AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SRH vs DC Highlights IPL 2023: ಹೈದರಾಬಾದ್​​ಗೆ ಮಣ್ಣು ಮುಕ್ಕಿಸಿದ ಡೆಲ್ಲಿಗೆ 2ನೇ ಗೆಲುವು

Sunrisers Hyderabad vs Delhi capitals IPL 2023 Highlights in Kannada: ಐಪಿಎಲ್ 2023ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಜಯ ದಾಖಲಿಸಿದೆ. 144 ರನ್​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಲಾಗದೆ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ 7 ರನ್​ಗಳಿಂ ಸೋಲೊಪ್ಪಿಕೊಂಡಿದೆ.

SRH vs DC Highlights IPL 2023: ಹೈದರಾಬಾದ್​​ಗೆ ಮಣ್ಣು ಮುಕ್ಕಿಸಿದ ಡೆಲ್ಲಿಗೆ 2ನೇ ಗೆಲುವು
ಹೈದರಾಬಾದ್- ಡೆಲ್ಲಿ ಮುಖಾಮುಖಿ
ಪೃಥ್ವಿಶಂಕರ
|

Updated on:Apr 24, 2023 | 11:23 PM

Share

ಐಪಿಎಲ್ 2023ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಜಯ ದಾಖಲಿಸಿದೆ. 144 ರನ್​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಲಾಗದೆ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ 7 ರನ್​ಗಳಿಂದ ಸೋಲೊಪ್ಪಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡಿದ ಹೈದರಾಬಾದ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೇವಲ 144 ರನ್‌ಗಳಿಗೆ ಸೀಮಿತಗೊಳಿಸಿದರು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 24 Apr 2023 11:20 PM (IST)

    ಕೊನೆಯ ಓವರ್​ನಲ್ಲಿ ಗೆದ್ದ ಡೆಲ್ಲಿ

    144 ರನ್​ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಲಾಗದೆ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ 7 ರನ್​ಗಳಿಂ ಸೋಲೊಪ್ಪಿಕೊಂಡಿದೆ. ಈ ಗೆಲುವಿನ ಮೂಲಕ ಡೆಲ್ಲಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡಿದ ಹೈದರಾಬಾದ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೇವಲ 144 ರನ್‌ಗಳಿಗೆ ಸೀಮಿತಗೊಳಿಸಿದರು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು.

  • 24 Apr 2023 11:07 PM (IST)

    ಕ್ಲಾಸೆನ್ ಔಟ್

    19ನೇ ಓವರ್​ನ 4ನೇ ಎಸೆತದಲ್ಲಿ ಕ್ಲಾಸೆನ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.

  • 24 Apr 2023 11:06 PM (IST)

    ಕ್ಲಾಸೆನ್ ಬೌಂಡರಿ

    ಮುಖೇಶ್ ಬೌಲ್ ಮಾಡಿದ 18ನೇ ಓವರ್​ನಲ್ಲಿ ಕ್ಲಾಸೆನ್ 2 ಬೌಂಡರಿ ಬಾರಿಸಿದರು.

  • 24 Apr 2023 10:59 PM (IST)

    ಶತಕ ಪೂರ್ಣ

    17ನೇ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸುಂದರ್ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. ಇದೇ ಓವರ್​ನಲ್ಲಿ ಕ್ಲಾಸೆನ್ ಭರ್ಜರಿ ಸಿಕ್ಸರ್ ಕೂಡ ಹೊಡೆದರು.

  • 24 Apr 2023 10:45 PM (IST)

    ಮಾರ್ಕ್ರಾಮ್ ಔಟ್

    ಹೈದರಾಬಾದ್​ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ನಾಯಕ ಮಾರ್ಕ್ರಾಮ್ ಅಕ್ಷರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

  • 24 Apr 2023 10:44 PM (IST)

    ಕ್ಲಾಸೆನ್ ಬೌಂಡರಿ

    ಅಭಿಷೇಕ್ ವಿಕೆಟ್ ಬಳಿಕ ಬಂದಿರುವ ಕ್ಲಾಸೆನ್ ಡೀಪ್ ಮಿಡ್ ವಿಕೆಟ್​ನಲ್ಲಿ ಬೌಂಡರಿ ಹೊಡೆದರು.

