T20 World Cup 2022: ಟಿ20 ವಿಶ್ವಕಪ್ಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ..!
T20 World Cup 2022 Australia Squad: ಕಳೆದ ವರ್ಷ ಆರೋನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ವೇಳೆ ತಂಡದಲ್ಲಿದ್ದ 14 ಆಟಗಾರರಿಗೆ ಈ ಬಾರಿ ಕೂಡ ಮಣೆ ಹಾಕಲಾಗಿದೆ.
T20 World Cup 2022: ಮುಂಬರುವ ಟಿ20 ವಿಶ್ವಕಪ್ 2022 ಗಾಗಿ ಆಸ್ಟ್ರೇಲಿಯಾ ತಂಡವನ್ನು (Australia Squad) ಪ್ರಕಟಿಸಲಾಗಿದೆ. 15 ಸದಸ್ಯರನ್ನು ಒಳಗೊಂಡಿರುವ ಈ ತಂಡದ ನಾಯಕನಾಗಿ ಆರೋನ್ ಫಿಂಚ್ ಮುಂದುವರೆದಿದ್ದಾರೆ. ಹಾಗೆಯೇ ಉಪನಾಯಕನಾಗಿ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಆಯ್ಕೆಯಾಗಿದ್ದಾರೆ. ಇನ್ನು ತಂಡದಲ್ಲಿ ಯುವ ಆಲ್ರೌಂಡರ್ ಟಿಮ್ ಡೇವಿಡ್ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಸಿಂಗಾಪುರ್ ತಂಡವನ್ನು ಪ್ರತಿನಿಧಿಸಿದ್ದ ಡೇವಿಡ್, 2019 ರ ಬಳಿಕ ಆಸ್ಟ್ರೇಲಿಯಾದಲ್ಲಿ ದೇಶೀಯ ಕ್ರಿಕೆಟ್ ಮುಂದುವರೆಸಿದ್ದರು. ಇದೀಗ ಆಸೀಸ್ ಪರ ಚೊಚ್ಚಲ ವಿಶ್ವಕಪ್ ಆಡುವ ಅವಕಾಶವನ್ನು ಪಡೆದಿದ್ದಾರೆ.
ಕಳೆದ ವರ್ಷ ಆರೋನ್ ಫಿಂಚ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆ ವೇಳೆ ತಂಡದಲ್ಲಿದ್ದ 14 ಆಟಗಾರರನ್ನು ಮುಂದುವರೆಸಲಾಗಿದ್ದು, ಕೇವಲ ಓರ್ವ ಆಟಗಾರನನ್ನು ಕೈ ಬಿಡಲಾಗಿರುವುದು ವಿಶೇಷ. ಅಂದರೆ ಕಳೆದ ಬಾರಿ ತಂಡದಲ್ಲಿದ್ದ ಮಿಚೆಲ್ ಸ್ವೆಪ್ಸನ್ ಅವರನ್ನು ತಂಡದಿಂದ ಕೈ ಬಿಟ್ಟು ಟಿಮ್ ಡೇವಿಡ್ಗೆ ಅವಕಾಶ ನೀಡಲಾಗಿದೆ.
ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಮೊದಲ ಸುತ್ತಿನಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದೆ. ಹಾಗೆಯೇ ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿದೆ. ಇನ್ನು ಫೈನಲ್ ಪಂದ್ಯವು ನವೆಂಬರ್ 14 ರಂದು ನಡೆಯಲಿದೆ.
ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ:
ಆರೋನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್. ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಝಂಪಾ.
ಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:
ಸೂಪರ್ 12: ಗ್ರೂಪ್ 1 ಪಂದ್ಯಗಳ ವೇಳಾಪಟ್ಟಿ
- ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – 23 ಅಕ್ಟೋಬರ್ – 3:30 PM
- ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – 23 ಅಕ್ಟೋಬರ್ – 7:30 PM
- A1 vs B2 – 24 ಅಕ್ಟೋಬರ್ – 3:30 PM
- ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ – ಅಕ್ಟೋಬರ್ 26 – 3:30 PM
- ಇಂಗ್ಲೆಂಡ್ vs B2 – ಅಕ್ಟೋಬರ್ 24 – 3:30 PM
- ಆಸ್ಟ್ರೇಲಿಯಾ vs A2 – ಅಕ್ಟೋಬರ್ 28 – 7:30 PM
- ವೆಸ್ಟ್ ಇಂಡೀಸ್ vs B2 – ಅಕ್ಟೋಬರ್ 29 – 3:30 PM
- ದಕ್ಷಿಣ ಆಫ್ರಿಕಾ vs A1 – ಅಕ್ಟೋಬರ್ 30 – 3:30 PM
- ಇಂಗ್ಲೆಂಡ್ vs ಆಸ್ಟ್ರೇಲಿಯಾ – ಅಕ್ಟೋಬರ್ 30 – 7:30 PM
- ಇಂಗ್ಲೆಂಡ್ vs A1 – ನವೆಂಬರ್ 01 – 7:30 PM
- ದಕ್ಷಿಣ ಆಪ್ರಿಕಾ vs B2 – ನವೆಂಬರ್ 02 – 3:30 PM
- ಆಸ್ಟ್ರೇಲಿಯಾ vs B2 – ನವೆಂಬರ್ 04 – 3:30 PM
- ವೆಸ್ಟ್ ಇಂಡೀಸ್ vs A1 – ನವೆಂಬರ್ 04- 7:30 PM
- ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ – ನವೆಂಬರ್ 06 – 3:30 PM
- ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ನವೆಂಬರ್ 06 – 7:30 PM
ಸೂಪರ್ 12: ಗ್ರೂಪ್ 2 ಪಂದ್ಯಗಳ ವೇಳಾಪಟ್ಟಿ:
- ಭಾರತ vs ಪಾಕಿಸ್ತಾನ – ಅಕ್ಟೋಬರ್ 24 – 7:30 PM
- ಅಫ್ಘಾನಿಸ್ತಾನ vs B1 – ಅಕ್ಟೋಬರ್ 25 – 7:30 PM
- ಪಾಕಿಸ್ತಾನ vs ನ್ಯೂಜಿಲೆಂಡ್ – ಅಕ್ಟೋಬರ್ 26 – 7:30 PM
- B1 vs A2 – 27 ಅಕ್ಟೋಬರ್ – 7:30 PM
- ಅಫ್ಘಾನಿಸ್ತಾನ vs ಪಾಕಿಸ್ತಾನ – 29 ಅಕ್ಟೋಬರ್ – 7:30 PM
- ಅಫ್ಘಾನಿಸ್ತಾನ vs A2 – 31 ಅಕ್ಟೋಬರ್ – 3:30 PM
- ಭಾರತ vs ನ್ಯೂಜಿಲೆಂಡ್ – 31 ಅಕ್ಟೋಬರ್ – 7:30 PM
- ಪಾಕಿಸ್ತಾನ vs A2 – 2 ನವೆಂಬರ್ – 7:30 PM
- ನ್ಯೂಜಿಲೆಂಡ್ vs B1 – 3 ನವೆಂಬರ್ – 3:30 PM
- ಭಾರತ vs ಅಫ್ಘಾನಿಸ್ತಾನ – 3 ನವೆಂಬರ್ – 7:30 PM
- ನ್ಯೂಜಿಲೆಂಡ್ vs A2 – 5 ನವೆಂಬರ್ – 3:30 PM
- ಭಾರತ vs B1 – 5 ನವೆಂಬರ್ – 7:30 PM
- ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – 7 ನವೆಂಬರ್ – 3:30 PM
- ಪಾಕಿಸ್ತಾನ vs B1 – 7 ನವೆಂಬರ್ – 7:30 PM
- ಭಾರತ vs A2 – 8 ನವೆಂಬರ್ – 7:30 PM
ಸೆಮಿ ಫೈನಲ್ ಪಂದ್ಯ:
- ಸೆಮಿ ಫೈನಲ್ 1 – A1 vs B2 – 10 ನವೆಂಬರ್
- ಸೆಮಿ ಫೈನಲ್ 2- A2 vs B1 – 11 ನವೆಂಬರ್
ಫೈನಲ್ ಪಂದ್ಯ: ನವೆಂಬರ್ 14, 2022