Shubman Gil: ಮೈದಾನಕ್ಕೆ ಬಂದು ಗಿಲ್‌ಗೆ ವಿಶೇಷ ಗಿಫ್ಟ್ ನೀಡಿದ ಸುನಿಲ್ ಗವಾಸ್ಕರ್: ನಾಯಕ ಫುಲ್ ಖುಷ್
India vs England 5th Test: ಶುಭ್ಮನ್ ಅವರ ಅದ್ಭುತ ಆಟದಿಂದ ಸಂತಸಗೊಂಡ ಭಾರತದ ಮಾಜಿ ದಂತಕಥೆ ಸುನಿಲ್ ಗವಾಸ್ಕರ್ ಅವರಿಗೆ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡಿದ್ದಾರೆ. ಓವಲ್ ಟೆಸ್ಟ್ ಪಂದ್ಯದ ಮೂರನೇ ದಿನದ ಕೊನೆಯಲ್ಲಿ, ಗವಾಸ್ಕರ್ ಶುಭ್ಮನ್ ಗಿಲ್ ಅವರನ್ನು ಭೇಟಿಯಾದರು. ಗವಾಸ್ಕರ್ ತಮ್ಮೊಂದಿಗೆ ಒಂದು ಚೀಲವನ್ನು ಕೂಡ ತಂದಿದ್ದರು, ಅದರಲ್ಲಿ ಅವರ ವಿಶೇಷ ಟಿ-ಶರ್ಟ್ ಇತ್ತು.

ಬೆಂಗಳೂರು (ಜು. 03): ಭಾರತೀಯ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ಶುಭ್ಮನ್ ಗಿಲ್ (Shubman Gill) ಇಂಗ್ಲೆಂಡ್ ವಿರುದ್ಧದ ತಮ್ಮ ಮೊದಲ ಪರೀಕ್ಷೆಯಲ್ಲೇ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಸರಣಿಯ ಉದ್ದಕ್ಕೂ, ಗಿಲ್ ತಮ್ಮ ಬ್ಯಾಟಿಂಗ್ ಮತ್ತು ನಾಯಕತ್ವದ ಮೂಲಕ ಮನ್ನಣೆಗೆ ಪಾತ್ರವಾಗಿದ್ದಾರೆ. ಶುಭ್ಮನ್ ಗಿಲ್ 5 ಟೆಸ್ಟ್‌ಗಳ 10 ಇನ್ನಿಂಗ್ಸ್‌ಗಳಲ್ಲಿ 75.40 ಸರಾಸರಿಯಲ್ಲಿ 754 ರನ್ ಗಳಿಸಿದರು, ಇದರಲ್ಲಿ 4 ಶತಕಗಳು ಸೇರಿವೆ. ಈ ಇಂಗ್ಲೆಂಡ್ ಪ್ರವಾಸದಲ್ಲಿ ಶುಭ್ಮನ್ ಗಿಲ್ ಅವರ ಅತ್ಯಧಿಕ ಸ್ಕೋರ್ 269. ಶುಭ್ಮನ್ ಅವರ ಅದ್ಭುತ ಆಟದಿಂದ ಸಂತಸಗೊಂಡ ಭಾರತದ ಮಾಜಿ ದಂತಕಥೆ ಸುನಿಲ್ ಗವಾಸ್ಕರ್ ಅವರಿಗೆ ವಿಶೇಷವಾದದ್ದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಓವಲ್ ಟೆಸ್ಟ್ ಪಂದ್ಯದ ಮೂರನೇ ದಿನದ ಕೊನೆಯಲ್ಲಿ, ಗವಾಸ್ಕರ್ ಶುಭ್ಮನ್ ಗಿಲ್ ಅವರನ್ನು ಭೇಟಿಯಾದರು. ಗವಾಸ್ಕರ್ ತಮ್ಮೊಂದಿಗೆ ಒಂದು ಚೀಲವನ್ನು ಕೂಡ ತಂದಿದ್ದರು, ಅದರಲ್ಲಿ ಅವರ ವಿಶೇಷ ಟಿ-ಶರ್ಟ್ ಇತ್ತು. ಯಾರೋ ಅದನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದರಂತೆ. ಸುನಿಲ್ ಗವಾಸ್ಕರ್ ಟಿ-ಶರ್ಟ್ ಅನ್ನು ಶುಭ್ಮನ್ ಗಿಲ್‌ಗೆ ನೀಡಿ, ‘ಯಾರೋ ಇದನ್ನು ನನಗಾಗಿ ನೀಡಿದ್ದಾರೆ. ಇಂದು ನಾನು ನಿಮಗೆ ನೀಡುತ್ತಿದ್ದೇನೆ. ಈ ಟಿ- ಶರ್ಟ್ ನಿಮ್ಮ ಸೈಜ್ಗೆ ಆಗುತ್ತೊ ಇಲ್ಲವೇ ಎಂದು