  • 24 Apr 2023 10:43 PM (IST)

    ಅಭಿಷೇಕ್ ಶರ್ಮಾ ಔಟ್

    14ನೇ ಓವರ್​ನಲ್ಲಿ ಕುಲ್ದೀಪ್, ಡೆಲ್ಲಿಗೆ 4ನೇ ಯಶಸ್ಸು ತಂದುಕೊಟ್ಟಿದ್ದಾರೆ. ತ್ರಿಪಾಠಿ ಬಳಿಕ ಬಂದಿದ್ದ ಅಭಿಷೇಕ್​ ನೇರವಾಗಿ ಬೌಲರ್​ಗೆ ಕ್ಯಾಚಿತ್ತು ಔಟಾದರು.

  • 24 Apr 2023 10:34 PM (IST)

    ತ್ರಿಪಾಠಿ ಔಟ್

    ಇಶಾಂತ್ ಬೌಲಿಂಗ್​​ನಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ತ್ರಿಪಾಠಿ ಔಟಾಗಿದ್ದಾರೆ.

  • 24 Apr 2023 10:28 PM (IST)

    ಮಯಾಂಕ್ ಔಟ್

    12ನೇ ಓವರ್ ಬೌಲ್ ಮಾಡಿದ ಅಕ್ಷರ್ ಪಟೇಲ್ ಸೆಟಲ್ ಆಗಿದ್ದ ಮಯಾಂಕ್ ವಿಕೆಟ್ ಉರುಳಿಸಿದರು. 49 ರನ್ ಬಾರಿಸಿದ್ದ ಮಯಾಂಕ್ ಕ್ಯಾಚಿತ್ತು ನಿರ್ಗಮಿಸಿದರು.

  • 24 Apr 2023 10:23 PM (IST)

    ಮಯಾಂಕ್ ಬೌಂಡರಿ

    ಕೊನೆಗೂ 11ನೇ ಓವರ್​ನಲ್ಲಿ ಮೊದಲನೇ ಎಸೆತದಲ್ಲಿ ಮಯಾಂಕ್ ಆಫ್​​ ಸೈಡ್​ನಲ್ಲಿ ಬೌಂಡರಿ ಹೊಡೆದರು.

  • 24 Apr 2023 10:20 PM (IST)

    10 ಓವರ್ ಮುಕ್ತಾಯ

    ಬ್ರೂಕ್ ವಿಕೆಟ್ ಬಳಿಕ ಕಳೆದ 4 ಓವರ್​ಗಳಲ್ಲಿ ಹೈದರಾಬಾದ್ ಯಾವುದೇ ಬೌಂಡರಿ ಬಾರಿಸಿಲ್ಲ. 10 ಓವರ್​ಗಳ ಅಂತ್ಯಕ್ಕೆ ಹೈದರಾಬಾದ್ 58/1

  • 24 Apr 2023 10:00 PM (IST)

    ಬ್ರೂಕ್ ಔಟ್

    6ನೇ ಓವರ್​ನ ಮೊದಲ ಎಸೆತದಲ್ಲಿಯೇ ನೋಕಿಯಾ ಆರಂಭಿಕ ಬ್ರೂಕ್​​ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಹೈದರಾಬಾದ್ ಮೊದಲ ವಿಕೆಟ್ ಪತನ

  • 24 Apr 2023 09:59 PM (IST)

    5ನೇ ಓವರ್ ಮುಕ್ತಾಯ

    5ನೇ ಓವರ್​ನ ಕೊನೆಯ ಎಸೆತದಲ್ಲೂ ಮಯಾಂಕ್ ಬೌಂಡರಿ ಹೊಡೆದರು.

  • 24 Apr 2023 09:57 PM (IST)

    ಮಯಾಂಕ್ ಬೌಂಡರಿ

    ಮುಖೇಶ್ ಬೌಲ್ ಮಾಡಿದ 4ನೇ ಓವರ್​ನಲ್ಲಿ ಕೊನೆಯ ಎಸೆತವನ್ನು ಮಯಾಂಕ್ ಪಾಯಿಂಟ್ ಕಡೆ ಆಡಿ ಬೌಂಡರಿ ಹೊಡೆದರು.

