T20 World Cup 2021: ವೆಂಕಟೇಶ್ ಅಯ್ಯರ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಗಲ್ಲ, ಯಾಕೆಂದರೆ…

| Updated By: ಝಾಹಿರ್ ಯೂಸುಫ್

Updated on: Oct 27, 2021 | 6:51 PM

T20 World Cup 2021 Hardik Pandya: ಟಿ20 ವಿಶ್ವಕಪ್​ನಲ್ಲಿ 18 ಸದಸ್ಯರ ಬಳಗಕ್ಕೆ ಮಾತ್ರ ಅವಕಾಶ. ಅಂದರೆ 15 ಮಂದಿ ಆಡುವ ಬಳಗದಲ್ಲಿದ್ದರೆ, ಮೂರು ಮಂದಿ ಮೀಸಲು ಆಟಗಾರರು.

T20 World Cup 2021: ವೆಂಕಟೇಶ್ ಅಯ್ಯರ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಗಲ್ಲ, ಯಾಕೆಂದರೆ...
Venkatesh Iyer
Follow us on

ಟಿ20 ವಿಶ್ವಕಪ್​ನ (T20 World Cup 2021) ಮೊದಲ ಪಂದ್ಯದಲ್ಲೇ ಭಾರತ (Team India) ಮುಗ್ಗರಿಸಿದೆ. ಇದೀಗ ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕಾಗಿ ಟೀಮ್ ಇಂಡಿಯಾ (India vs New zealand) ಭರ್ಜರಿ ತಯಾರಿಯಲ್ಲಿದೆ. ಇನ್ನು ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ ಐಪಿಎಲ್​ ಬಳಿಕ ವಿಶ್ವಕಪ್​ನ ಮೊದಲ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ತಂಡದಲ್ಲಿ ಆಲ್​ರೌಂಡರ್ ಆಗಿ ಸ್ಥಾನ ಪಡೆದರೂ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಮಾಡುತ್ತಿಲ್ಲ. ಬೆನ್ನು ನೋವಿನ ಸಮಸ್ಯೆಯಿಂದ ಪಾಂಡ್ಯ ಬೌಲಿಂಗ್ ಮಾಡದ ಕಾರಣ ಟೀಮ್ ಇಂಡಿಯಾ 6ನೇ ಬೌಲರ್​ನ ಸಮಸ್ಯೆಯನ್ನು ಎದುರಿಸುತ್ತಿದೆ. ಇತ್ತ ಬ್ಯಾಟಿಂಗ್​ನಲ್ಲೂ ಪಾಂಡ್ಯ ವಿಫಲರಾಗುತ್ತಿರುವುದು ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಬದಲಿ ಆಲ್​ರೌಂಡರ್​ ಅನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಅದರಲ್ಲೂ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವೆಂಟಕೇಶ್ ಅಯ್ಯರ್ (Venkatesh Iyer) ಅವರಿಗೆ ಚಾನ್ಸ್​ ನೀಡಬೇಕೆಂಬ ಕೂಗುಗಳು ಕೇಳಿ ಬರುತ್ತಿವೆ. ಮೇಡಿಯಂ ಫಾಸ್ಟ್ ಬೌಲರ್ ಆಗಿರುವ ಅಯ್ಯರ್ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎನ್ನಲಾಗುತ್ತಿದೆ. ಆದರೆ ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾದ ಭಾಗವಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ವಿಷಯ.

