T20 World Cup 2021: ಈ ಒಂದು ವಿಷಯದಲ್ಲಿ ಕೊಹ್ಲಿಗಿಂತ ಬಾಬರ್ ಮುಂದಿದ್ದಾರೆ..!

Virat Kohli vs Babar Azam: ದುಬೈ ಮೈದಾನದಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆ ಬಾಬರ್ ಆಜಂ ಹೆಸರಿನಲ್ಲಿದೆ. ಹೀಗಾಗಿಯೇ ಭಾರತದ ಬೌಲರುಗಳಿಗೆ ಬಾಬರ್ ಕಠಿಣ ಸವಾಲಾಗುವ ಸಾಧ್ಯತೆಯಿದೆ.

T20 World Cup 2021: ಈ ಒಂದು ವಿಷಯದಲ್ಲಿ ಕೊಹ್ಲಿಗಿಂತ ಬಾಬರ್ ಮುಂದಿದ್ದಾರೆ..!
Virat Kohli vs Babar Azam

T20 World Cup 2021:  ದುಬೈ ಸ್ಟೇಡಿಯಂ ಕ್ರಿಕೆಟ್ ಸ್ಟೇಡಿಯಂ ಹೈವೊಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲು ಸಜ್ಜಾಗಿ ನಿಂತಿದೆ. ಸಂಜೆ 7.30 ಕ್ಕೆ ಶುರುವಾಗಲಿರುವ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕಾಗಿ ಈಗಲೇ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾದು ಕುಳಿತಿದ್ದಾರೆ. ಉಭಯ ತಂಡಗಳು ಇದೇ ಮೊದಲ ಬಾರಿಗೆ ದುಬೈ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಹೀಗಾಗಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಅದರಲ್ಲೂ ಪಾಕ್ ತಂಡಕ್ಕೆ ಗೆಲುವು ತಂದುಕೊಡುವ ಸಂಪೂರ್ಣ ಜವಾಬ್ದಾರಿ ನಾಯಕ ಬಾಬರ್ ಆಜಂ ಮೇಲಿದೆ. ಏಕೆಂದರೆ ಬಾಬರ್ ದುಬೈ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ದುಬೈ ಮೈದಾನದ ಟಿ20 ದಾಖಲೆಯನ್ನು ಗಮನಿಸಿದರೆ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮಾತ್ರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಈ ಮೈದಾನದಲ್ಲಿ 28 ಇನ್ನಿಂಗ್ಸ್‌ಗಳನ್ನು ಆಡಿರುವ ಬಾಬರ್​ 33 ಸರಾಸರಿಯಲ್ಲಿ 885 ರನ್ ಕಲೆಹಾಕಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಮೂಡಿ ಬಂದಿರುವುದು ವಿಶೇಷ.

ಮತ್ತೊಂದೆಡೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿ ಇದುವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿಲ್ಲ ಎಂಬುದು ವಿಶೇಷ. ಅದಾಗ್ಯೂ ಕೊಹ್ಲಿ 2014, 2020 ಮತ್ತು 2021 ರ ಐಪಿಎಲ್‌ನಲ್ಲಿ ದುಬೈ ಮೈದಾನದಲ್ಲಿ ಬ್ಯಾಟ್​ ಬೀಸಿದ್ದಾರೆ. ಈ ಮೈದಾನದಲ್ಲಿ 10 ಇನ್ನಿಂಗ್ಸ್‌ ಆಡಿರುವ ಕೊಹ್ಲಿ 304 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳು ಮೂಡಿಬಂದಿದ್ದವು. ಇನ್ನು ಕಳೆದ ಸೀಸನ್​ ಐಪಿಎಲ್​ನಲ್ಲಿ ಇದೇ ಮೈದಾನದಲ್ಲಿ ಕೊಹ್ಲಿ ಅಜೇಯ 90 ರನ್ ಬಾರಿಸಿದ್ದರು. ಅಂದರೆ ದುಬೈ ಮೈದಾನದಲ್ಲಿನ ಒಟ್ಟಾರೆ ಪ್ರದರ್ಶನದಲ್ಲಿ ಕೊಹ್ಲಿಗಿಂತ ಬಾಬರ್ ಮುಂದಿದ್ದಾರೆ.

ಇನ್ನು ದುಬೈ ಮೈದಾನದಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ ಬ್ಯಾಟರ್ ಎಂಬ ದಾಖಲೆ ಬಾಬರ್ ಆಜಂ ಹೆಸರಿನಲ್ಲಿದೆ. ಹೀಗಾಗಿಯೇ ಭಾರತದ ಬೌಲರುಗಳಿಗೆ ಬಾಬರ್ ಕಠಿಣ ಸವಾಲಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಹೈವೊಲ್ಟೇಜ್ ಪಂದ್ಯದಲ್ಲಿ ಬಾಬರ್ ಹೇಗೆ ಬ್ಯಾಟ್ ಬೀಸಲಿದ್ದಾರೆ, ಕೊಹ್ಲಿ ಹೇಗೆ ಆರ್ಭಟಿಸಲಿದ್ದಾರೆ ಕಾದು ನೋಡಬೇಕಿದೆ.

ಇದನ್ನೂ ಓದಿ: India vs Pakistan: 2007ರ ಟಿ20 ವಿಶ್ವಕಪ್ ಫೈನಲ್ ಆಡಿದ್ದ ಇಬ್ಬರು ಆಟಗಾರರ ಮುಖಾಮುಖಿ

ಇದನ್ನೂ ಓದಿ: T20 World cup 2021: ಪಾಕ್ ವಿರುದ್ದದ ಪಂದ್ಯದೊಂದಿಗೆ ಹೊಸ ಸಾಧನೆ ಮಾಡಲಿದ್ದಾರೆ ಕೆಎಲ್ ರಾಹುಲ್, ಪಾಂಡ್ಯ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

(T20 World Cup 2021: babar azam and virat kohli comparision in dubai)

Click on your DTH Provider to Add TV9 Kannada