Virat Kohli: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿಗೆ ಮರೆಯಲಾಗದ ಉಡುಗೊರೆ ನೀಡಿದ ಹಾಂಗ್ ಕಾಂಗ್ ಕ್ರಿಕೆಟ್

India vs Hong Kong, Asia Cup: ಹಾಂಗ್ ಕಾಂಗ್ ವಿರುದ್ಧ ಅರ್ಧಶತಕ ಸಿಡಿಸಿ ವಿರಾಟ್ ಕೊಹ್ಲಿ ಫಾರ್ಮ್​ಗೆ ಮರಳಿದ್ದಾರೆ. ಕೊಹ್ಲಿ ಖುಷಿಯನ್ನು ಇಮ್ಮಡಿಗೊಳಿಸಿದ್ದು ಹಾಂಗ್ ಕಾಂಗ್ ಆಟಗಾರರು. ಸೋತಿದ್ದರೂ ಪಂದ್ಯ ಮುಗಿದ ಬಳಿಕ ಕೊಹ್ಲಿಗೆ ಹಾಂಗ್ ಕಾಂಗ್ ಕ್ರಿಕೆಟ್ ವಿಶೇಷ ಗಿಫ್ಟ್ ನೀಡಿದೆ.

Virat Kohli: ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿಗೆ ಮರೆಯಲಾಗದ ಉಡುಗೊರೆ ನೀಡಿದ ಹಾಂಗ್ ಕಾಂಗ್ ಕ್ರಿಕೆಟ್
Virat Kohli IND vs HK
Follow us
TV9 Web
| Updated By: Vinay Bhat

Updated on:Sep 01, 2022 | 10:18 AM

ಭಾರತ ಕ್ರಿಕೆಟ್ ತಂಡದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಏಷ್ಯಾಕಪ್ 2022 ಟೂರ್ನಿಗೆ ಸತತವಾಗಿ ಕಠಿಣ ಅಭ್ಯಾಸ ನಡೆಸಿದ್ದು ಉಪಯೋಗಕ್ಕೆ ಬಂದಿದೆ. ಕೊಹ್ಲಿ ಕೊನೆಗೂ ಫಾರ್ಮ್​ಗೆ ಮರಳಿದ್ದಾರೆ. ಹಾಂಗ್ ಕಾಂಗ್ (Hong Kong) ವಿರುದ್ಧ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಅಮೋಘ ಹೊಡೆತಗಳ ಮೂಲಕ ಎಲ್ಲರ ಗಮನ ಸೆಳೆದ ಕೊಹ್ಲಿ 44 ಎಸೆಗಳಲ್ಲಿ 1 ಫೋರ್, 3 ಸಿಕ್ಸರ್ ಸಿಡಿಸಿ ಅಜೇಯ 59 ರನ್ ಚಚ್ಚಿದರು. ವಿರಾಟ್ ಹಾಗೂ ಸೂರ್ಯಕುಮಾರ್ (Suryakumar Yadav)​ ಅವರ ಅತ್ಯುತ್ತಮ ಜೊತೆಯಾಟದ ನೆರವಿನಿಂದ ಭಾರತ 20 ಓವರ್​ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು. ಕೊಹ್ಲಿ ಅರ್ಧಶತಕ ಬಾರಿಸಿ ಫಾರ್ಮ್​ಗೆ ಮರಳುತ್ತಿದ್ದಂತೆ ಟ್ವಿಟರ್​ನಲ್ಲಿ ಸಖತ್ ಟ್ರೆಂಡ್ ಆಗಿದ್ದಾರೆ. ಇವರ ಒಂದೊಂದು ಹೊಡೆತ ಕಂಡು ಅಭಿಮಾನಿಗಳಂತು ಖುಷಿಯಾಗಿದ್ದಾರೆ.

ಇತ್ತ ವಿರಾಟ್ ಕೊಹ್ಲಿ ಖುಷಿಯನ್ನು ಇಮ್ಮಡಿಗೊಳಿಸಿದ್ದು ಎಂದರೆ ಅದು ಹಾಂಗ್ ಕಾಂಗ್ ಆಟಗಾರರು. ಸೋತಿದ್ದರೂ ಪಂದ್ಯ ಮುಗಿದ ಬಳಿಕ ಕೊಹ್ಲಿಗೆ ಹಾಂಗ್ ಕಾಂಗ್ ಕ್ರಿಕೆಟ್ ವಿಶೇಷ ಕೊಡುಗೆಯನ್ನು ನೀಡಿದೆ. ಒಂದು ಸಂದೇಶದೊಂದಿಗೆ ಕೊಹ್ಲಿ ಅವರಿಗೆ ಹಾಂಗ್ ಕಾಂಗ್ ಕ್ರಿಕೆಟ್ ತಮ್ಮ ಜೆರ್ಸಿಯನ್ನು ಉಡುಗೊರೆಯಗಿ ಕೊಟ್ಟಿದೆ. ಈ ಬಗ್ಗೆ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ. ಈ ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.

