T20 World Cup: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದಿಂದ ಕೆಎಲ್ ರಾಹುಲ್ ಔಟ್?

| Updated By: ಪೃಥ್ವಿಶಂಕರ

Updated on: Sep 02, 2022 | 8:33 PM

T20 World Cup: ರಾಹುಲ್ ಅವರ ಫಾರ್ಮ್​ ಬಗ್ಗೆ ಕ್ರಿಕೆಟ್ ಪಂಡಿತರು ಪ್ರಶ್ನೆ ಎತ್ತುತ್ತಿದ್ದು, ಫಾರ್ಮ್​ನಲ್ಲಿರುವ ಗಿಲ್​ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ.

T20 World Cup: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದಿಂದ ಕೆಎಲ್ ರಾಹುಲ್ ಔಟ್?
Follow us on

ಹಲವು ದಿನಗಳಿಂದ ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದ ಟೀಂ ಇಂಡಿಯಾ ಓಪನರ್ ಕೆಎಲ್ ರಾಹುಲ್ (KL Rahul) ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಆದರೆ ಅವರ ಬ್ಯಾಟ್‌ನಿಂದ ರನ್‌ಗಳು ಬತ್ತಿ ಹೋಗಿವೆ. ಜಿಂಬಾಬ್ವೆ ವಿರುದ್ಧದ (against Zimbabwe) ಎರಡು ಏಕದಿನ ಪಂದ್ಯಗಳಲ್ಲಿ ರಾಹುಲ್ ಬ್ಯಾಟ್ ಮಂಕಾಗಿತ್ತು. ಆ ಬಳಿಕ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಇದೀಗ ಕೆಎಲ್ ರಾಹುಲ್ ವಿರುದ್ಧ ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಕೆಎಲ್ ರಾಹುಲ್ ಶೀಘ್ರದಲ್ಲೇ ಫಾರ್ಮ್‌ಗೆ ಬರದಿದ್ದರೆ ಅವರ ಸಮಸ್ಯೆಗಳು ಹೆಚ್ಚಾಗಲಿವೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಕೆಎಲ್ ರಾಹುಲ್ ಬದಲಿಗೆ ಶುಭಮನ್ ಗಿಲ್ ಸಾಧ್ಯವೇ?

ಟಿ20 ವಿಶ್ವಕಪ್ ಹತ್ತಿರದಲ್ಲಿದೆ. ಆಯ್ಕೆದಾರರು ಇನ್ ಫಾರ್ಮ್ ಆಟಗಾರರಿಗೆ ಆಸ್ಟ್ರೇಲಿಯಾಕ್ಕೆ ಹೋಗಲು ಅವಕಾಶ ನೀಡುತ್ತಾರೆ. ಈ ಬಗ್ಗೆ ಮಾತನಾಡಿದ ಗವಾಸ್ಕರ್, “ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಶುಭಮನ್ ಗಿಲ್ ತೋರಿದ ಫಾರ್ಮ್, ಅವರು ಖಂಡಿತವಾಗಿಯೂ ರಾಹುಲ್‌ಗೆ ಪರ್ಯಾಯವಾಗಬಲ್ಲರು” ಎಂದಿದ್ದಾರೆ. “ನೀವು ಫಾರ್ಮ್‌ನಲ್ಲಿ ಇಲ್ಲದ ಆಟಗಾರನನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡುವುದರಿಂದ ಪ್ರಯೋಜನವಿಲ್ಲ. “ಟಿ20 ವಿಶ್ವಕಪ್‌ನಲ್ಲಿ ಎರಡರಿಂದ ಮೂರು ಪಂದ್ಯಗಳಲ್ಲಿ ವಿಫಲರಾದ ನಂತರ ಅವರು ಫಾರ್ಮ್‌ಗೆ ಬರುತ್ತಾರೆ ಎಂದು ನೀವು ನಿರೀಕ್ಷಿಸಲಾಗುವುದಿಲ್ಲ. ಹೀಗಾಗಿ ರಾಹುಲ್‌ಗೆ ಕೆಲವು ಪಂದ್ಯಗಳು ಉಳಿದಿದ್ದು, ಅವರು ಉತ್ತಮ ಪ್ರದರ್ಶನ ನೀಡಬೇಕು, ನಂತರ ಮಾತ್ರ ಆಯ್ಕೆ ಸಮಿತಿ ಅವರನ್ನು ಪರಿಗಣಿಸಬೇಕು ಎಂದು ಗವಾಸ್ಕರ್ ಹೇಳಿದರು.

ಇದನ್ನೂ ಓದಿ
ಬದಲಾಗದಿದ್ದರೆ ಟಿ20 ವಿಶ್ವಕಪ್ ಗೆಲ್ಲಲಾಗುವುದಿಲ್ಲ; ಬಿಸಿಸಿಐಗೆ ತಲೆನೋವಾದ ಕೊಹ್ಲಿ, ರೋಹಿತ್, ರಾಹುಲ್..!
Asia Cup 2022: 2 ಬೌಂಡರಿ, 1 ಸಿಕ್ಸರ್‌ ಸಿಡಿಸಿ ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್..!
IND Vs AUS: ಆಸೀಸ್ ವಿರುದ್ಧದ ಟಿ20 ಸರಣಿಗೆ ಸದ್ಯದಲ್ಲೇ ಟೀಂ ಇಂಡಿಯಾ ಪ್ರಕಟ; 18 ಆಟಗಾರರಿಗೆ ಅವಕಾಶ?

ಹಾಂಕಾಂಗ್ ವಿರುದ್ಧ ರಾಹುಲ್ ಸೈಲೆಂಟ್

ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಮೊದಲ ಎಸೆತದಲ್ಲಿ ನಾಸಿನ್ ಶಾ ರಾಹುಲ್ ಅವರನ್ನು ಬೌಲ್ಡ್ ಮಾಡಿದರು. ನಂತರ ಹಾಂಕಾಂಗ್ ವಿರುದ್ಧ 39 ಎಸೆತಗಳಲ್ಲಿ 36 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 100 ಕ್ಕಿಂತ ಕಡಿಮೆ ಇತ್ತು. ಅಲ್ಲದೆ ರಾಹುಲ್​ಗೆ ಮಧ್ಯಮ ಓವರ್‌ಗಳಲ್ಲಿ ಬೌಂಡರಿ ಬಾರಿಸಲು ಸಾಧ್ಯವಾಗಲಿಲ್ಲ. ಹಾಂಕಾಂಗ್ ಸ್ಪಿನ್ನರ್‌ಗಳ ಎದುರು ರಾಹುಲ್‌ಗೆ ಸಲುಭವಾಗಿ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಹುಲ್ ಅವರ ಫಾರ್ಮ್​ ಬಗ್ಗೆ ಕ್ರಿಕೆಟ್ ಪಂಡಿತರು ಪ್ರಶ್ನೆ ಎತ್ತುತ್ತಿದ್ದು, ಫಾರ್ಮ್​ನಲ್ಲಿರುವ ಗಿಲ್​ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಿ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ.

Published On - 8:33 pm, Fri, 2 September 22