
ಇಂದು ಟಿ20 ವಿಶ್ವಕಪ್‌ನಲ್ಲಿ (T20 World Cup) ಇಂಗ್ಲೆಂಡ್ ಹಾಗೂ ಶ್ರೀಲಂಕಾ (England vs Sri Lanka) ನಡುವೆ ನಿರ್ಣಾಯಕ ಪಂದ್ಯ ನಡೆಯುತ್ತಿದೆ. ಇಂಗ್ಲೆಂಡ್ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸೋಲು ಕಂಡರೆ ಅಥವಾ ಪಂದ್ಯದ ಫಲಿತಾಂಶ ಬಾರದಿದ್ದರೆ ಇಂಗ್ಲೆಂಡ್‌ನ ಸೆಮಿಸ್ ಫಲಿತಾಂಶದಲ್ಲಿ ಬದಲಾವಣೆಯಾಗಲಿದೆ. ಮತ್ತೊಂದೆಡೆ, ಶ್ರೀಲಂಕಾ ತಂಡ ಈಗಾಗಲೇ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಹೀಗಾಗಿ ಗೆಲುವಿನೊಂದಿಗೆ ವಿಶ್ವಕಪ್‌ಗೆ ವಿದಾಯ ಹೇಳುವ ಗುರಿಯೊಂದಿಗೆ ಲಂಕಾ ತಂಡ ಅಖಾಡಕ್ಕಿಳಿಯಲಿದೆ. ಅಲ್ಲದೆ ಆಸ್ಟ್ರೇಲಿಯಾದ ಕಣ್ಣು ಕೂಡ ಈ ಪಂದ್ಯದ ಮೇಲಿದ್ದು, ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಆಸ್ಟ್ರೇಲಿಯಾದ ಸೆಮಿಫೈನಲ್ ಟಿಕೆಟ್ ಖಚಿತವಾಗಲಿದೆ.
ಇಂಗ್ಲೆಂಡ್ ಮೇಲುಗೈ..
ಈ ಪಂದ್ಯದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಲಿದೆ. ವಾಸ್ತವವಾಗಿ, ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಇದುವರೆಗೆ ನಡೆದಿರುವ 13 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿರುವ ಇಂಗ್ಲೆಂಡ್ ತಂಡ ಸ್ವಾಭಾವಿಕವಾಗಿ ವಿಶ್ವಾಸದಲ್ಲಿ ಬೀಗುತ್ತಿದೆ. ಅಲ್ಲದೆ ವಿಶ್ವಕಪ್‌ಗೂ ಮುನ್ನವೇ ಈ ತಂಡ ಆಸ್ಟ್ರೇಲಿಯ ಹಾಗೂ ಪಾಕಿಸ್ತಾನ ತಂಡಗಳನ್ನು ಟಿ20 ಸರಣಿಯಲ್ಲಿ ಸೋಲಿಸಿತ್ತು. ಮತ್ತೊಂದೆಡೆ, ಇದುವರೆಗಿನ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾದ ಪ್ರದರ್ಶನದಲ್ಲಿ ವಿಶೇಷವೇನೂ ಇಲ್ಲ. ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಅವರು ನಮೀಬಿಯಾದಂತಹ ಅನಾನುಭವಿ ತಂಡದೆದುರು ಸೋಲನುಭವಿಸಿದ್ದರು. ಸೂಪರ್-12 ಸುತ್ತಿನಲ್ಲೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎದುರು ಹೀನಾಯವಾಗಿ ಲಂಕಾ ತಂಡ ಸೋತಿತ್ತು.
ಆಸ್ಟ್ರೇಲಿಯಾದ ಭವಿಷ್ಯ ಈ ಪಂದ್ಯದ ಮೇಲೆ
ಗ್ರೂಪ್ 1ರಿಂದ ಯಾವ ತಂಡ ಎರಡನೇ ತಂಡವಾಗಿ ಸೆಮೀಸ್ ತಲುಪುಲಿದೆ ಎಂಬುದು ಈ ಪಂದ್ಯದೊಂದಿಗೆ ನಿರ್ಧಾರವಾಗಲಿದೆ. ಸದ್ಯ ಈ ಸ್ಥಾನಕ್ಕಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಪೈಪೋಟಿ ನಡೆಸುತ್ತಿವೆ. ಆದಾಗ್ಯೂ, ಆಸ್ಟ್ರೇಲಿಯಾ 5 ಪಂದ್ಯಗಳಲ್ಲಿ 3 ಗೆಲುವು, 1 ಸೋಲು ಮತ್ತು 1 ಪಂದ್ಯದ ರದ್ದತಿಯೊಂದಿಗೆ ಒಟ್ಟು 7 ಅಂಕಗಳನ್ನು ಹೊಂದಿದೆ. ಇನ್ನು ಇಂಗ್ಲೆಂಡ್ ತಂಡದ ಮಟ್ಟಿಗೆ ಹೇಳುವುದಾದರೆ, 4 ಪಂದ್ಯಗಳಲ್ಲಿ 2 ಗೆಲುವು, 1 ಸೋಲು ಹಾಗೂ 1 ಪಂದ್ಯ ರದ್ದತಿಯೊಂದಿಗೆ ಒಟ್ಟು 5 ಅಂಕ ಗಳಿಸಿದೆ. ಶ್ರೀಲಂಕಾ ವಿರುದ್ಧ ಗೆದ್ದರೆ ಸೆಮಿಸ್ ಪಟ್ಟಿಗೆ ಆಂಗ್ಲರು ಪ್ರವೇಶಿಸಲಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದೆ. ಏಕೆಂದರೆ ಎರಡೂ ತಂಡಗಳು ಅಂತಿಮವಾಗಿ 7 ಅಂಕಗಳನ್ನು ಪಡೆಯಲ್ಲಿದ್ದು, ನೆಟ್ ರನ್ ರೇಟ್ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾಕ್ಕಿಂತ ಮುಂದಿರುವುದರಿಂದ ಆಸೀಸ್ಗೆ ಕಂಟಕವಾಗಲಿದೆ
ಈ ಪಂದ್ಯಕ್ಕೆ ಎರಡೂ ತಂಡಗಳು..
ಇಂಗ್ಲೆಂಡ್ ಪ್ಲೇಯಿಂಗ್ XI: ಜೋಸ್ ಬಟ್ಲರ್(ನಾಯಕ), ಅಲೆಕ್ಸ್ ಹೇಲ್ಸ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಸ್ಯಾಮ್ ಕರನ್, ಡೇವಿಡ್ ಮಲನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್
ಶ್ರೀಲಂಕಾ ಪ್ಲೇಯಿಂಗ್ XI: ಪಾತುಮ್ ನಿಸಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ಕಸುನ್ ರಜಿತಾ
Published On - 1:30 pm, Sat, 5 November 22