SRH vs RCB Highlights IPL 2023: ಕೊಹ್ಲಿ ಶತಕ, ಫಾಫ್ ಅಬ್ಬರ; ಆರ್ಸಿಬಿ ಪ್ಲೇ ಆಫ್ ಕನಸು ಜೀವಂತ
Sunrisers Hyderabad vs Royal Challengers Bangalore IPL 2023 Live Score in Kannada: ಆರ್ಸಿಬಿ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಳಿವು ಉಳಿವಿನ ಪಂದ್ಯದಲ್ಲಿ ಮುಖಾಮುಖಿ ಆಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2023 ರ ಪ್ಲೇಆಫ್ ತಲುಪುವ ಭರವಸೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯ ಆರನೇ ಶತಕ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ಅವರ ಅತ್ಯುತ್ತಮ ಅರ್ಧಶತಕ ಮತ್ತು ದಾಖಲೆಯ ಜೊತೆಯಾಟದ ಆಧಾರದ ಮೇಲೆ ಆರ್ಸಿಬಿ 8 ವಿಕೆಟ್‌ಗಳ ಜಯ ಸಾಧಿಸಿತು. ಈ ಆವೃತ್ತಿಯಲ್ಲಿ ಬೆಂಗಳೂರು ತಂಡಕ್ಕೆ ಇದು ಏಳನೇ ಜಯವಾಗಿದ್ದು, ಹೀಗಾಗಿ ಲೀಗ್ ಹಂತದ ಕೊನೆಯ ಪಂದ್ಯದವರೆಗೂ ಪಯಣ ಮುಂದುವರಿಯಲಿದೆ. ಕಳೆದ ಕೆಲವು ಪಂದ್ಯಗಳಲ್ಲಿ ರನ್ಗಾಗಿ ಪರದಾಡುತ್ತಿದ್ದ ಹಾಗೂ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಟೀಕೆ ಎದುರಿಸುತ್ತಿದ್ದ ಕೊಹ್ಲಿ ಈ ಬಾರಿ ಆರಂಭದಿಂದಲೂ ದಾಳಿ ಮುಂದುವರಿಸಿ ಔಟಾಗುವವರೆಗೂ ಅಬ್ಬರಿಸಿದರು. ಕೊಹ್ಲಿ ತಮ್ಮ ನಾಯಕ ಡುಪ್ಲೆಸಿಸ್ ಜೊತೆ 172 ರನ್ ಜೊತೆಯಾಟ ನಡೆಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಕ್ಲಾಸೆನ್ ಅವರ ಆಕ್ರಮಣಕಾರಿ ಚೊಚ್ಚಲ ಐಪಿಎಲ್ ಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿಯ ಆರಂಭಿಕರು ಆಕ್ರಮಣಕಾರಿ ಶೈಲಿಯಲ್ಲಿ ಈ ಗುರಿಯನ್ನು ಬೆನ್ನಟ್ಟಲು ಬಲವಾದ ಅಡಿಪಾಯ ಹಾಕಿದರು.
LIVE NEWS & UPDATES
-
8 ವಿಕೆಟ್ ಜಯ
20ನೇ ಓವರ್‌ನ 2ನೇ ಎಸೆತದಲ್ಲಿ ಡಬಲ್ ತೆಗೆದುಕೊಳ್ಳುವ ಮೂಲಕ ಬ್ರೆಸ್ವೆಲ್ ಆರ್ಸಿಬಿಯನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆರ್ಸಿಬಿ ತನ್ನ ಪ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ.
-
ಮ್ಯಾಕ್ಸಿ ಫೋರ್
19ನೇ ಓವರ್‌ನ ಕೊನೆಯ ಎಸೆತದಲ್ಲಿ ಮ್ಯಾಕ್ಸಿ ಸೂಪರ್ ಬೌಂಡರಿ ಬಾರಿಸಿದರು.
