AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI: ಹಲವು ಬದಲಾವಣೆಗಳೊಂದಿಗೆ 10 ದೇಶೀ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

BCCI: 2024-2025ರಲ್ಲಿ ಭಾರತದಲ್ಲಿ ನಡೆಯಲಿರುವ ಎಲ್ಲಾ ದೇಶೀಯ ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. ಒಟ್ಟು 10 ಪ್ರಮುಖ ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಇದರ ಪ್ರಕಾರ ಸೆಪ್ಟೆಂಬರ್ 5 ರಿಂದ ಅನಂತಪುರದಲ್ಲಿ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗುವ ಮೂಲಕ ದೇಶೀ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

BCCI: ಹಲವು ಬದಲಾವಣೆಗಳೊಂದಿಗೆ 10 ದೇಶೀ ಪಂದ್ಯಾವಳಿಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಬಿಸಿಸಿಐ
ಪೃಥ್ವಿಶಂಕರ
|

Updated on:Jun 07, 2024 | 8:41 PM

Share

ಸದ್ಯ ಕ್ರಿಕೆಟ್ ಜಗತ್ತಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಜರುಗುತ್ತಿದೆ. ಹೀಗಾಗಿ ಇಡೀ ಕ್ರಿಕೆಟ್ ಅಭಿಮಾನಿಗಳ ಗಮನ ಅದರತ್ತ ನೆಟ್ಟಿದೆ. ಈ ಐಸಿಸಿ (ICC) ಪಂದ್ಯಾವಳಿಯನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆಯೋಜಿಸಲಾಗಿದೆ. ಭಾರತ ತಂಡವು ಐರ್ಲೆಂಡ್ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯವನ್ನು ಆಡಿದ್ದು, ಅದರಲ್ಲಿ ಟೀಂ ಇಂಡಿಯಾ ಗೆದ್ದಿದೆ. ಇದೀಗ ಭಾರತ ತನ್ನ ಎರಡನೇ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಬೇಕಿದೆ. ಈ ನಡುವೆ ದೇಶಿ ಕ್ರಿಕೆಟ್​ನತ್ತ ದೃಷ್ಟಿ ನೆಟ್ಟಿರುವ ಬಿಸಿಸಿಐ (BCCI), ಭಾರತದಲ್ಲಿ ನಡೆಯಲ್ಲಿರುವ 10 ದೇಶೀಯ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

10 ಟೂರ್ನಿಗಳ ವೇಳಾಪಟ್ಟಿ ಪ್ರಕಟ

ಅದರಂತೆ 2024-2025ರಲ್ಲಿ ಭಾರತದಲ್ಲಿ ನಡೆಯಲಿರುವ ಎಲ್ಲಾ ದೇಶೀಯ ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. . ಒಟ್ಟು 10 ಪ್ರಮುಖ ಟೂರ್ನಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಇದರ ಪ್ರಕಾರ ಸೆಪ್ಟೆಂಬರ್ 5 ರಿಂದ ಅನಂತಪುರದಲ್ಲಿ ದುಲೀಪ್ ಟ್ರೋಫಿ ಟೂರ್ನಿ ಆರಂಭವಾಗುವ ಮೂಲಕ ದೇಶೀ ಪಂದ್ಯಾವಳಿಗೆ ಚಾಲನೆ ಸಿಗಲಿದೆ.

ಇದಾದ ನಂತರ ಅಕ್ಟೋಬರ್‌ನಲ್ಲಿ ಇರಾನಿ ಟ್ರೋಫಿ ನಡೆಯಲಿದೆ. ಆ ಬಳಿಕ ಅಂದರೆ ನವೆಂಬರ್ 23 ರಿಂದ ಪ್ರಾರಂಭವಾಗುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೊಂದಿಗೆ ಸೀಮಿತ ಓವರ್‌ಗಳ ಕ್ರಿಕೆಟ್ ಪ್ರಾರಂಭವಾಗುತ್ತದೆ. ಇದರ ನಂತರ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 21 ರಿಂದ ಪ್ರಾರಂಭವಾಗಲಿದೆ. ನಾಲ್ಕು ವರ್ಷಗಳ ಅಂತರದ ನಂತರ ಕಳೆದ ವರ್ಷದಿಂದ ಮರು ಆರಂಭವಾಗಿರುವ ದಿಯೋಧರ್ ಟ್ರೋಫಿಯ ವೇಳಾಪಟ್ಟಿ ಕೂಡ ಪ್ರಕಟಗೊಂಡಿದೆ.

ಟಾಸ್ ಇರುವುದಿಲ್ಲ

  • ಇದಲ್ಲದೆ ದೇಶೀಯ ಪಂದ್ಯಾವಳಿಯಲ್ಲಿ ಈ ಬಾರಿ ಹಲವು ಆಸಕ್ತಿದಾಯಕ ಬದಲಾವಣೆಗಳನ್ನು ಸಹ ಬಿಸಿಸಿಐ ಮಾಡಿದೆ. ಅದರಂತೆ ಸಿಕೆ ನಾಯುಡು ಟ್ರೋಫಿಯಲ್ಲಿ ಹೊಸ ಬದಲಾವಣೆಯನ್ನು ಪ್ರಸ್ತಾಪಿಸಲಾಗಿದ್ದು, ಈ ಪಂದ್ಯಾವಳಿಯಲ್ಲಿ ಟಾಸ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಟಾಸ್ ಬದಲಾಗಿ, ಪ್ರವಾಸಿ ನೀಡುವ ತಂಡವು ಮೊದಲು ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವ ಆಯ್ಕೆಯನ್ನು ಹೊಂದಿರುತ್ತದೆ. ಆದರೆ ಇದೆ ವೇಳೆ ಬಿಸಿಸಿಐನ ಈ ನಿರ್ಧಾರದಿಂದ ಆತಿಥೇಯ ತಂಡಕ್ಕೆ ಅನ್ಯಾಯವಾಗಲಿದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ನಿಲುವಿನ ಬಗ್ಗೆಯೂ ಚರ್ಚೆ ಶುರುವಾಗಿದೆ.
  • ಇದರೊಂದಿಗೆ ಬಿಸಿಸಿಐ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಆಟಗಾರರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಆದ್ಯತೆ ನೀಡಿದೆ. ಬಿಸಿಸಿಐ 2 ಪಂದ್ಯಗಳ ನಡುವೆ ನಿರ್ದಿಷ್ಟ ಅಂತರವನ್ನು ಕಾಯ್ದುಕೊಂಡಿದೆ. ಇದರಿಂದಾಗಿ ಆಟಗಾರರಿಗೆ ಸಾಕಷ್ಟು ಸಮಯ ಸಿಗುವುದರಿಂದ ಅವರ ಪ್ರದರ್ಶನದಲ್ಲೂ ಸುಧಾರಣೆ ಕಾಣಲಿದೆ.
  • ಅಲ್ಲದೆ ಈ ಬಾರಿಯ ರಣಜಿ ಟ್ರೋಫಿ ಟೂರ್ನಿ 2 ಹಂತಗಳಲ್ಲಿ ನಡೆಯಲಿದೆ. ಲೀಗ್ ಹಂತವು ಅಕ್ಟೋಬರ್‌ನಲ್ಲಿ ನಡೆದರೆ, ಫೆಬ್ರವರಿಯಿಂದ ನಾಕೌಟ್‌ ಸುತ್ತು ನಡೆಯಲ್ಲಿದೆ
  • ಅಲ್ಲದೆ, ಸಿಕೆ ನಾಯ್ಡು ಅಂಡರ್- 23 ಟೂರ್ನಿಯಲ್ಲಿ ಹೊಸ ನಂಬರಿಂಗ್ ವ್ಯವಸ್ಥೆಯನ್ನು ಪ್ರಯೋಗಿಸಲಾಗುವುದು. ಬಿಸಿಸಿಐ ಪ್ರಕಾರ, ಈ ವರ್ಷ ಟೂರ್ನಿಯ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಅಂಕಗಳನ್ನು ನೀಡಲಾಗುತ್ತದೆ. ಅಲ್ಲದೆ ಮೊದಲ ಇನಿಂಗ್ಸ್ ಮುನ್ನಡೆ ಅಥವಾ ಗೆಲುವಿಗೆ 2 ಅಂಕಗಳನ್ನು ನೀಡಲಾಗುತ್ತದೆ.

ಮಹಿಳಾ ಕ್ರಿಕೆಟ್ ವೇಳಾಪಟ್ಟಿ ಹೀಗಿದೆ

ಉಳಿದಂತೆ ಅಕ್ಟೋಬರ್ 17 ರಂದು ಸೀನಿಯರ್ ಮಹಿಳಾ ಟಿ20 ಟ್ರೋಫಿಯೊಂದಿಗೆ ಮಹಿಳೆಯರ ದೇಶೀಯ ಆವೃತ್ತಿ ಪ್ರಾರಂಭವಾಗುತ್ತದೆ. ನವೆಂಬರ್ 6 ರಿಂದ ನಾಕೌಟ್ ಸುತ್ತುಗಳು ಆರಂಭವಾಗಲಿವೆ. ಇದಾದ ಬಳಿಕ ಹಿರಿಯರ ಮಹಿಳಾ ಟಿ-20 ಚಾಲೆಂಜರ್ ಟ್ರೋಫಿ ನವೆಂಬರ್ 17ರಿಂದ ನವೆಂಬರ್ 27ರವರೆಗೆ ನಡೆಯಲಿದೆ.

ಸೀನಿಯರ್ ಮಹಿಳೆಯರ ಏಕದಿನ ಟ್ರೋಫಿ ಡಿಸೆಂಬರ್ 4 ರಿಂದ 30 ರವರೆಗೆ ನಡೆಯಲಿದ್ದು, ಮಲ್ಟಿ-ಡೇ ಚಾಲೆಂಜರ್ ಟ್ರೋಫಿ ಮಾರ್ಚ್ 18 ರಿಂದ ಏಪ್ರಿಲ್ 1 ರವರೆಗೆ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:36 pm, Fri, 7 June 24