ಐರ್ಲೆಂಡ್ ಕ್ರಿಕೆಟ್ ತನ್ನ ಜೆರ್ಸಿಯಲ್ಲಿ, ”ಒಂದು ಪೀಳಿಗೆಗೆ ಸ್ಫೂರ್ತಿ ನೀಡಿದ್ದಕ್ಕಾಗಿ ಧನ್ಯವಾದಗಳು. ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ. ಮುಂದೆ ಅನೇಕ ಅದ್ಭುತವಾದ ದಿನಗಳಿವೆ. ಪ್ರೀತಿ ಸದಾ ಇರಲಿ,” ಎಂದು ಬರೆದ ಕೊಹ್ಲಿಗೆ ಉಡುಗೊರೆ ನೀಡಿದ್ದಾರೆ. ಇದರ ಫೋಟೋ ತೆಗೆದು ಕೊಹ್ಲಿ ಇನ್​ಸ್ಟಾದಲ್ಲಿ ಸ್ಟೇಟಸ್ ಹಾಕಿದ್ದು, ”ಧನ್ಯವಾದಗಳು ಹಾಂಗ್ ಕಾಂಗ್ ಕ್ರಿಕೆಟ್. ನೀವು ನೀಡಿದ ಉಡುಗೊರೆ ನನಗೆ ತುಂಬಾ ಖುಷಿಯಾಗಿದೆ,” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
Suryakumar Yadav: ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್​ಗೆ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
Image
IND vs HK: ಒಂದೇ ಓವರ್​ನಲ್ಲಿ 6, 6, 6, 0, 6: ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್​ಗೆ ದಾಖಲೆ ಪುಡಿಪುಡಿ
Image
Asia Cup 2022: 6 ತಿಂಗಳು, 11 ಇನ್ನಿಂಗ್ಸ್​ ಬಳಿಕ ಅರ್ಧಶತಕ ಸಿಡಿಸಿ ಮಿಂಚಿದ ಕಿಂಗ್ ಕೊಹ್ಲಿ..!
Image
Asia Cup 2022: 2 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್..!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಆರಂಭ ಪಡೆದುಕೊಳ್ಳುವ ಜೊತೆಗೆ ವಿಕೆಟ್ ಕೂಡ ಕಳೆದುಕೊಂಡಿತು. ರೋಹಿತ್‌ ಶರ್ಮಾ 13 ಎಸೆತಗಳಲ್ಲಿ 21 ರನ್ ಬಾರಿಸಿ ನಿರ್ಗಮಿಸಿದರು. ಕೆಎಲ್ ರಾಹುಲ್ 39 ಎಸೆಗಳಲ್ಲಿ 36 ರನ್ ಗಳಿಸಿ ನಿಧಾನಗತಿಯ ಬ್ಯಾಟಿಂಗ್ ಮಾಡಿ ಔಟಾದರು. ಈ ಸಂದರ್ಭ ಜೊತಯಾದ ಸೂರ್ಯಕುಮಾರ್ ಅವರು ವಿರಾಟ್ ಕೊಹ್ಲಿ ಜೊತೆಗೂಡಿ ಅಮೋಘ ಆಟವಾಡಿದರು. ಸಂಪೂರ್ಣ 20 ಓವರ್ ಆಡಿದ ಈ ಜೋಡಿ 98 ರನ್​ಗಳ ಕಾಣಿಕೆ ನೀಡಿದರು.

ಅದರಲ್ಲೂ ಸಿಕ್ಸರ್‌ಗಳ ಸುರಿಮಳೆಗೈದ ಸೂರ್ಯಕುಮಾರ್ ಅಬ್ಬರದ ಆಟ ಪ್ರದರ್ಶಿಸಿದರು. 26 ಎಸೆತಗಳಲ್ಲಿ ತಲಾ 6 ಫೋರ್‌ ಮತ್ತು ಸಿಕ್ಸರ್‌ಗಳೊಂದಿಗೆ ಅಜೇಯ 68 ರನ್‌ಗಳ ಕೊಡುಗೆ ಕೊಟ್ಟರು. ವಿರಾಟ್‌ ಕೊಹ್ಲಿ 44 ಎಸೆತಗಳಲ್ಲಿ 1 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 59 ರನ್‌ ಸಿಡಿಸಿದರು. ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192ರನ್ ಕಲೆಹಾಕಿತು. ಹಾಂಗ್ ಕಾಂಗ್ ತಂಡ 20 ಓವರ್‌ಗಳಲ್ಲಿ 152/5 ರನ್‌ ಗಳಿಸಿ ಸೋಲು ಕಂಡಿತು.

Published On - 10:18 am, Thu, 1 September 22