ಟೀಮ್ ಇಂಡಿಯಾ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ಐಪಿಎಲ್ನಲ್ಲಿ ಭರ್ಜರಿ ಇನಿಂಗ್ಸ್ನಿಂದಲ್ಲ. ಬದಲಾಗಿ ಮುಂಬೈನಲ್ಲಿ ಐಷಾರಾಮಿ ಎರಡು ಫ್ಲ್ಯಾಟ್ಗಳನ್ನು ಖರೀದಿಸುವ ಮೂಲಕ. ಅದು ಕೂಡ 21.1 ಕೋಟಿ ರೂ.ಗೆ…!
ಸೂರ್ಯಕುಮಾರ್ ಯಾದವ್ ಮುಂಬೈನ ದಿಯೋನಾರ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಎರಡೂ ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಇದರ ಒಟ್ಟು ಬೆಲೆ 21.1 ಕೋಟಿ ರೂ. ಎಂದು ವರದಿಯಾಗಿದೆ.
ಈ ಬಾರಿಯ ಐಪಿಎಲ್ಗೂ ಮುನ್ನ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 16.35 ಕೋಟಿ ರೂ.ಗೆ ಉಳಿಸಿಕೊಂಡಿದೆ. ಅಂದರೆ ಐಪಿಎಲ್ 2025 ಕ್ಕೆ ಅವರು ಪಡೆಯುತ್ತಿರುವ ಹಣಕ್ಕಿಂತ ಸುಮಾರು ಒಂದೂವರೆ ಪಟ್ಟು ಹೆಚ್ಚು ಮೊತ್ತ ನೀಡಿ 2 ಮನೆಗಳನ್ನು ಖರೀದಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರ ಎರಡೂ ಫ್ಲಾಟ್‌ಗಳು ಗೋದ್ರೇಜ್ ಸ್ಕೈ ಟೆರೇಸ್ ಯೋಜನೆಯಲ್ಲಿವೆ. ಇದರ ಒಟ್ಟು ಕಾರ್ಪೆಟ್ ಪ್ರದೇಶ 4,222.7 ಚದರ ಅಡಿ. ಅಲ್ಲದೆ ಫ್ಲಾಟ್‌ಗಳನ್ನು 4,568 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.
ಇದೀಗ ಸೂರ್ಯಕುಮಾರ್ ಯಾದವ್ ಖರೀದಿಸಿದ ಎರಡೂ ಫ್ಲಾಟ್‌ಗಳು ಅಪಾರ್ಟ್‌ಮೆಂಟ್‌ನ ಎರಡು ವಿಭಿನ್ನ ಮಹಡಿಗಳಲ್ಲಿವೆ. ಫ್ಲಾಟ್ ಇರುವ ಅಪಾರ್ಟ್‌ಮೆಂಟ್‌ನಲ್ಲಿ 6-ಪದರದ ಕಾರ್ ಪಾರ್ಕಿಂಗ್ ಪ್ರದೇಶವೂ ಇದೆ.
ಸದ್ಯ ಐಪಿಎಲ್ನಲ್ಲಿ ತೊಡಗಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಮುಂದಿನ ಪಂದ್ಯಕ್ಕಾಗಿ ಸಜ್ಜಾಗುತ್ತಿದ್ದಾರೆ. ಇದರ ನಡುವೆಯೇ ಮಹಾನಗರ ಮುಂಬೈನಲ್ಲಿ ಸೂರ್ಯ ಎರಡು ಫ್ಲಾಟ್‌ಗಳನ್ನು ಖರೀದಿಸಿರುವುದು ವಿಶೇಷ.
ಈ ಬಾರಿಯ ಐಪಿಎಲ್ನಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿತ್ತು.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಮಾರ್ಚ್ 29 ರಂದು ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮುಂಬೈ ಪಡೆಯ ನಾಯಕರಾಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೊದಲ ಮ್ಯಾಚ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ಉಪನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ.