Ishan Kishan: ನನ್ನಿಂದ ಆಗ್ತಿಲ್ಲ…ಕ್ಯಾಪ್ಟನ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಇಶಾನ್ ಕಿಶನ್!
Virat Kohli-Ishan Kishan: ಈ ಬಾರಿಯ ಐಪಿಎಲ್ನಲ್ಲಿ ಆಡಿರುವ ಎಂಟು ಇನ್ನಿಂಗ್ಸ್ ಗಳಲ್ಲಿ ಕಲೆಹಾಕಿದ್ದು ಕೇವಲ 107 ರನ್ ಮಾತ್ರ. ಹೀಗಾಗಿಯೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಗ್ಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ದ್ವಿತಿಯಾರ್ಧ ರಂಗೇರುತ್ತಿದೆ. ಯುಎಇ (UAE) ಅಂಗಳದಲ್ಲಿ ಕೆಲ ಹೊಸ ಪ್ರತಿಭೆಗಳು ಕಮಾಲ್ ಮಾಡುತ್ತಿದ್ದರೆ, ಹಳೆಯ ಪ್ರತಿಭೆಗಳು ತುಸು ಮಂಕಾಗಿರುವುದು ಕಂಡು ಬರುತ್ತಿವೆ. ಅದರಲ್ಲೂ ಟಿ20 ವಿಶ್ವಕಪ್ (T20 World Cup 2021) ಭಾರತ ತಂಡದಲ್ಲಿ (Team India) ಸ್ಥಾನ ಪಡೆದಿರುವ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದಿರುವುದು ಚಿಂತೆಗೆ ಕಾರಣವಾಗಿದೆ. ಏಕೆಂದರೆ ಐಪಿಎಲ್ (IPL) ಬೆನ್ನಲ್ಲೇ ಟಿ20 ವಿಶ್ವಕಪ್ ಸಹ ಶುರುವಾಗಲಿದ್ದು, ಹೀಗಾಗಿ ಆಟಗಾರರ ಕಳಪೆ ಫಾರ್ಮ್ ಟೀಮ್ ಇಂಡಿಯಾಗೆ (Indain Team) ದೊಡ್ಡ ಸವಾಲಾಗುವ ಸಾಧ್ಯತೆಯಿದೆ. ಇತ್ತ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಭರವಸೆಯ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ (Ishan Kishan) ಅವರೂ ಸಹ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಅದರಲ್ಲೂ ದುಬೈನಲ್ಲಿ ನಡೆದ ಐಪಿಎಲ್ನ 39ನೇ ಪಂದ್ಯದಲ್ಲಿ ಆರ್ಸಿಬಿ (RCB) ವಿರುದ್ದ ಇಶಾನ್ ಕಿಶನ್ಗೆ ರನ್ಗಾಗಿ ಪರದಾಡಿದ್ದರು. ಅಷ್ಟೇ ಅಲ್ಲದೆ ಚಹಲ್ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿದ್ದರು.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಆಡಿರುವ ಎಂಟು ಇನ್ನಿಂಗ್ಸ್ ಗಳಲ್ಲಿ ಕಲೆಹಾಕಿದ್ದು ಕೇವಲ 107 ರನ್ ಮಾತ್ರ. ಹೀಗಾಗಿಯೇ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕುಗ್ಗಿದ್ದಾರೆ. ಅದರಲ್ಲೂ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದರೂ ಫಾರ್ಮ್ಗೆ ಮರಳಲು ಸಾಧ್ಯವಾಗದಿರುವ ಬಗ್ಗೆ ಚಿಂತಿತರಾಗಿದ್ದಾರೆ.
ಈ ಬಗ್ಗೆ ಖುದ್ದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಬಳಿ ಇಶಾನ್ ಕಿಶನ್ ಅವಲತ್ತುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು (Rcb vs Mi) ನಡುವಣ ಪಂದ್ಯದ ಬಳಿಕ ಇಶಾನ್ ಕಿಶನ್ ಆರ್ಸಿಬಿ ನಾಯಕನನ್ನು ಭೇಟಿಯಾಗಿದ್ದಾರೆ. ಈ ವೇಳೆ ಕಣ್ಣೀರಿಡುತ್ತಾ ತಮ್ಮ ಫಾರ್ಮ್ ಬಗ್ಗೆ ಚಿಂತಿತರಾಗಿರುವ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಯುವ ಕ್ರಿಕೆಟಿಗನಿಗೆ ಕೆಲ ಸಲಹೆಗಳನ್ನು ನೀಡಿ ವಿರಾಟ್ ಕೊಹ್ಲಿ ಸಮಾಧಾನಪಡಿಸಿದರು. ಅಲ್ಲದೆ ಕಿಶನ್ ಜೊತೆ ಮೈದಾನದಲ್ಲಿ ಹೆಜ್ಜೆಯಾಕುತ್ತಾ ಆತನಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಕೊಹ್ಲಿ ಮಾಡಿದ್ದಾರೆ.
ಇಶಾನ್ ಕಿಶನ್ ಅವರನ್ನು ಸಮಾಧಾನ ಮಾಡುತ್ತಾ ಹೆಗಲ ಮೇಲೆ ಕೈಹಾಕಿ ಹೆಜ್ಜೆಹಾಕುತ್ತಿರುವ ವಿರಾಟ್ ಕೊಹ್ಲಿಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೆ ಆರ್ಸಿಬಿ ನಾಯಕ ಕ್ರೀಡಾಸ್ಪೂರ್ತಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಐಪಿಎಲ್ ಟೂರ್ನಿಯ ಹೊರತಾಗಿಯೂ ತನ್ನ ತಂಡದ ಆಟಗಾರನ ಬಗ್ಗೆ ವಿರಾಟ್ ಕೊಹ್ಲಿ ತೋರುವ ಕಾಳಜಿ ಬಗ್ಗೆ ನೆಟ್ಟಿಗರು ಬಹುಪರಾಕ್ ಎಂದಿದ್ದಾರೆ.
Audio of what Virat Kohli said to Ishan Kishan on his bad phase. #IPL pic.twitter.com/FhHZ842S19
— baqi (@baqicricketer) September 27, 2021
ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು