IPL 2022: ಧೋನಿ ಬಳಿಕ ಸಿಎಸ್‌ಕೆ ತಂಡದ ನಾಯಕ ಯಾರು? ಸಿಕ್ರೇಟ್ ಬಹಿರಂಗಪಡಿಸಿದ ರೈನಾ
ಈ ಬಾರಿ ಕೊನೆಯ ಐಪಿಎಲ್ ಆಗಿರಬಹುದು. ಹೀಗಿರುವಾಗ ಅವರ ನಂತರ ಸಿಎಸ್ ಕೆ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಈಗ ಎದ್ದಿದೆ.
ಐಪಿಎಲ್ 2022ರ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾರ್ಚ್ 26 ರಂದು ಲೀಗ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ಅನ್ನು ಎದುರಿಸಲಿದೆ. ಈ ಬಾರಿಯೂ ಚೆನ್ನೈನ ಕಮಾಂಡ್ ಮಹೇಂದ್ರ ಸಿಂಗ್ ಧೋನಿ ಕೈಯಲ್ಲಿರಲಿದೆ. ಕಳೆದ ಬಾರಿ ಅವರ ನಾಯಕತ್ವದಲ್ಲಿ ಸಿಎಸ್‌ಕೆ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು. ಇದಾಗ್ಯೂ ಈಗ ಧೋನಿಗೆ 40 ವರ್ಷ. ಹೀಗಾಗಿ ಈ ಬಾರಿ ಕೊನೆಯ ಐಪಿಎಲ್ ಆಗಿರಬಹುದು. ಹೀಗಿರುವಾಗ ಅವರ ನಂತರ ಸಿಎಸ್ ಕೆ ನಾಯಕತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಈಗ ಎದ್ದಿದೆ. ಈ ರೇಸ್‌ನಲ್ಲಿ ಅನೇಕ ಆಟಗಾರರಿದ್ದಾರೆ. ಸಿಎಸ್‌ಕೆ ತಂಡದೊಂದಿಗೆ ಅತ್ಯುತ್ತಮ ನಂಟು ಹೊಂದಿರುವ ಮಿಸ್ಟರ್ ಐಪಿಎಲ್ ಖ್ಯಾತಿ ಸುರೇಶ್ ರೈನಾ ಧೋನಿಯ ಉತ್ತರಾಧಿಕಾರಿಯನ್ನು ಹೆಸರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸುರೇಶ್ ರೈನಾ, “ಸಿಎಸ್‌ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಅಂಬಟಿ ರಾಯುಡು, ರಾಬಿನ್ ಉತ್ತಪ್ಪ ಮತ್ತು ಡ್ವೇನ್ ಬ್ರಾವೊ ಅವರಂತಹ ಆಟಗಾರರಿದ್ದಾರೆ. ಧೋನಿಯ ಉತ್ತರಾಧಿಕಾರಿಯಾಗಲು ಈ ಎಲ್ಲಾ ಆಟಗಾರರು ಸಮರ್ಥರಾಗಿದ್ದಾರೆ. ಅವರೆಲ್ಲರೂ ಆಟದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ. ಆದರೆ ಸಿಎಸ್‌ಕೆ ರವೀಂದ್ರ ಜಡೇಜಾಗೆ ನಾಯಕತ್ವ ನೀಡಲಿದೆ ಎಂಬುದು ನನ್ನ ಬಲವಾದ ನಂಬಿಕೆ ಎಂದಿದ್ದಾರೆ ರೈನಾ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಬಳಿಕ ಸಿಎಸ್‌ಕೆ ತಂಡವನ್ನು ಜಡೇಜಾ ಮುನ್ನಡೆಸಲಿದ್ದಾರೆ ಎಂಬ ಸೂಚನೆ ನೀಡಿದ್ದಾರೆ ಸುರೇಶ್ ರೈನಾ.
ಜಡೇಜಾ ಆಯ್ಕೆ ಏಕೆ? ರವೀಂದ್ರ ಜಡೇಜಾ ಧೋನಿ ಉತ್ತರಾಧಿಕಾರಿಯಾಗುವ ನಿರೀಕ್ಷೆಯೂ ಹೆಚ್ಚಿದೆ. ಏಕೆಂದರೆ ಐಪಿಎಲ್ 2022 ರ ಹರಾಜಿನ ಮೊದಲು, ಈ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್ ಉಳಿಸಿಕೊಂಡಿರುವ ನಾಲ್ವರು ಆಟಗಾರರಲ್ಲಿ, ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದರು. 16 ಕೋಟಿ ನೀಡಿ ಜಡೇಜಾ ಅವರನ್ನು CSK ಉಳಿಸಿಕೊಂಡಿದೆ. ಆದರೆ ಎಂಎಸ್ ಧೋನಿ ಎರಡನೇ ಸ್ಥಾನದಲ್ಲಿದ್ದರು. ಅಂದರೆ ಧೋನಿ ಸ್ವತಃ ಜಡೇಜಾಗೆ ಅಗ್ರ ಸ್ಲಾಟ್ ಅನ್ನು ಬಿಟ್ಟಿದ್ದರು. ಅಂದಿನಿಂದ, ಧೋನಿ ಅವರ ಸ್ಥಾನವನ್ನು ಜಡೇಜಾ ತುಂಬಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಇದೀಗ ಸುರೇಶ್ ರೈನಾ ಕೂಡ ಜಡೇಜಾ ಅವರಿಗೆ ನಾಯಕತ್ವ ಸಿಗಲಿದೆ ಎನ್ನುವ ಮೂಲಕ ಈ ಸುದ್ದಿಗಳನ್ನು ಪುಷ್ಠೀಕರಿಸಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!
ಇದನ್ನೂ ಓದಿ: IPL 2022: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಇವರೇ..!
ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?