T20 World Cup 2021: ಟಿ20 ವಿಶ್ವಕಪ್ನಲ್ಲಿ 3 ಪಂದ್ಯ ಗೆದ್ದ ಭಾರತಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ?
T20 World Cup 2021 Price Money: ಸೂಪರ್-12 ಹಂತದಲ್ಲಿ ಆಡಿದ ತಂಡಗಳಿಗೂ ಸುಮಾರು 52 ಲಕ್ಷ ರೂ ಸಂಭಾವನೆಯನ್ನು ನಿಗದಿ ಮಾಡಲಾಗಿದೆ. ಜೊತೆಗೆ ಗೆದ್ದ ಪಂದ್ಯಗಳಿಗೂ ಇಂತಿಷ್ಟು ಸಂಭಾವನೆ ನೀಡಲಾಗುತ್ತದೆ.
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ (T20 World Cup 2021) ಟ್ರೋಫಿ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ (Team India) ಲೀಗ್ ಹಂತದಿಂದಲೇ ಹೊರಬಿದ್ದು ನಿರಾಸೆ ಮೂಡಿಸಿತ್ತು. ಅದರಲ್ಲೂ 9 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪದೇ ಭಾರತ ಹೊರಬಿದ್ದಿದ್ದು ನಿರಾಸೆಗೆ ಕಾರಣವಾಗಿತ್ತು. ಸೂಪರ್ 12 ಹಂತದಲ್ಲಿ ಪಾಕಿಸ್ತಾನ್ ಹಾಗೂ ನ್ಯೂಜಿಲೆಂಡ್ ವಿರುದ್ದ ಸೋತಿದ್ದ ಭಾರತ ಆ ಬಳಿಕ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿತು. ಆದರೆ ಸೆಮಿಫೈನಲ್ಗೇರಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಸೂಪರ್ 12 ಹಂತದಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾಗೂ ಈ ಬಾರಿಯ ವಿಶ್ವಕಪ್ನಲ್ಲಿ ಪ್ರಶಸ್ತಿ ಮೊತ್ತ ಸಿಕ್ಕಿದೆ ಎಂಬುದು ವಿಶೇಷ.
ಹೌದು, ಈ ವಿಶ್ವಕಪ್ನಲ್ಲಿ ಐಸಿಸಿ ಒಟ್ಟು 5.6 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ಘೋಷಿಸಿತ್ತು. ಅಂದರೆ ಭಾರತೀಯ ಮೌಲ್ಯ ಸುಮಾರು 42 ಕೋಟಿ ರೂ. ಈ ಮೊತ್ತವನ್ನು ವಿವಿಧ ಹಂತಗಳ ಪಂದ್ಯಗಳನ್ನು ಗೆದ್ದ ತಂಡಗಳಿಗಾಗಿ ಸಂಭಾವನೆಯಾಗಿ ನೀಡಲಾಗುತ್ತದೆ. ಅದರಂತೆ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 11.89 ಕೋಟಿ) ನಿಗದಿಪಡಿಸಿದರೆ, ರನ್ನರ್ ಅಪ್ ಆದ ತಂಡಕ್ಕೆ 8 ಲಕ್ಷ ಡಾಲರ್ ಸಿಗಲಿದೆ. ಅಂದರೆ ಸುಮಾರು 6 ಕೋಟಿ ರೂ. ನೀಡಲಾಗುತ್ತದೆ.
ಇನ್ನು ಸೂಪರ್-12 ಹಂತದಲ್ಲಿ ಆಡಿದ ತಂಡಗಳಿಗೂ ಸುಮಾರು 52 ಲಕ್ಷ ರೂ ಸಂಭಾವನೆಯನ್ನು ನಿಗದಿ ಮಾಡಲಾಗಿದೆ. ಜೊತೆಗೆ ಗೆದ್ದ ಪಂದ್ಯಗಳಿಗೂ ಇಂತಿಷ್ಟು ಸಂಭಾವನೆ ನೀಡಲಾಗುತ್ತದೆ. ಅದರಂತೆ ಭಾರತ ತಂಡಕ್ಕೆ 52 ಲಕ್ಷ ರೂ. ಸಿಕ್ಕಿದೆ. ಜೊತೆಗೆ ಅಫ್ಘಾನಿಸ್ತಾನ್, ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ದ ಗೆದ್ದಿರುವ ಪಂದ್ಯಗಳಿಗಾಗಿ ಪ್ರತಿ ಪಂದ್ಯಕ್ಕೆ 29.73 ಲಕ್ಷ ರೂ. ನೀಡಲಾಗುತ್ತದೆ. ಅಂದರೆ ಟೀಮ್ ಇಂಡಿಯಾಗೆ 52 ಲಕ್ಷ ರೂ. + 89.19 ಲಕ್ಷ ರೂ (29.73 ಲಕ್ಷ. ರೂ X 3 ಪಂದ್ಯ) = 1.41 ಕೋಟಿ ರೂ. ಸಿಕ್ಕಿದೆ.
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
ಇದನ್ನೂ ಓದಿ: India vs New Zealand: ಭಾರತದ ವಿರುದ್ದದ ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಮಹತ್ವದ ಬದಲಾವಣೆ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
(T20 World Cup 2021: How much money will Team India get?)