Ranji Trophy 2023: ವೆಂಕಿಯ ಬೆಂಕಿ ಬೌಲಿಂಗ್​: ಕರ್ನಾಟಕ ತಂಡಕ್ಕೆ ಮೇಲುಗೈ

Ranji Trophy 2023- Karnataka vs Uttarakhand: ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 123 ರನ್​ ಕಲೆಹಾಕಿದೆ.

Ranji Trophy 2023: ವೆಂಕಿಯ ಬೆಂಕಿ ಬೌಲಿಂಗ್​: ಕರ್ನಾಟಕ ತಂಡಕ್ಕೆ ಮೇಲುಗೈ
M. Venkatesh
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 31, 2023 | 9:23 PM

Ranji Trophy 2023 Quarterfinals: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ 3ನೇ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ಯುವ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕವು ಉತ್ತರಾಖಂಡ್​ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ್​ಗೆ 5ನೇ ಓವರ್​​ನಲ್ಲೇ ವಿಧ್ವತ್ ಕಾವೇರಪ್ಪ ಶಾಕ್ ನೀಡಿದರು. ನಾಯಕ ಜೀವನ್​ಜೋತ್ ಸಿಂಗ್​ರನ್ನು ಕೇವಲ 1 ರನ್​ಗೆ ಔಟ್ ಮಾಡಿ ಕಾವೇರಪ್ಪ ಮೊದಲು ಯಶಸ್ಸು ತಂದುಕೊಟ್ಟರು.

ಆ ಬಳಿಕ ವೆಂಕಿಯ ಬೆಂಕಿ ಬೌಲಿಂಗ್ ಪರಾಕ್ರಮಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಯಿತು. ಕರಾರುವಾಕ್ ದಾಳಿ ಮೂಲಕ ಉತ್ತರಾಖಂಡ್​ ಬ್ಯಾಟ್ಸ್​ಮನ್​ಗಳನ್ನು ಕಾಡಿದ ವೆಂಕಟೇಶ್ ಅವನೀಶ್ (17) ಹಾಗೂ ದಿಕ್ಷಾಂಶು (9) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ವಿಜಯ್ ಕುಮಾರ್ ವೈಶಾಖ್ ಸ್ವಪ್ನಿಲ್ ಸಿಂಗ್ (0) ಗೆ ಪೆವಿಲಿಯನ್ ಹಾದಿ ತೋರಿಸಿದರು.

ಕೇವಲ 47 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡ ಉತ್ತರಾಖಂಡ್ ತಂಡಕ್ಕೆ ಈ ಹಂತದಲ್ಲಿ ಕುನಾಲ್ ಚಂಡೇಲಾ ಆಸರೆಯಾದರು. 103 ಎಸೆತಗಳನ್ನು ಎದುರಿಸಿದ ಕುನಾಲ್ 31 ರನ್​ಗಳಿಸಿ ಕ್ರೀಸ್ ಕಚ್ಚಿ ನಿಂತರು. ಆದರೆ ಮತ್ತೊಂದೆಡೆ ಆದಿತ್ಯ ತಾರೆ (14) ಯನ್ನು ಕ್ಲೀನ್​ ಬೌಲ್ಡ್ ಮಾಡುವ ಮೂಲಕ ವಿಧ್ವತ್ ವಿಕೆಟ್​ಗಳ ಸಂಖ್ಯೆಯನ್ನು  ಐದಕ್ಕೇರಿಸಿದರು.

ಇದನ್ನೂ ಓದಿ
Image
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
Image
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Image
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
Image
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

Also Read: ICC Rankings 2023: ಐಸಿಸಿ ರ‍್ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ಮೂವರು ನಂಬರ್ 1

ಇದೇ ವೇಳೆ ಮತ್ತೆ ದಾಳಿಗಿಳಿದ ವೆಂಕಟೇಶ್ ಅಖಿಲ್ ರಾವತ್ (14) ಹಾಗೂ ಅಭಯ್ ನೇಗಿ (1) ವಿಕೆಟ್ ಪಡೆದರು. ಅಷ್ಟೇ ಅಲ್ಲದೆ 103 ಎಸೆತಗಳನ್ನು ಎದುರಿಸಿದ ಕುನಾಲ್​ರನ್ನು ಔಟ್ ಮಾಡುವ ಮೂಲಕ ಚೊಚ್ಚಲ ರಣಜಿ ಪಂದ್ಯದಲ್ಲಿ ಐದು ವಿಕೆಟ್​ಗಳ ಸಾಧನೆ ಮಾಡಿದರು. ಇನ್ನು ಕೊನೆಯ ಎರಡು ವಿಕೆಟ್​ಗಳನ್ನು ಕಬಳಿಸುವ ಮೂಲಕ ಕೃಷ್ಣಪ್ಪ ಗೌತಮ್ ಉತ್ತರಾಖಂಡ್ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ 116 ರನ್​ಗಳಿಗೆ ಆಲೌಟ್ ಮಾಡಿದರು.

ಕರ್ನಾಟಕ ಪರ 22ರ ಹರೆಯದ ಯುವ ವೇಗಿ ಮುರಳೀಧರ ವೆಂಕಟೇಶ್ 14 ಓವರ್​ಗಳಲ್ಲಿ ಕೇವಲ 36 ರನ್​ ನೀಡಿ 5 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಸದ್ಯ ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 123 ರನ್​ ಕಲೆಹಾಕಿದೆ. ಆರಂಭಿಕರಾದ ಮಯಾಂಕ್ ಅಗರ್ವಾಲ್ (65) ಹಾಗೂ ರವಿಕುಮಾರ್ ಸಮರ್ಥ್ (54) 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಕರ್ನಾಟಕ ಪ್ಲೇಯಿಂಗ್ ಇಲೆವೆನ್: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಮುರಳೀಧರ ವೆಂಕಟೇಶ್ , ಶರತ್ ಬಿಆರ್​ ( ವಿಕೆಟ್ ಕೀಪರ್ ) , ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ.

ಉತ್ತರಾಖಂಡ್ ಪ್ಲೇಯಿಂಗ್ ಇಲೆವೆನ್: ಆದಿತ್ಯ ತಾರೆ (ವಿಕೆಟ್ ಕೀಪರ್) , ಜೀವನ್​ಜೋತ್ ಸಿಂಗ್ (ನಾಯಕ) , ಕುನಾಲ್ ಚಂಡೇಲಾ , ಅಖಿಲ್ ರಾವತ್ , ಅವನೀಶ್ ಸುಧಾ , ಅಭಯ್ ನೇಗಿ , ಸ್ವಪ್ನಿಲ್ ಸಿಂಗ್ , ದಿಕ್ಷಾಂಶು ನೇಗಿ , ಮಯಾಂಕ್ ಮಿಶ್ರಾ , ದೀಪಕ್ ಧಪೋಲಾ , ನಿಖಿಲ್ ಕೊಹ್ಲಿ.

ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