Team India: ಟೀಮ್ ಇಂಡಿಯಾ ಟಾರ್ಗೆಟ್?: ಅಭ್ಯಾಸವನ್ನೇ ರದ್ದುಗೊಳಿಸಿದ ಭಾರತ ತಂಡ

| Updated By: ಝಾಹಿರ್ ಯೂಸುಫ್

Updated on: Oct 26, 2022 | 6:04 PM

Team Indai: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್.

Team India: ಟೀಮ್ ಇಂಡಿಯಾ ಟಾರ್ಗೆಟ್?: ಅಭ್ಯಾಸವನ್ನೇ ರದ್ದುಗೊಳಿಸಿದ ಭಾರತ ತಂಡ
Team India
Follow us on

T20 World Cup 2022: ಟಿ20 ವಿಶ್ವಕಪ್​ನ ಸೂಪರ್-12 ಸುತ್ತಿನಲ್ಲಿ ರೋಚಕ ಪೈಪೋಟಿ ಕಂಡು ಬರುತ್ತಿದೆ. ಈಗಾಗಲೇ ಟೀಮ್ ಇಂಡಿಯಾ (Team India) ಬಲಿಷ್ಠ ಪಾಕಿಸ್ತಾನ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ. ಆದರೆ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ ಸೋತು, ಶ್ರೀಲಂಕಾ ವಿರುದ್ಧ ಗೆದ್ದಿದೆ. ಇನ್ನು ಇಂಗ್ಲೆಂಡ್ ಅಫ್ಘಾನಿಸ್ತಾನ್ ವಿರುದ್ಧ ಗೆದ್ದು, ಐರ್ಲೆಂಡ್ ವಿರುದ್ಧ ಸೋತಿದೆ. ಇದೀಗ ಟೀಮ್ ಇಂಡಿಯಾ 2ನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಆದರೆ ಹೀಗೆ ಸಜ್ಜಾಗಲು ಹೊರಟಿರುವ ಟೀಮ್ ಇಂಡಿಯಾಗೆ ನಾನಾ ಸಮಸ್ಯೆಗಳು ಎದುರಾಗಿದೆ.

ಅಕ್ಟೋಬರ್ 27 ರಂದು ಸಿಡ್ನಿ ಮೈದಾನದಲ್ಲಿ ನಡೆಯಲಿರುವ ನೆದರ್​ಲ್ಯಾಂಡ್ಸ್​ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಂದರೆ ಟೀಮ್ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್​ನಿಂದ ಅಭ್ಯಾಸ ನಡೆಸಲು ಬರೋಬ್ಬರಿ 42 ಕಿ.ಮೀ ದೂರ ಪ್ರಯಾಣಿಸಬೇಕಿದೆ.

ಸಾಮಾನ್ಯವಾಗಿ ಸ್ಟೇಡಿಯಂ ಸುತ್ತ-ಮುತ್ತಲಿನ ಹೋಟೆಲ್​ಗಳಲ್ಲಿ ಆಟಗಾರರಿಗೆ ತಂಗುವ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ 42 ಕಿ.ಮೀ ದೂರ ಪ್ರಯಾಣ ಮಾಡಿ ಆ ಬಳಿಕ ಅಭ್ಯಾಸ ಮಾಡಬೇಕೆಂದರೆ ಅದು ಆಟಗಾರರನ್ನು ಹೆಚ್ಚು ಆಯಾಸಕ್ಕೆ ದೂಡುತ್ತದೆ. ಹೀಗಾಗಿ ಅಭ್ಯಾಸವನ್ನೇ ಟೀಮ್ ಇಂಡಿಯಾ ರದ್ದುಗೊಳಿಸಿದೆ.

