಪ್ರಸ್ತುತ ಸನ್ನಿವೇಶದಲ್ಲಿ ನಾಲ್ಕು ತಂಡಗಳನ್ನು ಹೆಸರಿಸುವುದು ಕಷ್ಟಕರ. ಇದಾಗ್ಯೂ ಈಗಿನ ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರದಂತೆ ಈ ಕೆಳಗಿನ 4 ತಂಡಗಳು ಪ್ಲೇಆಫ್ಗೆ ಪ್ರವೇಶಿಸಲಿದೆ ಎಂದಿದ್ದಾರೆ.

1- ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಈ ಬಾರಿ ಕೂಡ ಪ್ಲೇಆಫ್ ಪ್ರವೇಶಿಸಲಿದೆ. ಈಗಾಗಲೇ 12 ಪಾಯಿಂಟ್ಸ್ ಹೊಂದಿರುವ ಜಿಟಿ ತಂಡವು ಅಂತಿಮ ಸುತ್ತಿಗೆ ಪ್ರವೇಶಿಸುವುದರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ ಹರ್ಭಜನ್ ಸಿಂಗ್.

2- ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ ನೇತೃತ್ವದ ಸಿಎಸ್ಕೆ ತಂಡ ಕೂಡ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹೀಗಾಗಿ ಚೆನ್ನೈ ಕೂಡ ಪ್ಲೇಆಫ್ ಆಡಲಿದೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.

3- ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಪ್ಲೇಆಫ್ ಆಡಲಿದೆ. ಪ್ರಸ್ತುತ ಅವರು ಪಾಯಿಂಟ್ಸ್ ಟೇಬಲ್ನಲ್ಲಿ ಕೆಳಗಿದ್ದರೂ, ಅಂತಿಮವಾಗಿ ಟಾಪ್-4 ಗೆ ಎಂಟ್ರಿ ಕೊಡಲಿದೆ ಎಂದು ಹರ್ಭಜನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

4- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್ಸಿಬಿ ತಂಡ ಕೂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಅಗ್ರ ನಾಲ್ಕರಲ್ಲಿ ಆರ್ಸಿಬಿ 4ನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಸಲಿದೆ ಎಂದು ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

ಹರ್ಭಜನ್ ಸಿಂಗ್ ಹೆಸರಿಸಿರುವ ಈ ನಾಲ್ಕು ತಂಡಗಳ ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿನ (46 ಪಂದ್ಯಗಳ ಬಳಿಕ) ಸ್ಥಾನಗಳನ್ನು ನೋಡುವುದಾದರೆ...

ಗುಜರಾತ್ ಟೈಟಾನ್ಸ್ ತಂಡವು 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಸಿಎಸ್ಕೆ ತಂಡವು 15 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಹಾಗೆಯೇ 10 ಅಂಕಗಳೊಂದಿಗೆ ಆರ್ಸಿಬಿ ತಂಡವು 6ನೇ ಸ್ಥಾನ ಅಲಂಕರಿಸಿದೆ. ಇವುಗಳಲ್ಲಿ ಯಾವ ತಂಡಗಳು ಪ್ಲೇಆಫ್ ಪ್ರವೇಶಿಸಲಿದೆ ಕಾದು ನೋಡಬೇಕಿದೆ.
Published On - 11:22 pm, Sat, 13 May 23



