6 ಎಸೆತಗಳಲ್ಲಿ ಆರ್ಸಿಬಿ ಗೆಲುವಿಗೆ 3 ರನ್ ಬೇಕು
-
ಡು ಪ್ಲೆಸಿಸ್ ಔಟ್
ಟಿ ನಟರಾಜನ್ ಬೆಂಗಳೂರಿಗೆ ಮತ್ತೊಂದು ಹೊಡೆತ ನೀಡಿದ್ದಾರೆ. ಅವರು 19ನೇ ಓವರ್‌ನ ಎರಡನೇ ಎಸೆತದಲ್ಲಿ ಡುಪ್ಲೆಸಿಸ್ರನ್ನು ಔಟ್ ಮಾಡಿದರು. ಡುಪ್ಲೆಸ್ಸಿ ಲಾಂಗ್ ಶಾಟ್ ಹೊಡೆಯಲು ಪ್ರಯತ್ನಿಸಿದರು ಆದರೆ ಚೆಂಡು ಬ್ಯಾಟ್‌ಗೆ ಸರಿಯಾಗಿ ಬರಲಿಲ್ಲ ಮತ್ತು ರಾಹುಲ್ ತ್ರಿಪಾಠಿ ಕ್ಯಾಚ್ ಹಿಡಿಯುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ.
ಸಿಡಿಲಬ್ಬರದ ಶತಕ ಸಿಡಿಸಿದ ಕೊಹ್ಲಿ
ಭುವಿ ಬೌಲ್ ಮಾಡಿದ 18ನೇ ಓವರ್‌ನಲ್ಲಿ ಸಿಕ್ಸರ್ ಸಿಡಿಸಿದ ಕೊಹ್ಲಿ ಈ ಆವೃತ್ತಿಯ ಮೊದಲ ಶತಕ ಸಿಡಿಸಿದರು.
63 ಎಸೆತಗಳಲ್ಲಿ ವಿರಾಟ್ ತಮ್ಮ ಶತಕ ಪೂರೈಸಿ, ಆ ನಂತರದ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು.
ಕೊಹ್ಲಿ ಸಿಕ್ಸ್
17ನೇ ಓವರ್‌ನಲ್ಲಿ ಕೊಹ್ಲಿ ಅದ್ಭುತ ಸಿಕ್ಸರ್ ಬಾರಿಸಿದರು.
17 ಓವರ್‌ಗಳ ನಂತರ ಬೆಂಗಳೂರು ಸ್ಕೋರ್ – 164/0
ವಿರಾಟ್ ಕೊಹ್ಲಿ 92 ರನ್ ಮತ್ತು ಫಾಫ್ ಡು ಪ್ಲೆಸಿಸ್ 67 ರನ್ ಗಳಿಸಿ ಆಡುತ್ತಿದ್ದಾರೆ.
ಗೆಲುವಿಗೆ 18 ಎಸೆತಗಳಲ್ಲಿ 23 ರನ್ ಅಗತ್ಯವಿದೆ.
ಕೊಹ್ಲಿ 4 ಬೌಂಡರಿ
ಭುವಿ ಬೌಲ್ ಮಾಡಿದ 15ನೇ ಓವರ್‌ನಲ್ಲಿ 18 ರನ್ ಬಂತು.
ಈ ಓವರ್‌ನಲ್ಲಿ ಕೊಹ್ಲಿ 4 ಬೌಂಡರಿ ಹೊಡೆದರು
ಇದೇ ಓವರ್‌ನಲ್ಲಿ ಆರ್ಸಿಬಿ 150 ರನ್ ಕೂಡ ಪೂರ್ಣಗೊಳಿಸಿತು.
15 ಓವರ್ ಅಂತ್ಯಕ್ಕೆ 150/0
ಫಾಫ್ ಸಿಕ್ಸ್
14ನೇ ಓವರ್‌ನಲ್ಲಿ 16 ರನ್ ಬಂದವು
ಈ ಓವರ್‌ನಲ್ಲಿ ಕೊಹ್ಲಿ ಬೌಂಡರಿ ಹೊಡೆದರೆ, ಫಾಫ್ ಸಿಕ್ಸರ್ ಸಿಡಿಸಿದರು.
