T20 World Cup 2024: ಬಾಬರ್ ಆಝಂ ವಿರುದ್ಧ ಮತ್ತೆ ಬೆಂಕಿ ಉಗುಳಿದ ಅಫ್ರಿದಿ..!

T20 World Cup 2024: ಅಳಿಯ ಶಾಹೀನ್ ಅಫ್ರಿದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಹಾಲಿ ನಾಯಕನ ಮೇಲೆ ಬೆಂಕಿ ಉಗುಳುತ್ತಿರುವ ತಂಡದ ಮಾಜಿ ನಾಯಕ ಶಾಹಿದ್ ಆಫ್ರಿದಿ ನಾಯಕ ಬಾಬರ್ ಆಝಂ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಶಾಹೀನ್ ನಾಯಕತ್ವದಲ್ಲಿ ಆಡಲು ಒಪ್ಪಿಕೊಂಡಿದ್ದರೆ ಬಾಬರ್ ಆಝಂ ತನ್ನ ದೃಷ್ಟಿಯಲ್ಲಿ ತುಂಬಾ ಎತ್ತರಕ್ಕೆ ಏರುತ್ತಿದ್ದ ಎಂದು ಶಾಹಿದ್ ಆಫ್ರಿದಿ ಹೇಳಿದ್ದಾರೆ.

T20 World Cup 2024: ಬಾಬರ್ ಆಝಂ ವಿರುದ್ಧ ಮತ್ತೆ ಬೆಂಕಿ ಉಗುಳಿದ ಅಫ್ರಿದಿ..!
ಶಾಹೀನ್ ಅಫ್ರಿದಿ, ಬಾಬರ್ ಆಝಂ

Updated on: Jun 12, 2024 | 9:04 PM

2024 ರ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ಪಾಕಿಸ್ತಾನ ತನ್ನ ಮೊದಲ ಜಯವನ್ನು ದಾಖಲಿಸಿದೆ. ಆದರೆ ಈ ಜಯ ಪಾಕ್ ತಂಡಕ್ಕೆ (Pakistan Cricket Team) ತುಂಬಾ ತಡವಾಗಿ ಸಿಕ್ಕಿದೆ. ಏಕೆಂದರೆ ಪಾಕಿಸ್ತಾನ ತಾನು ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸೋತಿದೆ. ಅಲ್ಲದೆ ಅದರ ಕೊನೆಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸೂಚನೆ ಸಿಕ್ಕಿದೆ. ಅಮೆರಿಕದ ಕೊನೆಯ ಪಂದ್ಯದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಎರಡು ಪಂದ್ಯಗಳಲ್ಲಿ ಯಾವುದಾದರೂ ಒಂದು ಪಂದ್ಯ ಮಳೆಯಿಂದಾಗಿ ವಾಶ್ ಔಟ್ ಮಾಡಿದರೆ, ಪಾಕಿಸ್ತಾನ ಲೀಗ್​ನಿಂದಲೇ ಔಟ್ ಆಗಲಿದೆ. ಈ ನಡುವೆ ಆಡಿದ ಮೊದಲ ಎರಡು ಪಂದ್ಯಗಳಲ್ಲೂ ಗೆಲ್ಲುವ ಅವಕಾಶವಿದ್ದರು ಪಾಕ್ ತಂಡದ ಕಳಪೆ ಬ್ಯಾಟಿಂಗ್ ಹಾಗೂ ನಾಯಕತ್ವದಿಂದಾಗಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ತಂಡದ ಪ್ರದರ್ಶನದ ಬಗ್ಗೆ ಮಾಜಿ ನಾಯಕರು ಅಸಮಾದಾನ ಹೊರಹಾಕುತ್ತಿದ್ದಾರೆ.

