IPL 2022: ಐಪಿಎಲ್ ಆರಂಭದಲ್ಲೇ ಮುಂಬೈಗೆ ಆಘಾತ! ಬಲಿಷ್ಠ ಡೆಲ್ಲಿ ಎದುರಿನ ಪಂದ್ಯಕ್ಕೆ ತಂಡದ ಸ್ಟಾರ್ ಬ್ಯಾಟರ್ ಅಲಭ್ಯ

Suryakumar Yadav: ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಕಳೆದ ಎರಡು ಸೀಸನ್‌ಗಳಿಂದ ಸೂರ್ಯಕುಮಾರ್ ತಂಡಕ್ಕೆ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ತಾನು ಎಂತಹ ಮ್ಯಾಚ್ ವಿನ್ನರ್ ಎಂದು ಹಲವು ಬಾರಿ ಸಾಬೀತುಪಡಿಸಿದ್ದಾರೆ.

IPL 2022: ಐಪಿಎಲ್ ಆರಂಭದಲ್ಲೇ ಮುಂಬೈಗೆ ಆಘಾತ! ಬಲಿಷ್ಠ ಡೆಲ್ಲಿ ಎದುರಿನ ಪಂದ್ಯಕ್ಕೆ ತಂಡದ ಸ್ಟಾರ್ ಬ್ಯಾಟರ್ ಅಲಭ್ಯ
ಸೂರ್ಯಕುಮಾರ್ ಯಾದವ್
Follow us
TV9 Web
| Updated By: ಪೃಥ್ವಿಶಂಕರ

Updated on: Mar 23, 2022 | 8:12 AM

ಮುಂಬೈ ಇಂಡಿಯನ್ಸ್ (Mumbai Indians) ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) IPL 2022 ರ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ವರದಿಯಾಗಿದೆ . ಮುಂಬೈ ಇಂಡಿಯನ್ಸ್ ಮಾರ್ಚ್ 27 ರಂದು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಐಪಿಎಲ್‌ಗೂ ಮುನ್ನ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟಿ20 ಸರಣಿಯ ವೇಳೆ ಸೂರ್ಯ ಕುಮಾರ್‌ ಗಾಯಗೊಂಡಿದ್ದರು. ಸೂರ್ಯಕುಮಾರ್ ಅವರ ಈ ಗಾಯ ಇದೀಗ ಮುಂಬೈ ಇಂಡಿಯನ್ಸ್ ತಂಡವನ್ನು ಮೀರಿಸಿದೆ. ಸೂರ್ಯಕುಮಾರ್ ಹೆಬ್ಬೆರಳಿಗೆ ಗಾಯವಾದ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy) ಯಲ್ಲಿ ರಿಹ್ಯಾಬ್‌ನಲ್ಲಿದ್ದರು. ಮುಂಬೈ ಇಂಡಿಯನ್ಸ್ ಈ ವರ್ಷ ನಾಲ್ವರು ಆಟಗಾರರನ್ನು ಉಳಿಸಿಕೊಂಡಿದ್ದು, ಸೂರ್ಯಕುಮಾರ್ ಯಾದವ್ ಅವರನ್ನು ಈ ನಾಲ್ವರು ಆಟಗಾರರಲ್ಲಿ ಸೇರಿಸಿಕೊಳ್ಳಲಾಗಿದೆ. ಅವರಲ್ಲದೆ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಕೀರನ್ ಪೊಲಾರ್ಡ್ ಅವರನ್ನು ಉಳಿಸಿಕೊಳ್ಳಲಾಗಿದೆ.