  • 24 Apr 2023 09:56 PM (IST)

    ಇಶಾಂತ್​ಗೆ ಬೌಂಡರಿ

    ಇಶಾಂತ್ ಬೌಲ್ ಮಾಡಿದ 3ನೇ ಓವರ್​ನ 2ನೇ ಎಸೆತದಲ್ಲಿ ಮಯಾಂಕ್ ಕವರ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿದರು.

  • 24 Apr 2023 09:39 PM (IST)

    ಮಯಾಂಕ್ ಬೌಂಡರಿ

    ನೋಕಿಯಾ ಬೌಲ್ ಮಾಡಿದ 2ನೇ ಓವರ್​ನ 5ನೇ ಎಸೆತದಲ್ಲಿ ಮಯಾಂಕ್ ಸೀದಾ ಬೌಲರ್ ತಲೆಯ ಮೇಲೆ ಬೌಂಡರಿ ಹೊಡೆದರು.

  • 24 Apr 2023 09:37 PM (IST)

    ಹೈದರಾಬಾದ್ ಬ್ಯಾಟಿಂಗ್ ಆರಂಭಿಸಿದೆ

    ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಶುರುವಾಗಿದೆ. ಆರಂಭಿಕರಾಗಿ ಹ್ಯಾರಿ ಬ್ರೂಕ್ ಮತ್ತು ಮಯಾಂಕ್ ಅಗರ್ವಾಲ್ ಬಂದಿದ್ದಾರೆ. ಓವರ್​ನ ನಾಲ್ಕನೇ ಎಸೆತದಲ್ಲಿ ಮಯಾಂಕ್ ಕ್ಯಾಚ್ ಕೈಬಿಟ್ಟರು. ಮಯಾಂಕ್ ಓವರ್​ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.

  • 24 Apr 2023 09:15 PM (IST)

    ಕೊನೆಯ ಓವರ್​ನಲ್ಲೂ ವಿಕೆಟ್

    ಭುವಿ ಬೌಲ್ ಮಾಡಿದ 20ನೇ ಓವರ್​ನಲ್ಲೂ ಡೆಲ್ಲಿ 2 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಡೆಲ್ಲಿ ಅಕ್ಷರ್ ಹಾಗೂ ಮನಿಶ್ ಅವರ ಅರ್ಧಶತಕ ಜೊತೆಯಾಟದಿಂದಾಗಿ 144 ರನ್ ಗಳಿಸಿತು. ಎಸ್​ಆರ್​ಹೆಚ್​ಗೆ 145 ರನ್ ಟಾರ್ಗೆಟ್ ಸಿಕ್ಕಿದೆ.

  • 24 Apr 2023 09:06 PM (IST)

    ಮನೀಶ್ ಕೂಡ ಔಟ್

    ನಟರಾಜನ್ ಬೌಲ್ ಮಾಡಿದ 19ನೇ ಓವರ್​ನ ಎರಡನೇ ಎಸೆತದಲ್ಲಿ ಮನೀಶ್ ಪಾಂಡೆ ರನೌಟ್ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು. ಪಾಂಡೆ 27 ಎಸೆತಗಳಲ್ಲಿ 34 ರನ್ ಬಾರಿಸಿದರು.

  • 24 Apr 2023 09:02 PM (IST)

    ಅಕ್ಷರ್ ಔಟ್

    18ನೇ ಓವರ್​ನ 5ನೇ ಎಸೆತದಲ್ಲಿ ಅಕ್ಷರ್ ಪಟೇಲ್ ಬೌಲ್ಡ್ ಆಗುವುದರೊಂದಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಭುವಿಗೆ ಈ ವಿಕೆಟ್ ಬಿತ್ತು.

