
ಅಬುಧಾಬಿಯಲ್ಲಿ ನಡೆಯುತ್ತಿರುವ ಟಿ10 ಲೀಗ್ನಲ್ಲಿ (T10 League 2021) ಇಂಗ್ಲೆಂಡ್ ಆಲ್ರೌಂಡರ್ ಮೊಯೀನ್ ಅಲಿ (Moeen Ali) ಅಬ್ಬರಿಸಿದ್ದಾರೆ. ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಟೀಮ್ ಅಬುಧಾಬಿ ಹಾಗೂ ನಾರ್ತನ್ ವಾರಿಯರ್ಸ್ ನಡುವಣ ಪಂದ್ಯದಲ್ಲಿ ಮೊಯೀನ್ ಅಲಿ ಅಕ್ಷರಶಃ ಅಬ್ಬರಿಸಿದರು. ನಾರ್ತನ್ ಪರ ಕಣಕ್ಕಿಳಿದ ಅಲಿ ಭರ್ಜರಿ ಬ್ಯಾಟಿಂಗ್ ಮೂಲಕ ಈ ಬಾರಿಯ ಟಿ10 ಲೀಗ್ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಟಾಸ್ ಗೆದ್ದ ನಾರ್ತನ್ ವಾರಿಯರ್ಸ್ ನಾಯಕ ರೊವ್ಮ್ಯಾನ್ ಪೊವೆಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಬ್ಯಾಟ್ ಮಾಡಿದ ಟೀಮ್ ಅಬುಧಾಬಿಯ ಪರ ದಕ್ಷಿಣ ಆಫ್ರಿಕಾ ಕಾಲಿನ್ ಇನ್ಗ್ರಾಮ್ ಕೇವಲ 25 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 61 ರನ್ ಬಾರಿಸಿದರು. ಪರಿಣಾಮ ಟೀಮ್ ಅಬುಧಾಬಿಯು ನಿಗದಿತ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಕಲೆಹಾಕಿತು.
60 ಎಸೆತಗಳಲ್ಲಿ 146 ರನ್ಗಳ ಟಾರ್ಗೆಟ್ ಪಡೆದ ನಾರ್ತನ್ ವಾರಿಯರ್ಸ್ ಪರ ಮೊಯೀನ್ ಅಲಿ ಹಾಗೂ ಕೆನ್ನರ್ ಲೂಯಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಬೃಹತ್ ಗುರಿಯನ್ನು ಬೆನ್ನತ್ತಿದ ಈ ಇಬ್ಬರು ಆರಂಭಿಕರು ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್ನಿಂದ ಟೀಮ್ ಅಬುಧಾಬಿ ಬೌಲರುಗಳ ಬೆಂಡೆತ್ತಿದ ಕೆನ್ನರ್-ಅಲಿ ಜೋಡಿ 2 ಓವರ್ನಲ್ಲೇ 33 ರನ್ ಕಲೆಹಾಕಿತು.
ಆ ಬಳಿಕ ಅಕ್ಷರಶಃ ಅಬ್ಬರಿಸಿದ್ದು ಮೊಯೀನ್ ಅಲಿ. ಸಿಕ್ಸ್, ಫೋರ್ಗಳ ಸುರಿಮಳೆಗೈದ ಮೊಯೀನ್ ಅಲಿ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಈ ಬಾರಿಯ ಟಿ10 ಕ್ರಿಕೆಟ್ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದರು. ಅರ್ಧಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ಅಲಿ ಒಟ್ಟು 9 ಸಿಕ್ಸ್ ಸಿಡಿಸಿದರು. ಈ ಮೂಲಕ ಈ ಬಾರಿ ಟೂರ್ನಿಯಲ್ಲಿ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿ ಬ್ಯಾಟರ್ ಎನಿಸಿಕೊಂಡರು.
ಅಂತಿಮವಾಗಿ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 9 ಸಿಕ್ಸ್ನೊಂದಿಗೆ ಅಲಿ ಅಜೇಯ 77 ರನ್ಗಳಿಸಿದರೆ, ಮತ್ತೊಂದೆಡೆ ಕೆನ್ನರ್ ಲೂಯಿಸ್ 32 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 65 ರನ್ ಬಾರಿಸಿದರು. ಪರಿಣಾಮ 9.1 ಓವರ್ನಲ್ಲಿ ನಾರ್ತನ್ ವಾರಿಯರ್ಸ್ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 146 ರನ್ಗಳ ಗುರಿ ಮುಟ್ಟುವ ಮೂಲಕ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಅಂದಹಾಗೆ ಟಿ10 ಲೀಗ್ನಲ್ಲಿ ಅತೀ ವೇಗದ ಅರ್ಧಶತಕದ ದಾಖಲೆ ಅಫ್ಘಾನಿಸ್ತಾನ್ ಬ್ಯಾಟರ್ ಮೊಹಮದ್ ಶೆಹಝಾದ್ ಹಾಗೂ ವೆಸ್ಟ್ ಇಂಡೀಸ್ ದಾಂಡಿಗ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಒಬ್ಬರು ಟಿ10 ಲೀಗ್ನಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ:IPL 2022: RCB ಇಬ್ಬರನ್ನು ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ..!
ಇದನ್ನೂ ಓದಿ: IPL 2022: 16 ಕೋಟಿ ನೀಡಿ, ಇಲ್ಲ ಬಿಟ್ಬಿಡಿ: ಸಂಕಷ್ಟದಲ್ಲಿ SRH ಫ್ರಾಂಚೈಸಿ
ಇದನ್ನೂ ಓದಿ: Vijay Hazare Trophy 2021-22: ವಿಜಯ್ ಹಝಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ
(T10 League 2021: Moeen Ali smashes fastet fifty)