ಇದನ್ನೂ ಓದಿ
Virat Kohli: ಒಂದಲ್ಲ, ಎರಡಲ್ಲ…ಹಲವು ವಿಶ್ವ ದಾಖಲೆಗಳನ್ನು ಉಡೀಸ್ ಮಾಡಿದ ಕಿಂಗ್ ಕೊಹ್ಲಿ
India vs Pakistan: ಪಾಕ್​ನ ಬಗ್ಗು ಬಡಿದು ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
IND vs PAK: ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ
India vs Pakistan: ಹೊಸ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

ಏಕೆಂದರೆ ಅಕ್ಟೋಬರ್ 27 ರಂದು ಟೀಮ್ ಇಂಡಿಯಾ ನೆದರ್​ಲ್ಯಾಂಡ್ಸ್​ ವಿರುದ್ಧ ಕಣಕ್ಕಿಳಿಯಬೇಕಿದ್ದು, ಅದಕ್ಕೂ ಮುನ್ನ 84 ಕಿ.ಮೀ ಪ್ರಯಾಣದ ಜೊತೆ ಅಭ್ಯಾಸ ನಡೆಸುವುದು ಅಂದುಕೊಂಡಷ್ಟು ಸುಲಭವಲ್ಲ. ಇದು ಮರುದಿನ ಕಣಕ್ಕಿಳಿಯುವ ಆಟಗಾರರ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಆಟಗಾರರ ತಾಲೀಮನ್ನೇ ರದ್ದುಗೊಳಿಸಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಐಸಿಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಆಹಾರದ ವಿಷಯದಲ್ಲೂ ನಿರ್ಲಕ್ಷ್ಯ:

ಟೀಮ್ ಇಂಡಿಯಾ ಆಟಗಾರರು ಮಂಗಳವಾರ ಅಭ್ಯಾಸ ಮುಗಿಸಿ ಕ್ರೀಡಾಂಗಣದ ಹೋಟೆಲ್​ಗೆ ಆಹಾರಕ್ಕಾಗಿ ತೆರಳಿದ್ದರು. ಸಾಮಾನ್ಯವಾಗಿ ಆಟಗಾರರಿಗೆ ಬೇಕಾದ ಆಹಾರ ವ್ಯವಸ್ಥೆಯನ್ನೂ ಕೂಡ ಐಸಿಸಿ ಮಾಡಿರುತ್ತದೆ. ಆದರೆ ಟೀಮ್ ಇಂಡಿಯಾ ಆಟಗಾರರ ವಿಷಯದಲ್ಲಿ ನಿರ್ಲಕ್ಷ್ಯವಹಿಸಲಾಗಿದೆ.

ಹೋಟೆಲ್​ಗೆ ತೆರಳಿದ್ದ ಟೀಮ್ ಇಂಡಿಯಾ ಆಟಗಾರರಿಗೆ ಅಲ್ಲಿನ ಸಿಬ್ಬಂದಿಗಳು ತಣ್ಣನೆಯ ಸ್ಯಾಂಡ್​ವಿಚ್​​ಗಳನ್ನು ನೀಡಿದ್ದರು. ಇದರ ಬಗ್ಗೆ ಕೂಡ ಟೀಮ್ ಇಂಡಿಯಾ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಣ್ಣುಗಳನ್ನು ತಿನ್ನುವ ಮೂಲಕ ಟೀಮ್ ಇಂಡಿಯಾ ಆಟಗಾರರು ಹೋಟೆಲ್​ಗೆ ಮರಳಿದ್ದರು ಎಂದು ವರದಿಯಾಗಿದೆ.

ಇದೀಗ ಆಸ್ಟ್ರೇಲಿಯಾದಲ್ಲಿ ಆಟಗಾರರಿಗೆ ಸೂಕ್ತ ವ್ಯವಸ್ಥೆ ಮಾಡದಿರುವ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಐಸಿಸಿ ಮುಂದೆ ತಮ್ಮ ಅಸಮಾಧಾನ ಹೊರಹಾಕಿದೆ. ಆದರೆ ಮಹತ್ವದ ಟೂರ್ನಿಯಲ್ಲಿ ಭಾರತ ತಂಡಕ್ಕೆ ಸೂಕ್ತ ವ್ಯವಸ್ಥೆ ಮಾಡದೇ ಟಾರ್ಗೆಟ್ ಮಾಡಲಾಗುತ್ತಿದೆಯಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಭಾರತ ತಂಡ ಹೀಗಿದೆ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.