  • 24 Apr 2023 09:01 PM (IST)

    ಹ್ಯಾಟ್ರಿಕ್ ಬೌಂಡರಿ

    ಮಾರ್ಕಂಡೆ ಬೌಲ್ ಮಾಡಿದ 17ನೇ ಓವರ್​ನ 3,4 ಮತ್ತು 5ನೇ ಎಸೆತವನ್ನು ಅಕ್ಷರ್ ಪಟೇಲ್ ಬೌಂಡರಿಗಟ್ಟಿದರು.

  • 24 Apr 2023 08:59 PM (IST)

    ಅಕ್ಷರ್ ಬೌಂಡರಿ

    ಟಿ ನಟರಾಜನ್ ಎಸೆದ 15ನೇ ಓವರ್​ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಕವರ್ಸ್ ಕಡೆಗೆ ಬೌಂಡರಿ ಬಾರಿಸಿದರು.

  • 24 Apr 2023 08:58 PM (IST)

    ಡೆಲ್ಲಿ ಶತಕ ಪೂರ್ಣ

    ಡೆಲ್ಲಿ ಕ್ಯಾಪಿಟಲ್ಸ್‌ನ 100 ರನ್‌ಗಳು ಪೂರ್ಣಗೊಂಡಿವೆ. ಮನೀಶ್ ಪಾಂಡೆ 15ನೇ ಓವರ್​ನ ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ತಂಡದ ಶತಕ ಪೂರೈಸಿದರು.

  • 24 Apr 2023 08:39 PM (IST)

    ಅಕ್ಷರ್ ಬೌಂಡರಿ

    ಮಲಿಕ್ ಬೌಲ್ ಮಾಡಿದ 14ನೇ ಓವರ್​ನ 2ನೇ ಎಸೆತದಲ್ಲಿ ಅಕ್ಷರ್ ಪಟೇಲ್ ವೈಡ್ ಮಿಡ್ ಆಫ್​ನಲ್ಲಿ ಬೌಂಡರಿ ಹೊಡೆದರು.

  • 24 Apr 2023 08:30 PM (IST)

    ಮನೀಶ್ ಬೌಂಡರಿ

    ಕೊನೆಗೂ 12ನೇ ಓವರ್​ನ ಮೊದಲ ಎಸೆತದಲ್ಲಿ ಮನೀಶ್ ಫೈನ್​ ಲೆಗ್​ ಕಡೆ ಬೌಂಡರಿ ಬಾರಿಸಿದರು.

  • 24 Apr 2023 08:28 PM (IST)

    10 ಓವರ್ ಮುಕ್ತಾಯ

    8ನೇ ಓವರ್​ನಲ್ಲಿ ಸತತ 3 ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿಯ ಬ್ಯಾಟಿಂಗ್ ನಿಧಾನವಾಗಿದೆ. ತಂಡದ ಪರ ಮನೀಶ್ ಹಾಗೂ ಅಕ್ಷರ್ ಪಟೇಲ್ ಆಡುತ್ತಿದ್ದಾರೆ. 10 ಓವರ್​ಗಳ ಇನ್ನಿಂಗ್ಸ್ ಮುಗಿದಿದ್ದು, ಡೆಲ್ಲಿ 72/5

  • 24 Apr 2023 08:14 PM (IST)

    5ನೇ ವಿಕೆಟ್ ಪತನ

    ಸುಂದರ್ ಒಂದೇ ಓವರ್​ನಲ್ಲಿ 3 ವಿಕೆಟ್ ಉರುಳಿಸಿದರು. ಇದೀಗ ಸರ್ಫರಾಜ್ ಬಳಿಕ ಬಂದ ಅಮನ್ ಖಾನ್ ಕೂಡ ಕ್ಯಾಚಿತ್ತು ಔಟಾದರು.

  • 24 Apr 2023 08:11 PM (IST)

    4ನೇ ವಿಕೆಟ್ ಪತನ

    ಡೆಲ್ಲಿಗೆ ಒಂದೇ ಓವರ್​ನಲ್ಲಿ ಎರಡೆರಡು ಆಘಾತ ಎದುರಾಗಿದೆ. ಸುಂದರ್ ಓವರ್​ನಲ್ಲಿ ಕ್ಯಾಚಿತ್ತು ವಾರ್ನರ್ ಔಟಾದರೆ, ಅದಾದ ಎರಡನೇ ಎಸೆತದಲ್ಲಿ ಸರ್ಫರಾಜ್ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.

