IPL 2022: ಐಪಿಎಲ್​ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುರೇಶ್ ರೈನಾ

| Updated By: ಝಾಹಿರ್ ಯೂಸುಫ್

Updated on: Mar 22, 2022 | 7:01 PM

IPL 2022: ಈ ಬಾರಿಯ ಐಪಿಎಲ್​ನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ರೈನಾ ಮೊದಲಿನಿಂದಲೂ ಚೆನ್ನೈ ಸಪುರ್ ಕಿಂಗ್ಸ್ ಜೊತೆ ಒಡನಾಟ ಹೊಂದಿದ್ದರು.

IPL 2022: ಐಪಿಎಲ್​ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುರೇಶ್ ರೈನಾ
Suresh raina
Follow us on

ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26 ರಿಂದ ಪ್ರಾರಂಭವಾಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಇರಲಿವೆ. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಹೊಸ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಈಗಾಗಲೇ ಐಪಿಎಲ್​ಗಾಗಿ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಅತ್ತ ಪಂದ್ಯದ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಸಹ ಸಿದ್ಧತೆಗಳನ್ನು ಶುರು ಮಾಡಿಕೊಂಡಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಚಾನೆಲ್ ತನ್ನ ಕಾಮೆಂಟರಿ ತಂಡವನ್ನು ಸಹ ಸಿದ್ಧಪಡಿಸಿದೆ. ಆದರೆ ಈ ಬಾರಿ ಐಪಿಎಲ್​ ಸ್ಟಾರ್ ಆಟಗಾರ ಕಾಮೆಂಟರಿಗೆ ಪಾದಾರ್ಪಣೆ ಮಾಡಲಿದ್ದಾರೆ. ಅದರಂತೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಜೊತೆ ಮಿಸ್ಟರ್ ಐಪಿಎಲ್​ ಖ್ಯಾತಿಯ ಸುರೇಶ್ ರೈನಾ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ರವಿ ಶಾಸ್ತ್ರಿ ಹಾಗೂ ಸುರೇಶ್ ರೈನಾ ಐಪಿಎಲ್‌ನ ಕಾಮೆಂಟರಿ ತಂಡದ ಭಾಗವಾಗಲಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್ ಟ್ವೀಟ್‌ನಲ್ಲಿ ತಿಳಿಸಿದೆ. ಈ ಮೂಲಕ ಕೆಲ ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಯನ್ನು ಸ್ಟಾರ್​ ಸ್ಪೋರ್ಟ್ಸ್​ ಖಚಿತಪಡಿಸಿದೆ. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಸುರೇಶ್ ರೈನಾ ಬದಲಿ ಆಟಗಾರನಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಕೂಡ ಕನ್​ಫರ್ಮ್​ ಆಗಿದೆ.

ರವಿ ಶಾಸ್ತ್ರಿಯವರು ನಿವೃತ್ತರಾದಾಗಿನಿಂದ ಕಾಮೆಂಟರಿ ಲೋಕದಲ್ಲಿ ಕಾಣಿಸಿಕೊಂಡಿದ್ದರು. ದೀರ್ಘಕಾಲ ಈ ಕೆಲಸದಲ್ಲಿ ನಿರತರಾಗಿದ್ದರು. ಆದರೆ 2017 ರಲ್ಲಿ ಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದರು. ನಂತರ ಅವರು ಕಾಮೆಂಟರಿಯಿಂದ ಸಂಪೂರ್ಣವಾಗಿ ದೂರವಾದರು. ಆದರೆ ಕಳೆದ ವರ್ಷ ಟಿ 20 ವಿಶ್ವಕಪ್ ನಂತರ, ಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ರವಿ ಶಾಸ್ತ್ರಿ ಹಳೆಯ ಇನಿಂಗ್ಸ್ ಮುಂದುವರೆಸಲು ಮುಂದಾಗಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಸುರೇಶ್ ರೈನಾ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ರೈನಾ ಮೊದಲಿನಿಂದಲೂ ಚೆನ್ನೈ ಸಪುರ್ ಕಿಂಗ್ಸ್ ಜೊತೆ ಒಡನಾಟ ಹೊಂದಿದ್ದರು. ಆದರೆ ಈ ಬಾರಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ತಂಡವು ಈ ಆಟಗಾರನಿಗಾಗಿ ಹರಾಜು ನಡೆಸಿರಲಿಲ್ಲ. ಅಲ್ಲದೆ ಉಳಿದ ತಂಡಗಳು ಕೂಡ ರೈನಾಗಾಗಿ ಬಿಡ್ಡಿಂಗ್ ಮಾಡಲು ಆಸಕ್ತಿ ತೋರಲಿಲ್ಲ. ಹೀಗಾಗಿ ಇದೀಗ ಸುರೇಶ್ ರೈನಾ ಐಪಿಎಲ್​ನಲ್ಲಿ ಕಾಮೆಂಟೇಟರ್ ಆಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

(Suresh raina and ravi shastri will do commentary in ipl 2022 raina will make a debut)