ಕೆಲಸ ಮಾಡದೇ ಸಂಬಳ: ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಮೊಹಮ್ಮದ್ ಶಮಿ ಕುಟುಂಬಸ್ಥರು..!

|

Updated on: Apr 03, 2025 | 11:44 AM

Mohammed Shami: ಕಳೆದ ಸೀಸನ್​ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಮೊಹಮ್ಮದ್ ಶಮಿ ಈ ಬಾರಿ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಪ್ಲೇಯಿಂಗ್ ಇಲೆವೆನ್​ನ ಭಾಗವಾಗಿರುವ ಶಮಿ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಇದರ ನಡುವೆ ಅವರ ಕುಟುಂಬಸ್ಥರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕೆಲಸ ಮಾಡದೇ ಸಂಬಳ: ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದ ಮೊಹಮ್ಮದ್ ಶಮಿ ಕುಟುಂಬಸ್ಥರು..!
Mohammed Shami
Follow us on

ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಇಂಡಿಯನ್ ಪ್ರೀಮಿಯರ್​​ ಲೀಗ್​ನಲ್ಲಿ (IPL 2025) ಬ್ಯುಸಿಯಾಗಿದ್ದಾರೆ. ಶಮಿ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುತ್ತಿದ್ದರೆ, ಮತ್ತೊಂದೆಡೆ ಅವರ ಸಹೋದರಿ ಮತ್ತು ಭಾವ ವಂಚನೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MNREGA) ಯೋಜನೆಯಡಿ ಶಮಿ ಅವರ ಸಹೋದರಿ ಸೇರಿದಂತೆ 18 ಮಂದಿ ಅಕ್ರಮವಾಗಿ ಹಣ ಪಡೆದ ಆರೋಪ ಹೊರಿಸಲಾಗಿದೆ.

ಶಬಿನಾ ವಿರುದ್ಧ ಗಂಭೀರ ಆರೋಪ:

ಅಧಿಕೃತ ತನಿಖೆಯ ಪ್ರಕಾರ, ಮೊಹಮ್ಮದ್ ಶಮಿ ಅವರ ಕುಟುಂಬ ಸದಸ್ಯರು ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕರಾಗಿ ನೋಂದಾಯಿಸಲ್ಪಟ್ಟಿದ್ದು, ಅಕ್ರಮವಾಗಿ ಸರ್ಕಾರಿ ವೇತನವನ್ನು ಪಡೆದಿದ್ದಾರೆ. ಮೊಹಮ್ಮದ್ ಶಮಿ ಅವರ ಅಕ್ಕ ಶಬಿನಾ, ಅವರ ಪತಿ ಘಜ್ನವಿ, ಶಬಿನಾ ಅವರ ಮೂವರು ಸೋದರಳಿಯರಾದ ಆಮಿರ್ ಸುಹೈಲ್, ನಸೀರುದ್ದೀನ್ ಮತ್ತು ಶೇಖು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

MNREGA ನಲ್ಲಿ ಹಣ ವಿತರಣೆಯಲ್ಲಿ ವಂಚನೆ ನಡೆದಿರುವುದು ಆರಂಭಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲಾ ಜಿಲ್ಲಾಧಿಕಾರಿ ನಿಧಿ ಗುಪ್ತಾ ವತ್ಸ್ ತಿಳಿಸಿದ್ದಾರೆ. ಇದರಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಕಾರ್ಮಿಕರನ್ನು ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ. ಇದರೊಂದಿಗೆ, ಪಂಚಾಯತ್ ರಾಜ್ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಕೆಲಸ ಮಾಡದೇ ವೇತನ ಭತ್ಯೆ:

ಜೋಯಾ ಬ್ಲಾಕ್‌ನಲ್ಲಿರುವ ಪಲೌಲಾ ಗ್ರಾಮದ ಮುಖ್ಯಸ್ಥೆಯಾಗಿರುವ ಗುಳೆ ಆಯೇಷಾ ಮೊಹಮ್ಮದ್ ಶಮಿ ಅವರ ಸಹೋದರಿಯ ಅತ್ತೆ. ಈ ಇಡೀ ಹಗರಣದ ಮಾಸ್ಟರ್ ಮೈಂಡ್ ಕೂಡ ಅವರೇ. ತಮ್ಮ ಕುಟುಂಬಸ್ಥರ ಹೆಸರುಗಳನ್ನು ಬಳಸಿ MNREGA ಉದ್ಯೋಗ ಕಾರ್ಡ್‌ಗಳನ್ನು ಪಡೆದುಕೊಂಡಿದ್ದರು. ಅಲ್ಲದೆ ಕಳೆದ ಮೂರು ವರ್ಷಗಳಿಂದ ವೇತನ ಭತ್ಯೆ ಪಡೆದುಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: IPL 2025: ಹೀನಾಯ ಅತ್ಯಂತ ಹೀನಾಯ ದಾಖಲೆ ಬರೆದ RCB

ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ಗ್ರಾಮದ ಮುಖ್ಯಸ್ಥರ ಖಾತೆಯನ್ನು ಸೀಲ್ ಮಾಡಿ ಹಣವನ್ನು ವಸೂಲಿ ಮಾಡಲು ಸೂಚಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಗ್ರಾಮದ ಮುಖ್ಯಸ್ಥರಲ್ಲದೆ, ಗ್ರಾಮ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ಕಾರ್ಯಕ್ರಮ ಅಧಿಕಾರಿ ವಿರುದ್ಧ ಕೂಡ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

 

Published On - 11:33 am, Thu, 3 April 25