IND vs SL: ಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ವರುಣನ ಅವಕೃಪೆ! ಕೊಲಂಬೊದಲ್ಲಿ ಹವಾಮಾನ ಹೇಗಿರಲಿದೆ?

IND vs SL: ಇಂದಿನ ಪಂದ್ಯದಲ್ಲೂ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಕ್ಯೂವೆದರ್ ಡಾಟ್ ಕಾಮ್ ಪ್ರಕಾರ, ಕೊಲಂಬೊದಲ್ಲಿ ಮೋಡ ಕವಿದ ವಾತಾವರಣ ಇರಲಿದೆ

IND vs SL: ಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ವರುಣನ ಅವಕೃಪೆ! ಕೊಲಂಬೊದಲ್ಲಿ ಹವಾಮಾನ ಹೇಗಿರಲಿದೆ?
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Jul 25, 2021 | 2:50 PM

ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದ ನಂತರ ಭಾರತ ತಂಡ ಭಾನುವಾರದಿಂದ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯನ್ನು ಪ್ರಾರಂಭಿಸಲಿದೆ. ಮೂರು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೂರನೇ ಪಂದ್ಯದ ಸೋಲನ್ನು ಮರೆತು ತಂಡವು ಜೋಶ್​ನೊಂದಿಗೆ ಟಿ 20 ಸರಣಿಯನ್ನು ಪ್ರಾರಂಭಿಸುತ್ತಿದೆ. ಟಿ 20 ಪಂದ್ಯ ಕೊಲಂಬೊದಲ್ಲಿ ಹವಾಮಾನ ಹೇಗೆ ಇರುತ್ತದೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಏಕೆಂದರೆ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಮಳೆ ಕಾಟ ಕೊಟ್ಟಿತ್ತು, ಇದರಿಂದಾಗಿ ಪಂದ್ಯವನ್ನು 47-47 ಓವರ್‌ಗಳಿಗೆ ಇಳಿಸಲಾಯಿತು.

ಇಂದಿನ ಪಂದ್ಯದಲ್ಲೂ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಅಕ್ಯೂವೆದರ್ ಡಾಟ್ ಕಾಮ್ ಪ್ರಕಾರ, ಕೊಲಂಬೊದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಮತ್ತು ಆರ್ದ್ರತೆಯ ಮಟ್ಟವು ಹೆಚ್ಚು ಇರುತ್ತದೆ.

ಹವಾಮಾನ ಹೇಗಿರಲಿದೆ Accueather.com ಪ್ರಕಾರ, ಪಂದ್ಯದ ಪ್ರಾರಂಭದಲ್ಲಿ ಮಳೆ ಆಟಕ್ಕೆ ಅಡ್ಡಿಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಓವರ್‌ಗಳನ್ನು ಕಡಿತಗೊಳಿಸಬಹುದು. ಅದೇ ಸಮಯದಲ್ಲಿ, ಸರಣಿಯ ಮೊದಲ ಟಿ 20 ಪಂದ್ಯವು ಮಳೆಯಿಂದ ರದ್ದಾಗುವ ಸಾಧ್ಯತೆಯೂ ಹೆಚ್ಚಾಗಿದೆ.

ಶ್ರೀಲಂಕಾ ಮತ್ತು ಟೀಮ್ ಇಂಡಿಯಾ ನಡುವಿನ ಟಿ 20 ಸರಣಿಯ ಮೊದಲ ಪಂದ್ಯ ಇಂದು ರಾತ್ರಿ 8 ಗಂಟೆಯಿಂದ ಕೊಲಂಬೊದ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಶಿಖರ್ ಧವನ್ ಅವರ ನೇತೃತ್ವದಲ್ಲಿ ಆಡಲಿದೆ ಮತ್ತು ಏಕದಿನ ಸರಣಿಯಂತೆ, ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಸಾಧಿಸಲು ತಂಡ ಪ್ರಯತ್ನಿಸಲಿದೆ.

ಟಿ 20 ವಿಶ್ವಕಪ್‌ ಮೇಲೆ ಕಣ್ಣು ಐಸಿಸಿ ಟಿ 20 ವಿಶ್ವಕಪ್ ಈಗ ಕೆಲವೇ ತಿಂಗಳುಗಳ ದೂರದಲ್ಲಿದೆ. ಈ ಸಂದರ್ಭದಲ್ಲಿ, ಈ ಸರಣಿಯು ಬಹಳ ಮುಖ್ಯವಾಗಿರುತ್ತದೆ. ಉತ್ತಮ ಪ್ರದರ್ಶನ ನೀಡುವ ಮೂಲಕ, ಎರಡೂ ತಂಡಗಳ ಆಟಗಾರರು ವಿಶ್ವಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲ್ಲಿದ್ದಾರೆ. ಏಕದಿನ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವಿಪ್ ಮಾಡುವಲ್ಲಿ ಭಾರತ ವಿಫಲವಾಗಿದೆ. ಆದರೆ ಟಿ 20 ಸರಣಿಯಲ್ಲಿ ಶ್ರೀಲಂಕಾವನ್ನು ಕ್ಲೀನ್ ಸ್ವಿಪ್ ಮಾಡಲು ಹೋರಾಟ ನಡೆಸಲಿದೆ.

ತಂಡದಲ್ಲಿ ಬದಲಾವಣೆ ಇರುತ್ತಾ? ಕಳೆದ ಏಕದಿನ ಪಂದ್ಯದಲ್ಲಿ ಐದು ಹೊಸ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ನೀಡಿತ್ತು. ಹೊಸಬರಾದ ರುತುರಾಜ್ ಗೈಕ್ವಾಡ್, ವರುಣ್ ಚಕ್ರವರ್ತಿ ಮತ್ತು ದೇವದುತ್ ಪಡಿಕ್ಕಲ್ ಅವರೊಂದಿಗೆ ಪ್ರಯೋಗ ಮಾಡಲು ಹಿಂಜರಿಯುವುದಿಲ್ಲ ಎಂದು ಕ್ಯಾಪ್ಟನ್ ಧವನ್ ಶನಿವಾರ ಸೂಚಿಸಿದ್ದಾರೆ. ಆದರೆ ಸರಣಿಯನ್ನು ಗೆಲ್ಲುವುದು ಅವರ ಆದ್ಯತೆಯಾಗಿದೆ. ಟಿ 20 ವಿಶ್ವಕಪ್ ತಂಡದಲ್ಲಿ ಅವರ ಸಾಧನೆ ಬಗ್ಗೆಯೂ ನಿಗಾ ಇಡಲಾಗುವುದು ಎಂಬ ಅರಿವೂ ಇದೆ ಎಂದು ಧವನ್ ಹೇಳಿದ್ದಾರೆ.

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!