14 ಓವರ್ ಅಂತ್ಯಕ್ಕೆ 132/0
ಕೊಹ್ಲಿ ಸಿಕ್ಸ್
13ನೇ ಓವರ್‌ನ 3ನೇ ಎಸೆತವನ್ನು ಕೊಹ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ ಬಾರಿಸಿದರು.
13 ಓವರ್ ಅಂತ್ಯಕ್ಕೆ 117/0
ಫಾಫ್- ಕೊಹ್ಲಿ ಅರ್ಧಶತಕ
12ನೇ ಓವರ್‌ನಲ್ಲಿ ಫಾಫ್- ಕೊಹ್ಲಿ ಅರ್ಧಶತಕ ಪೂರೈಸಿದರು
ಓವರ್‌ನ ಮೊದಲ ಎಸೆತದಲ್ಲಿ ಡಬಲ್ ಬಾರಿಸಿ ಫಾಫ್ ಅರ್ಧಶತಕ ಪೂರೈಸಿದರೆ, ಕೊಹ್ಲಿ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿ ಅರ್ಧಶತಕ ಪೂರ್ಣಗೊಳಿಸಿದರು.
12 ಓವರ್ ಅಂತ್ಯಕ್ಕೆ 108/0
ಫಾಫ್ಗೆ ಜೀವದಾನ
ರೆಡ್ಡಿ ಬೌಲ್ ಮಾಡಿದ 9ನೇ ಓವರ್‌ನ 4ನೇ ಎಸೆತದಲ್ಲಿ ಫಾಫ್ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದರು.
ಆದರೆ ಆ ಎಸೆತ ಓವರ್‌ನ 2ನೇ ಬೌನ್ಸರ್ ಆಗಿದ್ದರಿಂದ ಅಂಪೈರ್ ನೋ ಬಾಲ್ ನೀಡಿದರು. ಇದರಿಂದ ಫಾಫ್ ಬದುಕುಳಿದರು.
ಆರ್ಸಿಬಿ 90/0
103 ಮೀ. ಸಿಕ್ಸ್
9ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಡೀಪ್ ಮಿಡ್ ವಿಕೆಟ್ನಲ್ಲಿ 103 ಮೀ. ಸಿಕ್ಸರ್ ಬಾರಿಸಿದರು.
8 ಓವರ್ ಅಂತ್ಯ
8ನೇ ಓವರ್‌ನಲ್ಲಿ 7 ರನ್ ಬಂದವು
ಓವರ್‌ನ 5ನೇ ಎಸೆತವನ್ನು ಫಾಫ್ ಬೌಂಡರಿ ಬಾರಿಸಿದರು.
ಆರ್ಸಿಬಿ 79/0
ಪವರ್ ಪ್ಲೇ ಅಂತ್ಯ
ಆರ್ಸಿಬಿ ಇನ್ನಿಂಗ್ಸ್ನ ಪವರ್ ಪ್ಲೇ ಮುಗಿದಿದೆ
ಈ 6 ಓವರ್ಗಳಲ್ಲಿ ಆರ್ಸಿಬಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 64 ರನ್ ಕಲೆಹಾಕಿದೆ.
ಫಾಫ್ 34* (17)
ಕೊಹ್ಲಿ 29* (19)
ಆರ್ಸಿಬಿ ಅರ್ಧಶತಕ
ಭುವಿ ಬೌಲ್ ಮಾಡಿದ 5ನೇ ಓವರ್‌ನಲ್ಲಿ 14 ರನ್ ಬಂದವು.
ಈ ಓವರ್‌ನಲ್ಲಿ ಫಾಫ್ 1 ಸಿಕ್ಸರ್, 1 ಬೌಂಡರಿ ಹೊಡೆದರು
ಇದೇ ಓವರ್‌ನಲ್ಲಿ ಆರ್ಸಿಬಿ ಅರ್ಧಶತಕ ಪೂರೈಸಿತು.
