USA ವಿರುದ್ಧ ಹೀನಾಯ ಸೋಲು; ಪಾಕ್ ತಂಡದ ಖಾಸಗಿ ಔತಣಕೂಟ ರದ್ದು! ಫ್ಯಾನ್ಸ್​ಗೆ ಹಣ ವಾಪಸ್

T20 World Cup 2024: ಪಾಕಿಸ್ತಾನಿ ಆಟಗಾರರೊಂದಿಗೆ ನ್ಯೂಯಾರ್ಕ್‌ನಲ್ಲಿ ಅಭಿಮಾನಿಗಳಿಗೆ ಖಾಸಗಿ ಔತಣಕೂಟವನ್ನು ಆಯೋಜಿಸುವ ಪಿಸಿಬಿ ನಡೆಗೆ ಎಲ್ಲೆಡೆ ವಿರೋದ ವ್ಯಕ್ತವಾಗಿತ್ತು. ಇದೀಗ ಈ ಖಾಸಗಿ ಔತಣಕೂಟವನ್ನು ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತರೊಬ್ಬರು ಹೇಳಿದ್ದಾರೆ. ಔತಣಕೂಟ ರದ್ದಾದ ಬಳಿಕ ಅಭಿಮಾನಿಗಳ ಹಣವನ್ನೂ ಮಂಡಳಿ ವಾಪಸ್ ಮಾಡಬೇಕಿದೆ.

USA ವಿರುದ್ಧ ಹೀನಾಯ ಸೋಲು; ಪಾಕ್ ತಂಡದ ಖಾಸಗಿ ಔತಣಕೂಟ ರದ್ದು! ಫ್ಯಾನ್ಸ್​ಗೆ ಹಣ ವಾಪಸ್
ಪಾಕಿಸ್ತಾನ ತಂಡ
Follow us
ಪೃಥ್ವಿಶಂಕರ
|

Updated on:Jun 07, 2024 | 5:35 PM

ಆರಂಭವಾಗಿ ಒಂದು ವಾರ ಕಳೆದರೂ ಅಭಿಮಾನಿಗಳಲ್ಲಿ ಟಿ20 ಕ್ರಿಕೆಟ್​ನ ರುಚಿ ಹತ್ತಿಸುವಲ್ಲಿ ವಿಫಲವಾಗಿದ್ದ 2024 ರ ಟಿ20 ವಿಶ್ವಕಪ್ (T20 World Cup 2024) ತನ್ನ 11 ನೇ ಪಂದ್ಯದಲ್ಲಿ ಅಭಿಮಾನಿಗಳಿಗೆ ಮನರಂಜನೆಯ ರಸದೌತಣವನ್ನೇ ನೀಡಿದರೆ, ಇತ್ತ ವಿಶ್ವಕಪ್ ಗೆಲ್ಲಬೇಕು ಎಂದು ಬಂದಿದ್ದ ಬಲಿಷ್ಠ ತಂಡಕ್ಕೆ ಆಘಾತ ನೀಡಿದೆ. ಈ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಅಮೆರಿಕ (Pakistan vs America), ಟಿ20 ವಿಶ್ವಕಪ್​ನ ಸಂಪೂರ್ಣ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಇಷ್ಟು ದಿನ ಬಲಿಷ್ಠ ತಂಡಗಳೆದುರು ಶರಣಾಗುತ್ತಿದ್ದ ಪಾಕ್ ತಂಡ, ಇದೀಗ ಕ್ರಿಕೆಟ್ ಶಿಶು ಅಮೆರಿಕ ವಿರುದ್ಧ ಮುಜುಗರದ ಸೋಲನ್ನು ಎದುರಿಸಿದೆ. ಈ ಸೋಲು ಪಾಕ್ ತಂಡವನ್ನು ಎಷ್ಟು ಗಾಸಿಗೊಳಿಸಿದೆ ಎಂದರೆ, ಟೀಂ ಇಂಡಿಯಾ (Team India) ವಿರುದ್ಧದ ಪಂದ್ಯಕ್ಕೂ ಮುನ್ನ ಅಭಿಮಾನಿಗಳೊಂದಿಗೆ ಖಾಸಗಿ ಔತಣಕೂಟ (Private Dinner Party) ನಡೆಸಲು ಮುಂದಾಗಿದ್ದ ಪಾಕ್ ಮಂಡಳಿ ಇದೀಗ ಆ ಔತಣಕೂಟವನ್ನು ರದ್ದುಗೊಳಿಸಿದೆ.

ಔತಣಕೂಟ ರದ್ದು

ಟಿ20 ವಿಶ್ವಕಪ್‌ಗಾಗಿ ಅಮೆರಿಕಕ್ಕೆ ಕಾಲಿಟ್ಟಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತನ್ನ ಅಭಿಮಾನಿಗಳಿಗೆ ತಂಡದೊಂದಿಗೆ ಖಾಸಗಿ ಔತಣಕೂಟವನ್ನು ಏರ್ಪಟ್ಟಿಸಿತ್ತು. ಈ ಔತಣಕೂಟದಲ್ಲಿ ಭಾಗವಹಿಸಲು 25 ಡಾಲರ್​ಗಳ ಶುಲ್ಕವನ್ನು ಸಹ ನಿಗದಿಪಡಿಸಿತ್ತು. ಪಾಕ್ ಮಂಡಳಿಯ ಈ ನಡೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅಮೆರಿಕ ವಿರುದ್ಧದ ನಾಚಿಕೆಗೇಡಿನ ಸೋಲಿನ ನಂತರ ಪಿಸಿಬಿ ಈ ಖಾಸಗಿ ಔತಣಕೂಟವನ್ನು ರದ್ದು ಮಾಡಿದೆ ಎಂಬ ಸುದ್ದಿ ಬಂದಿದೆ.

