Asia Cup 2022: ಬಾಂಗ್ಲಾ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆಯಾದ ಆರ್​ಸಿಬಿ ತಂಡದ ಬೌಲಿಂಗ್ ಕೋಚ್

| Updated By: ಪೃಥ್ವಿಶಂಕರ

Updated on: Aug 19, 2022 | 4:50 PM

Asia Cup 2022: ಶ್ರೀರಾಮ್ ಅವರನ್ನು ಐಪಿಎಲ್-2022ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಹೀಗಾಗಿ ಶ್ರೀರಾಮ್ ಆಸ್ಟ್ರೇಲಿಯಾ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಕೋಚಿಂಗ್‌ ಹುದ್ದೆ ಆರಂಭಿಸಿದರು.

Asia Cup 2022: ಬಾಂಗ್ಲಾ ತಂಡಕ್ಕೆ ಮುಖ್ಯ ಕೋಚ್ ಆಗಿ ಆಯ್ಕೆಯಾದ ಆರ್​ಸಿಬಿ ತಂಡದ ಬೌಲಿಂಗ್ ಕೋಚ್
Follow us on

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (Bangladesh Cricket Board) ಮುಂಬರುವ ಏಷ್ಯಾಕಪ್ ಮತ್ತು ಟಿ 20 ವಿಶ್ವಕಪ್‌ಗಾಗಿ (Asia Cup and T20 World Cup) ಭಾರತದ ಮಾಜಿ ಆಲ್‌ರೌಂಡರ್ ಶ್ರೀಧರನ್ ಶ್ರೀರಾಮ್ ಅವರನ್ನು ರಾಷ್ಟ್ರೀಯ ತಂಡದ ಕೋಚ್ ಆಗಿ ನೇಮಿಸಿದೆ. ಶ್ರೀರಾಮ್ ಅವರ ನೇಮಕಾತಿಯನ್ನು ಬಿಸಿಬಿ ನಿರ್ದೇಶಕರನ್ನು ಉಲ್ಲೇಖಿಸಿ ಡೈಲಿ ಸ್ಟಾರ್ ವರದಿ ಖಚಿತಪಡಿಸಿದ್ದು, ಅದರಲ್ಲಿ ಶ್ರೀರಾಮ್ ಅವರನ್ನು ಟಿ20 ವಿಶ್ವಕಪ್​ವರೆಗೆ ಬಾಂಗ್ಲಾ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದ್ದೇವೆ ಎಂದು ವರದಿಯಾಗಿದೆ.

ನಾವು ಹೊಸ ಚಿಂತನೆಯೊಂದಿಗೆ ಮುನ್ನಡೆಯುತ್ತಿದ್ದೇವೆ. ಹೀಗಾಗಿ ಏಷ್ಯಾಕಪ್‌ಗೂ ಸೇರಿದಂತೆ ತಂಡಕ್ಕೆ ಹೊಸ ಕೋಚ್ ಅನ್ನು ನೇಮಿಸಲಾಗಿದೆ. ಟಿ20 ವಿಶ್ವಕಪ್ ನಮ್ಮ ಮುಖ್ಯ ಗುರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶ್ರೀರಾಮ್ 2000 ಮತ್ತು 2004 ರ ನಡುವೆ ಭಾರತ ಪರ ಎಂಟು ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಜೊತೆಗೆ ಈ ಹಿಂದೆ ಆಸ್ಟ್ರೇಲಿಯಾದ ಸಹಾಯಕ ಮತ್ತು ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ಆಸ್ಟ್ರೇಲಿಯಾದ ಮಾಜಿ ಕೋಚ್ ಡ್ಯಾರೆನ್ ಲೆಹ್ಮನ್ ಅವರ ಮಾರ್ಗದರ್ಶನದಲ್ಲಿ 2016 ರಲ್ಲಿ ಶ್ರೀರಾಮ್ ಅವರಿಗೆ ಸ್ಪಿನ್ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ನೀಡಲಾಗಿತ್ತು.

ಆರ್​ಸಿಬಿ ತಂಡದಲ್ಲಿ ಸ್ಪಿನ್ ಬೌಲಿಂಗ್ ಕೋಚ್

ಇದನ್ನೂ ಓದಿ
Asia Cup 2022: ಆಟದ ಜೊತೆಗೆ ನಮ್ಮ ತಂಡವೂ ಬದಲಾಗಿದೆ; ಪಾಕ್ ಮಣಿಸಲು ನಾವು ಸಿದ್ದ ಎಂದ ರೋಹಿತ್
T20 World Cup: ‘ಟಿ20 ವಿಶ್ವಕಪ್ ಹತ್ತಿರವಾದಂತೆ ತಂಡದಲ್ಲಿ ಆತಂಕ ಮನೆಮಾಡಿದೆ’; ಶಾಕಿಂಗ್ ಹೇಳಿಕೆ ಕೊಟ್ಟ ರಿಷಭ್ ಪಂತ್
IND vs PAK: ಅಚ್ಚರಿಯಾದರೂ ಇದು ಸತ್ಯ; ಒಮ್ಮೆಯೂ ಭಾರತ- ಪಾಕ್ ಏಷ್ಯಾಕಪ್ ಫೈನಲ್​ ಆಡಿಲ್ಲ..!