5 ಓವರ್ ಅಂತ್ಯಕ್ಕೆ 59/0
ಹ್ಯಾಟ್ರಿಕ್ ಫೋರ್
ತ್ಯಾಗಿ ಬೌಲ್ ಮಾಡಿದ 4ನೇ ಓವರ್‌ನಲ್ಲಿ 18 ರನ್ ಬಂದವು
ಈ ಓವರ್‌ನ ಮೊದಲ 3 ಎಸೆತಗಳನ್ನು ಫಾಫ್ ಬೌಂಡರಿಗಟ್ಟಿದರು.
5ನೇ ಎಸೆತದಲ್ಲಿ ಕೊಹ್ಲಿ ಬೌಂಡರಿ ಹೊಡೆದರು.
4 ಓವರ್ ಅಂತ್ಯಕ್ಕೆ 45/0
ಕೊಹ್ಲಿ ಬೌಂಡರಿ
2ನೇ ಓವರ್‌ನಲ್ಲಿ 11 ರನ್ ಬಂದವು
ಈ ಓವರ್‌ನಲ್ಲಿ ಕೊಹ್ಲಿ 2 ಬೌಂಡರಿ ಬಾರಿಸಿದರು
2 ಓವರ್ ಅಂತ್ಯಕ್ಕೆ 20/0
ಬೆಂಗಳೂರಿನ ಇನ್ನಿಂಗ್ಸ್ ಆರಂಭ
ಬೆಂಗಳೂರು ತಂಡ 187 ರನ್‌ಗಳ ಗುರಿ ಬೆನ್ನಟ್ಟಲು ಆರಂಭಿಸಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿ ಕ್ರೀಸ್‌ನಲ್ಲಿದ್ದಾರೆ. ಭುವನೇಶ್ವರ್ ಅವರ ಮೊದಲ ಎರಡು ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಕೊಹ್ಲಿ ಬಲಿಷ್ಠ ಆರಂಭ ನೀಡಿದ್ದಾರೆ.
187 ರನ್ ಟಾರ್ಗೆಟ್
ಕ್ಲಾಸೆನ್ ಅವರ ಅಬ್ಬರದ ಶತಕ ನೆರವಿನಿಂದಾಗಿ ಹೈದರಾಬಾದ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿದೆ.
ಚೊಚ್ಚಲ ಐಪಿಎಲ್ ಶತಕ ಸಿಡಿಸಿದ ಕ್ಲಾಸೆನ್, ಔಟ್
19ನೇ ಓವರ್‌ನ 3ನೇ ಎಸೆತವನ್ನು ಸಿಕ್ಸರ್ಗಟ್ಟಿದ ಕ್ಲಾಸೆನ್ ಐಪಿಎಲ್ನಲ್ಲಿ ಚೊಚ್ಚಲ ಶತಕ ಸಿಡಿಸಿದರು.
ಕೇವಲ 49 ಎಸೆತಗಳಲ್ಲಿ ಈ ಶತಕ ಬಂತು.
ಆದರೆ ಇದೇ ಓವರ್‌ನ 5ನೇ ಎಸೆತದಲ್ಲಿ ಕ್ಲಾಸೆನ್ ಔಟಾದರು.
19 ಓವರ್ ಅಂತ್ಯಕ್ಕೆ 182/4
ಬ್ಯಾಕ್ ಟು ಬ್ಯಾಕ್ ಸಿಕ್ಸ್
17ನೇ ಓವರ್‌ನ ಮೊದಲ ಎರಡು ಎಸೆತಗಳನ್ನು ಕ್ಲಾಸೆನ್ ಸಿಕ್ಸರ್ಗಟ್ಟಿದರು
ಇದೇ ಓವರ್‌ನಲ್ಲಿ ಹೈದರಾಬಾದ್ 150 ರನ್ ಕೂಡ ಪೂರ್ಣಗೊಳಿಸಿತು.
