ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನ (T20 World Cup 2021) 28ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (India vs New Zealand) ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡರು. ಆದರೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ (Team India) ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 11 ಆಗಿದ್ದ ವೇಳೆ ಆರಂಭಿಕ ಇಶಾನ್ ಕಿಶನ್ ಔಟಾದರೆ, 18 ರನ್ಗಳಿಸಿದ ಕೆಎಲ್ ರಾಹುಲ್ ಕೂಡ ವಿಕೆಟ್ ಒಪ್ಪಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮಾ 14 ರನ್ ಬಾರಿಸಿ ಹೊರನಡೆದರೆ, ನಾಯಕ ವಿರಾಟ್ ಕೊಹ್ಲಿ 9 ರನ್ಗಳಿಸಿ ನಿರ್ಗಮಿಸಿದರು.
ಅಷ್ಟರಲ್ಲಾಗಲೇ ಟೀಮ್ ಇಂಡಿಯಾ 48 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇತ್ತ ಆರಂಭಿಕ ಆಘಾತಕ್ಕೆ ಸಿಲುಕಿದ್ದ ಟೀಮ್ ಇಂಡಿಯಾ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿತು. ಪರಿಣಾಮ 7 ರಿಂದ 15 ಓವರ್ಗಳ ನಡುವೆ ಟೀಮ್ ಇಂಡಿಯಾ ಬ್ಯಾಟರ್ಗಳಿಂದ ಒಂದೇ ಒಂದು ಬೌಂಡರಿ ಬಂದಿರಲಿಲ್ಲ. ಇದರೊಂದಿಗೆ ಈ ಬಾರಿಯ ವಿಶ್ವಕಪ್ನಲ್ಲಿ 7 ರಿಂದ 15 ಓವರ್ಗಳ ನಡುವೆ ಒಂದೇ ಒಂದು ಫೋರ್ ಅಥವಾ ಸಿಕ್ಸ್ ಬಾರಿಸಿದ ತಂಡ ಎಂಬ ಅಪಖ್ಯಾತಿ ಟೀಮ್ ಇಂಡಿಯಾ ಪಾಲಾಯಿತು.
ಈ ಹೀನಾಯ ದಾಖಲೆಗೆ ನಮೀಬಿಯಾ, ಸ್ಕಾಟ್ಲೆಂಡ್, ಸೇರಿದಂತೆ ಅರ್ಹತಾ ಸುತ್ತಿನ ತಂಡಗಳ ಪ್ರದರ್ಶನಗಳನ್ನು ಪರಿಗಣಿಸಲಾಗಿತ್ತು. ಆದರೆ ಈ ಎಲ್ಲಾ ತಂಡಗಳು 7 ರಿಂದ 15 ಓವರ್ಗಳ ನಡುವೆ ಬೌಂಡರಿ ಬಾರಿಸಿದ್ದವು. ಇದಾಗ್ಯೂ ಭಾರತ ತಂಡವು ಪವರ್ಪ್ಲೇ ಬಳಿಕ ಮತ್ತೆ ಬೌಂಡರಿ ಬಾರಿಸಿದ್ದು 16ನೇ ಓವರ್ನಲ್ಲಿ. ಇನ್ನು 7 ರಿಂದ 15 ಓವರ್ಗಳ ನಡುವೆ ಟೀಮ್ ಇಂಡಿಯಾ 3 ವಿಕೆಟ್ ಕಳೆದುಕೊಂಡು ಕೇವಲ 38 ರನ್ ರನ್ ಮಾತ್ರ ಕಲೆಹಾಕಲು ಶಕ್ತರಾಗಿದ್ದರು. ಈ ವೇಳೆ ಬೌಂಡರಿ ಬಾರಿಸಲಾಗದೇ ಟಿ20 ವಿಶ್ವಕಪ್ 2021ರ ಕಳಪೆ ದಾಖಲೆಯೊಂದು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: IPL 2022: ನಾಲ್ವರು ಆಟಗಾರರಿಗೆ 42 ಕೋಟಿ ರೂ. ನಿಗದಿ: ಐಪಿಎಲ್ ಹೊಸ ರಿಟೈನ್ ನಿಯಮ
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
(T20 World Cup 2021: India Not hit a boundary between overs 7 and 15)