ಮುಂಬೈ ಇಂಡಿಯನ್ಸ್ ಪರ ಮೊದಲ ಪಂದ್ಯ ಆಡುವುದಿಲ್ಲ ಮುಂಬೈ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಪ್ರಮುಖ ಸ್ಥಾನ ಪಡೆದಿದ್ದಾರೆ. ಅದರಲ್ಲೂ ಕಳೆದ ಎರಡು ಸೀಸನ್‌ಗಳಿಂದ ಸೂರ್ಯಕುಮಾರ್ ತಂಡಕ್ಕೆ ಪ್ರಮುಖ ಪಾತ್ರ ವಹಿಸಿದ್ದಾರೆ. ಜೊತೆಗೆ ತಾನು ಎಂತಹ ಮ್ಯಾಚ್ ವಿನ್ನರ್ ಎಂದು ಹಲವು ಬಾರಿ ಸಾಬೀತುಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡದಲ್ಲಿ ಅವರ ಅನುಪಸ್ಥಿತಿ ಮುಂಬೈ ಮೇಲೆ ಒತ್ತಡ ಹೇರುವುದು ಖಂಡಿತ. ಕಳೆದ ಋತುವಿನಲ್ಲಿ, ಮುಂಬೈ ತಂಡವು ಪ್ಲೇ ಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಈ ವರ್ಷ ಅವರಿಗೆ ಪ್ರತಿಯೊಂದು ಪಂದ್ಯವೂ ಬಹಳ ಮುಖ್ಯವಾಗಿದೆ. ಸೂರ್ಯಕುಮಾರ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಹೊರತುಪಡಿಸಿ, ಯಾವುದೇ ಅಂತರರಾಷ್ಟ್ರೀಯ ಭಾರತೀಯ ಬ್ಯಾಟ್ಸ್‌ಮನ್ ತಂಡದಲ್ಲಿ ಇಲ್ಲ. ಸೂರ್ಯಕುಮಾರ್ ಬದಲಿಗೆ ರಮಣದೀಪ್ ಸಿಂಗ್ ಅಥವಾ ಅನ್ಮೋಲ್ಪ್ರೀತ್ ಸಿಂಗ್ ಅವಕಾಶ ಪಡೆಯಬಹುದು. ಅದೇ ಸಮಯದಲ್ಲಿ ಹೈದರಾಬಾದ್‌ನ ಅನ್‌ಕ್ಯಾಪ್ಡ್ ಆಟಗಾರ ತಿಲಕ್ ವರ್ಮಾ ಮೂರನೇ ಸ್ಥಾನದಲ್ಲಿ ಆಡಬಹುದು.

2019 ರಿಂದ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯಾದ ಪರ ಆಡುತ್ತಿದ್ದಾರೆ. ಅಂದಿನಿಂದ ತಂಡಕ್ಕಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್​ನಲ್ಲಿ ಮುಂಬೈ ಪರ ಸೂರ್ಯಕುಮಾರ್ ತೋರಿದ ಆಟದ ಆಧಾರದ ಮೇಲೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಮುಂಬೈನ ಕೊನೆಯ ಫ್ಲಾಪ್ ಸೀಸನ್​ನಲ್ಲೂ ಮಿಂಚಿದ್ದ ಅವರು 22ರ ಸರಾಸರಿಯಲ್ಲಿ 317 ರನ್ ಗಳಿಸಿದ್ದರು.

ಚೇತರಿಕೆಯಲ್ಲಿ ಸೂರ್ಯಕುಮಾರ್ ವೆಸ್ಟ್ ಇಂಡೀಸ್ ವಿರುದ್ಧದ T20I ಸರಣಿಯಲ್ಲಿ ಸೂರ್ಯಕುಮಾರ್ ಉತ್ತಮ ಫಾರ್ಮ್‌ನಲ್ಲಿದ್ದರು. ಜೊತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಕೆಲವು ದಿನಗಳ ಹಿಂದೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಮೂಲಗಳು ಅನಾಮಧೇಯತೆಯ ಷರತ್ತಿನ ಮೇಲೆ, ‘ಸೂರ್ಯ ಪ್ರಸ್ತುತ ಎನ್‌ಸಿಎಯಲ್ಲಿ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಅವರು ಮೊದಲ ಪಂದ್ಯದಲ್ಲಿ ಆಡದಿರುವ ಸಾಧ್ಯತೆಯಿದೆ. ಹಾಗಾಗಿ ಮೊದಲ ಪಂದ್ಯದಲ್ಲಿ ಆಡುವ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಮಂಡಳಿಯ ವೈದ್ಯಕೀಯ ತಂಡ ಸಲಹೆ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಈ ಹೇಳಿಕೆಯ ಆದಾರದ ಮೇಲೆ ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ರೋಹಿತ್ ಪಡೆ ಯಾವ ಪ್ಲೇಯಿಂಗ್ ಇಲೆವೆನೊಂದಿಗೆ ಕಣಕ್ಕಿಳಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IPL Most Wickets: ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್​ಗಳು ಇವರೆ ನೋಡಿ