ಭಾರತದಲ್ಲಿ ಎರಡು ಪಿಚ್​ ನೀಡ್ತಾರೆ: ಅದಕ್ಕೆ ಅಭ್ಯಾಸ ಪಂದ್ಯವಾಡ್ತಿಲ್ಲ ಎಂದ ಸ್ಟೀವ್ ಸ್ಮಿತ್

| Updated By: ಝಾಹಿರ್ ಯೂಸುಫ್

Updated on: Jan 31, 2023 | 7:22 PM

India vs Australia Test Series: ಸಾಮಾನ್ಯವಾಗಿ ದೊಡ್ಡ ಟೆಸ್ಟ್ ಸರಣಿಗೂ ಮುಂಚಿತವಾಗಿ ಅಧ್ಯಕ್ಷರ ಇಲೆವೆನ್ ಅಥವಾ ರಾಜ್ಯ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಭಾರತದಲ್ಲಿ ಎರಡು ಪಿಚ್​ ನೀಡ್ತಾರೆ: ಅದಕ್ಕೆ ಅಭ್ಯಾಸ ಪಂದ್ಯವಾಡ್ತಿಲ್ಲ ಎಂದ ಸ್ಟೀವ್ ಸ್ಮಿತ್
Steve Smith
Follow us on

India vs Australia: ಭಾರತ-ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯು ಫೆಬ್ರವರಿ 9 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಈಗಾಗಲೇ ಆಸ್ಟ್ರೇಲಿಯಾದಿಂದ ಕೆಲ ಆಟಗಾರರು ಭಾರತದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮಹತ್ವದ ಸರಣಿಗಾಗಿ ಒಂದು ವಾರ ಮುಂಚಿತವಾಗಿ ಭಾರತಕ್ಕೆ ಆಗಮಿಸಿದರೂ ಆಸೀಸ್ ಬಳಗವು ಯಾವುದೇ ಅಭ್ಯಾಸ ಪಂದ್ಯವಾಡುತ್ತಿಲ್ಲ. ಸಾಮಾನ್ಯವಾಗಿ ದೊಡ್ಡ ಟೆಸ್ಟ್ ಸರಣಿಗೂ ಮುಂಚಿತವಾಗಿ ಪ್ರವಾಸಿ ತಂಡವು ಅಧ್ಯಕ್ಷರ ಇಲೆವೆನ್ ಅಥವಾ ರಾಜ್ಯ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಾಗುತ್ತದೆ. ಆದರೆ ಈ ಬಾರಿ ಆಸ್ಟ್ರೇಲಿಯಾ ತಂಡ ಅಭ್ಯಾಸ ಪಂದ್ಯವಾಡದಿರಲು ನಿರ್ಧರಿಸಿದೆ.

ಇದಕ್ಕೆ ಮುಖ್ಯ ಕಾರಣವೇನು ಎಂಬುದನ್ನು ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಬಹಿರಂಗಪಡಿಸಿದ್ದಾರೆ. ಫೆಬ್ರವರಿಯಲ್ಲಿ ನಡೆಯಲಿರುವ ನಾಲ್ಕು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಸರಣಿಕ್ಕಿಂತ ಮುಂಚಿತವಾಗಿ ಭಾರತದ ಪಿಚ್​ನಲ್ಲಿ ಅಭ್ಯಾಸ ಪಂದ್ಯವಾಡುವುದು ಅಪ್ರಸ್ತುತ. ಇಲ್ಲಿನ  ಪಿಚ್‌ಗಳಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದಕ್ಕಿಂತ ಹೆಚ್ಚಾಗಿ ತನ್ನ ತಂಡವು ತನ್ನದೇ ಆದ ತರಬೇತಿಯನ್ನು ಪಡೆಯುವುದು ಉತ್ತಮ ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್.

