VIDEO: ಸಚಿನ್, ರೋಹಿತ್ ಶರ್ಮಾ ಇದ್ದ ವೇದಿಕೆಯಲ್ಲಿ ಸುನಿಲ್ ಗವಾಸ್ಕರ್ ಮಸ್ತ್ ಡ್ಯಾನ್ಸ್

ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವಿಶೇಷ ಸಂದರ್ಭದಲ್ಲಿ ಮುಂಬೈ ಕ್ರಿಕೆಟ್‌ನ ಎಲ್ಲಾ ದಿಗ್ಗಜರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಸುನಿಲ್ ಗವಾಸ್ಕರ್ ಅವರ ಆ ನೃತ್ಯವು ಎಲ್ಲರ ಗಮನ ಸೆಳೆಯಿತು. ಇದೀಗ ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VIDEO: ಸಚಿನ್, ರೋಹಿತ್ ಶರ್ಮಾ ಇದ್ದ ವೇದಿಕೆಯಲ್ಲಿ ಸುನಿಲ್ ಗವಾಸ್ಕರ್ ಮಸ್ತ್ ಡ್ಯಾನ್ಸ್
Sunil Gavaskar
Follow us
ಝಾಹಿರ್ ಯೂಸುಫ್
|

Updated on: Jan 20, 2025 | 12:08 PM

ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರನ್ನು ನೀವು ಹಲವು ಪಾತ್ರಗಳಲ್ಲಿ ನೋಡಿರಬಹುದು. ಮೊದಲಿಗೆ ಕ್ರಿಕೆಟಿಗ, ಆ ಬಳಿಕ ಬಿಸಿಸಿಐ ಅಧ್ಯಕ್ಷ, ನಂತರ ಕಾಮೆಂಟೇಟರ್. ಇದೀಗ ಡ್ಯಾನ್ಸ್​​ಗೂ ನಾನು ರೆಡಿ ಎಂದು ತೋರಿಸಿದ್ದಾರೆ. ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸುನಿಲ್ ಗವಾಸ್ಕರ್ ವೇದಿಕೆಯಲ್ಲಿ ಕುಣಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್, ​​ವಾಂಖೆಡೆ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಸುನಿಲ್ ಗವಾಸ್ಕರ್ ಅವರು ನೃತ್ಯ ಮಾಡಿರುವ ವೀಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಸಂಗೀತ ನಿರ್ದೇಶಕ ವಿಶಾಲ್ ಮತ್ತು ಶೇಖರ್ ಅವರ ಹಾಡಿಗೆ ಗವಾಸ್ಕರ್ ಡ್ಯಾನ್ಸ್ ಮಾಡುತ್ತಿರುವುದು ಕಾಣಬಹುದು.

ಸುನಿಲ್ ಗವಾಸ್ಕರ್ ಡ್ಯಾನ್ಸ್ ವಿಡಿಯೋ:

ಶೇಖರ್ ಅವರು ಓಂ ಶಾಂತಿ ಓಂ ಹಾದು ಹಾಡುತ್ತಿದ್ದರೆ, ವೇದಿಕೆ ಮುಂದೆ ಬಂದ ಸುನಿಲ್ ಗವಾಸ್ಕರ್ ಕೆಲ ಕ್ಷಣಗಳ ಕಾಲ ಸ್ಟೆಪ್ಸ್ ಹಾಕಿದರು. ಇದೀಗ ಈ ವಿಡಿಯೋ ವೈರಲ್ ಆಗಿದೆ.

ಇನ್ನು ಸುನಿಲ್ ಗವಾಸ್ಕರ್ ಡ್ಯಾನ್ಸ್ ಮಾಡಿದ್ದ ಈ ವೇದಿಕೆ ಮೇಲೆ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಅಜಿಂಕ್ಯ ರಹಾನೆ ಕೂಡ ಕಾಣಿಸಿಕೊಂಡಿದ್ದರು. ಅಲ್ಲದೆ ಗವಾಸ್ಕರ್ ಅವರನ್ನು ಚಪ್ಪಾಳೆಯೊಂದಿಗೆ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಶ್ರೇಯಸ್ ಅಯ್ಯರ್:

ಇನ್ನು ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಮುಂಬೈ ಅನ್ನು ಪ್ರತಿನಿಧಿಸಿದ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದರು. ಇವರಲ್ಲಿ ಪ್ರಮುಖರೆಂದರೆ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶಿವಂ ದುಬೆ ಹಾಗೂ ಶಾರ್ದೂಲ್ ಠಾಕೂರ್.