ICC U19 World Cup 2022: ಕಿರಿಯರ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್​ಗೆ ಎಂಟ್ರಿ ಕೊಟ್ಟ ಭಾರತ

| Updated By: ಝಾಹಿರ್ ಯೂಸುಫ್

Updated on: Jan 23, 2022 | 8:35 PM

ಕ್ವಾರ್ಟರ್​ಫೈನಲ್​ನಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್​ ಪ್ರವೇಶಿಸಬಹುದು.

ICC U19 World Cup 2022: ಕಿರಿಯರ ವಿಶ್ವಕಪ್​ನಲ್ಲಿ ಕ್ವಾರ್ಟರ್​ಫೈನಲ್​ಗೆ ಎಂಟ್ರಿ ಕೊಟ್ಟ ಭಾರತ
U19 World Cup 2022
Follow us on

ಅಂಡರ್ 19 ವಿಶ್ವಕಪ್​ನಲ್ಲಿ ಭಾರತ ತಂಡವು ಕ್ವಾರ್ಟರ್​ಫೈನಲ್​ಗೆ ಪ್ರವೇಶಿಸಿದೆ. ಕ್ವಾರ್ಟರ್​ಫೈನಲ್​ನಲ್ಲಿ​ ಭಾರತ ತಂಡ ಹಾಲಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ದ ಆಡಲಿದೆ. ಭಾರತ, ಬಾಂಗ್ಲಾದೇಶ ಅಲ್ಲದೆ, ಇಂಗ್ಲೆಂಡ್, ಸೌತ್ ಆಫ್ರಿಕಾ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಎಂಟರ ಘಟ್ಟ ಪ್ರವೇಶಿಸಿವೆ. ಲೀಗ್​ ಹಂತದಲ್ಲಿ ಗ್ರೂಪ್​ ಬಿನಲ್ಲಿ ಅಗ್ರ ತಂಡವಾಗಿ ಹೊರಹೊಮ್ಮಿರುವ ಭಾರತ ಇದೀಗ ಜನವರಿ 29 ರಂದು ನಡೆಯಲಿರುವ ಕ್ವಾರ್ಟರ್​ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ.

ಈ ಬಾರಿಯ ಕಿರಿಯರ ವಿಶ್ವಕಪ್​ನಲ್ಲಿ ಒಟ್ಟು 16 ತಂಡಗಳು ಕಾಣಿಸಿಕೊಂಡಿದ್ದವು. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅದರಂತೆ ಪ್ರತಿ ಗೂಪ್​ನಲ್ಲಿ ಮೊದಲೆರಡು ಸ್ಥಾನ ಪಡೆದ ಎರಡು ತಂಡಗಳು ಮುಂದಿನ ಹಂತಕ್ಕೇರಿದೆ. ಭಾರತ ತಂಡವು ಸೌತ್ ಆಫ್ರಿಕಾ, ಐರ್ಲೆಂಡ್ ಮತ್ತು ಉಗಾಂಡ ತಂಡಗಳನ್ನು ಮಣಿಸಿ ಕ್ವಾರ್ಟರ್​ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾದ ಐವರು ಪ್ರಮುಖ ಆಟಗಾರರು ಕೋವಿಡ್ ಸೋಂಕಿಗೆ ಒಳಗಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾಗ್ಯೂ ಭಾರತ ತಂಡವು ಉಗಾಂಡ ವಿರುದ್ದ 5 ವಿಕೆಟ್ ನಷ್ಟಕ್ಕೆ 405 ರನ್​ಗಳ ಬೃಹತ್ ಮೊತ್ತ ಕಲೆಹಾಕಿ ಎಲ್ಲರ ಗಮನ ಸೆಳೆದಿತ್ತು.

ಇದೀಗ ಕ್ವಾರ್ಟರ್​ಫೈನಲ್​ನಲ್ಲಿ ಕಳೆದ ಬಾರಿಯ ಚಾಂಪಿಯನ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್​ ಪ್ರವೇಶಿಸಬಹುದು. ಹೀಗಾಗಿ ಬಾಂಗ್ಲಾ ವಿರುದ್ದದ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕವಾಗಿದೆ.

ಕ್ವಾರ್ಟರ್​ಫೈನಲ್ ಪಂದ್ಯಗಳ ವೇಳಾಪಟ್ಟಿ ಹೀಗಿದೆ:

ಜನವರಿ 26: ಇಂಗ್ಲೆಂಡ್ vs ಸೌತ್ ಆಫ್ರಿಕಾ, ಸ್ಥಳ: ನಾರ್ತ್ ಸೌಂಡ್

ಜನವರಿ 27: ಅಫ್ಘಾನಿಸ್ತಾನ್ vs ಶ್ರೀಲಂಕಾ; ಸ್ಥಳ: ಕೂಲಿಡ್ಜ್

ಜನವರಿ 28: ಆಸ್ಟ್ರೇಲಿಯಾ vs ಪಾಕಿಸ್ತಾನ್; ಸ್ಥಳ: ನಾರ್ತ್ ಸೌಂಡ್

ಜನವರಿ 29: ಬಾಂಗ್ಲಾದೇಶ vs ಭಾರತ; ಸ್ಥಳ: ನಾರ್ತ್ ಸೌಂಡ್

ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

(Super League Quarter-Finalists of ICC U19 World Cup 2022)

 

Published On - 8:34 pm, Sun, 23 January 22