17 ಓವರ್ ಅಂತ್ಯಕ್ಕೆ 160/3
ಕರಣ್ ಮತ್ತೆ ದುಬಾರಿ
15ನೇ ಓವರ್ ಬೌಲ್ ಮಾಡಿದ ಕರಣ್ 20 ರನ್ ನೀಡಿದರು
ಈ ಓವರ್‌ನಲ್ಲಿ ಬ್ರೂಕ್ 1 ಬೌಂಡರಿ 1 ಸಿಕ್ಸರ್ ಬಾರಿಸಿದರೆ, ಕ್ಲಾಸೆನ್ ಕೂಡ ಸಿಕ್ಸರ್ ಬಾರಿಸಿದರು.
15 ಓವರ್ ಅಂತ್ಯಕ್ಕೆ 129/3
ಮಾರ್ಕ್ರಾಮ್ ಔಟ್
ಹೈದರಾಬಾದ್ 3ನೇ ವಿಕೆಟ್ ಪತನವಾಗಿದೆ
13ನೇ ಓವರ್‌ನ 5ನೇ ಎಸೆತದಲ್ಲಿ ಮಾರ್ಕ್ರಾಮ್ ಬೌಲ್ಡ್ ಆದರು
ಶಹಬಾಜ್ಗೆ ಈ ವಿಕೆಟ್ ಉರುಳಿಸಿದರು.
ಹೈದರಾಬಾದ್ 104/3
ಕ್ಲಾಸೆನ್ ಅರ್ಧಶತಕ
ಕ್ಲಾಸೆನ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ.
11ನೇ ಓವರ್‌ನಲ್ಲಿ 1 ಸಿಕ್ಸರ್ ಬಾರಿಸಿದ ಕ್ಲಾಸೆನ್ ಬಳಿಕ ಸಿಂಗಲ್ ತೆಗೆದು ಅರ್ಧಶತಕ ಪೂರೈಸಿದರು
11 ಓವರ್ ಅಂತ್ಯಕ್ಕೆ 94/2
ಕ್ಲಾಸೆನ್ ಸಿಕ್ಸ್
9ನೇ ಓವರ್‌ನ 2ನೇ ಎಸೆತವನ್ನು ಕ್ಲಾಸೆನ್ ಡೀಪ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು.
ಈ ಓವರ್‌ನಲ್ಲಿ 11 ರನ್ ಬಂದವು.
9ನೇ ಓವರ್ ಅಂತ್ಯಕ್ಕೆ 76/2
ಕ್ಲಾಸೆನ್ ಅಬ್ಬರ
ಹೈದರಾಬಾದ್ ಇನ್ನಿಂಗ್ಸ್ನ 8 ಓವರ್ ಮುಗಿದಿದೆ.
8 ಓವರ್ ಅಂತ್ಯಕ್ಕೆ ಹೈದರಾಬಾದ್ 63/2
ಈ ಓವರ್‌ನಲ್ಲಿ ಕ್ಲಾಸೆನ್ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಬಾರಿಸಿದರು.
ಪವರ್ ಪ್ಲೇ ಅಂತ್ಯ
6ನೇ ಓವರ್‌ನಲ್ಲಿ ಶಹಬಾಜ್ ದುಬಾರಿಯಾದರು.
ಈ ಓವರ್‌ನಲ್ಲಿ ಕ್ಲಾಸೆನ್ 3 ಬೌಂಡರಿ ಹೊಡೆದರು.
6 ಓವರ್ ಅಂತ್ಯಕ್ಕೆ 49/2
ಎರಡನೇ ವಿಕೆಟ್ ಪತನ
ಮೈಕಲ್ ಬ್ರೇಸ್‌ವೆಲ್ ತಮ್ಮ ಮೊದಲ ಓವರ್‌ನಲ್ಲಿ ಎರಡನೇ ವಿಕೆಟ್ ಪಡೆದರು. ರಾಹುಲ್ ತ್ರಿಪಾಠಿ (15) ಶಾರ್ಟ್ ಫೈನ್ ಲೆಗ್ನಲ್ಲಿ ಹರ್ಷಲ್ಗೆ ಸುಲಭ ಕ್ಯಾಚ್ ನೀಡಿದರು.