ನನಗೆ ತಿಳಿದಿಲ್ಲ’ ಎಂದು ಹೇಳಿದರು. ಇದಾದ ನಂತರ ಅವರು ಗಿಲ್‌ಗೆ ಒಂದು ಕ್ಯಾಪ್ ಅನ್ನು ಸಹ ನೀಡಿದರು. ಕ್ಯಾಪ್ ನೀಡುವಾಗ ಗವಾಸ್ಕರ್ ಹೇಳಿದರು, ‘ನಾನು ಈ ಸಹಿ ಮಾಡಿದ ಕ್ಯಾಪ್ ಅನ್ನು ಬಹಳ ಕಡಿಮೆ ಜನರಿಗೆ ನೀಡಿದ್ದೇನೆ. ಇಂದು ನಾನು ಇದನ್ನು ನಿಮಗೆ ನೀಡುತ್ತಿದ್ದೇನೆ.’ ಎಂದಿದ್ದಾರೆ.
View this post on Instagram
ಶುಭ್ಮನ್ ಗಿಲ್‌ಗೆ ಉಡುಗೊರೆ ನೀಡಿದ ನಂತರ, ಸುನಿಲ್ ಗವಾಸ್ಕರ್ ಅವರ ನಾಯಕತ್ವವನ್ನು ಕೂಡ ಶ್ಲಾಘಿಸಿದರು. ‘ನೀವು ಸಿರಾಜ್‌ಗೆ ಕೊನೆಯ ಓವರ್‌ನಲ್ಲಿ ಯಾರ್ಕರ್ ಎಸೆಯಲು ಹೇಳಿದ ರೀತಿ ತುಂಬಾ ಚೆನ್ನಾಗಿತ್ತು. ನಾನು ನಾಳೆ ಅಂದರೆ ನಾಲ್ಕನೇ ದಿನ ನನ್ನ ಅದೃಷ್ಟದ ಜಾಕೆಟ್ ಧರಿಸಿ ಬರುತ್ತೇನೆ. ನಾನು ಅದನ್ನು ಇಲ್ಲಿಗೆ ವಿಶೇಷವಾಗಿ ಆರ್ಡರ್ ಮಾಡಿದ್ದೇನೆ.’ ಎಂದರು. ಸುನಿಲ್ ಗವಾಸ್ಕರ್ ಅವರಿಂದ ಈ ಉಡುಗೊರೆಯನ್ನು ಪಡೆದ ನಂತರ, ಟೀಮ್ ಇಂಡಿಯಾ ನಾಯಕ ಕೂಡ ತುಂಬಾ ಸಂತೋಷಪಟ್ಟರು.
IND vs ENG 5th Test: ಟೀಮ್ ಇಂಡಿಯಾ ಗೆಲುವು ಬಹುತೇಕ ಖಚಿತ: ಇತಿಹಾಸ ಸೃಷ್ಟಿಸಿದರೆ ಮಾತ್ರ ಆಂಗ್ಲರಿಗೆ ಜಯ
ಮೂರನೇ ದಿನದಾಟದವರೆಗೆ ಪಂದ್ಯದ ಸ್ಥಿತಿ ಹೇಗಿತ್ತು?
ಪಂದ್ಯದ ಬಗ್ಗೆ ಹೇಳುವುದಾದರೆ, ಪಂದ್ಯದ ಮೂರನೇ ದಿನದಂದು, ಆತಿಥೇಯ ಇಂಗ್ಲೆಂಡ್ ತಂಡವು 374 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭ 1 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿತು. ಇದಕ್ಕೂ ಮೊದಲು, ಟೀಮ್ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 396 ರನ್ ಗಳಿಸಿತು. ಭಾರತದ ಪರವಾಗಿ ಯಶಸ್ವಿ ಜೈಸ್ವಾಲ್ 118 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ, ಆಕಾಶ್ ದೀಪ್ ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜಾ ಅರ್ಧಶತಕಗಳನ್ನು ಗಳಿಸಿದರು. ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 224 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಕೇವಲ 247 ರನ್‌ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