  • 24 Apr 2023 08:09 PM (IST)

    ವಾರ್ನರ್ ಕೂಡ ಔಟ್

    ಡೆಲ್ಲಿಗೆ ಆಘಾತ.. ತಂಡದ ಆಧಾರಸ್ತಂಭ ನಾಯಕ ಡೇವಿಡ್ ವಾರ್ನರ್, ಸುಂದರ್ ಓವರ್​ನಲ್ಲಿ ಕ್ಯಾಚಿತ್ತು ಔಟಾದರು.

  • 24 Apr 2023 08:03 PM (IST)

    ಪವರ್ ಪ್ಲೇ ಅಂತ್ಯ

    ಯಾನ್ಸೆನ್ ಎಸೆದ ಪವರ್​ ಪ್ಲೇನ ಕೊನೆಯ ಓವರ್​ನಲ್ಲಿ ಸರ್ಫರಾಜ್ ಎಕ್ಸ್​ಟ್ರಾ ಕವರ್​ ಮೇಲೆ ಸಿಕ್ಸರ್ ಬಾರಿಸಿದರು.

  • 24 Apr 2023 07:55 PM (IST)

    ನಟರಾಜನ್​ಗೆ ವಿಕೆಟ್

    5ನೇ ಓವರ್ ಬೌಲ್ ಮಾಡಿದ ನಟರಾಜನ್ 2ನೇ ಎಸೆತದಲ್ಲಿ ಬೌಂಡರಿ ತಿಂದರೆ, ಆ ಬಳಿಕ ನಾಲ್ಕನೇ ಎಸೆತದಲ್ಲಿ ಮಾರ್ಷ್ ಅವರನ್ನು ಎಲ್​ಬಿ ಬಲೆಗೆ ಬೀಳಿಸಿದರು.

  • 24 Apr 2023 07:49 PM (IST)

    ವಾರ್ನರ್ ಬೌಂಡರಿ

    ಸುಂದರ್ ಬೌಲ್ ಮಾಡಿದ ನಾಲ್ಕನೇ ಓವರ್​ನಲ್ಲಿ ವಾರ್ನರ್ 1 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು.

  • 24 Apr 2023 07:41 PM (IST)

    ಲಯದಲ್ಲಿ ಮಾರ್ಷ್

    ಯಾನ್ಸೆನ್ ಎಸೆದ 2ನೇ ಓವರ್​ನಲ್ಲಿ ಮಾರ್ಷ್​ ಭರ್ಜರಿ 4 ಬೌಂಡರಿ ಹೊಡೆದರು. ವಾಸ್ತವವಾಗಿ ಮಾರ್ಷ್​ ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲೂ ಈ ರೀತಿಯ ಬ್ಯಾಟಿಂಗ್ ಮಾಡಿರಲಿಲ್ಲ.

  • 24 Apr 2023 07:33 PM (IST)

    ಸಾಲ್ಟ್ ಔಟ್

    ಭುವಿ ಎಸೆದ ಮೊದಲ ಓವರ್​ನ ಮೂರನೇ ಎಸೆತದಲ್ಲಿ ಆರಂಭಿಕ ಸಾಲ್ಟ್ ಕೀಪರ್​ ಕೈಗೆ ಕ್ಯಾಚಿತ್ತು ಔಟಾದರು.

  • 24 Apr 2023 07:14 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪ್ಪಲ್ ಪಟೇಲ್, ಎನ್ರಿಚ್ ನೋಕಿಯಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ.

  • 24 Apr 2023 07:13 PM (IST)

    ಸನ್‌ರೈಸರ್ಸ್ ಹೈದರಾಬಾದ್

    ಏಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್

  • 24 Apr 2023 07:01 PM (IST)

    ಟಾಸ್ ಗೆದ್ದ ಡೆಲ್ಲಿ

    ಟಾಸ್ ಗೆದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - Apr 24,2023 7:00 PM

Follow Us
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