ಏಕೆಂದರೆ ಟಿ20 ವಿಶ್ವಕಪ್​ನಲ್ಲಿ 18 ಸದಸ್ಯರ ಬಳಗಕ್ಕೆ ಮಾತ್ರ ಅವಕಾಶ. ಅಂದರೆ 15 ಮಂದಿ ಆಡುವ ಬಳಗದಲ್ಲಿದ್ದರೆ, ಮೂರು ಮಂದಿ ಮೀಸಲು ಆಟಗಾರರು. ಅದರಂತೆ ಟೀಮ್ ಇಂಡಿಯಾದ ಮೀಸಲು ಆಟಗಾರರು ದೀಪಕ್ ಚಹರ್, ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್. 15 ಸದಸ್ಯರ ತಂಡದಿಂದ ಯಾರಾದರೂ ಹೊರಗುಳಿದರೆ ಮೀಸಲು ಆಟಗಾರರನ್ನು ಆಯ್ಕೆ ಮಾಡಬಹುದು. ಅಂದರೆ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ದೀಪಕ್ ಚಹರ್, ಅಕ್ಷರ್ ಪಟೇಲ್ ಅಥವಾ ಶ್ರೇಯಸ್ ಅಯ್ಯರ್ ಇವರಲ್ಲಿ ಒಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಇಲ್ಲಿ ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾದ ನೆಟ್​ ಬೌಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಯ್ಯರ್​ಗೆ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಸಿಕ್ಕರೆ ಮಾತ್ರ ಟೀಮ್ ಇಂಡಿಯಾದ ಭಾಗವಾಗಬಹುದು. ಅಂದರೆ 15 ಸದಸ್ಯರ ಬಳಗದಿಂದ ಒಬ್ಬರು ಹೊರಗುಳಿದರೆ, ಮೀಸಲು ಆಟಗಾರರ ಪಟ್ಟಿಯಿಂದ ಒಬ್ಬ ಆಟಗಾರ ಟೀಮ್ ಇಂಡಿಯಾಗೆ ಸೇರ್ಪಡೆಯಾಗಬಹುದು. ಅತ್ತ ಮೀಸಲು ಆಟಗಾರರ ಪಟ್ಟಿಯಲ್ಲಿ ಖಾಲಿ ಇರುವ ಸ್ಥಾನಕ್ಕೆ ಹೊಸ ಆಟಗಾರ ಸೇರ್ಪಡೆಗೊಳಿಸಬಹುದು. ಅದರಂತೆ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಿಂದ ಹೊರಗುಳಿದರೆ ಅಥವಾ ಇನ್ಯಾವುದೊ ಆಟಗಾರ ಹೊರನಡೆದರೆ ಆ ಸ್ಥಾನಕ್ಕೆ ನೇರವಾಗಿ ವೆಂಕಟೇಶ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಬದಲಾಗಿ ಮೀಸಲು ಆಟಗಾರರ ಪಟ್ಟಿಗೆ ವೆಂಕಟೇಶ್ ಅಯ್ಯರ್ ಸೇರ್ಪಡೆಯಾದ ಬಳಿಕವಷ್ಟೇ ಟೀಮ್ ಇಂಡಿಯಾದಲ್ಲಿ ಚಾನ್ಸ್ ನೀಡಬಹುದು. ಹೀಗಾಗಿ ಅಯ್ಯರ್ ಅವರು ಟೀಮ್ ಇಂಡಿಯಾಗೆ ನೇರವಾಗಿ ಆಯ್ಕೆಯಾಗಲು ಸಾಧ್ಯವಿಲ್ಲ.

ಇದನ್ನೂ ಓದಿ: T20 World Cup 2021: ನ್ಯೂಜಿಲೆಂಡ್ ತಂಡಕ್ಕೆ ಬಿಗ್ ಶಾಕ್: ವಿಶ್ವಕಪ್​ನಿಂದ ಪ್ರಮುಖ ಆಟಗಾರ ಹೊರಕ್ಕೆ

ಇದನ್ನೂ ಓದಿ: T20 World Cup 2021: ಟಿ20 ರ‍್ಯಾಂಕಿಂಗ್‌​ನಲ್ಲಿ ನಂಬರ್ 1 ತಂಡ ಯಾವುದು ಗೊತ್ತಾ?

ಇದನ್ನೂ ಓದಿ: T20 World Cup 2021: 90 ಕೆ.ಜಿ ವಿಕೆಟ್ ಕೀಪರ್: ಅದ್ಭುತ ಕ್ಯಾಚ್​ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಶಹಝಾದ್

(T20 World Cup 2021: Venkatesh Iyer to replace Hardik Pandya in Team India squad?)