ಅದರಲ್ಲೂ ಅಳಿಯ ಶಾಹೀನ್ ಅಫ್ರಿದಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಹಾಲಿ ನಾಯಕನ ಮೇಲೆ ಬೆಂಕಿ ಉಗುಳುತ್ತಿರುವ ತಂಡದ ಮಾಜಿ ನಾಯಕ ಶಾಹಿದ್ ಆಫ್ರಿದಿ ನಾಯಕ ಬಾಬರ್ ಆಝಂ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಶಾಹೀನ್ ನಾಯಕತ್ವದಲ್ಲಿ ಆಡಲು ಒಪ್ಪಿಕೊಂಡಿದ್ದರೆ ಬಾಬರ್ ಆಝಂ ತನ್ನ ದೃಷ್ಟಿಯಲ್ಲಿ ತುಂಬಾ ಎತ್ತರಕ್ಕೆ ಏರುತ್ತಿದ್ದ ಎಂದು ಶಾಹಿದ್ ಆಫ್ರಿದಿ ಹೇಳಿದ್ದಾರೆ.

ಶಾಹಿದ್ ಅಫ್ರಿದಿ ಹೇಳಿದ್ದಿದು

ಶಾಹಿದ್ ಅಫ್ರಿದಿ ಸಾಮಾ ಚಾನೆಲ್‌ನಲ್ಲಿ, ‘ ಬಾಬರ್ ಆಝಂ, ಶಾಹೀನ್ ನಾಯಕತ್ವದಲ್ಲಿ ಆಡಬೇಕೆಂದು ನಿರ್ಧರಿಸಿದ್ದರೆ ನನ್ನ ದೃಷ್ಟಿಯಲ್ಲಿ ಅವರ ಬಗ್ಗೆಗಿನ ಗೌರವ ಮತ್ತಷ್ಟು ಹೆಚ್ಚಾಗುತ್ತಿತ್ತು. ಶಾಹೀನ್ ಅಫ್ರಿದಿಯನ್ನು ನಾಯಕನನ್ನಾಗಿ ಮಾಡಿ ಕೇವಲ ಒಂದು ಸರಣಿಯ ನಂತರ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದ್ದು ತಪ್ಪು ಎಂದು ಅಫ್ರಿದಿ ಅಭಿಪ್ರಾಯ ಪಟ್ಟಿದ್ದಾರೆ.

ವಾಸ್ತವವಾಗಿ ಏಕದಿನ ವಿಶ್ವಕಪ್ ಬಳಿಕ ಬಾಬರ್ ಆಝಂ ಅವರನ್ನು ಪಿಸಿಬಿ ನಾಯಕತ್ವದಿಂದ ತೆಗೆದುಹಾಕಿತು. ಇದರ ನಂತರ ಶಾಹೀನ್ ಆಫ್ರಿದಿಗೆ ತಂಡದ ನಾಯಕತ್ವವನ್ನು ನೀಡಲಾಯಿತು. ಆದರೆ ಕೇವಲ ಒಂದು ಸರಣಿಯ ನಂತರ, ಶಾಹೀನ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ ಮತ್ತೊಮ್ಮೆ ಬಾಬರ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು.

ಬಾಬರ್ ನಾಯಕತ್ವಕ್ಕೆ ಮತ್ತೆ ಕುತ್ತು

ಎರಡನೇ ಬಾರಿಗೆ ನಾಯಕತ್ವ ಸ್ವೀಕರಿಸಿದ್ದ ಬಾಬರ್ ಆಝಂ ಮತ್ತೆ ತಮ್ಮ ನಾಯಕತ್ವವನ್ನು ಕಳೆದುಕೊಳ್ಳಬಹುದು. ಒಂದು ವೇಳೆ ಪಾಕಿಸ್ತಾನ ಟಿ20 ವಿಶ್ವಕಪ್‌ನ ಮೊದಲ ಸುತ್ತಿನಿಂದಲೇ ಹೊರಬಿದ್ದರೆ, ಬಾಬರ್ ತಲೆದಂಡ ಆಗುವುದು ಖಚಿತ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಈ ತಂಡ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತಿತ್ತು. ಇದಾದ ನಂತರ ಟೀಂ ಇಂಡಿಯಾ ನೀಡಿದ್ದ 120 ರನ್​ಗಳ ಟಾರ್ಗೆಟ್ ಅನ್ನು ಪಾಕಿಸ್ತಾನಕ್ಕೆ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಇನ್ನು ಕೆನಡಾ ವಿರುದ್ಧ ಪಾಕ್ ಗೆದ್ದಿದೆಯಾದರೂ ಅದು ಪ್ರಯೋಜನಕ್ಕೆ ಬರುವಂತೆ ಕಾಣುತ್ತಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