T20 World Cup 2021: ಇಂಗ್ಲೆಂಡ್, ನ್ಯೂಜಿಲೆಂಡ್ ನೋಡಿ ಕಲಿಯಿರಿ: ಟೀಮ್ ಇಂಡಿಯಾಗೆ ಸೆಹ್ವಾಗ್ ಕಿವಿಮಾತು
Virender Sehwag: ಈ ಬಾರಿಯ ಟಿ20 ವಿಶ್ವಕಪ್ನ ಲೀಗ್ ಹಂತದಿಂದಲೇ ಟೀಮ್ ಇಂಡಿಯಾ ನಿರ್ಗಮಿಸಿ ನಿರಾಸೆ ಮೂಡಿಸಿತು. ಅಂದರೆ ಕಳೆದ ಎಂಟು ವರ್ಷಗಳಲ್ಲಿ ಭಾರತವು ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಟಿ20 ವಿಶ್ವಕಪ್ನ (T20 World Cup 2021) ಮೊದಲ ಸೆಮಿಫೈನಲ್ ರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಇಲ್ಲಿ ಇಂಗ್ಲೆಂಡ್ ಸೋತರೆ ಗೆದ್ದಿದ್ದು ಕ್ರಿಕೆಟ್. ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅಂತಹ ರೋಚಕ ಹೋರಾಟವು ಯಾವುದೇ ಪಂದ್ಯದಲ್ಲೂ ಕಂಡು ಬಂದಿರಲಿಲ್ಲ. ಅದರಲ್ಲೂ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ಗೆ ಸೋಲುಣಿಸಿ ನ್ಯೂಜಿಲೆಂಡ್ ತಂಡವು 2019ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಂಡಿತು. ಭರ್ಜರಿ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳು ಅಂತಿಮದವರೆಗೂ ಹೋರಾಟ ನಡೆಸಿದ್ದರು ಎಂಬುದು ವಿಶೇಷ.
ಈ ಬಾರಿಯ ಟಿ20 ವಿಶ್ವಕಪ್ನ ಲೀಗ್ ಹಂತದಿಂದಲೇ ಟೀಮ್ ಇಂಡಿಯಾ ನಿರ್ಗಮಿಸಿ ನಿರಾಸೆ ಮೂಡಿಸಿತು. ಅಂದರೆ ಕಳೆದ ಎಂಟು ವರ್ಷಗಳಲ್ಲಿ ಭಾರತವು ಯಾವುದೇ ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದರ ನಡುವೆ ಇಂಗ್ಲೆಂಡ್ 2016ರ ಟಿ20 ವಿಶ್ವಕಪ್ ಫೈನಲ್ ಆಡಿತ್ತು. 2019 ರಲ್ಲಿ ತಮ್ಮ ಮೊದಲ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಂಡಿತು. ಇನ್ನು ನ್ಯೂಜಿಲೆಂಡ್ ಕೂಡ ಐಸಿಸಿ ಕ್ರಿಕೆಟ್ ವಿಶ್ವಕಪ್ 2015 ಮತ್ತು 2019 ರ ಫೈನಲ್‌ಗೆ ತಲುಪಿದೆ. ಹಾಗೆಯೇ ಈ ಬಾರಿ ಕೂಡ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಈ ಎರಡು ತಂಡಗಳ ಪ್ರದರ್ಶನದ ಬಗ್ಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ನನ್ನ ಪ್ರಕಾರ ಟೀಮ್ ಇಂಡಿಯಾ ಈ ಎರಡೂ ತಂಡಗಳಿಂದ ಏನನ್ನೂ ಕಲಿಯಬೇಕಿಲ್ಲ. ಏಕೆಂದರೆ ಭಾರತವು ಉತ್ತಮ ತಂಡ. ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ನ್ನು ಸೋಲಿಸುವ ಸಾಮರ್ಥ್ಯವನ್ನೂ ಹೊಂದಿದೆ. ಆದರೆ ಇಲ್ಲಿ ಟೀಮ್ ಇಂಡಿಯಾಗೆ ಬೇಕಿರುವುದು ಪಾಸಿಟಿವಿಟಿ. ಅಂದರೆ ಸಕರಾತ್ಮಕವಾಗಿ ಆಡುವುದನ್ನು ಟೀಮ್ ಇಂಡಿಯಾ ಈ ಎರಡೂ ತಂಡಗಳನ್ನು ನೋಡಿ ಕಲಿಬೇಕಿದೆ ಎಂದು ಸೆಹ್ವಾಗ್ ತಿಳಿಸಿದರು.
ಏಕೆಂದರೆ T20 ಸ್ವರೂಪ ಅಥವಾ ಏಕದಿನ ಕ್ರಿಕೆಟ್ ಎಂಬುದು ಇದು ಕೆಚ್ಚೆದೆಯ ಆಟಗಾರರ ಸ್ವರೂಪವಾಗಿದೆ. ಇಲ್ಲಿ ನೀವು ರಿಸ್ಕ್ಗಳನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ತಮ್ಮ ಆಟದಲ್ಲಿ ರಿಸ್ಕ್ಗಳನ್ನು ಅಳವಡಿಸಿಕೊಳ್ಳದೇ ಫಲಿತಾಂಶವನ್ನು ನಿರೀಕ್ಷಿಸುವಂತಿಲ್ಲ. ಹೀಗಾಗಿ ಕೆಚ್ಚೆದೆಯ ಆಟದೊಂದಿಗೆ ಮುನ್ನುಗ್ಗಿದರೆ ಮಾತ್ರ ಫಲ ಸಿಗಲಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸೆಹ್ವಾಗ್ ತಿಳಿಸಿದರು.
ಟೀಮ್ ಇಂಡಿಯಾ ಮುಂಬರುವ ನ್ಯೂಜಿಲೆಂಡ್ ಸರಣಿಯಲ್ಲೂ ಪಾಸಿಟಿವ್ ಆಗಿ ಕಣಕ್ಕಿಳಿಯಬೇಕು. ಇಲ್ಲಿ ಫಲಿತಾಂಶದ ಬಗ್ಗೆ ಚಿಂತಿಸಬೇಡಿ. ಕಿವೀಸ್ ವಿರುದ್ದ ಧೈರ್ಯದಿಂದ ಆಡಲು ಪ್ರಯತ್ನಿಸಿ. ಧೈರ್ಯಶಾಲಿಯಾಗಿ ಕಣಕ್ಕಿಳಿದರೆ ಮಾತ್ರ ಉತ್ತಮ ಫಲಿತಾಂಶ ಸಿಗಲಿದೆ ಎಂದು ಸೆಹ್ವಾಗ್ ಟೀಮ್ ಇಂಡಿಯಾಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಈ ಜೋಡಿ ವಿಶ್ವಕಪ್ ಗೆದ್ದು ಕೊಡಲಿದೆ ಎಂದ ಮಾಜಿ ಕ್ರಿಕೆಟಿಗ
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ಸರಣಿಗಳ ವೇಳಾಪಟ್ಟಿ ಹೀಗಿದೆ
ಇದನ್ನೂ ಓದಿ: India T20 squad: ಟೀಮ್ ಇಂಡಿಯಾಗೆ ಹೊಸ ನಾಯಕ: ಯುವ ಪಡೆಯನ್ನು ಪ್ರಕಟಿಸಿದ ಬಿಸಿಸಿಐ
(T20 World Cup 2021: Virender Sehwag Said 1 thing India can learn from England and New Zealand)