ಅಭಿಷೇಕ್ ಔಟ್
ಹೈದರಾಬಾದ್ ಮೊದಲ ವಿಕೆಟ್ ಪತನ
ಬ್ರೆಸ್ವೆಲ್ ಬೌಲ್ ಮಾಡಿದ 5ನೇ ಓವರ್‌ನ ಮೊದಲ ಎಸೆತದಲ್ಲಿ ಅಭಿಷೇಕ್ ಕ್ಯಾಚಿತ್ತು ಔಟಾದರು.
ಪರ್ನೆಲ್ ದುಬಾರಿ
ಪರ್ನೆಲ್ ಬೌಲ್ ಮಾಡಿದ 4ನೇ ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟರು
ಈ ಓವರ್‌ನಲ್ಲಿ ತ್ರಿಪಾಠಿ 1 ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದರೆ, 5ನೇ ಎಸೆತದಲ್ಲಿ ಅಭಿಷೇಕ್ ಬೌಂಡರಿ ಹೊಡೆದರು.
4 ಓವರ್ ಅಂತ್ಯಕ್ಕೆ 27/0
ಅಭಿಷೇಕ್ ಫೋರ್
ಸಿರಾಜ್ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತವನ್ನು ಅಭಿಷೇಕ್ ಕವರ್ಸ್ ದಿಕ್ಕಿನಲ್ಲಿ ಬೌಂಡರಿಗಟ್ಟಿದರು.
ತ್ರಿಪಾಠಿ ಫೋರ್
ಪರ್ನೆಲ್ ಬೌಲ್ ಮಾಡಿದ 2ನೇ ಓವರ್‌ನ ಕೊನೆಯ ಎಸೆತವನ್ನು ತ್ರಿಪಾಠಿ ಕವರ್ಸ್ನಲ್ಲಿ ಬೌಂಡರಿಗಟ್ಟಿದರು.
ಹೈದರಾಬಾದ್ 7/0
ಹೈದರಾಬಾದ್ ಬ್ಯಾಟಿಂಗ್ ಆರಂಭ
ಹೈದರಾಬಾದ್ ಬ್ಯಾಟಿಂಗ್ ಆರಂಭವಾಗಿದ್ದು, ಅಭಿಷೇಕ್ ಹಾಗೂ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿರಾಜ್ ಎಸೆದ ಮೊದಲ ಓವರ್‌ನಲ್ಲಿ 2 ರನ್ ಬಂದವು.
ಹೈದರಾಬಾದ್ ತಂಡ
ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಕ್ ಕ್ಲಾಸೆನ್(ವಿಕೆಟ್), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಕಾರ್ತಿಕ್ ತ್ಯಾಗಿ, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ
ಆರ್ಸಿಬಿ ತಂಡ
ವಿರಾಟ್ ಕೊಹ್ಲಿ , ಫಾಫ್ ಡು ಪ್ಲೆಸಿಸ್ (ನಾಯಕ) , ಅನೂಜ್ ರಾವತ್ (ವಿಕೆಟ್ ಕೀಪರ್) , ಗ್ಲೆನ್ ಮ್ಯಾಕ್ಸ್ವೆಲ್ , ಮಹಿಪಾಲ್ ಲೊಮ್ರೋರ್ , ದಿನೇಶ್ ಕಾರ್ತಿಕ್, ಮೈಕಲ್ ಬ್ರೇಸ್‌ವೆಲ್ , ವೇಯ್ನ್ ಪಾರ್ನೆಲ್ , ಕರಣ್ ಶರ್ಮಾ , ಹರ್ಷಲ್ ಪಟೇಲ್ , ಮೊಹಮ್ಮದ್ ಸಿರಾಜ್.
ಟಾಸ್ ಗೆದ್ದ ಆರ್ಸಿಬಿ
ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
12 ಪಾಯಿಂಟ್
ಆಡಿರೋ 12 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ 12 ಪಾಯಿಂಟ್ಗಳನ್ನು ಸಂಪಾದಿಸಿದೆ.
Published On - May 18,2023 6:41 PM