India vs Pakistan: ಪಂದ್ಯ ಆರಂಭಕ್ಕೆ ಗಂಟೆಗಳಿರುವಾಗ ಟೀಮ್ ಇಂಡಿಯಾ ಬೌಲರುಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದ ರಿಜ್ವಾನ್

| Updated By: ಝಾಹಿರ್ ಯೂಸುಫ್

Updated on: Oct 25, 2021 | 3:11 PM

T20 World Cup 2021: ಭಾರತ ಬೌಲರುಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಕಣಕ್ಕಿಳಿದಿದ್ದರಿಂದ ಮೊಹಮ್ಮದ್ ರಿಜ್ವಾನ್ ನಾಜೂಕಾಗಿ ಬ್ಯಾಟ್ ಬೀಸಿದ್ದರು. ಇದಕ್ಕೆ ಸಾಕ್ಷಿಯಾಗಿ ಇದೀಗ ಐಸಿಸಿ ತನ್ನ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

India vs Pakistan: ಪಂದ್ಯ ಆರಂಭಕ್ಕೆ ಗಂಟೆಗಳಿರುವಾಗ ಟೀಮ್ ಇಂಡಿಯಾ ಬೌಲರುಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದ ರಿಜ್ವಾನ್
Mohammad Rizwan
Follow us on

T20 World Cup 2021: ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ Team India) ಪಾಕಿಸ್ತಾನ್ (India vs Pakistan) ವಿರುದ್ದ ಸೋತಿದೆ. ಅದರಲ್ಲೂ ಟಿ20 ವಿಶ್ವಕಪ್​ನಲ್ಲಿ 5 ಬಾರಿ ಮಣ್ಣು ಮುಕ್ಕಿಸಿದ್ದ ಭಾರತ ತಂಡವನ್ನು ಪಾಕ್ ತಂಡ ಈ ಬಾರಿ ಹೀನಾಯವಾಗಿ ಸೋಲಿಸಿದೆ. ನಿರೀಕ್ಷಿಯಂತೆ ಪಾಕ್ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದು ಆರಂಭಿಕರು. ಬೌಲಿಂಗ್​ನಲ್ಲಿ ಶಾಹಿನ್ ಶಾ ಅಫ್ರಿದಿ (Shaheen Afridi) ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಬಾಬರ್ ಆಜಂ (Babar Azam) ಹಾಗೂ ಮೊಹಮ್ಮದ್ ರಿಜ್ವಾನ್ (Mohammed Rizwan) ಕಮಾಲ್ ಮಾಡಿದ್ದರು.

ಇತ್ತ ಟೀಮ್ ಇಂಡಿಯಾದಲ್ಲಿ ಬಲಿಷ್ಠ ವೇಗಿಗಳ ದಂಡೇ ಕಾಣಿಸಿಕೊಂಡರೂ ಪಾಕ್ ತಂಡದ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ. ನಾಯಕ ವಿರಾಟ್ ಕೊಹ್ಲಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್​ ಕುಮಾರ್, ಜಡೇಜಾ, ವರುಣ್ ಚಕ್ರವರ್ತಿಯನ್ನು ದಾಳಿಗಿಳಿಸಿದರೂ ಪಾಕ್ ತಂಡ ಆರಂಭಿಕರು ಬಂಡೆಯಂತೆ ಕ್ರೀಸ್ ಕಚ್ಚಿ ನಿಂತಿದ್ದರು. ಅದರಲ್ಲೂ ಮೊಹಮ್ಮದ್ ರಿಜ್ವಾನ್ ಭಾರತೀಯ ಬೌಲರುಗಳನ್ನು ನಿರಾಯಾಸವಾಗಿ ಎದುರಿಸಿದ್ದರು. ಅಂದರೆ ರಿಜ್ವಾನ್ ಪಾಲಿಗೆ ಟೀಮ್ ಇಂಡಿಯಾ ಬೌಲರುಗಳು ಯಾವುದೇ ರೀತಿಯಲ್ಲೂ ಸವಾಲಾಗಲೇ ಇಲ್ಲ.

ಭಾರತ ಬೌಲರುಗಳ ತಂತ್ರಕ್ಕೆ ಪ್ರತಿ ತಂತ್ರ ಹೆಣೆದು ಕಣಕ್ಕಿಳಿದಿದ್ದರಿಂದ ಮೊಹಮ್ಮದ್ ರಿಜ್ವಾನ್ ನಾಜೂಕಾಗಿ ಬ್ಯಾಟ್ ಬೀಸಿದ್ದರು. ಇದಕ್ಕೆ ಸಾಕ್ಷಿಯಾಗಿ ಇದೀಗ ಐಸಿಸಿ ತನ್ನ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದುಬೈ ಮೈದಾನದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಪಿಚ್​ ಬಳಿ ತೆರಳಿದ್ದ ರಿಜ್ವಾನ್ ಟೀಮ್ ಇಂಡಿಯಾ ಬೌಲರುಗಳನ್ನು ಮನದಲ್ಲೇ ಕಲ್ಪಿಸಿ ಹೇಗೆ ಆಡಬೇಕೆಂದು ಯೋಜನೆ ರೂಪಿಸಿದ್ದರು.

ಹೀಗೆ ಮನದಲ್ಲೇ ಟೀಮ್ ಇಂಡಿಯಾ ವೇಗಿಗಳನ್ನು ಮನದಲ್ಲೇ ಊಹಿಸಿ ಪಂದ್ಯ ಶುರುವಾಗುವ ಮುನ್ನ ಅಭ್ಯಾಸ ನಡೆಸಿದ್ದ ರಿಜ್ವಾನ್ ಆ ಎಲ್ಲಾ ಶಾಟ್​ಗಳನ್ನು ಬಾರಿಸಿದ್ದರು ಎಂಬುದು ವಿಶೇಷ. ಅಂದರೆ ಭುವನೇಶ್ವರ್​ ಎಸೆತಗಳು ಹೇಗೆ ಬರಲಿದೆ, ಹೇಗೆ ಉತ್ತರಿಸಬೇಕು..ಶಮಿಯ ಫುಲ್ ಲೆಂಗ್ತ್ ಎಸೆತವನ್ನು ಯಾವ ದಿಕ್ಕಿನತ್ತ ಬಾರಿಸಬೇಕು ಎಂಬ ಬಗ್ಗೆ ಮೊಹಮ್ಮದ್ ರಿಜ್ವಾನ್ ಭರ್ಜರಿ ಪ್ಲ್ಯಾನ್ ರೂಪಿಸಿದ್ದರು. ಅದರಂತೆ ಟೀಮ್ ಇಂಡಿಯಾ ಬೌಲರುಗಳನ್ನು ಲೀಲಾಜಾಲವಾಗಿ ಎದುರಿಸಿ 55 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 79 ರನ್ ಬಾರಿಸಿ ಮಿಂಚಿದ್ದರು. ಇದೀಗ ರಿಜ್ವಾನ್ ಅವರ ಮಾಸ್ಟರ್ ಸ್ಟ್ರೋಕ್ ವಿಡಿಯೋ ವೈರಲ್ ಆಗಿದ್ದು, ಪಾಕ್ ತಂಡ ಆರಂಭಿಕನ ಕಾರ್ಯತಂತ್ರಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು ಮಂಡಿಯೂರಿದ್ದು ಯಾಕೆ ಗೊತ್ತಾ?

ಇದನ್ನೂ ಓದಿ:  Virat Kohli: ಸೋತರೂ ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

 

(T20 World Cup 2021: Mohammad Rizwan’s masterpiece started before a ball was bowled)