ವಾಸ್ತವವಾಗಿ ಪಾಕಿಸ್ತಾನಿ ಆಟಗಾರರೊಂದಿಗೆ ನ್ಯೂಯಾರ್ಕ್‌ನಲ್ಲಿ ಅಭಿಮಾನಿಗಳಿಗೆ ಖಾಸಗಿ ಔತಣಕೂಟವನ್ನು ಆಯೋಜಿಸುವ ಪಿಸಿಬಿ ನಡೆಗೆ ಎಲ್ಲೆಡೆ ವಿರೋದ ವ್ಯಕ್ತವಾಗಿತ್ತು. ಇದೀಗ ಈ ಖಾಸಗಿ ಔತಣಕೂಟವನ್ನು ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನಿ ಪತ್ರಕರ್ತರೊಬ್ಬರು ಹೇಳಿದ್ದಾರೆ. ಔತಣಕೂಟ ರದ್ದಾದ ಬಳಿಕ ಅಭಿಮಾನಿಗಳ ಹಣವನ್ನೂ ಮಂಡಳಿ ವಾಪಸ್ ಮಾಡಬೇಕಿದೆ.

T20 World Cup 2024: ‘ಹೃದಯ ಒಡೆದಿದೆ, ಇನ್ಮೇಲೆ ಸಪೋರ್ಟ್​ ಮಾಡಲ್ಲ’; ಪಾಕ್ ಅಭಿಮಾನಿಯ ಅಳಲು

ಡ್ರೆಸ್ಸಿಂಗ್ ರೂಮ್​ನಲ್ಲಿ ನೀರವ ಮೌನ

ಪಾಕಿಸ್ತಾನಿ ತಂಡದ ಮೂಲಗಳನ್ನು ಉಲ್ಲೇಖಿಸಿ, ಜೂನ್ 9 ರಂದು ಭಾರತ ವಿರುದ್ಧದ ಪಂದ್ಯವನ್ನು ಆಡಲು ಬಾಬರ್ ಪಡೆ ನ್ಯೂಯಾರ್ಕ್‌ಗೆ ತಲುಪಿದೆ ಎಂದು ತಿಳಿದುಬಂದಿದೆ. ಅಮೆರಿಕ ವಿರುದ್ಧ ಸೋತ ನಂತರ ಆಟಗಾರರು ತುಂಬಾ ಬೇಸರಗೊಂಡಿದ್ದು, ನಿರಾಸೆಯಿಂದ ಕಂಗೆಟ್ಟಿದ್ದಾರೆ. ಪ್ರಯಾಣದ ವೇಳೆಯೂ ಆಟಗಾರರು ತಮ್ಮ ತಮ್ಮಲ್ಲೇ ಮಾತನಾಡಿದ್ದು ಕಡಿಮೆ. ಈ ಔತಣಕೂಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ವಿವಾದಗಳು ಎದ್ದಿದ್ದು, ಇದೀಗ ಆಟಗಾರರ ಮಾನಸಿಕ ಸ್ಥಿತಿಯನ್ನು ಪರಿಗಣಿಸಿ ಮಂಡಳಿಯು ಔತಣಕೂಟವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಸೋಶಿಯಲ್ ಮೀಡಿಯಾ ಬಳಸುವಂತಿಲ್ಲ

ವರದಿಯ ಪ್ರಕಾರ, ಈ ಸೋಲಿನಿಂದ ಪಾಕಿಸ್ತಾನಿ ಆಟಗಾರರು ಎಷ್ಟು ನಿರಾಸೆಗೊಂಡಿದ್ದಾರೆಂದರೆ, ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರು ತಲೆ ಮೇಲೆ ಕೈಹೊತ್ತು ಕುಳಿತಿದ್ದರಂತೆ. ತಂಡ ಹೋಟೆಲ್ ರೂಮ್ ತಲುಪಿದಾಗ ಅಲ್ಲಿಯೂ ಮೌನ ಆವರಿಸಿತ್ತು. ಇನ್ನು ಔತಣಕೂಟಕ್ಕೆ ಸಂಬಂಧಿಸಿದಂತೆ ರಶೀದ್ ಲತೀಫ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಇದನ್ನು ಟೀಕಿಸಿದ್ದರು. ಇದೀಗ ಸೋಲಿನ ಬಳಿಕ ವಿವಾದ ತಪ್ಪಿಸಲು ಪಿಸಿಬಿ ಈ ಕ್ರಮ ಕೈಗೊಂಡಿದೆ. ಮೂಲಗಳ ಪ್ರಕಾರ, ಇಡೀ ತಂಡ ಸಾಮಾಜಿಕ ಮಾಧ್ಯಮ ಬಳಸದಂತೆ ಪಿಸಿಬಿ ಸೂಚನೆ ನೀಡಿದೆ. ಅಭಿಮಾನಿಗಳ ಪ್ರತಿಕ್ರಿಯೆ ಆತ್ಮವಿಶ್ವಾಸಕ್ಕೆ ಧಕ್ಕೆಯಾಗದಂತೆ ಭಾರತ ವಿರುದ್ಧದ ಪಂದ್ಯದವರೆಗೂ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ಪೋಸ್ಟ್ ಮಾಡಬಾರದು ಎಂದು ಮಂಡಳಿ ಆಟಗಾರರಿಗೆ ಹೇಳಿದೆ ಎಂದು ವರದಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Fri, 7 June 24

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