ಶ್ರೀರಾಮ್ ಅವರನ್ನು ಐಪಿಎಲ್-2022ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಿಸಿದೆ. ಹೀಗಾಗಿ ಶ್ರೀರಾಮ್ ಆಸ್ಟ್ರೇಲಿಯಾ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಕೋಚಿಂಗ್‌ ಹುದ್ದೆ ಆರಂಭಿಸಿದರು. ಆರ್‌ಸಿಬಿಗೆ ತರಬೇತಿ ನೀಡುವ ಮೊದಲು ಶ್ರೀರಾಮ್ ಕೂಡ ಈ ತಂಡದಲ್ಲಿ ಆಡಿದ್ದಾರೆ. ಅವರು 2008 ರಲ್ಲಿ IPL ನ ಮೊದಲ ಸೀಸನ್​ನಲ್ಲಿ ಈ ತಂಡದೊಂದಿಗೆ ಇದ್ದರು. RCB ನಂತರ, ಅವರು ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ಪರ ಆಡಿದರು. ವಿರಾಟ್ ಕೊಹ್ಲಿ ಕೂಡ 2008 ರಿಂದ ಆರ್‌ಸಿಬಿಯ ಭಾಗವಾಗಿದ್ದಾರೆ.

ಭಾರಿ ನಿರೀಕ್ಷೆಯಲ್ಲಿ ಬಾಂಗ್ಲಾದೇಶ

ಶ್ರೀರಾಮ್ ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡುವಾಗ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ನಾಥನ್ ಲಿಯಾನ್ ಅವರಂತಹ ಬೌಲರ್‌ನೊಂದಿಗೆ ಕೆಲಸ ಮಾಡಿ ಅವರ ಆಟವನ್ನು ಸುಧಾರಿಸಿದರು. ಜೊತೆಗೆ ಆರ್‌ಸಿಬಿಯಲ್ಲಿ ವನಿಂದು ಹಸರಂಗ ಮತ್ತು ಶಹಬಾಜ್ ಅಹ್ಮದ್ ಅವರೊಂದಿಗೆ ಕೆಲಸ ಮಾಡಿದ್ದಾರೆ. ಈಗ ಶ್ರೀರಾಮ್ ಮುಖ್ಯ ಕೋಚ್ ಆಗಿ ಈ ಸೀಮಿತ ಓವರ್‌ಗಳ ಸ್ವರೂಪದಲ್ಲಿ ತಂಡಕ್ಕೆ ಉತ್ತಮ ಯಶಸ್ಸನ್ನು ನೀಡಲಿ ಎಂದು ಬಾಂಗ್ಲಾದೇಶ ಭಾವಿಸುತ್ತದೆ. ಶ್ರೀರಾಮ್ ಮುಂದಿರುವ ಮೊದಲ ಸವಾಲು ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾಕಪ್. ಈ ಬಾರಿಯ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ಉತ್ತಮ ಪ್ರದರ್ಶನ ನೀಡಲು ಮತ್ತು ಟಿ20 ವಿಶ್ವಕಪ್‌ಗೆ ತನ್ನ ಸಿದ್ಧತೆಯನ್ನು ಬಲಪಡಿಸಲು ಪ್ರಯತ್ನಿಸಲಿದೆ.

ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 27 ರಂದು ಶ್ರೀಲಂಕಾ ವಿರುದ್ಧ ಆಡಬೇಕಾಗಿದೆ. ಈ ತಂಡ ಆಗಸ್ಟ್ 30 ರಂದು ಅಫ್ಘಾನಿಸ್ತಾನ ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಬೇಕಾಗಿದೆ. ಬಾಂಗ್ಲಾದೇಶ ಇನ್ನೂ ಏಷ್ಯಾಕಪ್ ಪ್ರಶಸ್ತಿ ಗೆದ್ದಿಲ್ಲವಾದರಿಂದ ಈ ಬಾರಿ ಈ ಕೆಲಸವನ್ನು ಮಾಡಿ ಇತಿಹಾಸ ಸೃಷ್ಟಿಸಲು ಈ ತಂಡ ಪ್ರಯತ್ನಿಸಲಿದೆ.