SL vs BAN: ಏಷ್ಯಾಕಪ್​ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಶ್ರೀಲಂಕಾ-ಬಾಂಗ್ಲಾದೇಶಕ್ಕೆ ಗೆದ್ದರಷ್ಟೇ ಉಳಿಗಾಲ

Asia Cup 2022: ಏಷ್ಯಾಕಪ್ 2022 ರಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ (Sri Lanka vs Bangladesh) ತಂಡ ಗುರುವಾರದ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ.

SL vs BAN: ಏಷ್ಯಾಕಪ್​ನಲ್ಲಿಂದು ಹೈವೋಲ್ಟೇಜ್ ಪಂದ್ಯ: ಶ್ರೀಲಂಕಾ-ಬಾಂಗ್ಲಾದೇಶಕ್ಕೆ ಗೆದ್ದರಷ್ಟೇ ಉಳಿಗಾಲ
SL vs BAN Asia Cup 2022
Follow us
TV9 Web
| Updated By: Vinay Bhat

Updated on:Sep 01, 2022 | 11:02 AM

ಏಷ್ಯಾಕಪ್ 2022 ರಲ್ಲಿಂದು (Asia Cup 2022) ಹೈವೊಲ್ಟೇಜ್ ಪಂದ್ಯ ನಡೆಯಲಿದೆ. ಆಡಿದ ಮೊದಲ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ (Sri Lanka vs Bangladesh) ತಂಡ ಗುರುವಾರದ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಇಲ್ಲಿ ಗೆಲ್ಲುವ ತಂಡಕ್ಕೆ ಸೂಪರ್ 4 (Super 4) ಹಂತಕ್ಕೇರುವ ಅವಕಾಶ ಇದೆ. ಸೋತ ತಂಡ ಟೂರ್ನಿಯಿಂದ ನೇರವಾಗಿ ಹೊರಬೀಳಲಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಐದು ಬಾರಿ ಟ್ರೋಫಿ ಗೆದ್ದು ಎರಡನೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಶ್ರೀಲಂಕಾದಲ್ಲಿ ಈಗ ಮೊದಲಿನ ಖದರ್ ಇಲ್ಲ ಎಂಬುದು ಸರಿಯಾಗಿ ಗೋಚರಿಸುತ್ತಿದೆ. ಶ್ರೀಲಂಕಾ ತಂಡ ಉದ್ಘಾಟನಾ ಪಂದ್ಯದಲ್ಲೇ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿತ್ತು. ಕೇವಲ 105 ರನ್​ಗೆ ಆಲೌಟ್ ಆಗಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತ್ತು. ಭನುಕಾ ರಾಜಪಕ್ಷ ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಆಡಲಿಲ್ಲ. ಬೌಲಿಂಗ್​ನಲ್ಲಿ ಕೂಡ ಸಂಪೂರ್ಣ ವೈಫಲ್ಯ ಅನುಭವಿಸಿತ್ತು.

ಆಲ್‌ರೌಂಡರ್‌ ದಸುನ್‌ ಶನಕ ಲಂಕಾ ತಂಡವನ್ನು ಮುನ್ನಡೆಸುತ್ತಿದ್ದು, ಸ್ವತಃ ಇವರೇ ತಂಡಕ್ಕೆ ನೆರವಾಗುತ್ತಿಲ್ಲ. ಪ್ರಮುಖ ವೇಗಿ ದುಷ್ಮಾಂತ ಚಮೀರ ಅಲಭ್ಯತೆ ಎದ್ದು ಕಾಣುತ್ತಿದೆ. ಪತುಮ್‌ ನಿಸಂಕ, ವಾನಿಂದು ಹಸರಂಗ, ಮಹೀಶ ತೀಕ್ಷಣ ರಂತಹ ಸ್ಟಾರ್‌ ಆಟಗಾರರು ಇಂದು ಮಿಂಚಲೇ ಬೇಕಾದ ಒತ್ತಡದಲ್ಲಿದ್ದಾರೆ. ಪ್ಲೇಯಿಂಗ್ ಇಲೆವೆನ್​ನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ
Image
T20 World Cup 2022: ಟಿ20 ವಿಶ್ವಕಪ್​ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ..!
Image
Virat Kohli: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿಗೆ ಮರೆಯಲಾಗದ ಉಡುಗೊರೆ ನೀಡಿದ ಹಾಂಗ್ ಕಾಂಗ್ ಕ್ರಿಕೆಟ್
Image
Suryakumar Yadav: ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್​ಗೆ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Image
IND vs HK: ಒಂದೇ ಓವರ್​ನಲ್ಲಿ 6, 6, 6, 0, 6: ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್​ಗೆ ದಾಖಲೆ ಪುಡಿಪುಡಿ

ಇತ್ತ ಬಾಂಗ್ಲಾದೇಶ ತಂಡದಲ್ಲಿ ಅನುಭವಿ ಆಟಗಾರರಿದ್ದರೂ ಯಶಸ್ಸು ಸಿಗುತ್ತಿಲ್ಲ. ಈ ತಂಡ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧವೇ ಸೋತಿತ್ತು. ಅಫ್ಘಾನ್ ಸ್ಪಿನ್ನರ್​ಗಳಾದ ರಶೀದ್ ಹಾಗೂ ಮಜೀಬ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಬಾಂಗ್ಲಾ 127 ರನ್​ ಅಷ್ಟೇ ಗಳಿಸಿತ್ತು. ಬೌಲಿಂಗ್​ನಲ್ಲೂ ಬಾಂಗ್ಲಾ ಕಮಾಲ್ ಮಾಡಲಿಲ್ಲ. ಮುಸ್ತಫಿಜುರ್ ರೆಹಮಾನ್, ನಸುಮ್ ಅಹ್ಮದ್, ಮೊಹಮ್ಮದ್ ಸೈಫುದ್ದಿನ್, ಮಹೇದಿ ಹಸನ್ ಬಲ ತಂಡಕ್ಕೆ ಬೇಕಿದೆ. ನಾಯಕ ಶಕಿಬ್, ಮುಶ್ಫಿಕರ್ ರಹೀಮ್ , ಮೊಹಮ್ಮದ್ ನೈಮ್ ಬ್ಯಾಟಿಂಗ್​ನಲ್ಲಿ ಕೊಡುಗೆ ನೀಡಬೇಕಿದೆ. ಇಂದಿನ ಪಂದ್ಯಕ್ಕೆ ಬಾಂಗ್ಲಾ ತಂಡದ ಆಡುವ ಬಳಗದಲ್ಲೂ ದೊಡ್ಡ ಬದಲಾವಣೆ ಆಗುವುದ ಖಚಿತ.

ಒಟ್ಟಾರೆ ಇಂದಿನ ಕದನ ಉಭಯ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ಇದು ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಹಾಟ್‌ ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:

ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಅನಾಮುಲ್ ಹಕ್, ಶಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಸಬ್ಬೀರ್ ರೆಹಮಾನ್, ಮಹೇದಿ ಹಸನ್, ಮೊಹಮ್ಮದ್ ಸೈಫುದ್ದೀನ್, ನಸುಮ್ ಅಹ್ಮದ್, ಮುಸ್ತಫಿಜುರ್ ರೆಹಮಾನ್.

ಶ್ರೀಲಂಕಾ: ದನುಷ್ಕ ಗುಣತಿಲಕ, ಪತುಮ್‌ ನಿಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್‌ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.

Published On - 11:02 am, Thu, 1 September 22