ಸಾಮಾನ್ಯವಾಗಿ ಆತಿಥೇಯರು ಅಭ್ಯಾಸ ಪಂದ್ಯಗಳಿಗೆ ಹಸಿರು ಟಾಪ್‌ ಪಿಚ್​ಗಳನ್ನು ಒದಗಿಸಿದರೆ, ಅಸಲಿ ಪಂದ್ಯಗಳಿಗೆ ಸ್ಪಿನ್ನಿಂಗ್ ಟ್ರ್ಯಾಕ್‌ಗಳನ್ನು ಒದಗಿಸುತ್ತಾರೆ. ಹೀಗಾಗಿ ಬಾರ್ಡರ್-ಗಾವಸ್ಕರ್ ಟೆಸ್ಟ್​ ಸರಣಿಗೂ ಮುಂಚಿತವಾಗಿ ಭಾರತದಲ್ಲಿ ಒಂದೇ ಒಂದು ಅಭ್ಯಾಸ ಪಂದ್ಯವನ್ನು ಆಡದಿರಲು ನಿರ್ಧರಿಸಲಾಗಿದೆ ಎಂದು ಸ್ಮಿತ್ ತಿಳಿಸಿದರು.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಏಕೆಂದರೆ ಕಳೆದ ಬಾರಿ ನಾವು ಭಾರತಕ್ಕೆ ಹೋದಾಗ ಅಭ್ಯಾಸ ಪಂದ್ಯಕ್ಕೆ ಹಸಿರು ಮೇಲ್ಮೈ ಹೊಂದಿದ್ದ ಪಿಚ್​ ನೀಡಿದ್ದರು.  ಅಂದು ನಾವು ಯಾವುದೇ ಸ್ಪಿನ್ನರ್​ಗಳನ್ನು ಎದುರಿಸಿರಲಿಲ್ಲ. ಹೀಗಾಗಿ ಅಂತಹ ಅಭ್ಯಾಸ ಪಂದ್ಯ ಅಪ್ರಸ್ತುತ. ಬದಲಾಗಿ ಕಠಿಣ ನೆಟ್ಸ್ ಸೆಷನ್‌ಗಳು ಸ್ಪಿನ್ನರ್‌ಗಳಿಗೆ ಉತ್ತಮ ತರಬೇತಿ ನೀಡಲು ಸಹಾಯ ಮಾಡುತ್ತದೆ. ಇದೇ ತಂತ್ರದೊಂದಿಗೆ ನಾವು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎಂದು ಸ್ಮಿತ್ ಹೇಳಿದರು.

ಕಳೆದ ಬಾರಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಿದಾಗ ಅಭ್ಯಾಸ ಪಂದ್ಯಗಳಿಗೆ ಹಸಿರು ಮೇಲ್ಮೈ ಹೊಂದಿದ್ದ ಪಿಚ್​ಗಳನ್ನು ನೀಡಿ, ಉಭಯ ತಂಡಗಳ ಮುಖಾಮುಖಿಗೆ ಸ್ಪಿನ್ನರ್ ಸ್ನೇಹಿ ಪಿಚ್​ಗಳನ್ನು ನಿರ್ಮಿಸಲಾಗಿತ್ತು ಎಂದು ಸ್ವೀಟ್ ಸ್ಮಿತ್ ಹೇಳಿದ್ದಾರೆ.

2017 ರಲ್ಲಿ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ತಂಡವು 1-2 ರಿಂದ ಸರಣಿಯನ್ನು ಕಳೆದುಕೊಂಡಿತ್ತು. ಆದರೆ ಈ ಬಾರಿ ಗೆಲ್ಲಲು ಆಸ್ಟ್ರೇಲಿಯಾ ತಂಡವು ಹಲವು ಮಾಸ್ಟರ್​ ಪ್ಲ್ಯಾನ್​ಗಳನ್ನು ರೂಪಿಸಿದೆ.

Also Read: ICC Rankings 2023: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1

ಇದಕ್ಕಾಗಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ 18 ಸದಸ್ಯರ ತಂಡವು ಸಿಡ್ನಿಯಲ್ಲಿ ಸ್ಪಿನ್-ಸ್ನೇಹಿ ಟ್ರ್ಯಾಕ್‌ಗಳಲ್ಲಿ ಪೂರ್ವ-ಸರಣಿ ಶಿಬಿರವನ್ನು ನಡೆಸಿತ್ತು. ಇದೀಗ ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ನಡೆಯುವ ಟೆಸ್ಟ್​ ಪಂದ್ಯಕ್ಕೂ ಒಂದು ವಾರ ನೆಟ್ಸ್​ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ ಆಸ್ಟ್ರೇಲಿಯಾ ತಂಡ.