T20 World Cup 2024: ನ್ಯೂಝಿಲೆಂಡ್ಗೆ ಪವರ್ಫುಲ್ ಜಯ: ಆದರೂ ದ್ವಿತೀಯ ಸುತ್ತಿಗೆ ಇಲ್ಲ ಚಾನ್ಸ್
T20 World Cup 2024: ನ್ಯೂಝಿಲೆಂಡ್ ತಂಡವು ಈಗಾಗಲೇ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೋಲನುಭವಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಕೇನ್ ವಿಲಿಯಮ್ಸನ್ ಪಡೆ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತ್ತು. ಈ ಎರಡು ಸೋಲುಗಳಿಂದಾಗಿ ಇದೀಗ ನ್ಯೂಝಿಲೆಂಡ್ ಸೂಪರ್-8 ರೇಸ್ನಿಂದ ಹೊರಬಿದ್ದಿದೆ.
T20 World Cup 2024: ಟಿ20 ವಿಶ್ವಕಪ್ನ 32ನೇ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಜಯಭೇರಿ ಬಾರಿಸಿದೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಸೋತಿದ್ದ ಕಿವೀಸ್ ಪಡೆ, 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಉಗಾಂಡ ವಿರುದ್ಧ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಉಗಾಂಡ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಉಗಾಂಡ ತಂಡವು ಕಿವೀಸ್ ಪಡೆಯ ಮಾರಕ ದಾಳಿಗೆ ತತ್ತರಿಸಿ ಕೇವಲ 17 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ನಾಯಕ ಮಸಾಬಾ 20 ಎಸೆತಗಳನ್ನು ಎದುರಿಸಿ ಕ್ರೀಸ್ ಕಚ್ಚಿ ನಿಂತರು. ಪರಿಣಾಮ ಉಗಾಂಡ ತಂಡವು ಆಲೌಟ್ ಆಗಲು 18.4 ಓವರ್ಗಳನ್ನು ತೆಗೆದುಕೊಂಡಿತು. ಅಂತಿಮವಾಗಿ 19ನೇ ಓವರ್ನಲ್ಲಿ ಕೇವಲ 40 ರನ್ಗಳಿಸಿ ಉಗಾಂಡ ಇನಿಂಗ್ಸ್ ಅಂತ್ಯಗೊಳಿಸಿದೆ.
ನ್ಯೂಝಿಲೆಂಡ್ ಪರ ಕರಾರುವಾಕ್ ದಾಳಿ ಸಂಘಟಿಸಿದ ಟಿಮ್ ಸೌಥಿ 4 ಓವರ್ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಇನ್ನು ಟ್ರೆಂಟ್ ಬೌಲ್ಟ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್ ತಲಾ 2 ವಿಕೆಟ್ ಕಬಳಿಸಿದರು.
41 ರನ್ಗಳ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 5.2 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ. ಈ ಮೂಲಕ ಪವರ್ಪ್ಲೇನಲ್ಲೇ ಪಂದ್ಯ ಮುಗಿಸಿ 9 ವಿಕೆಟ್ಗಳ ಪವರ್ಫುಲ್ ಜಯ ಸಾಧಿಸಿದೆ.
ದ್ವಿತೀಯ ಸುತ್ತಿನಿಂದ ಔಟ್:
ನ್ಯೂಝಿಲೆಂಡ್ ತಂಡವು ಈಗಾಗಲೇ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಕಿವೀಸ್ ಪಡೆ ಮುಂದಿನ ಮ್ಯಾಚ್ನಲ್ಲಿ ಗೆದ್ದರೂ ಒಟ್ಟು 4 ಅಂಕಗಳನ್ನು ಮಾತ್ರ ಸಂಪಾದಿಸಲಿದೆ.
ಅತ್ತ ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ತಲಾ 3 ಗೆಲುವುಗಳೊಂದಿಗೆ 6 ಅಂಕಗಳಿಸಿ ಈಗಾಗಲೇ ಸೂಪರ್-8 ಹಂತಕ್ಕೇರಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಗೆದ್ದರೂ ನ್ಯೂಝಿಲೆಂಡ್ ತಂಡಕ್ಕೆ ಮುಂದಿನ ಹಂತಕ್ಕೇರಲು ಸಾಧ್ಯವಾಗುವುದಿಲ್ಲ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಡೆವೊನ್ ಕಾನ್ವೆ (ವಿಕೆಟ್ ಕೀಪರ್) , ಫಿನ್ ಅಲೆನ್ , ರಚಿನ್ ರವೀಂದ್ರ , ಕೇನ್ ವಿಲಿಯಮ್ಸನ್ (ನಾಯಕ) , ಡೇರಿಲ್ ಮಿಚೆಲ್ , ಗ್ಲೆನ್ ಫಿಲಿಪ್ಸ್ , ಜೇಮ್ಸ್ ನೀಶಮ್ , ಮಿಚೆಲ್ ಸ್ಯಾಂಟ್ನರ್ , ಟಿಮ್ ಸೌಥಿ , ಟ್ರೆಂಟ್ ಬೌಲ್ಟ್ , ಲಾಕಿ ಫರ್ಗುಸನ್.
ಇದನ್ನೂ ಓದಿ: T20 World Cup 2024: ವಿಶ್ವ ದಾಖಲೆಯ ವಿಜಯ ಸಾಧಿಸಿದ ಇಂಗ್ಲೆಂಡ್
ಉಗಾಂಡ ಪ್ಲೇಯಿಂಗ್ 11: ರೋನಕ್ ಪಟೇಲ್ , ಸೈಮನ್ ಸ್ಸೆಸಾಜಿ , ರಾಬಿನ್ಸನ್ ಒಬುಯಾ , ರಿಯಾಜತ್ ಅಲಿ ಶಾ , ಅಲ್ಪೇಶ್ ರಾಮ್ಜಾನಿ , ದಿನೇಶ್ ನಕ್ರಾಣಿ , ಕೆನ್ನೆತ್ ವೈಸ್ವಾ , ಬ್ರಿಯಾನ್ ಮಸಾಬಾ (ನಾಯಕ) , ಫ್ರೆಡ್ ಅಚೆಲಂ (ವಿಕೆಟ್ ಕೀಪರ್) , ಜುಮಾ ಮಿಯಾಗಿ , ಕಾಸ್ಮಾಸ್ ಕ್ಯೆವುಟಾ.